ತಾರಿಕ್ ರೆಹಮಾನ್ ಪ್ರಧಾನಿಯಾದ ನಂತರ ಕ್ಷಿಪ್ರ ನಿರ್ಧಾರ: ಭಾರತೀಯರಿಗೆ ವೀಸಾ ಸೇವೆ ಪುನಃಸ್ಥಾಪಿಸಿದ ಬಾಂಗ್ಲಾದೇಶ

ಢಾಕಾ/ನವದೆಹಲಿ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ನಾಯಕ ತಾರಿಕ್ ರೆಹಮಾನ್ ಅವರು ಫೆಬ್ರವರಿ 17ರಂದು (ಮಂಗಳವಾರ) ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರಕ್ಕೆ ಬಂದ ಬೆನ್ನಲ್ಲೇ ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಮುಂದಾಗಿರುವ ಅವರು, ಭಾರತೀಯ ನಾಗರಿಕರಿಗೆ ಸ್ಥಗಿತಗೊಳಿಸಲಾಗಿದ್ದ ಎಲ್ಲಾ ವೀಸಾ ಸೇವೆಗಳನ್ನು ಪುನರಾರಂಭಿಸಲು ಆದೇಶಿಸಿದ್ದಾರೆ. ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್‌ನಲ್ಲಿ ಶುಕ್ರವಾರದಿಂದ … Continued

ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹೊರಹಾಕಲ್ಪಟ್ಟ ಪ್ರಕರಣ : ಪಾಕ್‌ ಬಲೆಗೆ ಬಿದ್ದ ಬಾಂಗ್ಲಾದೇಶ ಕ್ರಿಕೆಟ್ ಮುಖ್ಯಸ್ಥ ; ಬಿಸಿಬಿ ಮಾಜಿ ಸಿಇಒ

ಢಾಕಾ: ಭಾರತ ಮತ್ತು ಶ್ರೀಲಂಕಾ ಆತಿಥ್ಯ ವಹಿಸಿರುವ 2026ರ ಟಿ20 ವಿಶ್ವಕಪ್‌ ನಲ್ಲಿ  ಐಸಿಸಿ (ICC) ಜೊತೆಗಿನ ಸಂಘರ್ಷದ ಪರಿಣಾಮವಾಗಿ ಬಾಂಗ್ಲಾದೇಶ ತಂಡವು ವಿಶ್ವಕಪ್‌ನಿಂದ ಹೊರಬಿದ್ದಿದ್ದು, ಇದರ ಹಿಂದೆ ಪಾಕಿಸ್ತಾನದ ಕುತಂತ್ರವಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.  ವಿಶ್ವಕಪ್‌ ಪಂದ್ಯಗಳನ್ನು ಆಡಲು ಸಹ ಆತಿಥೇಯ ಭಾರತಕ್ಕೆ ಪ್ರಯಾಣಿಸಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) “ಭದ್ರತಾ ಕಾರಣ” … Continued

ಬಾಂಗ್ಲಾದೇಶ ಚುನಾವಣೆ ಫಲಿತಾಂಶ : ಭರ್ಜರಿ ಜಯದತ್ತ ಬಿಎನ್‌ಪಿ ; ಪ್ರಧಾನಿ ಹಾದಿಯಲ್ಲಿ ತಾರಿಕ್ ರಹಮಾನ್

ಢಾಕಾ : ಬಾಂಗ್ಲಾದೇಶದಲ್ಲಿ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಐತಿಹಾಸಿಕ ಗೆಲುವಿನತ್ತ ಮುನ್ನಡೆದಿದೆ. 2024 ರ ಮಾರಕ ದಂಗೆಯ ನಂತರ ನಡೆದ ಮೊದಲ ಚುನಾವಣೆಯಲ್ಲಿ ಪಕ್ಷವು ಭರ್ಜರಿ ಗೆಲುವಿನ ಹಾದಿಯಲ್ಲಿದೆ, ಆ ಪಕ್ಷದ ನಾಯಕ ತಾರಿಕ್ ರೆಹಮಾನ್ ಪ್ರಧಾನಿಯಾಗಲಿದ್ದಾರೆ. ಬಾಂಗ್ಲಾದೇಶದ 13ನೇ ರಾಷ್ಟ್ರೀಯ ಸಂಸತ್ ಚುನಾವಣೆಯ ಅಧಿಕೃತ ಫಲಿತಾಂಶಗಳನ್ನು ಚುನಾವಣಾ ಆಯೋಗವು ಇಂದು, ಶುಕ್ರವಾರ (ಫೆಬ್ರವರಿ 13) … Continued

ಬಾಂಗ್ಲಾದೇಶ ಸರ್ಕಾರದ ಇಬ್ಬಗೆ ನೀತಿ: ಶೂಟಿಂಗ್ ತಂಡಕ್ಕೆ ಭಾರತ ಬರಲು ಅನುಮತಿ, ಕ್ರಿಕೆಟ್ ತಂಡಕ್ಕೆ ನಿರಾಕರಣೆ…!

ನವದೆಹಲಿ: ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ‘ಏಷ್ಯನ್ ಏರ್ ಗನ್ ಚಾಂಪಿಯನ್‌ಶಿಪ್’ನಲ್ಲಿ ಪಾಲ್ಗೊಳ್ಳಲು ತನ್ನ ದೇಶದ ಶೂಟರ್‌ಗಳಿಗೆ ಬಾಂಗ್ಲಾದೇಶ ಸರ್ಕಾರ ಅನುಮತಿ ನೀಡಿದೆ. ಫೆಬ್ರವರಿ 2 ರಿಂದ 14 ರವರೆಗೆ ದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಈ ಕೂಟ ನಡೆಯಲಿದೆ. ಆದರೆ, ಇದೇ ವೇಳೆ ಭಾರತಕ್ಕೆ ಬರಲು ಕ್ರಿಕೆಟ್ ತಂಡಕ್ಕೆ ಅನುಮತಿ ನಿರಾಕರಿಸಿರುವ … Continued

ಬಾಂಗ್ಲಾದೇಶದಲ್ಲಿ ಭೀಕರ ಕೃತ್ಯ : ಅಂಗಡಿಯಲ್ಲಿ ಮಲಗಿದ್ದ ಹಿಂದೂ ಯುವಕನನ್ನು ಜೀವಂತವಾಗಿ ದಹಿಸಿದ ದುಷ್ಕರ್ಮಿಗಳು

ಢಾಕಾ : ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, 23 ವರ್ಷದ ಹಿಂದೂ ಯುವಕ ಚಂಚಲ್ ಭೌಮಿಕ್ ಎಂಬುವವರನ್ನು ಅತ್ಯಂತ ಕ್ರೂರವಾಗಿ ಜೀವಂತವಾಗಿ ಸುಟ್ಟು ಕೊಲ್ಲಲಾಗಿದೆ ಎಂದು ವರದಿಯಾಗಿದೆ.  ಜನವರಿ 23ರ ಶುಕ್ರವಾರ ತಡರಾತ್ರಿ ಈ ಭಯಾನಕ ಘಟನೆ ನಡೆದಿದೆ. ನರಸಿಂಗಡಿಯ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಚಂಚಲ್, ರಾತ್ರಿ ಅಲ್ಲಿಯೇ ಮಲಗಿದ್ದರು. ಈ … Continued

ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಔಟ್; ಸ್ಕಾಟ್ಲೆಂಡ್‌ಗೆ ಸ್ಥಾನ ನೀಡಿದ ಐಸಿಸಿ

ದುಬೈ: ಮುಂಬರುವ ಟಿ20 ವಿಶ್ವಕಪ್‌ ಪಂದ್ಯಾವಳಿಯಿಂದ ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಹೊರಹಾಕಲಾಗಿದ್ದು, ಅದರ ಸ್ಥಾನಕ್ಕೆ ಸ್ಕಾಟ್ಲೆಂಡ್ ತಂಡವನ್ನು ಸೇರಿಸಿಕೊಳ್ಳಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಧಿಕೃತವಾಗಿ ತಿಳಿಸಿದೆ. ಐಪಿಎಲ್ 2026 ರಿಂದ ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನು ಕೈಬಿಟ್ಟಿದ್ದನ್ನು ಪ್ರತಿಭಟಿಸಿ, ಭದ್ರತೆಯ ಕಾರಣ ನೀಡಿ ಭಾರತಕ್ಕೆ ಪ್ರಯಾಣಿಸಲು ಬಾಂಗ್ಲಾದೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಕಠಿಣ … Continued

ಟಿ20 ವಿಶ್ವಕಪ್ | ಭಾರತಕ್ಕೆ ಬರಲು ಬಾಂಗ್ಲಾದೇಶ ನಕಾರ: ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯುವ ನಿರ್ಧಾರ

ನವದೆಹಲಿ: ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಈ ವರ್ಷ ಭಾರತದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ನಿರಾಕರಿಸಿದೆ. ಜನವರಿ 22 ರಂದು ನಡೆದ ಆಂತರಿಕ ಸಭೆಯ ನಂತರ ಈ ಅಧಿಕೃತ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಬಾಂಗ್ಲಾದೇಶ ಟೂರ್ನಿಯಿಂದ ಹಿಂದೆ ಸರಿದರೆ, ಅವರ ಬದಲಿಗೆ ಸ್ಕಾಟ್ಲೆಂಡ್ … Continued

ಭಾರತದಲ್ಲಿ ಆಡಲು ನಿರಾಕರಿಸಿದ್ರೆ ಬಾಂಗ್ಲಾದೇಶಕ್ಕೆ ಟಿ20 ವಿಶ್ವಕಪ್‌ನಿಂದ ಹೊರಬೀಳುವ ಎಚ್ಚರಿಕೆ ನೀಡಿದ ಐಸಿಸಿ

ದುಬೈ: ಮುಂಬರುವ ಟಿ20 ವಿಶ್ವಕಪ್‌ನ ತನ್ನ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಮನವಿಯನ್ನು ಅಂರಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತಿರಸ್ಕರಿಸಿದೆ ಹಾಗೂ ಐಸಿಸಿ ಮಂಡಳಿಯಲ್ಲಿ ನಡೆದ ಮತದಾನದಲ್ಲಿ ಬಾಂಗ್ಲಾದೇಶದ ಪ್ರಸ್ತಾವನೆಯು 14-2 ಮತಗಳ ಅಂತರದಿಂದ ಸೋಲನುಭವಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಹೇಳಿದೆ. ಒಂದು ವೇಳೆ ಬಾಂಗ್ಲಾದೇಶ … Continued

ಬಾಂಗ್ಲಾದೇಶ: ಪೆಟ್ರೋಲ್ ಹಣ ಕೇಳಿದ್ದಕ್ಕೆ ಹಿಂದೂ ಯುವಕನ ಮೇಲೆ ಕಾರು ಹರಿಸಿ ಹತ್ಯೆ

ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿಯಾಗಲು ಯತ್ನಿಸಿದ ಎಸ್‌ಯುವಿ (SUV) ಕಾರನ್ನು ತಡೆಯಲು ಯತ್ನಿಸಿದ ಹಿಂದೂ ಯುವಕನನ್ನು ಕಾರು ಓಡಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಮೃತ ಯುವಕನನ್ನು 30 ವರ್ಷದ ರಿಪಾನ್ ಸಹಾ ಎಂದು ಗುರುತಿಸಲಾಗಿದೆ. ಈತ ರಾಜಬರಿ ಜಿಲ್ಲೆಯ ಗೋವಾಲಂದ ಮೋರ್‌ನಲ್ಲಿರುವ ಕರೀಂ ಫಿಲ್ಲಿಂಗ್ … Continued

ತಮೀಮ್ ಇಕ್ಬಾಲ್‌ ರನ್ನು ‘ಭಾರತದ ಏಜೆಂಟ್’ ಎಂದಿದ್ದ ಬಾಂಗ್ಲಾ ಕ್ರಿಕೆಟ್ ಮಂಡಳಿ ಹಣಕಾಸು ಸಮಿತಿ ಅಧ್ಯಕ್ಷ ವಜಾ

ಢಾಕಾ : ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ20 ವಿಶ್ವಕಪ್ ಪಂದ್ಯದ ಸ್ಥಳದ ವಿವಾದದ ನಡುವೆ ಸರಣಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಹಣಕಾಸು ಸಮಿತಿ ಅಧ್ಯಕ್ಷ ಎಂ. ನಜ್ಮುಲ್ ಇಸ್ಲಾಂ ಅವರನ್ನು ಗುರುವಾರ ಹುದ್ದೆಯಿಂದ ವಜಾಗೊಳಿಸಲಾಗಿದೆ. ಮಾಜಿ ನಾಯಕ ತಮೀಮ್ ಇಕ್ಬಾಲ್ ಅವರನ್ನು “ಭಾರತದ ಏಜೆಂಟ್” ಎಂದು ಕರೆದಿದ್ದ ನಜ್ಮುಲ್ … Continued