ಉಡುಪಿ: ದೇವಸ್ಥಾನದ ಕೆರೆಯಲ್ಲಿ ಮುಳುಗಿ ಬಾಲಕ ಸಾವು

ಉಡುಪಿ: ನಗರದ ತೆಂಕಪೇಟೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ದಾರುಣ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಮೃತ ವಿದ್ಯಾರ್ಥಿಯನ್ನು ಬೆಳ್ಳಂಪಳ್ಳಿ ಕುಕ್ಕಿಕಟ್ಟೆ ನಿವಾಸಿ ಆದಿತ್ಯ ನಾಯಕ (15) ಎಂದು ಗುರುತಿಸಲಾಗಿದೆ. ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮಕ್ಕೆ ಸಂಬಂಧಿಯೊಂದಿಗೆ ಆಗಮಿಸಿದ್ದ ಆದಿತ್ಯ, ಈ ವೇಳೆ ಕೆರೆಯಲ್ಲಿ ಕೆಲ ಭಕ್ತರು … Continued

ಶಿಕ್ಷಕಿ ಕೆನ್ನೆಗೆ ಹೊಡೆದ ಬಳಿಕ 6 ವರ್ಷದ ಬಾಲಕ ಕುಸಿದುಬಿದ್ದು ಸಾವು

ವಿಶಾಖಪಟ್ಟಣಂ: ಹೋಂವರ್ಕ್ ಪೂರ್ಣಗೊಳಿಸದ ಕಾರಣ ಶಿಕ್ಷಕಿಯೊಬ್ಬರು ಹೊಡೆದರೆನ್ನಲಾದ ಘಟನೆಯ ಬಳಿಕ ಆರು ವರ್ಷದ ಬಾಲಕ ಕುಸಿದುಬಿದ್ದು ಮೃತಪಟ್ಟ ಘಟನೆ ವಿಶಾಖಪಟ್ಟಣಂನ ಒನ್‌ಟೌನ್ ಪ್ರದೇಶದಲ್ಲಿರುವ ಖಾಸಗಿ ಶಾಲೆಯಲ್ಲಿ ನಡೆದಿದೆ. ಮೃತ ಬಾಲಕನನ್ನು ಪ್ರಣಯ ತೇಜ ಎಂದು ಗುರುತಿಸಲಾಗಿದೆ.ಕುಟುಂಬದ ಆರೋಪದ ಪ್ರಕಾರ, ಹೋಂವರ್ಕ್ ಮಾಡಿರಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿ ಬಾಲಕನ ಕೆನ್ನೆಗೆ ಹೊಡೆದಿದ್ದಾರೆ. ಬಳಿಕ ಭಯ ಮತ್ತು ಆಘಾತದಿಂದ … Continued

ಮೈಸೂರು : ಕುರ್ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಬಾಲ್ ನುಂಗಿ 5 ವರ್ಷದ ಬಾಲಕ ಸಾವು

ಮೈಸೂರು: ಅಳುತ್ತಿದ್ದ ಐದು ವರ್ಷದ ಮಗುವನ್ನು ಸಮಾಧಾನಪಡಿಸುವ ಉದ್ದೇಶದಿಂದ ಪೋಷಕರು ಖರೀದಿಸಿದ್ದ ಕುರ್ಕುರೆ ಪ್ಯಾಕೆಟ್‌ ದುರಂತಕ್ಕೆ ಕಾರಣವಾಗಿ, ಅದರೊಳಗಿದ್ದ ಸಣ್ಣ ಪ್ಲಾಸ್ಟಿಕ್ ಆಟದ ಚೆಂಡು ಗಂಟಲಿನಲ್ಲಿ ಸಿಲುಕಿ ಉಸಿರುಗಟ್ಟಿ ಬಾಲಕ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ. ಮೃತ ಬಾಲಕನನ್ನು ಗೌರಿಪುರ ಗ್ರಾಮದ ರೈತರಾದ ಸಂತೋಷ ಮತ್ತು ಐಶ್ವರ್ಯ ದಂಪತಿಯ ಪುತ್ರ … Continued

ಶಿವಮೊಗ್ಗ: ಜಗಳ ಬಿಡಿಸಲು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಹತ್ಯೆ

ಶಿವಮೊಗ್ಗ: ಶಿವಮೊಗ್ಗದ ಹೊರವಲಯದ ಸೂಳೆಬೈಲು ಪ್ರದೇಶದಲ್ಲಿ 15 ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯನ್ನು ಆತನ ಸಹಪಾಠಿಗಳೇ ಬರ್ಬರವಾಗಿ ಹೊಡೆದು ಕೊಂದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸೋಮವಾರ ರಾತ್ರಿ ವಿಶೇಷ ತರಗತಿ ಮುಗಿಸಿ ವಿದ್ಯಾರ್ಥಿಗಳು ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತ ವಿದ್ಯಾರ್ಥಿಯನ್ನು ಸಂಕೇತ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ (SSLC … Continued

ಕಾರವಾರ : ಸಮುದ್ರ ಸ್ನಾನ ಮಾಡುವಾಗ ಮುಳುಗಿ ಬಾಲಕ ಸಾವು

ಕಾರವಾರ: ಶಿವರಾತ್ರಿ ಹಿನ್ನೆಲೆಯಲ್ಲಿ ಸಮುದ್ರ ಸ್ನಾನಕ್ಕೆ ಇಳಿದ ಬಾಲಕನೊಬ್ಬ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ. ಗಾಂವಗೇರಿಯ ಯಶ್ (17) ಎಂಬಾತ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಬಾಲಕನಾಗಿದ್ದಾನೆ. ಶಿವರಾತ್ರಿ ಹಿನ್ನೆಲೆಯನ್ನು ಮಾಜಾಳಿ ಸಮುದ್ರಕ್ಕೆ ರಾಮನಾಥ ಪರಿವಾರ ದೇವರು ಸೇರುದಂತೆ ಸುತ್ತಮುತ್ತಲಿನ ದೇವರನ್ನು ಪಲ್ಲಕ್ಕಿಯಲ್ಲಿ ತಂದು … Continued

ಅಪ್ರಾಪ್ತ ಗೆಳತಿ ಜೊತೆ ಮದುವೆ ಮಾಡಿಸಿ ಎಂದು ಹಠ ; 11 ಕೆ.ವಿ. ವಿದ್ಯುತ್‌ ತಂತಿ ಹಿಡಿದು ನೇತಾಡಿದ 15 ವರ್ಷದ ಬಾಲಕ…!

 ಪ್ರತಾಪಗಢ (ಉತ್ತರ ಪ್ರದೇಶ): ಅಪ್ರಾಪ್ತ ವಯಸ್ಸಿನ ಗೆಳತಿಯೊಂದಿಗೆ ತನ್ನ ವಿವಾಹ ಮಾಡಿಸಬೇಕೆಂದು ಪಟ್ಟು ಹಿಡಿದ 15 ವರ್ಷದ ಬಾಲಕನೊಬ್ಬ ಹೈ-ಟೆನ್ಷನ್ ವಿದ್ಯುತ್ ಲೈನ್ ಏರಿ ಹೈಡ್ರಾಮಾ ಸೃಷ್ಟಿಸಿದ ಘಟನೆ ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಸುಮಾರು 35 ಅಡಿ ಎತ್ತರದ ವಿದ್ಯುತ್ ತಂತಿಯನ್ನು ಹಿಡಿದು ನೇತಾಡುತ್ತಿದ್ದ ಬಾಲಕನನ್ನು ಸುಮಾರು 40 ನಿಮಿಷಗಳ ಸತತ … Continued

ಬೀದಿ ಬದಿ ತಿಂಡಿ ಚಪಲಕ್ಕೆ ಬಿದ್ದು ಮನೆಯಲ್ಲಿದ್ದ ₹85 ಲಕ್ಷ ಮೌಲ್ಯದ ಒಡವೆಗಳನ್ನೇ ಕದ್ದು ಅಂಗಡಿಯವನಿಗೆ ನೀಡಿದ ಬಾಲಕ..!

ದೇವರಿಯಾ (ಉತ್ತರ ಪ್ರದೇಶ):  ಅಚ್ಚುಮೆಚ್ಚಿನ ತಿನಿಸು ತಿನ್ನಬೇಕೆಂಬ ಹಂಬಲ ಯಾರಿಗೆ ಇರುವುದಿಲ್ಲ ಹೇಳಿ? ಆದರೆ ಅದೇ ಹಂಬಲ ವ್ಯಸನವಾಗಿ ಬದಲಾದಾಗ ಎಂತಹ ಅನಾಹುತ ಸಂಭವಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಒಂದು ನಿದರ್ಶನವಾಗಿದೆ. ಅತ್ಯಂತ ಪ್ರಸಿದ್ಧ ಬೀದಿ ಬದಿಯ ಆಹಾರವಾದ ಕೇವಲ ಒಂದು ಪ್ಲೇಟ್ ‘ಮೊಮೊಸ್’ ತಿನ್ನುವ ಚಪಲಕ್ಕೆ ಬಿದ್ದ 14 ವರ್ಷದ ಬಾಲಕನೊಬ್ಬ, ಮನೆಯಲ್ಲಿದ್ದ ಸುಮಾರು … Continued

ತಾಯಿ ಕುರ್‌ ಕುರೆ ಕೊಡಿಸಿಲ್ಲವೆಂದು ಪೊಲೀಸರಿಗೆ ದೂರು ನೀಡಿದ ಬಾಲಕ….!

ಭೋಪಾಲ : ಕುರ್‌ ಕುರೆ ಕೊಡಿಸಿ ಎಂದು ಕೇಳಿದ್ದಕ್ಕೆ ತನ್ನ ತಾಯಿ ಮತ್ತು ಅಕ್ಕ ತನಗೆ ಹೊಡೆದಿದ್ದಾರೆ ಎಂದು 8 ವರ್ಷದ ಬಾಲಕನೊಬ್ಬ ಪೊಲೀಸರಿಗೆ ದೂರು ನೀಡಿದ ಅಪರೂಪದ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿಯ ಚಿತರ್‌ವೈ ಕಲಾ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬಾಲಕ ಕುರ್‌ಕುರೆ ಪ್ಯಾಕೆಟ್ ಖರೀದಿ ಮಾಡಲು ತಾಯಿಯ ಬಳಿ 20 ರೂ. ಕೊಡುವಂತೆ … Continued

ವಿಮಾನದ ಚಕ್ರದ ಬಳಿ ಅಡಗಿಕೊಂಡು 1000 ಕಿಮೀ ಪ್ರಯಾಣಿಸಿ ದೆಹಲಿಗೆ ಬಂದ 13 ವರ್ಷದ ಅಫ್ಘಾನ್ ಬಾಲಕ; ಬದುಕುಳಿದದ್ದೇ ಪವಾಡ…!

ನವದೆಹಲಿ: ಅಪಘಾನಿಸ್ತಾನದ ಕಾಬೂಲಿನಿಂದ ದೆಹಲಿಗೆ ವಿಮಾನದಲ್ಲಿ ಅದರ ಚಕ್ರದ ಬಳಿ ಲ್ಯಾಂಡಿಂಗ್ ಗೇರಿನಲ್ಲಿ ಅಡಗಿಕೊಂಡು 13 ವರ್ಷದ ಅಫ್ಘಾನ್ ಬಾಲಕ ಪ್ರಯಾಣ ಮಾಡಿದ್ದಾನೆ…! ಈಗ ಈತನನ್ನು ಪುನಃ ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ವಿಮಾನವು ಇರಾನ್‌ಗೆ ಹೋಗುತ್ತಿದೆ ಎಂದು ತಪ್ಪಾಗಿ ಭಾವಿಸಿದ ಬಾಲಕ, ಕಾಬೂಲಿನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಬರುವ KAM … Continued

ಶಿರಸಿ : ಏರ್‌ ಗನ್‌ ನಿಂದ ಗುಂಡು ಹಾರಿ ಬಾಲಕ ಸಾವು

ಶಿರಸಿ: ಎರಡು ಮಕ್ಕಳು ಆಟವಾಡುತ್ತಿದ್ದಾಗ ಆಕಸ್ಮಾತ್‌ ಆಗಿ ಏರ್ ಗನ್ ಗುಂಡು ಹಾರಿ ಒಂಬತ್ತು ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಮೃತಟ್ಟ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಚಿಪಗಿ ಸಮೀಪದ ಸೋಮನಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ. ಸೋಮನಳ್ಳಿಯ ರಾಘವೇಂದ್ರ ಹೆಗಡೆ ಎಂಬವರ ಮನೆಯಲ್ಲಿ ಕೆಲಸ ಮಾಡಲು ಬಸಪ್ಪ ಉಂಡಿಯರ್ ಕುಟುಂಬ … Continued