7.5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಅಲ್ ಫಲಾಹ್ ವಿಶ್ವವಿದ್ಯಾಲಯದ ಸಂಸ್ಥಾಪಕ ಜೈಲಿನಲ್ಲಿದ್ದ…

ನವದೆಹಲಿ: ದೆಹಲಿಯ ಕೆಂಪುಕೋಟೆ ಸಮೀಪ ನಡೆದ ಕಾರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪ್ರಮುಖ ಆರೋಪಿಗಳಾದ ಡಾ. ಶಾಹೀನ್ ಸಯೀದ್ ಮತ್ತು ಡಾ. ಮುಜಮ್ಮಿಲ್ ಶಕೀಲ್ ಅವರನ್ನು ನೇಮಿಸಿಕೊಂಡಿದ್ದ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ (Al-Falah University) ಸಂಸ್ಥಾಪಕ ಮತ್ತು ಟ್ರಸ್ಟಿ ಜಾವೇದ್ ಅಹ್ಮದ್ ಸಿದ್ದಿಕಿ ಅವರ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಸಿದ್ದಿಕಿ ಹಿನ್ನೆಲೆ … Continued

60 ಕೋಟಿ ವಂಚನೆ ಪ್ರಕರಣ: ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ ಕುಂದ್ರಾ ವಿರುದ್ಧ ಲುಕ್ ಔಟ್ ನೋಟಿಸ್

ಮುಂಬೈ :  60 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ, ಉದ್ಯಮಿ ರಾಜ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಹೊರಡಿಸಿದ್ದಾರೆ ಎಂದು ವರದಿಯಾಗಿದೆ. ಈ ವಂಚನೆಯು ದಂಪತಿಯ ಪ್ರಸ್ತುತ ಕಾರ್ಯನಿರ್ವಹಿಸದ ಸಂಸ್ಥೆಯಾದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ನ ಒಪ್ಪಂದಕ್ಕೆ … Continued

ಉದ್ಯಮಿಗೆ 60 ಕೋಟಿ ರೂಪಾಯಿ ವಂಚನೆ ಆರೋಪ: ನಟಿ ಶಿಲ್ಪಾ ಶೆಟ್ಟಿ ದಂಪತಿಯ ವಿರುದ್ಧ ಪ್ರಕರಣ ದಾಖಲು

ಮುಂಬೈ: ಉದ್ಯಮಿಯೊಬ್ಬರಿಗೆ 60 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ ಕುಂದ್ರಾ ವಿರುದ್ಧ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯೂ) ಮತ್ತು ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಉದ್ಯಮಿ ರಾಜ ಕುಂದ್ರಾ ದಂಪತಿ ವಿರುದ್ಧ … Continued

ಪುತ್ತೂರು | ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣ ; ಬಿಜೆಪಿ ಮುಖಂಡನ ಪುತ್ರ ಅರೆಸ್ಟ್‌

ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಬಲವಂತದ ದೈಹಿಕ ಸಂಪರ್ಕ ನಡೆಸಿ ಆಕೆ ಗರ್ಭಧರಿಸಿದ ನಂತರ ಮದುವೆಯಾಗಲು ನಿರಾಕರಿಸಿ ವಂಚನೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ವಿರುದ್ಧ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಪುತ್ತೂರು ಬಿಜೆಪಿ ಮುಖಂಡ ಹಾಗೂ ಜಗನ್ನಿವಾಸ ರಾವ್‌ ಅವರ ಪುತ್ರನಾದ ಕೃಷ್ಣ ಜೆ.ರಾವ್‌ ಎಂಬಾತನನ್ನು ಪೊಲೀಸರು … Continued

ಟೀಮ್ ಇಂಡಿಯಾ ಕ್ರಿಕೆಟ್‌ ಆಟಗಾರನ ತಂದೆಗೆ 7 ವರ್ಷ ಜೈಲು ಶಿಕ್ಷೆ

ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ಕಾನೂನು ಪ್ರಕ್ರಿಯೆಗಳ ನಂತರ ಮಧ್ಯಪ್ರದೇಶದ ಬೆತುಲ್‌ನಲ್ಲಿ ನಡೆದ ಬ್ಯಾಂಕ್ ಆಫ್ ಮಹಾರಾಷ್ಟ್ರದ ದುರುಪಯೋಗ ಪ್ರಕರಣದ ತೀರ್ಪು ನೀಡಿದ್ದು, ಅಪರಾಧದಲ್ಲಿ ಭಾಗಿಯಾಗಿದ್ದಕ್ಕಾಗಿ ಮಾಜಿ ಕ್ರಿಕೆಟಿಗ ನಮನ್ ಓಜಾ ಅವರ ತಂದೆ ವಿನಯ್ ಓಜಾ ಸೇರಿದಂತೆ ನಾಲ್ವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 2013 ರಲ್ಲಿ, ಬೇತುಲ್‌ನ ಮುಲ್ತಾಯ್ … Continued

ಮಂಗಳೂರು | ಆರ್ಡರ್ ನೆಪದಲ್ಲಿ ಅಮೆಜಾನ್ ಸಂಸ್ಥೆಗೆ ವಂಚನೆ : ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ನಕಲಿ ವಿಳಾಸ ನೀಡುವ ಮೂಲಕ ಭಾರೀ ಮೌಲ್ಯದ ಸೊತ್ತುಗಳನ್ನು ಆರ್ಡರ್ ಮಾಡಿ ಅಮೆಝಾನ್ ಕಂಪೆನಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. . ವಂಚನೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಮಂಗಳೂರಿನ ಉರ್ವ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಜಸ್ಥಾನ ಮೂಲದ ರಾಜಕುಮಾರ ಮೀನಾ (23) ಮತ್ತು ಸುಭಾಷ ಗುರ್ಜರ್ … Continued

ವಂಚನೆ ಪ್ರಕರಣದಲ್ಲಿ ಪ್ರಹ್ಲಾದ ಜೋಶಿ ಪಾತ್ರ ಏನೂ ಇಲ್ಲ : ದೂರುದಾರೆ ಸ್ಪಷ್ಟನೆ

ಹುಬ್ಬಳ್ಳಿ: ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ವಂಚನೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಾತ್ರ ಏನೂ ಇಲ್ಲ, ಅವರಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ದೂರುದಾರೆ ಸುನೀತಾ ಚವ್ಹಾಣ ಸ್ಪಷ್ಟಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಹ್ಲಾದ ಜೋಶಿ ಅವರು ಬಹಳ ಒಳ್ಳೆಯವರು. ಈ ಪ್ರಕರಣದಲ್ಲಿ ಅವರ ಪಾತ್ರವೇನೂ ಇಲ್ಲ. ವಿನಾಕಾರಣ ಪ್ರಹ್ಲಾದ ಜೋಶಿ … Continued

ವಂಚನೆ ಪ್ರಕರಣ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹೋದರನ ಬಂಧನ

ಬೆಂಗಳೂರು: ಕಳೆದ ಲೋಕಸಭೆ ಚುನಾವಣೆ ವೇಳೆ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂಪಾಯಿ ಪಡೆದು ವಂಚಿಸಿರುವ ಆರೋಪದಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸಹೋದರ ಹಾಗೂ ಸಹೋದರನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಮಾಜಿ ಶಾಸಕ ದೇವಾನಂದ ಸಿಂಗ್ ಚವ್ಹಾಣ ಅವರ ಪತ್ನಿ ಸುನಿತಾ ಚವ್ಹಾಣ ಅವರ ದೂರಿನ … Continued

ಹೊಸ ಪ್ರವೃತ್ತಿಯ ಸೈಬರ್ ವಂಚನೆ : ನಕಲಿ ವಿಚಾರಣೆ, ಡೀಪ್‌ಫೇಕ್ ಬಳಕೆ, ಸ್ಕೈಪ್ ಕರೆ, ಡಿಜಿಟಲ್ ಅರೆಸ್ಟ್ ; ವಂಚಕರಿಂದ ಮಹಿಳೆಗೆ 11 ಲಕ್ಷ ರೂ. ಮೋಸ

ನೋಯ್ಡಾ ನಿವಾಸಿಯೊಬ್ಬರು ಹೊಸ ಪ್ರವೃತ್ತಿಯ ಸೈಬರ್ ವಂಚನೆಗೆ ಒಳಗಾದ ಬಗ್ಗೆ ದೂರು ನೀಡಿದ ನಂತರ ಉತ್ತರ ಪ್ರದೇಶ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ, ಇದರಲ್ಲಿ ಅವರು ₹ 11 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ ಮತ್ತು ಒಂದು ದಿನದವರೆಗೆ “ಡಿಜಿಟಲ್ ಬಂಧನ” ದಲ್ಲಿ ಅವರನ್ನು ಇರಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. .. ನೋಯ್ಡಾದ ಸೈಬರ್ … Continued

ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ 18.70 ಲಕ್ಷ ರೂ. ವಂಚನೆ ಆರೋಪ: ದೂರು ದಾಖಲು

ತಿರುವನಂತಪುರಂ: ಕ್ರೀಡಾ ಅಕಾಡೆಮಿಯಲ್ಲಿ ಪಾಲುದಾರನಾಗುವುದಾಗಿ ಭರವಸೆ ನೀಡಿ ವ್ಯಕ್ತಿಯೊಬ್ಬರಿಂದ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ರೆಸಾರ್ಟ್‌ನಲ್ಲಿ ದೂರುದಾರರ ಹೆಸರಿನಲ್ಲಿ ಕಟ್ಟಡ ನಿರ್ಮಿಸುವುದಾಗಿ ಹೇಳಿ ಉಡುಪಿ ಮೂಲದ ರಾಜೀವಕುಮಾರ ಮತ್ತು ಕೆ ವೆಂಕಟೇಶ ಕಿಣಿ ಎಂಬವರು 18.70 ಲಕ್ಷ ರೂ.ಗಳನ್ನು ಪಡೆದು ಮೋಸ ಮಾಡಿದ್ದಾರೆ ಎಂದು … Continued