ಸಿಎಎ ಕಾನೂನಿನ ಅಡಿ ಮುಸ್ಲಿಮರು ಯಾಕೆ ಪೌರತ್ವಕ್ಕೆ ಅರ್ಹರಲ್ಲ? : ವಿವರಣೆ ನೀಡಿದ ಅಮಿತ್‌ ಶಾ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನದ ಸುತ್ತಲಿನ ವಿವಾದದ ಮಧ್ಯೆ, ಗೃಹ ಸಚಿವ ಅಮಿತ್ ಶಾ ಪ್ರಮುಖ ಪ್ರಶ್ನೆಗೆ ಇಂದು ಗುರುವಾರ ಉತ್ತರಿಸಿದ್ದಾರೆ. ಪಾರ್ಸಿಗಳು ಮತ್ತು ಕ್ರೈಸ್ತರು ಸಿಎಎ ಅಡಿಯಲ್ಲಿ ಏಕೆ ಅರ್ಹರು, ಆದರೆ ಮುಸ್ಲಿಮರುಯಾಕೆ ಅರ್ಹರಲ್ಲ? ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯು ಡಿಸೆಂಬರ್ 31, 2014 ರ ಮೊದಲು … Continued

ಫೆ. 11ರಂದು ಮೈಸೂರಿಗೆ ಅಮಿತ್ ಶಾ ಭೇಟಿ

ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಫೆ.11 ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಭಾನುವಾರ (ಫೆಬ್ರವರಿ 10) ಮೈಸೂರಿಗೆ ಆಗಮಿಸಲಿದ್ದಾರೆ. ಭಾನುವಾರ ರಾತ್ರಿ 10:50 ಗಂಟೆಗೆ ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಂತರ ರಸ್ತೆ ಮಾರ್ಗವಾಗಿ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಫೆಬ್ರವರಿ 11 ರಂದು ಬೆಳಿಗ್ಗೆ 11 … Continued

ಲೋಕಸಭೆ ಚುನಾವಣೆಗೂ ಮುನ್ನವೇ ಸಿಎಎ ಜಾರಿ : ಅಮಿತ್ ಶಾ

ನವದೆಹಲಿ : 2019 ರಲ್ಲಿ ಜಾರಿಗೊಳಿಸಲಾದ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ಈ ಸಂಬಂಧ ನಿಯಮಗಳನ್ನು ಹೊರಡಿಸಿದ ನಂತರ ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ. ET NOW ಜಾಗತಿಕ ವ್ಯಾಪಾರ ಶೃಂಗಸಭೆ 2024ರಲ್ಲಿ ಮಾತನಾಡಿದ ಅವರು, “ನಮ್ಮ ಮುಸ್ಲಿಂ ಸಹೋದರರನ್ನು ದಾರಿತಪ್ಪಿಸಲಾಗುತ್ತಿದೆ … Continued

ಸಿಮಿ ಸಂಘಟನೆಯನ್ನು ಮತ್ತೆ 5 ವರ್ಷಗಳ ಕಾಲ ನಿಷೇಧಿಸಿದ ಕೇಂದ್ರ ಸರ್ಕಾರ

ನವದೆಹಲಿ: ‘ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ(SIMI)ವನ್ನು “ಕಾನೂನುಬಾಹಿರ ಸಂಘಟನೆ” ಎಂದು ಘೋಷಿಸಲಾಗಿದೆ ಮತ್ತು ಕಠಿಣ ಭಯೋತ್ಪಾದನೆ-ವಿರೋಧಿ ಅಡಿಯಲ್ಲಿ ಅದರ ಮೇಲಿನ ನಿಷೇಧವನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಸೋಮವಾರ ಪ್ರಕಟಿಸಿದ್ದಾರೆ. ಭಯೋತ್ಪಾದನೆಯನ್ನು ಉತ್ತೇಜಿಸುವಲ್ಲಿ, ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಲ್ಲಿ ತೊಡಗಿರುವ ಸಂಘಟನೆಯು ಭಾರತದ ಸಾರ್ವಭೌಮತೆ, … Continued

ವೀಡಿಯೊ..| ರಾಜ್ಯ ರಾಜಕಾರಣದಲ್ಲಿ ಸಂಚಲನ ; ಕಾಂಗ್ರೆಸ್ಸಿಗೆ ಜಗದೀಶ ಶೆಟ್ಟರ ಗುಡ್‌ ಬೈ; ಪುನಃ ಬಿಜೆಪಿ ಸೇರ್ಪಡೆ

ನವದೆಹಲಿ : ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ವಿಧಾನ ಪರಿಷತ್‌ ಸದಸ್ಯ ಜಗದೀಶ ಶೆಟ್ಟರ (Jagadish Shettar) ಬಿಜೆಪಿಗೆ ಪುನಃ ಸೇರ್ಪಡೆಯಾಗಿದ್ದಾರೆ. ಇಂದು ಗುರುವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರನಾಯಕರನ್ನು ಭೇಟಿ ಮಾಡಿದ ನಂತರ ಬಿಜೆಪಿಗೆ ಮತ್ತೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ … Continued

ಭಾರತ ವಿರೋಧಿ ಪ್ರಚಾರ ; ತೆಹ್ರೀಕ್-ಎ-ಹುರಿಯತ್ ಸಂಘಟನೆ ನಿಷೇಧಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ತೆಹ್ರೀಕ್-ಎ-ಹುರಿಯತ್ (TeH) ಅನ್ನು ‘ಕಾನೂನುಬಾಹಿರ ಸಂಘಟನೆ’ ಎಂದು ಕೇಂದ್ರ ಸರ್ಕಾರ ಭಾನುವಾರ ಘೋಷಿಸಿದೆ. ಮೃತ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಈ ಹಿಂದೆ ಈ ಸಂಘಟನೆಯ ನೇತೃತ್ವ ವಹಿಸಿದ್ದರು. ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಲು ಮತ್ತು ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ನಿಷೇಧಿತ … Continued

ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಅಸ್ಸಾಂ ಪ್ರತ್ಯೇಕತಾವಾದಿ ಗುಂಪು ಉಲ್ಫಾ-ಕೇಂದ್ರ ಸರ್ಕಾರ ಸಹಿ

ನವದೆಹಲಿ: ಕೇಂದ್ರ, ಅಸ್ಸಾಂ ಸರ್ಕಾರ ಮತ್ತು ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸೋಮ್ (ಉಲ್ಫಾ) ನಡುವಿನ ತ್ರಿಪಕ್ಷೀಯ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ದೆಹಲಿಯಲ್ಲಿ ಸಹಿ ಹಾಕಲಾಯಿತು. ಆ ಮೂಲಕ ಭಾರತದ ಈಶಾನ್ಯ ಪ್ರದೇಶದಲ್ಲಿನ ಅತಿದೊಡ್ಡ ದಂಗೆಕೋರ ಗುಂಪುಗಳ ಶಸ್ತ್ರಸಜ್ಜಿತ ಹೋರಾಟಕ್ಕೆ ತೆರೆ ಬಿದ್ದಿದೆ. ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿದ ನಂತರ ಅಮಿತ್ ಶಾ ಅವರು, “ಇಂದು … Continued

ಮುಸ್ಲಿಂ ಲೀಗ್ ಜಮ್ಮು- ಕಾಶ್ಮೀರ (ಮಸರತ್ ಆಲಂ ಬಣ) ಸಂಘಟನೆ ನಿಷೇಧಿಸಿದ ಕೇಂದ್ರ ಸರ್ಕಾರ

ನವದೆಹಲಿ: ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ (ಮಸರತ್ ಆಲಂ ಬಣ) (ಎಂಎಲ್‌ಜೆಕೆ-ಎಂಎ) ಅನ್ನು ಬುಧವಾರ ನಿಷೇಧಿತ ಸಂಘಟನೆ ಎಂದು ಸರ್ಕಾರ ಘೋಷಿಸಿದೆ. ಈ ಸಂಘಟನೆಯ ಸದಸ್ಯರು ದೇಶವಿರೋಧಿ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದಿದೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಸಂಘಟನೆ ಜನರನ್ನು ಪ್ರಚೋದಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ … Continued

ಮೋದಿ, ಶಾ ಜೇಬುಗಳ್ಳರು ಹೇಳಿಕೆ : ರಾಹುಲ್‌ ಗಾಂಧಿಗೆ ಈಗ ಮತ್ತೊಂದು ಸಂಕಷ್ಟ

ನವದೆಹಲಿ: ನವೆಂಬರ್ 22ರಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಉದ್ಯಮಿ ಗೌತಮ್ ಅದಾನಿ ಅವರನ್ನು ‘ಜೇಬುಗಳ್ಳರು’ ಎಂದು ಕರೆದಿದ್ದಕ್ಕಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಗುರುವಾರ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡಿದೆ. ಹೇಳಿಕೆಯು “ಉತ್ತಮ ಅಭಿರುಚಿಯಲ್ಲಿಲ್ಲ” … Continued

ಅಭೂತಪೂರ್ವ ಕ್ರಮದಲ್ಲಿ ಸಂಸತ್ತಿನಿಂದ ವಿಪಕ್ಷಗಳ 45 ರಾಜ್ಯಸಭಾ ಸದಸ್ಯರು, 33 ಲೋಕಸಭೆ ಸದಸ್ಯರು ಅಮಾನತು…!

ನವದೆಹಲಿ: ಅಭೂತಪೂರ್ವ ಬೆಳವಣಿಗೆಯಲ್ಲಿ, ಕಳೆದ ವಾರ ಸಂಸತ್ತಿನಲ್ಲಿ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ಸೇರಿ 78 ಸಂಸದರನ್ನು ಸೋಮವಾರ (ಡಿಸೆಂಬರ್‌ 18) ಅಮಾನತುಗೊಳಿಸಲಾಗಿದೆ. ಭದ್ರತಾ ಲೋಪದ ಕುರಿತು ಹೇಳಿಕೆ ನೀಡುವಂತೆ ಗೃಹ ಸಚಿವರು ಒತ್ತಾಯಿಸಿದ್ದಕ್ಕಾಗಿ ಹದಿನಾಲ್ಕು ಸಂಸದರನ್ನು … Continued