ಎಚ್ಚರ…| ವಂಚಕರಿಂದ ʼಡಿಜಿಟಲ್ ಬಂಧನʼ : 10 ಕೋಟಿ ರೂ. ಕಳೆದುಕೊಂಡ 70 ವರ್ಷದ ನಿವೃತ್ತ ಇಂಜಿನಿಯರ್…!

ನವದೆಹಲಿ: ದೆಹಲಿಯ 70 ವರ್ಷದ ನಿವೃತ್ತ ಇಂಜಿನಿಯರ್ ಡಿಜಿಟಲ್ ಬಂಧನದ ಹಗರಣಕ್ಕೆ ಬಲಿಯಾದ ನಂತರ ತನ್ನ ಜೀವಮಾನದ ಉಳಿತಾಯದ ಹಣ ಕಳೆದುಕೊಂಡಿದ್ದಾರೆ. ತೈವಾನ್‌ನಿಂದ ನಿಷೇಧಿತ ಪದಾರ್ಥಗಳನ್ನು ಒಳಗೊಂಡ ಪಾರ್ಸೆಲ್ ನಿಮ್ಮ ಹೆಸರಿಗೆ ಕಳುಹಿಸಲಾಗಿದೆ ಎಂದು ಫೋನ್‌ ಮಾಡಿ ಹೆದರಿಸಿ ವಂಚಕರು ಅವರಿಂದ 10 ಕೋಟಿ ರೂ.ಗಳಿಗೂ ಹೆಚ್ಚು ಹಣ ವಸೂಲಿ ಮಾಡಿ ವಂಚನೆ ಮಾಡಿದ್ದಾರೆ. ಪೊಲೀಸರಂತೆ … Continued

5,000 ‘ಸೈಬರ್ ಕಮಾಂಡೋಸ್’, ಆನ್‌ಲೈನ್ ನೋಂದಣಿ : ಸೈಬರ್ ಅಪರಾಧ ತಡೆಗೆ ಕೇಂದ್ರದಿಂದ ನೂತನ ಕ್ರಮಗಳು

ನವದೆಹಲಿ: ಸೈಬರ್ ಭದ್ರತೆ ಖಾತ್ರಿಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ 5,000 ‘ಸೈಬರ್ ಕಮಾಂಡೋ’ಗಳಿಗೆ ತರಬೇತಿ, ವೆಬ್ ಆಧಾರಿತ ಡೇಟಾ ರಿಜಿಸ್ಟ್ರಿ ಮತ್ತು ಸೈಬರ್ ಅಪರಾಧ ಮಾಹಿತಿ ಹಂಚಿಕೊಳ್ಳಲು ಪೋರ್ಟಲ್ ಮತ್ತು ರಾಷ್ಟ್ರೀಯ ನೋಂದಣಿ ಸೇರಿದಂತೆ ಹಲವಾರು ನೂತನ ಉಪಕ್ರಮಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಮಂಗಳವಾರ ನವದೆಹಲಿಯಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ … Continued

ಮಾತು ನಂಬಿ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿ 1.53 ಕೋಟಿ ರೂ. ಕಳೆದುಕೊಂಡ ದಂಪತಿ: ಪೊಲೀಸರ ಕಾರ್ಯದಿಂದ ಹೆಚ್ಚಿನ ಹಣ ವಸೂಲಿ ; ನಡೆದದ್ದು ಹೇಗೆ..?

ಬೆಂಗಳೂರು : ಬೆಂಗಳೂರಿನ ಟೆಕ್ ಉದ್ಯಮ ದಂಪತಿ ಆನ್‌ಲೈನ್ ಟ್ರೇಡಿಂಗ್ ಹಗರಣದಲ್ಲಿ ಕಳೆದುಕೊಂಡಿದ್ದ ಹಣದ ಹೆಚ್ಚಿನ ಭಾಗವನ್ನು ಯಶಸ್ವಿಯಾಗಿ ಮರುಪಡೆದುಕೊಂಡಿದ್ದಾರೆ. ಸ್ಥಳೀಯ ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಇದು ಸಾಧ್ಯವಾಗಿದೆ. ಬೆಂಗಳೂರು ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಬೆಂಗಳೂರಿನ ದಂಪತಿ ಆನ್‌ಲೈನ್ ಹೂಡಿಕೆ ಮಾಡಲು ವಂಚಕರಿಂದ ಕಳೆದುಕೊಂಡಿದ್ದ 1.53 ಕೋಟಿ ರೂ.ಗಳಲ್ಲಿ 1.4 … Continued

ಆನ್‌ಲೈನ್‌ನಲ್ಲಿ ಸೋಫಾ ಮಾರಲು ಹೋಗಿ ಮೋಸ ಹೋದ ಕೇಜ್ರಿ ಪುತ್ರಿ!

ನವ ದೆಹಲಿ: ಇ-ಕಾಮರ್ಸ್‌ನಲ್ಲಿ ಸೋಫಾ ಮಾರಲು ಹೋಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿ ಹರ್ಷಿತಾ ಕೇಜ್ರಿವಾಲ್ ಅವರು ೩೪ ಸಾವಿರ ಕಳೆದುಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ವ್ಯಕ್ತಿಯೋರ್ವ ವೆಬ್ ಪೋರ್ಟಲ್‌ನಲ್ಲಿ ಸೋಫಾ ಕೊಂಡುಕೊಳ್ಳುವುದಾಗಿ ಹರ್ಷಿತಾಳನ್ನು ಸಂಪರ್ಕಿಸಿ ದರ ನಿಗದಿಯಾದ ಬಳಿಕ ಹರ್ಷಿತಾಳ ಖಾತೆಗೆ ಸ್ವಲ್ಪ ಹಣ ಹಾಕಿದ್ದಾನೆ. ಬಳಿಕ ಅದನ್ನು ಖಾತರಿಪಡಿಸಲು … Continued