ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯಗೆ ಭಾರತದ ಕ್ರಿಕೆಟ್‌ ತಂಡದ ನಾಯಕತ್ವದ ಹೊಣೆ

ಮುಂಬೈ: ಟಿ20 ವಿಶ್ವಕಪ್ ಬಳಿಕ ನ್ಯೂಜಿಲೆಂಡ್ (New Zealand) ಮತ್ತು ಬಾಂಗ್ಲಾದೇಶ (Bangladesh) ವಿರುದ್ಧದ ಸರಣಿಗಾಗಿ ಭಾರತದ ತಂಡವನ್ನು ಆಯ್ಕೆ ಮಾಡಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ನೂತನ ನಾಯಕನನ್ನಾಗಿ ನೇಮಕ ಮಾಡಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಕೆಲ ಹಿರಿಯ ಆಟಗಾರರಿಗೆ … Continued

ಜಾಗತಿಕ ಹಸಿವು ಸೂಚ್ಯಂಕದಲ್ಲಿ 101ರಿಂದ 107ನೇ ಸ್ಥಾನಕ್ಕೆ ಕುಸಿದ ಭಾರತ: ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳಕ್ಕಿಂತಲೂ ಕೆಳಕ್ಕೆ…!

ನವದೆಹಲಿ: ಜಾಗತಿಕ ಹಸಿವು ಸೂಚ್ಯಂಕ (GHI) 2022 ರಲ್ಲಿ 121 ದೇಶಗಳ ಪೈಕಿ ಭಾರತವು 107 ನೇ ಸ್ಥಾನಕ್ಕೆ ಕುಸಿದಿದೆ. ಭಾರತವು ತನ್ನ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಕ್ಕಿಂತ ಕೆಳಕ್ಕೆ ಕುಸಿದಿದೆ. ಇದು 2021ರಲ್ಲಿ 101ನೇ ಸ್ಥಾನದಲ್ಲಿತ್ತು. 2022 ರಲ್ಲಿ ಆರು ಸ್ಥಾನಗಳು ಕುಸಿದಿದೆ. ವರದಿಯ ಪ್ರಕಾರ, ಐರಿಶ್ ನೆರವು ಸಂಸ್ಥೆ ಕನ್ಸರ್ನ್ … Continued

ಇದು ಸಿನೆಮಾ ದೃಶ್ಯವಲ್ಲ, ರೈಲಿನಲ್ಲಿ ಪ್ರಯಾಣಿಸುವ ಪರಿ : ನೋಡಿದರೆ ಎದೆ ಝಲ್‌ ಎನ್ನಬೇಕು…ವೀಕ್ಷಿಸಿ

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವ್ಯಾಪಕವಾಗಿ ಹರಿದಾಡುತ್ತಿದೆ. ಈ ಕ್ಲಿಪ್‌ನಲ್ಲಿ, ಸಾವಿರಾರು ಜನರು ರೈಲಿನ ಟಾಪ್‌ ಮೇಲೆ ಸವಾರಿ ಮಾಡುತ್ತಿದ್ದಾರೆ, ಇದು ಬಾಂಗ್ಲಾದೇಶದ ಬಿಲಾಸ್‌ಪುರದ ದೃಶ್ಯ ಎಂದು ಹೇಳಲಾಗುತ್ತದೆ. ಒಂದೆಡೆ ಜನರು ಈ ಅದ್ಭುತ ದೃಶ್ಯವನ್ನು ನೋಡಿ ಬೆರಗಾಗಿದ್ದರೆ, ವಾಸ್ತವವಾಗಿ, ರೈಲಿನಲ್ಲಿ ಅದರ ಮೇಲ್ಛಾವಣಿ ಕಾಣಿಸದಿರುವಷ್ಟು ಜನರಿರುವುದನ್ನು ನೀವು ನೋಡಬಹುದು. ರೈಲಿನ ಎಲ್ಲಾ ಬೋಗಿಗಳ ಟಾಪ್‌ನಲ್ಲಿ ಪ್ರಯಾಣಿಕರು … Continued

ಬಾಂಗ್ಲಾದೇಶ: ಮತ್ತೊಂದು ಹಿಂದೂ ದೇವಾಲಯ ಧ್ವಂಸ, ಅಂಗಡಿಗಳ ಲೂಟಿ

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದು ಸಮುದಾಯದ ದುರ್ಗಾ ಪೂಜಾ ಕಾರ್ಯಕ್ರಮದಲ್ಲಿ ಧರ್ಮನಿಂದನೆ ಮಾಡಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡಿದ ನಂತರ ಭುಗಿಲೆದ್ದಿರುವ ಕೋಮು ಹಿಂಸಾಚಾರ ಮುಂದುವರಿದಿದ್ದು ಮತ್ತೊಂದು ಹಿಂದು ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ. ಈ ಮಧ್ಯೆ, ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ದೇಶದಾದ್ಯಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹಿಂದು ಸಂಘಟನೆಯ ಮುಖಂಡರು ಪ್ರಕಟಿಸಿದ್ದಾರೆ. ಶನಿವಾರ ನಡೆದ … Continued

ಢಾಕಾದಲ್ಲಿ ಪ್ರಬಲ ಸ್ಫೋಟ : 7 ಜನರ ಸಾವು, 400 ಜನರಿಗೆ ಗಾಯ

ಢಾಕಾ: ಬಾಂಗ್ಲಾ ರಾಜಧಾನಿ ಢಾಕಾದ ಜನನಿಬಿಡ ಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಿಂದ ಮೂರಂತಸ್ತಿನ ಕಟ್ಟಡ ಕುಸಿದು ಬಿದ್ದು ಏಳು ಮಂದಿ ಮೃತಪಟ್ಟಿದ್ದಾರೆ ಹಾಗೂ 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗ್ಯಾಸ್ ಸಿಲಿಂಡರ್ ಇಲ್ಲವೇ ಗ್ಯಾಸ್ ಲೈನ್ ಸ್ಫೋಟಿಸಿ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಿರುವ ಪೊಲೀಸರು ಘಟನೆ ಹಿಂದೆ ಯಾವುದೇ ಉಗ್ರ ಸಂಘಟನೆಯ ಕೈವಾಡವಿಲ್ಲ ಎಂದು … Continued

ಬಾಂಗ್ಲಾದೇಶದಲ್ಲಿ ಹಡಗು ಮುಳುಗಿ ೨೬ ಜನರ ಜಲಸಮಾಧಿ

ಢಾಕಾ: ಬಾಂಗ್ಲಾದೇಶದ ಶಿತಲಖ್ಯಾ ನದಿಯಲ್ಲಿ ಸರಕು ಹಡಗಿಗೆ ಡಿಕ್ಕಿ ಹೊಡೆದ ಪ್ರಯಾಣಿಕರ ಸಣ್ಣ ಹಡಗು ಮುಳುಗಿ ಕನಿಷ್ಟ 26 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭಾನುವಾರ ಸಂಜೆ ಢಾಕಾದ ಆಗ್ನೇಯಕ್ಕೆ 16 ಕಿ.ಮೀ ದೂರದಲ್ಲಿರುವ ನಾರಾಯಣಗಂಜ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಎಂ.ಎಲ್.ಸಬೀತ್ ಅಲ್ ಹಸನ್ ಎಂಬ ಪ್ರಯಾಣಿಕರ ಹಡಗು ಎಸ್‌.ಕೆ.ಎಲ್ -3 ಎಂಬ ಸರಕು ಹಡಗಿಗೆ … Continued

ಕೊರೊನಾ ಹೆಚ್ಚಳ; ಬಾಂಗ್ಲಾದೇಶದಲ್ಲಿ ಒಂದು ವಾರ ಲಾಕ್‌ಡೌನ್‌

ಢಾಕಾ: ನೆರೆಯ ರಾಷ್ಟ್ರವಾದ ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು 7 ದಿನಗಳ ಕಾಲ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಸಾರಿಗೆ ವ್ಯವಸ್ಥೆ, ಮಾರುಕಟ್ಟೆ ಸೇರಿದಂತೆ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ. ಸೋಮವಾರ ಬೆಳಗ್ಗೆ 6ಗಂಟೆಯಿಂದ ಲಾಕ್‌ಡೌನ್‌ ಆರಂಭವಾಗಿದ್ದು, ಏ.11ರ ಮಧ್ಯರಾತ್ರಿ 12 ಗಂಟೆವರೆಗೂ ಲಾಕ್‍ಡೌನ್ ಜಾರಿಯಲ್ಲಿರಲಿದೆ. ಸೋಂಕು ಹರಡುವುದನ್ನು ತಡೆಗಟ್ಟುವುದು ಮತ್ತು ಸಾವಿನ ಪ್ರಮಾಣ ನಿಯಂತ್ರಿಸಲು … Continued

ಕೋವಿಡ್ -19 ನಿಗ್ರಹಕ್ಕೆ ಪಾಕಿಸ್ತಾನ, ಬಾಂಗ್ಲಾದೇಶವನ್ನೂ ಪ್ರಯಾಣ ನಿಷೇಧ ಪಟ್ಟಿಗೆ ಸೇರಿಸಿದ ಬ್ರಿಟನ್‌

ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಇಂಗ್ಲೆಂಡ್‌ಗೆ ಮತ್ತು ಅಲ್ಲಿಂದ ಪ್ರಯಾಣ ನಿಷೇಧಿಸಲಾಗಿರುವ ರಾಷ್ಟ್ರಗಳ “ಕೆಂಪು ಪಟ್ಟಿಗೆ” ಸೇರ್ಪಡೆಗೊಂಡ ನಾಲ್ಕು ಹೆಚ್ಚುವರಿ ದೇಶಗಳಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿವೆ. ಶುಕ್ರವಾರ ಘೋಷಿಸಲಾದ ನಿಷೇಧವು ಏಪ್ರಿಲ್ 9ರಿಂದ ಜಾರಿಗೆ ಬರಲಿದೆ ಮತ್ತು ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನಲ್ಲಿ ಪತ್ತೆಯಾದಂತೆ ಆ ಪ್ರದೇಶಗಳಲ್ಲಿ ಕೋವಿಡ್ -19 ರ ಹೊಸ ರೂಪಾಂತರಗಳ … Continued

ಬಾಂಗ್ಲಾಕ್ಕೆ ಭಾರತದಿಂದ 12 ಲಕ್ಷ ಕೊರೊನಾ ಲಸಿಕೆ ಕೊಡುಗೆ

ಢಾಕಾ : ಭಾರತವು ಶನಿವಾರ ಬಾಂಗ್ಲಾದೇಶಕ್ಕೆ 12 ಲಕ್ಷ ಕೋವಿಡ್-19 ಲಸಿಕೆಯ ಡೋಸ್‌ಗಳನ್ನು ಕೊಡುಗೆಯಾಗಿ ನೀಡಿದೆ. ಎರಡು ದಿನಗಳ ಪ್ರವಾಸಕ್ಕಾಗಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಲಸಿಕೆಗಳನ್ನೊಳಗೊಂಡ ಪ್ರಾತಿನಿಧಿಕ ಪೆಟ್ಟಿಗೆಯೊಂದನ್ನು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರಿಗೆ ಹಸ್ತಾಂತರಿಸಿದರು. ಅದೇ ವೇಳೆ, ಮೋದಿ 109 ಅಂಬುಲೆನ್ಸ್‌ಗಳ ಪ್ರಾತಿನಿಧಿಕ ಕೀ ಹಸೀನಾರಿಗೆ ನೀಡಿದರು. ಉಭಯ ನಾಯಕರು … Continued

ಬಾಂಗ್ಲಾದೇಶದ ವಿಮೋಚನೆಗಾಗಿ ಪ್ರತಿಭಟಿಸಿದಾಗ ನಾನೂ ಜೈಲಿಗೆ ಹೋಗಿದ್ದೆ: ಪ್ರಧಾನಿ ಮೋದಿ

ಢಾಕಾ: ಎರಡು ದಿನಗಳ ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ 50 ನೇ ವರ್ಷದ ಸ್ವಾತಂತ್ರ್ಯಕ್ಕಾಗಿ ನೆರೆಯ ದೇಶವಾದ ಬಾಂಗ್ಲಾದೇಶವನ್ನು ಶುಕ್ರವಾರ ಅಭಿನಂದಿಸಿದ್ದಾರೆ ಮತ್ತು ಬಾಂಗ್ಲಾದೇಶದ ವಿಮೋಚನೆಗಾಗಿ ಪ್ರತಿಭಟಿಸುವಾಗ ತಾವೂ ಕೂಡ ಜೈಲಿಗೆ ಹೋಗಿದ್ದೆ ಎಂದು ಹೇಳಿದ್ದಾರೆ. ನಾನು ಕೆಲವು ಸ್ನೇಹಿತರ ಜೊತೆ ಬಾಂಗ್ಲಾದೇಶದ ಹೋರಾಟದ ಸಮಯದಲ್ಲಿ ಪ್ರತಿಭಟನೆ ನಡೆಸಿದಾಗ ನನಗೆ ಸುಮಾರು 20-22 ವರ್ಷ … Continued