5,000 ‘ಸೈಬರ್ ಕಮಾಂಡೋಸ್’, ಆನ್‌ಲೈನ್ ನೋಂದಣಿ : ಸೈಬರ್ ಅಪರಾಧ ತಡೆಗೆ ಕೇಂದ್ರದಿಂದ ನೂತನ ಕ್ರಮಗಳು

ನವದೆಹಲಿ: ಸೈಬರ್ ಭದ್ರತೆ ಖಾತ್ರಿಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ 5,000 ‘ಸೈಬರ್ ಕಮಾಂಡೋ’ಗಳಿಗೆ ತರಬೇತಿ, ವೆಬ್ ಆಧಾರಿತ ಡೇಟಾ ರಿಜಿಸ್ಟ್ರಿ ಮತ್ತು ಸೈಬರ್ ಅಪರಾಧ ಮಾಹಿತಿ ಹಂಚಿಕೊಳ್ಳಲು ಪೋರ್ಟಲ್ ಮತ್ತು ರಾಷ್ಟ್ರೀಯ ನೋಂದಣಿ ಸೇರಿದಂತೆ ಹಲವಾರು ನೂತನ ಉಪಕ್ರಮಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಮಂಗಳವಾರ ನವದೆಹಲಿಯಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ … Continued

ಅತಿದೊಡ್ಡ ಸೈಬರ್ ವಂಚನೆಯಲ್ಲಿ ₹ 13 ಕೋಟಿ ಕಳೆದುಕೊಂಡ 75 ವರ್ಷದ ವೃದ್ಧ…!

ಹೈದರಾಬಾದ್: ತೆಲಂಗಾಣದ ಸೈಬರ್ ಸೆಕ್ಯುರಿಟಿ ಬ್ಯೂರೋಗೆ ವ್ಯಕ್ತಿಯೊಬ್ಬರಿಂದ ಅತಿದೊಡ್ಡ ಸೈಬರ್ ಹಣಕಾಸು ವಂಚನೆ ದೂರು ಬಂದಿದ್ದು, 75 ವರ್ಷದ ವ್ಯಕ್ತಿಯೊಬ್ಬರು ₹ 13 ಕೋಟಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಸಂತ್ರಸ್ತ ವ್ಯಕ್ತಿ ಸಾರ್ವಜನಿಕ ವಲಯದ ಘಟಕದ ಹಿರಿಯ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದರು ಎಂದು ಹೇಳಲಾಗಿದೆ. ಈ ವ್ಯಕ್ತಿ ಜುಲೈ 1 ರಂದು ವಾಟ್ಸ್‌ಆ್ಯಪ್ ಮೂಲಕ ಹೂಡಿಕೆಯ ಪ್ರಸ್ತಾಪವನ್ನು … Continued

ಕಾಂಬೋಡಿಯಾದಲ್ಲಿ ಸೈಬರ್‌ ವಂಚಕರ ಜಾಲದಲ್ಲಿ ಸಿಕ್ಕಿಬಿದ್ದಿರುವ 5000ಕ್ಕೂ ಹೆಚ್ಚು ಭಾರತೀಯರು…! ಸೈಬರ್‌ ವಂಚನೆ ಕೃತ್ಯಗಳಿಗೆ ಇವರ ಬಳಕೆ…!!

ನವದೆಹಲಿ: 5,000 ಕ್ಕೂ ಹೆಚ್ಚು ಭಾರತೀಯರು ಕಾಂಬೋಡಿಯಾದಲ್ಲಿ ಸಿಕ್ಕಿಬಿದ್ದಿದ್ದಾರೆ. ಅಲ್ಲಿ ಅವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಒತ್ತೆಯಾಳಾಗಿ ಬಂಧನದಲ್ಲಿ ಇಡಲಾಗಿದೆ ಮತ್ತು ಅವರನ್ನು ಸೈಬರ್ ವಂಚನೆ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ವಂಚಕರು ಕಳೆದ ಆರು ತಿಂಗಳಲ್ಲಿ ಭಾರತದಲ್ಲಿ ಕನಿಷ್ಠ 500 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಸರ್ಕಾರ ಅಂದಾಜಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ … Continued

ಹೊಸ ಪ್ರವೃತ್ತಿಯ ಸೈಬರ್ ವಂಚನೆ : ನಕಲಿ ವಿಚಾರಣೆ, ಡೀಪ್‌ಫೇಕ್ ಬಳಕೆ, ಸ್ಕೈಪ್ ಕರೆ, ಡಿಜಿಟಲ್ ಅರೆಸ್ಟ್ ; ವಂಚಕರಿಂದ ಮಹಿಳೆಗೆ 11 ಲಕ್ಷ ರೂ. ಮೋಸ

ನೋಯ್ಡಾ ನಿವಾಸಿಯೊಬ್ಬರು ಹೊಸ ಪ್ರವೃತ್ತಿಯ ಸೈಬರ್ ವಂಚನೆಗೆ ಒಳಗಾದ ಬಗ್ಗೆ ದೂರು ನೀಡಿದ ನಂತರ ಉತ್ತರ ಪ್ರದೇಶ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ, ಇದರಲ್ಲಿ ಅವರು ₹ 11 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ ಮತ್ತು ಒಂದು ದಿನದವರೆಗೆ “ಡಿಜಿಟಲ್ ಬಂಧನ” ದಲ್ಲಿ ಅವರನ್ನು ಇರಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. .. ನೋಯ್ಡಾದ ಸೈಬರ್ … Continued

ಸೈಬರ್​ ವಂಚಕರು ಕಳುಹಿಸಿದ ಲಿಂಕ್​ ಕ್ಲಿಕ್​ ಮಾಡಿ ಹಣ ಕಳಕೊಂಡ ವಿವಿ ಕುಲಪತಿ

ಹಾವೇರಿ : ಶಿಗ್ಗಾವಿ ತಾಲೂಕಿನ ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ ಅವರಿಗೆ ಸೈಬರ್ ವಂಚಕರು 60 ಸಾವಿರ ರೂ. ಪಂಗನಾಮ ಹಾಕಿದ್ದಾರೆ ಎಂದು ವರದಿಯಾಗಿದೆ. ಪ್ರಕರಣದ ಕುರಿತು ಅವರೇ ಶಿಗ್ಗಾವಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಧ್ಯಾಹ್ನದ ಸಮಯದಲ್ಲಿ ಧಾರವಾಡ ಎಸ್‌ಬಿಐ ಬ್ಯಾಂಕ್‌ನ ನವೀಕುಮಾರ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ನನಗೆ ಫೋನ್ ಮಾಡಿದ್ದ. … Continued

ಲಾಕ್‌ಡೌನ್‌ ಅವಧಿಯಲ್ಲಿ ದೆಹಲಿಯಲ್ಲಿ ಸೈಬರ್‌ ಅಪರಾಧಗಳ ಸಂಖ್ಯೆ ಹೆಚ್ಚಳ ‌

ಕಳೆದ ವರ್ಷದ ಲಾಕ್‌ಡೌನ್‌ ಅವಧಿಯಲ್ಲಿ ದೇಶದ ರಾಜಧಾನಿ ದೆಹಲಿಯಲ್ಲಿ ಸೈಬರ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಮಾರ್ಚ್‌ನಲ್ಲಿ ೨೦೦೦ ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ, ಮೇ ತಿಂಗಳಲ್ಲಿ ೪೦೦೦ ಪ್ರಕರಣಗಳು ದಾಖಲಾಗಿವೆ. ಶೇ.೬೨ರಷ್ಟು ಪ್ರಕರಣಗಳು ಆನ್‌ಲೈನ್‌ ಹಣ ಸಂದಾಯ ವಂಚನೆಯದಾಗಿದ್ದರೆ, ಶೇ.೨೪ರಷ್ಟು ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಿಸಿದ್ದಾಗಿವೆ. ಶೇ.೧೪ ರಷ್ಟು ಇತರೆ ಸೈಬರ್‌ … Continued