ವಂಚನೆ ಪ್ರಕರಣ : ಗುಜರಾತ್‌ನ ಮಾಜಿ ಸಚಿವ ವಿಪುಲ್ ಚೌಧರಿಗೆ 7 ವರ್ಷ ಜೈಲು ಶಿಕ್ಷೆ

ಅಹಮದಾಬಾದ್: ವಂಚನೆ ಪ್ರಕರಣದಲ್ಲಿ ಗುಜರಾತ್‌ನ ಮಾಜಿ ಸಚಿವ ಮತ್ತು ದೂಧಸಾಗರ್ ಡೈರಿಯ ಮಾಜಿ ಅಧ್ಯಕ್ಷ ವಿಪುಲ್ ಚೌಧರಿ ಅವರಿಗೆ ಗುಜರಾತ್‌ನ ನ್ಯಾಯಾಲಯವು ಗುರುವಾರ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ..
ಚೌಧರಿ ಅವರು 2014ರಲ್ಲಿ ಮಹಾರಾಷ್ಟ್ರಕ್ಕೆ ಸರಿಯಾದ ವಿಧಾನಗಳನ್ನು ಅನುಸರಿಸದೆ ಜಾನುವಾರುಗಳ ಆಹಾರವನ್ನು ಪೂರೈಸುವ ಮೂಲಕ ಹೈನುಗಾರಿಕೆಗೆ 22.5 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೌಧರಿ ಅವರು ಅಮೂಲ್ ಬ್ರಾಂಡ್ ಅನ್ನು ಹೊಂದಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ (GCMMF) ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಮೆಹ್ಸಾನಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ದೂಧಸಾಗರ್ ಡೈರಿ ಎಂದು ಜನಪ್ರಿಯವಾಗಿದೆ.
ಮೆಹ್ಸಾನಾದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್, ವೈ ಆರ್ ಅಗರವಾಲ ಅವರು, ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 420 ರ ಅಡಿಯಲ್ಲಿ ವಂಚನೆ ಮಾಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಚೌಧರಿ ಮತ್ತು ಇತರ 14 ಜನರನ್ನು ದೋಷಿ ಎಂದು ಘೋಷಿಸಿದರು ಮತ್ತು ಏಳು ವರ್ಷಗಳ ಜೈಲು ಶಿಕ್ಷೆಯನ್ನು ನೀಡಿದರು.
ಚೌಧರಿ ಅವರು 1996 ರಲ್ಲಿ ಶಂಕರ ಸಿಂಗ್‌ ವಘೇಲಾ ಸರ್ಕಾರದಲ್ಲಿ ಸಚಿವರಾಗಿದ್ದರು. ನ್ಯಾಯಾಲಯವು 15 ಆರೋಪಿಗಳನ್ನು ಐಪಿಸಿ ಸೆಕ್ಷನ್ 406 (ನಂಬಿಕೆಯ ಉಲ್ಲಂಘನೆ), 465 (ನಕಲಿ) ಮತ್ತು 468 (ವಂಚನೆಯ ಉದ್ದೇಶಕ್ಕಾಗಿ ನಕಲಿ) ಅಡಿಯಲ್ಲಿ ತಪ್ಪಿತಸ್ಥರೆಂದು ಪರಿಗಣಿಸಿದೆ ಮತ್ತು ಅವರಿಗೆ ಒಂದರಿಂದ ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಿದೆ.
2014ರಲ್ಲಿ ದೂಧ್‌ಸಾಗರ್ ಡೈರಿ ಹಾಗೂ ಜಿಸಿಎಂಎಂಎಫ್ ಅಧ್ಯಕ್ಷರಾಗಿದ್ದಾಗ ಚೌಧರಿ ಮತ್ತು ಇತರರ ವಿರುದ್ಧ ಮೆಹ್ಸಾನಾ ‘ಬಿ’ ವಿಭಾಗದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಜಾನುವಾರು ಮೇವು ಸಂಗ್ರಹಣೆಯಲ್ಲಿನ ಭ್ರಷ್ಟಾಚಾರದ ಆರೋಪದ ಮೇಲೆ ಅವರನ್ನು ಜಿಸಿಎಂಎಂಎಫ್ ಮತ್ತು ದೂಧಸಾಗರ್ ಡೈರಿ ಎರಡರಿಂದಲೂ ವಜಾಗೊಳಿಸಲಾಯಿತು. ಎಫ್‌ಐಆರ್‌ನ ಪ್ರಕಾರ, ಡೈರಿ ಅಧ್ಯಕ್ಷರಾಗಿ ಚೌಧರಿ ಅವರು 2014 ರಲ್ಲಿ ಬರಪೀಡಿತ ಮಹಾರಾಷ್ಟ್ರಕ್ಕೆ ಜಾನುವಾರುಗಳ ಆಹಾರವನ್ನು ಕಳುಹಿಸುವ ನಿರ್ಧಾರವನ್ನು ತೆಗೆದುಕೊಂಡರು. ಆದರೆ, ರಾಜ್ಯ ಸರ್ಕಾರವು 22.5 ಕೋಟಿ ರೂಪಾಯಿ ಮೌಲ್ಯದ ಜಾನುವಾರುಗಳಿಗೆ ಮೇವು ಕಳುಹಿಸುವ ನಿರ್ಧಾರವನ್ನು ಡೈರಿ ಮಂಡಳಿಯ ಸಭೆಯಲ್ಲಿ ಯಾವುದೇ ನಿರ್ಣಯವನ್ನು ತರದೆ ಅಥವಾ ಯಾವುದೇ ಟೆಂಡರ್ ನೀಡದೆ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿತು.
ಏಳು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಇತರ ಆರೋಪಿಗಳಲ್ಲಿ ದೂಧಸಾಗರ್ ಡೈರಿಯ ಮಾಜಿ ಮಂಡಳಿಯ ಸದಸ್ಯರು, ಅದರ ಮಾಜಿ ಉಪಾಧ್ಯಕ್ಷೆ ಜಲಬೆನ್ ಠಾಕೂರ್ ಮತ್ತು ಮಾಜಿ ವ್ಯವಸ್ಥಾಪಕ ನಿರ್ದೇಶಕ ನಿಶಿತ್ ಬಕ್ಸಿ ಸೇರಿದ್ದಾರೆ.

ಪ್ರಮುಖ ಸುದ್ದಿ :-   ತಾಯಿ, ಹೆಂಡತಿ, ಮೂವರು ಮಕ್ಕಳನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement