ಶಿರಸಿ : ಮನೆಯಲ್ಲಿ ಮಲಗಿದ್ದಾಗ ಇಬ್ಬರು ಮಕ್ಕಳಿಗೆ ಕಚ್ಚಿದ ಹಾವು ; ಓರ್ವ ಸಾವು

ಶಿರಸಿ :  ಹಾವು ಕಚ್ಚಿ ಆರನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಳ್ಳಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆತನ ಸಹೋದರಿಗೂ ಹಾವು ಕಚ್ಚಿದ್ದು, ಸದ್ಯ ಆಕೆ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದುಬಂದಿದೆ. ಈ ದುರ್ಘಟನೆ ಇಂದು, ಬುಧವಾರ ಮುಂಜಾನೆ ನಡೆದಿದೆ ಎಂದು ಹೇಳಲಾಗಿದ್ದು, ಮೃತ … Continued

ಜೇನು ತೆಗೆಯಲು ಹೋಗಿ ಬಂಡೆಯ ಸಂದಿನಲ್ಲಿ ಸಿಲುಕಿದ ಬಾಲಕನ ತಲೆ : ಅಲ್ಲಿಯೇ ಇತ್ತು ದೊಡ್ಡ ವಿಷಪೂರಿತ ಹಾವು !

ನಯಾಗಢ (ಒಡಿಶಾ): ಜೇನುತುಪ್ಪ ಸಂಗ್ರಹಿಸಲು ಹೋಗಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಬಂಡೆಯ ಸಂದಿನಲ್ಲಿ ಸಿಲುಕಿಕೊಂಡು ಹೊರಬರಲಾರದೆ ಒದ್ದಾಡಿದ ಘಟನೆ ಓಡಿಶಾದ ನಯಾಗಢ್ ಜಿಲ್ಲೆಯಲ್ಲಿ ನಡೆದಿದೆ. ವಿಶೇಷವೆಂದರೆ, ಬಾಲಕನ ತಲೆ ಸಿಲುಕಿದ್ದ ಅದೇ ಬಂಡೆಯ ಸಂದಿಯಲ್ಲಿ ವಿಷಪೂರಿತ ದೊಡ್ಡ ಹಾವೊಂದು ಕುಳಿತಿದ್ದು, ಬಾಲಕ ಅದರಿಂದ ಪವಾಡಸದೃಶವಾಗಿ ಪಾರಾಗಿದ್ದಾನೆ. ಬುಧವಾರ ನಡೆದ ಸುಮಾರು 8 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ … Continued

ತನ್ನ ಪತ್ನಿ ರಾತ್ರಿಯಲ್ಲಿ ಹಾವಾಗಿ ಬದಲಾಗ್ತಾಳೆ….ಕಚ್ಚುತ್ತಾಳೆ…: ಜಿಲ್ಲಾಧಿಕಾರಿಗೆ ದೂರು ನೀಡಿದ ಗಂಡ, ರಕ್ಷಣೆಗೆ ಮೊರೆ

ತೀರ ವಿಚಿತ್ರ ಮತ್ತು ಆತಂಕಕಾರಿ ಪ್ರಕರಣವೊಂದು ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲಿ ವ್ಯಕ್ತಿಯೊಬ್ಬರು ತನ್ನ ಹೆಂಡತಿಯ ನಡವಳಿಕೆಯ ಬಗ್ಗೆ ಜಿಲ್ಲಾಧಿಕಾರಿಗೆ ಅಸಾಧಾರಣ ದೂರು ನೀಡಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಮೆರಾಜ್ ಎಂಬ ವ್ಯಕ್ತಿ ತನ್ನ ಹೆಂಡತಿ ನಸೀಮುನ್ ರಾತ್ರಿಯಲ್ಲಿ ಹಾವಾಗಿ ರೂಪಾಂತರಗೊಂಡು ತನ್ನನ್ನು ಕಚ್ಚುತ್ತಾಳೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಅರ್ಜಿಯಲ್ಲಿ … Continued

ತನಗೆ ಕಚ್ಚಿದ ಹಾವಿನ ತಲೆಯನ್ನೇ ಹಿಡಿದು ಕಚ್ಚಿದ ವ್ಯಕ್ತಿ ; ಅದು ಸತ್ತ ನಂತರ ಅದರ ಮೇಲೆಯೇ ಮಲಗಿದ ; ಆದರೆ…

ಶ್ರೀಕಾಳಹಸ್ತಿ: ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ತೊಟ್ಟಂಬೆಡು ಮಂಡಲದ ಚಿಯ್ಯವರಂ ಎಂಬಲ್ಲಿ ವ್ಯಕ್ತಿಯೊಬ್ಬ ತನಗೆ ಕಪ್ಪು ವಿಷಕಾರಿ ಹಾವು ಕಚ್ಚಿದ ನಂತರ ಅದರ ತಲೆಯನ್ನು ಕಚ್ಚಿದ ಘಟನೆ ವಿಚಿತ್ರ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಲ್ಲದೆ, ನಂತರ ಆತ ಸತ್ತ ಹಾವನ್ನು ತೆಗೆದುಕೊಂಡು ಮನಗೆ ಬಂದು ಅದರ ಮೇಲೆಯೇ ಮಲಗಿದ್ದಾನೆ…! ಗುರುವಾರ ರಾತ್ರಿ ನಡೆದ ಈ ಘಟನೆ … Continued

ಬಾಲಕಿಗೆ 40 ದಿನಗಳಲ್ಲಿ 13 ಬಾರಿ ಕಚ್ಚಿದ ಅದೇ ಹಾವು…! ಇದು ಹಾವಿನ ಕೋಪವೋ ಅಥವಾ….

ಕಳೆದ 40 ದಿನಗಳ ಅವಧಿಯಲ್ಲಿ ಕಪ್ಪು ಬಣ್ಣದ ಹಾವೊಂದು ತನಗೆ 13 ಬಾರಿ ಕಚ್ಚಿದೆ ಎಂದು 15 ವರ್ಷದ ಬಾಲಕಿಯೊಬ್ಬಳು ದೂರು ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶ (Uttar Pradesh)ದ ಕೌಶಂಬಿ ಜಿಲ್ಲೆಯ ಬಸ್ತಿ ಭೈಸಾ ಎಂಬ ಸಣ್ಣ ಹಳ್ಳಿಯಲ್ಲಿ ನಡೆದಿದೆ. ಬಾಲಕಿ ಪ್ರಕಾರ, ಒಂದೇ ಕಪ್ಪು ಹಾವು 40 ದಿನಗಳ ಅವಧಿಯಲ್ಲಿ 13 … Continued

ಬೆಳಗಾವಿ | ಅಪರೂಪದ ಘಟನೆ ; ಮಗನನ್ನು ಕಚ್ಚಿ ಸಾಯಿಸಿದ ಹಾವನ್ನು ಕೊಲ್ಲದೆ ರಕ್ಷಿಸಿ ಕಾಡಿಗೆ ಬಿಟ್ಟು ಬಂದ ಕುಟುಂಬ…!

ಬೆಳಗಾವಿ : ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಅಪರೂಪದ ವಿದ್ಯಮಾನ ನಡೆದಿದೆ. ಅಥಣಿ ತಾಲೂಕಿನ ತೆಲಸಂಗ ಸಮೀಪದ ಕಕಮರಿ ಗ್ರಾಮದಲ್ಲಿ ಹಾವು ಕಚ್ಚಿ ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದ ಕುಟುಂಬ ಆ ಮಗನ ಸಾವಿಗೆ ಕಾರಣವಾದ ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಒಯ್ದು ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದ ವಿದ್ಯಮಾನ ವರದಿಯಾಗಿದೆ. ಮೇ 31ರಂದು ಅಮಿತ ಗುರುಲಿಂಗ ಸಿಂಧೂರ (10) … Continued

ವೀಡಿಯೊ | ಅಮೆಜಾನ್ ಮಳೆಕಾಡಿನಲ್ಲಿ ವಿಶ್ವದ ಅತಿದೊಡ್ಡ ಅನಕೊಂಡ ಹೆಬ್ಬಾವನ್ನು ಪತ್ತೆ ಮಾಡಿದ ಸಂಶೋಧಕರ ತಂಡ: ಇದರ ಉದ್ದ ಎಷ್ಟೆಂದರೆ….

ಅಮೆಜಾನ್ ಕಾಡನ್ನು ಅನ್ವೇಷಿಸುವ ಸಂಶೋಧಕರ ತಂಡವು ಅದ್ಭುತ ಆವಿಷ್ಕಾರವನ್ನು ಮಾಡಿದೆ. ಈ ಅನ್ವೇಷಕರ ತಂಡವು ದಕ್ಷಿಣ ಅಮೆರಿಕದ ಈಕ್ವೆಡಾರ್‌ನ ದಟ್ಟವಾದ ಮಳೆಕಾಡಿನಲ್ಲಿ ಹೊಸ ಜಾತಿಯ ದೈತ್ಯ ಅನಕೊಂಡ ಹಾವನ್ನು ಪತ್ತೆ ಮಾಡಿದ್ದಾರೆ. ನ್ಯಾಷನಲ್ ಜಿಯಾಗ್ರಫಿಕ್ ಅನ್ವೇಷಣೆ ವೇಳೆ ವಿಜ್ಞಾನಿಗಳು ಈ ಹೊಸ ಅನಕೊಂಡ ಜಾತಿ ಹಾವನ್ನು ಪತ್ತೆ ಮಾಡಿದ್ದಾರೆ. ಪ್ರೊಫೆಸರ್ ಬ್ರಿಯಾನ್ ಫ್ರೈ ನೇತೃತ್ವದ ತಂಡವು … Continued

ವೀಡಿಯೊ..| ಬೃಹತ್ ಗಾತ್ರದ ಹೆಬ್ಬಾವಿನ ಜೊತೆ ಹಾಸಿಗೆಯ ಮೇಲೆ ಮಲಗಿ ಆರಾಮವಾಗಿ ಪುಸ್ತಕ ಓದುವ ವ್ಯಕ್ತಿ…!

ಹಾವುಗಳನ್ನು ಸಾಮಾನ್ಯವಾಗಿ ಭಯ ಮತ್ತು ಆಕರ್ಷಣೆಯ ಮಿಶ್ರಣ ಎಂದು ಪರಿಗಣಿಸಲಾಗುತ್ತದೆ. ಆದರೂ, ಕೆಲವು ವ್ಯಕ್ತಿಗಳು ಸಾಮಾಜಿಕ ರೂಢಿಗಳನ್ನು ಧಿಕ್ಕರಿಸುತ್ತಾರೆ, ಆಗಾಗ್ಗೆ ತಪ್ಪಾಗಿ ಅರ್ಥೈಸಿಕೊಳ್ಳುವ ಈ ಪ್ರಾಣಿಗಳೊಂದಿಗೆ ಅಸಾಧಾರಣ ಬಾಂಧವ್ಯವನ್ನು ಬೆಸೆಯುತ್ತಾರೆ, ಇದು ಅವುಗಳ ಬಗ್ಗೆ ನಮ್ಮ ಗ್ರಹಿಕೆಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡ ವೀಡಿಯೊವೊದು ಸಾಮಾಜಿಕ ಜಾಲತಾಣ ಬಳಕೆದಾರರನ್ನು ಬೆಚ್ಚಿ ಬೀಳಿಸಿದೆ. ಕ್ಲಿಪ್‌ನಲ್ಲಿ ಮೈಕ್ … Continued

ವೀಡಿಯೊ..| ಮರದ ಕೊಂಬೆಯಲ್ಲಿ ನೇತಾಡುತ್ತಿದ್ದ ಹಾವನ್ನು ನೀರಿನಿಂದ ಜಿಗಿದು ಕಚ್ಚಿ ಹಿಡಿದು ಮೀನು ; ಮತ್ತೊಂದು ಮೀನಿನ ಎಂಟ್ರಿ : ಮುಂದೇನಾಯ್ತು…ಅಚ್ಚರಿ !

ಪ್ರತಿಯೊಂದು ಜೀವಿಗೂ ಪ್ರಕೃತಿ ವಿಶೇಷತೆಯನ್ನು ನೀಡಿದೆ. ಇದರಿಂದಾಗಿಯೇ ಪ್ರತಿಯೊಂದು ಜೀವಿಯು ಇನ್ನೊಂದಕ್ಕಿಂತ ಭಿನ್ನವಾಗಿ ಕಾಣುತ್ತದೆ. ಒಂದು ಪ್ರಾಣಿಗೆ ಬೇಟೆಗಾರನಾಗಿ ಪರಿಣಮಿಸುವ ಪ್ರಾಣಿ ಮತ್ತೊಂದು ಪ್ರಾಣಿಯ ಬೇಟೆಗೆ ತಾನೇ ಬಲಿಯಾಗುತ್ತದೆ. ಇದು ಪ್ರಕೃತಿಯ ನಿಯಮವಾಗಿದೆ. ಇದರಲ್ಲಿ ಕೇವಲ ಬಲಶಾಲಿ ಮಾತ್ರವಾದರೆ ಸಾಲದು. ಬಲದ ಜೊತೆಗೆ ಬುದ್ಧಿವಂತಿಕೆಯೂ ಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ. ಅದರ ಮೂಲಕ … Continued

ವೀಡಿಯೊ..| ಜಾರ್ಖಂಡ್-ಗೋವಾ ರೈಲಿನ ಎಸಿ 2-ಟೈರ್ ಬೋಗಿಯಲ್ಲಿ ಜೀವಂತ ಹಾವು ಪತ್ತೆ…!

ಆಘಾತಕಾರಿ ಘಟನೆಯೊಂದರಲ್ಲಿ, ಅಕ್ಟೋಬರ್ 21 ರಂದು ಜಾರ್ಖಂಡ್‌ನಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ವಾಸ್ಕೋ-ಡ-ಗಾಮಾ ವೀಕ್ಲಿ ಎಕ್ಸ್‌ಪ್ರೆಸ್‌ನ ಹವಾನಿಯಂತ್ರಿತ (AC) ಕೋಚ್‌ನಲ್ಲಿ ಜೀವಂತ ಹಾವು ಪತ್ತೆಯಾಗಿದೆ. ಹಲವಾರು ಪ್ರಯಾಣಿಕರು ಎಸಿ 2-ನಲ್ಲಿ ಕೆಳಗಿನ ಬರ್ತ್‌ ಪರದೆಯ ಬಳಿ ಹಾವು ಜಾರುತ್ತಿರುವುದನ್ನು ಗಮನಿಸಿದರು. ನಂತರ ಅದರ ವೀಡಿಯೊಗಳನ್ನು ತೆಗೆದುಕೊಂಡರು. ತಮ್ಮ ಪೋಷಕರು ಪ್ರಯಾಣಿಸುತ್ತಿದ್ದ ಕೋಚ್‌ನಲ್ಲಿ (ಎ 2 31, 33) … Continued