ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್-ಏಕದಿನ ಸರಣಿಗೆ ಭಾರತ ತಂಡ ಪ್ರಕಟ ; ಶುಭಮನ್‌ ಗಿಲ್ ನಾಯಕ

ಮುಂಬೈ: ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಏಕೈಕ ಟೆಸ್ಟ್ ಹಾಗೂ ಮೂರು ಪಂದ್ಯಗಳ ಏಕದಿನ (ODI) ಸರಣಿಗೆ ಬಿಸಿಸಿಐ (BCCI) ಆಯ್ಕೆ ಸಮಿತಿಯು ಭಾರತ ತಂಡವನ್ನು ಪ್ರಕಟಿಸಿದೆ. ಅಜಿತ್ ಅಗರ್ಕರ ನೇತೃತ್ವದ ಆಯ್ಕೆ ಸಮಿತಿಯು ಯುವ ಬ್ಯಾಟರ್ ಶುಭಮನ್ ಗಿಲ್ ಅವರಿಗೆ ಎರಡೂ ಸರಣಿಗಳಲ್ಲಿ ನಾಯಕತ್ವದ ದೊಡ್ಡ ಜವಾಬ್ದಾರಿ ನೀಡಿದೆ. ಹೊಸ ಮುಖಗಳಿಗೆ ಮನ್ನಣೆ ಸಿಕ್ಕಿರುವುದು … Continued

ಹುಡುಗಿಯ ಮೌನವೇ ಮದುವೆಗೆ ಒಪ್ಪಿಗೆ ; ಅಫ್ಘಾನಿಸ್ತಾನದಲ್ಲಿ ಬಾಲ್ಯ ವಿವಾಹಕ್ಕೆ ಹೊಸ ಕಾನೂನು ಜಾರಿಗೆ ತಂದ ತಾಲಿಬಾನ್‌ !

ತಾಲಿಬಾನ್ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂದ್ಜಾದಾ ಅವರ ಅನುಮೋದನೆ ನಂತರ ಅಫ್ಘಾನಿಸ್ತಾನದಲ್ಲಿ ನೂತನ ಕೌಟುಂಬಿಕ ಕಾನೂನು ನಿಯಂತ್ರಣವನ್ನು ಜಾರಿಗೆ ತರಲಾಗಿದೆ. ಇಸ್ಲಾಮಿಕ್ ಕಾನೂನಿನ ತನ್ನದೇ ಆದ ವ್ಯಾಖ್ಯಾನದಡಿಯಲ್ಲಿ ವಿವಾಹ, ವಿಚ್ಛೇದನ ಮತ್ತು ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ನಿಯಮಗಳನ್ನು ಒಳಗೊಂಡ “ದಂಪತಿಗಳ ನಡುವಿನ ಪ್ರತ್ಯೇಕತೆಯ ತತ್ವಗಳು” (Principles of Separation Between Spouses) ಎಂಬ 31 ವಿಧಿಗಳ … Continued

ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನ ವಾಯುದಾಳಿ: 400 ಸಾವು, 250 ಜನರಿಗೆ ಗಾಯ ; ತಾಲಿಬಾನ್‌

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಆಸ್ಪತ್ರೆಯೊಂದರ ಮೇಲೆ ಪಾಕಿಸ್ತಾನ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 400 ಜನರು ಸಾವಿಗೀಡಾಗಿದ್ದಾರೆ ಮತ್ತು ಸುಮಾರು 250 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ವಕ್ತಾರರು ಮಂಗಳವಾರ ಬೆಳಿಗ್ಗೆ ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಉಪ ಸರ್ಕಾರಿ ವಕ್ತಾರ ಹಮ್ದುಲ್ಲಾ ಫಿತ್ರತ್ ಈ ಬಗ್ಗೆ ಮಾಹಿತಿ ನೀಡಿ, ಸ್ಥಳೀಯ ಕಾಲಮಾನ ರಾತ್ರಿ 9 ಗಂಟೆ ಸುಮಾರಿಗೆ … Continued

ಅಫ್ಘಾನಿಸ್ತಾನದ ಮೇಲೆ ‘ನೇರ ಯುದ್ಧ’ ಸಾರಿದ ಪಾಕಿಸ್ತಾನ ; ತನ್ನ ವಾಯುದಾಳಿಯಲ್ಲಿ 133 ತಾಲಿಬಾನಿಗಳು ಸಾವು ಎಂದ ಪಾಕ್

ಇಸ್ಲಾಮಾಬಾದ್/ಕಾಬೂಲ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿ ಸಂಘರ್ಷ ಈಗ ‘ಘೋಷಿತ ಯುದ್ಧ’ವಾಗಿ ಮಾರ್ಪಟ್ಟಿದೆ. ಶುಕ್ರವಾರ ಪಾಕಿಸ್ತಾನದ ವಾಯುಪಡೆಯು ಅಫ್ಘಾನಿಸ್ತಾನದ ಕಾಬೂಲ್ ಮತ್ತು ಕಂದಹಾರ್ ಮೇಲೆ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಉದ್ವಿಗ್ನತೆ ತುತ್ತತುದಿಗೆ ತಲುಪಿದೆ. ಈ ದಾಳಿಯಲ್ಲಿ  133 ಅಫ್ಘಾನ್ ಹೋರಾಟಗಾರರನ್ನು ಕೊಂದಿರುವುದಾಗಿ ಪಾಕಿಸ್ತಾನವು ಹೇಳಿಕೊಂಡಿದ್ದರೆ, ಅಫ್ಘಾನಿಸ್ತಾನವು ತನ್ನ ಪ್ರತಿದಾಳಿಯಲ್ಲಿ … Continued

ವೀಡಿಯೊ | ನಮ್ಮನ್ನು ‘ಟಾಯ್ಲೆಟ್ ಪೇಪರ್’ ನಂತೆ ಬಳಸಿ ಎಸೆದ ಅಮೆರಿಕ : ದೊಡ್ಡಣ್ಣನ ವಿರುದ್ಧ ಉರಿದುಬಿದ್ದ ಪಾಕ್ ರಕ್ಷಣಾ ಸಚಿವ…!

ಇಸ್ಲಾಮಾಬಾದ್: ಅಮೆರಿಕದ ಜೊತೆಗಿನ ಪಾಕಿಸ್ತಾನದ ಹಿಂದಿನ ಸಂಬಂಧಗಳ ಕುರಿತು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅತ್ಯಂತ ಕಠಿಣ ಮಾತುಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಮೆರಿಕವು ತನ್ನ ಕಾರ್ಯತಂತ್ರದ ಹಿತಾಸಕ್ತಿಗಳಿಗಾಗಿ ಪಾಕಿಸ್ತಾನವನ್ನು “ದುರುಪಯೋಗಪಡಿಸಿಕೊಂಡಿದೆ” ಮತ್ತು ಉದ್ದೇಶ ಈಡೇರಿದ ನಂತರ ನಮ್ಮನ್ನು “ಟಾಯ್ಲೆಟ್ ಪೇಪರ್‌ನಂತೆ ಬಳಸಿ ಎಸೆದಿದೆ” ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ … Continued

ವೀಡಿಯೊ…| ಭಾರತ ದಾಳಿ ಮಾಡಿದ್ರೆ ಹೇಗೆ ಆಕ್ಷೇಪಿಸ್ತೀರಿ..? ಅಫ್ಘಾನಿಸ್ತಾನ ವಿಚಾರದಲ್ಲಿ ತಮ್ಮ ದೇಶದ ನೀತಿ ಟೀಕಿಸಿದ ಪಾಕ್‌ ನಾಯಕ..!

ಇಸ್ಲಾಮಾಬಾದ್/ಕರಾಚಿ: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ಸರಣಿ ವೈಮಾನಿಕ ದಾಳಿಗಳ ವಿರುದ್ಧ ಪಾಕಿಸ್ತಾನದ ಸಂಸದ ಹಾಗೂ ಜಮಿಯತ್ ಉಲೇಮಾ-ಎ-ಇಸ್ಲಾಂ-ಎಫ್ (JUI-F) ಮುಖ್ಯಸ್ಥ ಮೌಲಾನಾ ಫಜ್ಲರ್ ರೆಹಮಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತವು ಪಾಕಿಸ್ತಾನದ ನೆಲದ ಮೇಲಿನ ಉಗ್ರರ ತಾಣಗಳನ್ನು ಧ್ವಂಸಗೊಳಿಸಲು ನಡೆಸಿದ ‘ಆಪರೇಷನ್ ಸಿಂಧೂರ’ವನ್ನು ಉಲ್ಲೇಖಿಸಿ, ಪಾಕಿಸ್ತಾನದ ನಾಯಕತ್ವದ ಇಬ್ಬಂದಿ ನೀತಿಯನ್ನು ಅವರು ಪ್ರಶ್ನಿಸಿದ್ದಾರೆ. ಪಾಕಿಸ್ತಾನದ … Continued

ಪಾಕಿಸ್ತಾನಕ್ಕೆ ಮತ್ತೆ ಜಲಸಂಕಷ್ಟ…! ಈ ಬಾರಿ ತಾಲಿಬಾನ್‌ ಕ್ರಮದಿಂದ ಪಾಕಿಸ್ತಾನಕ್ಕೆ ಕೃಷಿ-ಕುಡಿಯುವ ನೀರಿಗೆ ಸಂಕಷ್ಟ..!!

ನವದೆಹಲಿ: ಭಾರತದ ಹೆಜ್ಜೆಯನ್ನೇ ಅನುಸರಿಸಲು ಮುಂದಾಗಿರುವ ಅಫ್ಘಾನಿಸ್ತಾನದ ತಾಲಿಬಾನ್‌ ಆಡಳಿತವು ಈ ವಾರ ಕುನಾರ್ ನದಿಯ ಅಡ್ಡಲಾಗಿ ‘ಎಷ್ಟು ಸಾಧ್ಯವೋ ಅಷ್ಟು ಬೇಗನೆ’ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಪಾಕಿಸ್ತಾನಕ್ಕೆ ನೀರಿನ ಲಭ್ಯತೆಯನ್ನು ನಿರ್ಬಂಧಿಸಲು ಮುಂದಾಗಿದೆ. ಈ ಆದೇಶವನ್ನು ಸರ್ವೋಚ್ಚ ನಾಯಕ ಮೌಲ್ವಿ ಹಿಬತುಲ್ಲಾ ಅಖುಂದ್‌ಜಾದಾ ಅವರು ನೀಡಿದ್ದಾರೆ ಎಂದು ತಾಲಿಬಾನ್‌ನ ಹಂಗಾಮಿ ಜಲಸಂಪನ್ಮೂಲ ಸಚಿವರು ‘ಎಕ್ಸ್’ … Continued

ಅಪ್ಘಾನಿಸ್ತಾನ ಗಡಿ ಬಂದ್‌ ; ಪಾಕಿಸ್ತಾನದಲ್ಲಿ 1 ಕಿಲೋ ಟೊಮ್ಯಾಟೋ ಬೆಲೆ 600 ರೂಪಾಯಿ…!

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಟೊಮ್ಯಾಟೋ (ಟೊಮೆಟೊ) ಬೆಲೆಯಲ್ಲಿ 400ರಷ್ಟು ಏರಿಕೆಯಾಗಿದ್ದು, ದೇಶಾದ್ಯಂತ ಗ್ರಾಹಕರು ಭಾರಿ ಹಣದುಬ್ಬರದ ಒತ್ತಡಕ್ಕೆ ಸಿಲುಕಿದ್ದಾರೆ. ನೆರೆಯ ಅಫ್ಘಾನಿಸ್ತಾನದೊಂದಿಗೆ ಪಾಕಿಸ್ತಾನದ ಎರಡು ಪ್ರಮುಖ ಗಡಿ ಮಾರ್ಗಗಳಾದ ವಾಯವ್ಯದಲ್ಲಿರುವ ತೋರ್ಖಮ್ ಮತ್ತು ನೈಋತ್ಯದಲ್ಲಿರುವ ಚಮನ್ ಮುಚ್ಚಲ್ಪಟ್ಟ ಹಿನ್ನೆಲೆಯಲ್ಲಿ ಈ ತೀವ್ರ ಬೆಲೆ ಏರಿಕೆ ಸಂಭವಿಸಿದೆ. ಇತ್ತೀಚೆಗೆ ಎರಡೂ ನೆರೆಯ ರಾಷ್ಟ್ರಗಳ ಪಡೆಗಳ ನಡುವೆ ನಡೆದ ಸಶಸ್ತ್ರ … Continued

ಪಾಕಿಸ್ತಾನದ ವಾಯುದಾಳಿಯಲ್ಲಿ ಮೂವರು ಅಫ್ಘಾನಿಸ್ತಾನ ಕ್ರಿಕೆಟಿಗರು ಸಾವು ; ತ್ರಿಕೋನ ಸರಣಿಯಿಂದ ಹಿಂದೆ ಸರಿದ ಅಫ್ಘಾನಿಸ್ತಾನ

ಕಾಬೂಲ್: ಪಾಕಿಸ್ತಾನಿ ಸೇನೆಯು ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ ಮೂವರು ಅಫ್ಘಾನಿಸ್ತಾನದ ಕ್ರಿಕೆಟಿಗರು ಮೃತಪಟ್ಟಿದ್ದಾರೆ. ಮೃತರಾದ ಕ್ರಿಕೆಟಿಗರನ್ನು ಕಬೀರ್, ಸಿಬ್ಘತುಲ್ಲಾ ಮತ್ತು ಹಾರೂನ್ ಎಂದು ಗುರುತಿಸಲಾಗಿದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ತಿಳಿಸಿದೆ. ಈ ದಾಳಿಯಲ್ಲಿ ಇತರ  ಐವರು ನಾಗರಿಕರು ಸಾವಿಗೀಡಾಗಿದ್ದಾರೆ. ಕ್ರಿಕೆಟಿಗರು ಪಾಕಿಸ್ತಾನದ ಗಡಿಯಲ್ಲಿರುವ ಪೂರ್ವ ಪಕ್ತಿಕಾ ಪ್ರಾಂತ್ಯದ ಉರ್ಗುನ್‌ನಿಂದ … Continued

ಅಫ್ಘಾನಿಸ್ತಾನ ದಾಳಿಗೆ ಹೆದರಿ ಓಡಿಹೋದ ಪಾಕ್ ಸೈನಿಕರು : ವೀಡಿಯೊ ವೈರಲ್‌

ಅಫ್ಘಾನಿಸ್ತಾನದ ಕಾಬೂಲ್ ಮೇಲಿನ ವಾಯುದಾಳಿಯಿಂದ ಭುಗಿಲೆದ್ದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ ಈಗ ಪೂರ್ಣ ಪ್ರಮಾಣದ ಯುದ್ಧವಾಗಿ ಪರಿವರ್ತನೆಯಾಗಬಹುದು ಎಂಬ ಆತಂಕಕ್ಕೆ ಕಾರಣವಾಗಿದೆ. ಪಾಕಿಸ್ತಾನವು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ಮೇಲಿನ ದಾಳಿಗೆ ಪ್ರತಿಕ್ರಿಯೆಯಾಗಿ ತಾಲಿಬಾನ್ ನೇತೃತ್ವದ ಅಫ್ಘಾನ್ ಭದ್ರತಾ ಪಡೆಗಳು ಶನಿವಾರ ತಡರಾತ್ರಿ ಡುರಾಂಡ್ ಲೈನ್ (ಅಫ್ಘಾನ್-ಪಾಕಿಸ್ತಾನ ಗಡಿ) ದಾಟಿ ಪಾಕಿಸ್ತಾನಿ ಸೇನಾ ಔಟ್‌ಪೋಸ್ಟ್‌ಗಳ … Continued