ವೀಸಾ ಅವಧಿ ಮುಗಿದರೂ ವಾಸ: ಇಸ್ರೇಲ್ ಪ್ರಜೆ ವಶಕ್ಕೆ

ಕಾರವಾರ : ವೀಸಾ ಅವಧಿ ಮುಕ್ತಾಯಗೊಂಡಿದ್ದರೂ ಭಾರತದಲ್ಲೇ ಉಳಿದುಕೊಂಡಿದ್ದ ಇಸ್ರೇಲ್ ಪ್ರಜೆಯೊಬ್ಬರನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್ ಮೂಲದ ಮಾರ್ಚಾವಿ ಅಸ್ಸಾಪ್ ಎಂಬಾತನನ್ನು ಹೊನ್ನಾವರ ತಾಲೂಕಿನ ಹಳದಿಪುರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಇವರ ಭಾರತ ಪ್ರವಾಸದ ವೀಸಾ ಅವಧಿ 2025ರ ಏಪ್ರಿಲ್‌ನಲ್ಲೇ ಮುಕ್ತಾಯಗೊಂಡಿದ್ದರೂ ಅವರು … Continued

ತಾರಿಕ್ ರೆಹಮಾನ್ ಪ್ರಧಾನಿಯಾದ ನಂತರ ಕ್ಷಿಪ್ರ ನಿರ್ಧಾರ: ಭಾರತೀಯರಿಗೆ ವೀಸಾ ಸೇವೆ ಪುನಃಸ್ಥಾಪಿಸಿದ ಬಾಂಗ್ಲಾದೇಶ

ಢಾಕಾ/ನವದೆಹಲಿ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ನಾಯಕ ತಾರಿಕ್ ರೆಹಮಾನ್ ಅವರು ಫೆಬ್ರವರಿ 17ರಂದು (ಮಂಗಳವಾರ) ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರಕ್ಕೆ ಬಂದ ಬೆನ್ನಲ್ಲೇ ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಮುಂದಾಗಿರುವ ಅವರು, ಭಾರತೀಯ ನಾಗರಿಕರಿಗೆ ಸ್ಥಗಿತಗೊಳಿಸಲಾಗಿದ್ದ ಎಲ್ಲಾ ವೀಸಾ ಸೇವೆಗಳನ್ನು ಪುನರಾರಂಭಿಸಲು ಆದೇಶಿಸಿದ್ದಾರೆ. ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್‌ನಲ್ಲಿ ಶುಕ್ರವಾರದಿಂದ … Continued

2025ರ ಹೆನ್ಲಿ ಸೂಚ್ಯಂಕ : ಭಾರತೀಯ ಪಾಸ್‌ಪೋರ್ಟ್ 5 ಸ್ಥಾನ ಇಳಿಕೆ

ನವದೆಹಲಿ: ಈ ವರ್ಷ ಭಾರತೀಯ ಪ್ರವಾಸಿಗರಿಗೆ ಜಾಗತಿಕ ಸಂಚಾರ ಕೊಂಚ ಮಟ್ಟಿಗೆ ನಿರ್ಬಂಧಿತವಾಗುವ ಸಾಧ್ಯತೆ ಇದೆ. 2025ರ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ (Henley Passport Index) ಪ್ರಕಾರ, ಭಾರತವು ಐದು ಸ್ಥಾನಗಳಷ್ಟು ಕುಸಿತ ಕಂಡಿದ್ದು, 85ನೇ ಸ್ಥಾನಕ್ಕೆ ತಲುಪಿದೆ. ಪ್ರಸ್ತುತ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ವಿಶ್ವದಾದ್ಯಂತ 57 ದೇಶಗಳಿಗೆ ವೀಸಾ-ಮುಕ್ತ ಪ್ರವೇಶ ಪಡೆಯಬಹುದಾಗಿದೆ. ಕಳೆದ 2024ರಲ್ಲಿ … Continued

ವೀಸಾ ಅವಧಿ ಮುಗಿದದ್ದು ಗೊತ್ತಿದ್ರೂ ಆಶ್ರಯ ; ಪಾಕ್ ಮಹಿಳೆ ಜೊತೆ ಮದುವೆಯಾಗಿದ್ದನ್ನು ಮುಚ್ಚಿಟ್ಟ ಸಿಆರ್‌ಪಿಎಫ್ ಜವಾನ ಕೆಲಸದಿಂದ ವಜಾ

ನವದೆಹಲಿ: ಪಾಕಿಸ್ತಾನಿ ಮಹಿಳೆಯೊಂದಿಗಿನ ತಾನು ಮದುವೆಯಾಗಿದ್ದನ್ನು “ಮುಚ್ಚಿಟ್ಟಿದ್ದಕ್ಕಾಗಿ” ಕೇಂದ್ರ ಮೀಸಲು ಪೊಲೀಸ್ ಪಡೆಯು ತನ್ನ ಜವಾನ ಮುನೀರ್ ಅಹ್ಮದ್ ಅವರನ್ನು ಸೇವೆಯಿಂದ ವಜಾಗೊಳಿಸಿದೆ. ಅವರ ಕೃತ್ಯವು ರಾಷ್ಟ್ರೀಯ ಭದ್ರತೆಗೆ ಹಾನಿಕಾರಕವಾಗಿದೆ ಎಂದು ಕಂಡುಬಂದಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ. ಈ ಜವಾನನ್ನು ಕೊನೆಯದಾಗಿ ದೇಶದ ಪ್ರಮುಖ ಆಂತರಿಕ ಭದ್ರತಾ ಪಡೆ ಪ್ಯಾರಾಮಿಲಿಟರಿ ಸಿಆರ್‌ಪಿಎಫ್‌ (CRPF)ನ … Continued

ವೀಸಾ ರದ್ದುಗೊಳಿಸಿದ ನಂತರ ಪಾಕಿಸ್ತಾನಿಗಳನ್ನು ಭಾರತದಿಂದ ಹೊರಹಾಕಲು ಎಲ್ಲ ರಾಜ್ಯಗಳಿಗೆ ಅಮಿತ್ ಶಾ ನಿರ್ದೇಶನ

ನವದೆಹಲಿ: ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ನೀಡಿರುವ ಎಲ್ಲಾ ವೀಸಾಗಳನ್ನು ರದ್ದುಗೊಳಿಸಿದ ಒಂದು ದಿನದ ನಂತರ, ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಪಾಕಿಸ್ತಾನದ ನಾಗರಿಕರನ್ನು ಗುರುತಿಸಿ ಆಯಾ ರಾಜ್ಯಗಳಿಂದ ತಕ್ಷಣವೇ ಹೊರಹೋಗುವಂತೆ ಸೂಚನೆ ನೀಡಬೇಕು ಎಂದು ಶುಕ್ರವಾರ ಎಲ್ಲಾ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಿದ್ದಾರೆ. ಉನ್ನತ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯ ನಂತರ, ಅಮಿತ್ ಶಾ … Continued

ಅಯೋಧ್ಯೆ ಬಾಲರಾಮನ ಮೂರ್ತಿ ಕೆತ್ತಿದ್ದ ಶಿಲ್ಪಿ ಅರುಣ ಯೋಗಿರಾಜ​ಗೆ ಅಮೆರಿಕ ವೀಸಾ ನಿರಾಕರಣೆ

ಮೈಸೂರು: ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಲರಾಮ (ರಾಮಲಲ್ಲಾ)ನ ಮೂರ್ತಿ ಕೆತ್ತನೆ ಮಾಡಿದ್ದ ಮೈಸೂರಿನ ಶಿಲ್ಪಿ ಅರುಣ ಯೋಗಿರಾಜ ಅವರಿಗೆ ಅಮೆರಿಕ ವೀಸಾ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ. ಅಮೆರಿಕದದಲ್ಲಿ ಆಯೋಜಿಸಲಾಗಿರುವ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸನ್ಮಾನಿಸಲು ಅವರಿಗೆ ಆಯೋಜಕರಿಂದ ಆಹ್ವಾನ ಬಂದಿತ್ತು. ಹೀಗಾಗಿ 20 ದಿನಗಳ ಪ್ರವಾಸಕ್ಕಾಗಿ ಅರುಣ ಯೋಗಿರಾಜ ಕುಟುಂಬ ಸಹಿತ ಅಮೆರಿಕಕ್ಕೆ ತೆರಳಲು ಎರಡು … Continued

ದೇಶದ ಭದ್ರತೆಗೆ ಧಕ್ಕೆ ಆರೋಪ:ಜಮ್ಮು-ಕಾಶ್ಮೀರ ಮಾಜಿ ಸಿಎಂ ಪಾಸ್ ಪೋರ್ಟ್ ಅರ್ಜಿ ತಿರಸ್ಕೃತ:

ಶ್ರೀನಗರ: ದೇಶದ ಭದ್ರತೆಗೆ ಧಕ್ಕೆ ತಂದ ಆರೋಪದ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ ಅವರ ಪಾಸ್ ಪೋರ್ಟ್ ಅರ್ಜಿ ತಿರಸ್ಕರಿಸಲಾಗಿದೆ. ಈ ಬಗ್ಗೆ ಸ್ವತಃ ಮೆಹಬೂಬಾ ಮುಫ್ತಿ ಅವರೇ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ದೇಶದ ಭದ್ರತೆಗೆ ಧಕ್ಕೆ ತಂದ … Continued