ಇತ್ತೀಚಿನ ಚುನಾವಣೆಯ ನಂತರ ರಾಜ್ಯಸಭೆಯಲ್ಲಿ ಬಹುಮತ ಪಡೆಯಲು ಎನ್‌ಡಿಎಗೆ ಕೇವಲ 3 ಸ್ಥಾನದ ಕೊರತೆ

ನವದೆಹಲಿ : ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಬಹುಮತ ಪಡೆಯಲು ಬಿಜೆಪಿ ನೇತೃತ್ವದ ಎನ್‌ಡಿಎಗೆ ಕೇವಲ ಮೂರು ಸ್ಥಾನಗಳು ಕಡಿಮೆ ಸ್ಥಾನಗಳು ಕಡಿಮೆಯಾಗಲಿವೆ. ಈ ತಿಂಗಳು ನಡೆದ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಯ ನಂತರ ಬಿಜೆಪಿ ಏಕಾಂಗಿಯಾಗಿ ಹತ್ತಿರ ಹತ್ತಿರ 100 ಸ್ಥಾನಗಳಿಗೆ ತಲುಪಿದೆ. ಒಟ್ಟಾರೆಯಾಗಿ, ಈ ಸುತ್ತಿನ ಚುನಾವಣೆಯಲ್ಲಿ 56 ಸ್ಥಾನಗಳಲ್ಲಿ ಬಿಜೆಪಿ 30 ಸ್ಥಾನಗಳನ್ನು … Continued

10 ವರ್ಷಗಳಲ್ಲಿ ದೇಶದ ಆರ್ಥಿಕತೆ ನಿಷ್ಕ್ರಿಯಗೊಳಿಸಿದ ಯುಪಿಎ ಸರ್ಕಾರ : ಮೋದಿ ಸರ್ಕಾರದ ಶ್ವೇತಪತ್ರ

ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರ್ಮನ್ ಅವರು ಗುರುವಾರ (ಫೆಬ್ರವರಿ 8) ಲೋಕಸಭೆಯಲ್ಲಿ ‘ಭಾರತೀಯ ಆರ್ಥಿಕತೆಯ ಶ್ವೇತಪತ್ರ’ದ ಪ್ರತಿಯನ್ನು ಮಂಡಿಸಿದ್ದಾರೆ. ಯುಪಿಎ ಅವಧಿಯ 10 ವರ್ಷಗಳಲ್ಲಿ ಇದ್ದ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಮೋದಿ ಸರ್ಕಾರ ಬಂದ ನಂತರ ಈವರೆಗಿನ 10 ವರ್ಷಗಳಲ್ಲಿನ ದೇಶದ ಆರ್ಥಿಕ ಪರಿಸ್ಥಿತಿಯ ವಿಶ್ಲೇಷಣಾ ವರದಿಯೊಂದನ್ನು ಕೇಂದ್ರ ಸರ್ಕಾರ ಶ್ವೇತಪತ್ರದ … Continued

ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷೆ ವಿಧೇಯಕ 2024 ಮಂಡನೆ : ಪರೀಕ್ಷೆ ಅಕ್ರಮಕ್ಕೆ ಗರಿಷ್ಠ 10 ವರ್ಷ ಜೈಲು, 1 ಕೋಟಿ ರೂ.ದಂಡ

ನವದೆಹಲಿ: ಯುಪಿಎಸ್‌ಸಿ, ನೀಟ್‌, ಜೆಇಇ, ಇತರ ಸರ್ಕಾರಿ ನೇಮಕಾತಿ ಪರೀಕ್ಷೆಗಳು ಸೇರಿದಂತೆ ಸಾರ್ವತ್ರಿಕ ಪರೀಕ್ಷೆಗಳಲ್ಲಿ ಪೇಪರ್ ಸೋರಿಕೆ ಮತ್ತು ನಕಲಿ ವೆಬ್‌ಸೈಟ್‌ಗಳಂತಹ ಅವ್ಯವಹಾರಗಳನ್ನು ಪರಿಶೀಲಿಸಲು ಕೇಂದ್ರವು ಸೋಮವಾರ ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆ (ಅಕ್ರಮಗಳ ತಡೆ) ವಿಧೇಯಕ- 2024 ಅನ್ನು ಮಂಡಿಸಿದೆ.  ಮಸೂದೆಯು ಕನಿಷ್ಠ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂ.ವರೆಗೆ … Continued

‘ಎಂದಿಗೂ ಸಹಿಸುವುದಿಲ್ಲ…’: ಸ್ವಪಕ್ಷದ ಸಂಸದ ಡಿ.ಕೆ.ಸುರೇಶ ‘ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ’ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ

ನವದೆಹಲಿ: ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ ಅವರ, ‘ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ ಬೇಡಿಕೆ’ ಎಂಬ ಹೇಳಿಕೆ ಇಂದು, ಶುಕ್ರವಾರ ರಾಜ್ಯಸಭೆಯಲ್ಲಿ ಚರ್ಚೆಗೆ ಕಾರಣವಾಯಿತು. ದೇಶ ಒಡೆಯುವ ಬಗ್ಗೆ ಮಾತನಾಡುವವರು ಅವರು ಯಾವ ಪಕ್ಷದವರೇ ಆಗಲಿ ಸಹಿಸುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ತಮ್ಮ ಪಕ್ಷದ ಸಂಸದ ಡಿ.ಕೆ.ಸುರೇಶ ಅವರ ವಿವಾದಾತ್ಮಕ ಹೇಳಿಕೆಗೆ … Continued

ಕಲಾಪಕ್ಕೆ ಅಡ್ಡಿ: ಡಿ.ಕೆ ಸುರೇಶ ಸೇರಿದಂತೆ ಮೂವರು ಕಾಂಗ್ರೆಸ್ ಸಂಸದರ ಅಮಾನತು

ನವದೆಹಲಿ : ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಮೂವರು ಕಾಂಗ್ರೆಸ್ ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಗುರುವಾರ( ಡಿಸೆಂಬರ್‌ 21) ಸಂಸತ್ತಿನಿಂದ ಅಮಾನತುಗೊಳಿಸಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಅಮಾನತಿಗೆ ಪ್ರಸ್ತಾವನೆ ಮಂಡಿಸಿದರು. ನಂತರ ಕಾಂಗ್ರೆಸ್ ಸಂಸದರಾದ ಡಿ.ಕೆ.ಸುರೇಶ, ದೀಪಕ ಬೈಜ್ ಮತ್ತು ನಕುಲ ನಾಥ ಅವರನ್ನು ಅಮಾನತುಗೊಳಿಸಲಾಗಿದೆ. ಹೀಗಾಗಿ ಲೋಕಸಭೆಯಿಂದ ಅಮಾನತುಗೊಂಡ … Continued

ವೀಡಿಯೊ…| ಉಪರಾಷ್ಟ್ರಪತಿಯವರ ʼಅನುಕರಣೆʼ ಮಾಡಿ ಅಣಕಿಸಿದ ಟಿಎಂಸಿ ಸಂಸದ: ವೀಡಿಯೊ ಚಿತ್ರೀಕರಿಸಿದ ರಾಹುಲ್ ಗಾಂಧಿ

ನವದೆಹಲಿ : ರಾಜ್ಯಸಭೆ ಹಾಗೂ ಲೋಕಸಭೆಯಿಂದ ಅಮಾನತುಗೊಂಡ ಸಂಸದರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುತ್ತಿರುವ ವೇಳೆ, ಟಿಎಂಸಿ ಸಂಸದರಾದ ಕಲ್ಯಾಣ ಬ್ಯಾನರ್ಜಿ ಅವರು ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭೆ ಚೇರ್ಮನ್‌ ಜಗದೀಪ ಧನಕರ್ ಅವರನ್ನು ಅಣಕಿಸಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕ ಅದರ ಚಿತ್ರೀಕರಿಸಿದ್ದಾರೆ. ಈ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಉಪರಾಷ್ಟ್ರಪತಿ ಧನಕರ್‌ ಅವರು ಇದು … Continued

ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣ: ಆರೋಪಿಗಳ ಬಳಕೆ ಮಾಡಿದ್ದ ಸುಟ್ಟ ಫೋನ್ ಗಳ ಭಾಗಗಳು ರಾಜಸ್ಥಾನದಲ್ಲಿ ಪತ್ತೆ

ನವದೆಹಲಿ : ಮಹತ್ವದ ಬೆಳವಣಿಗೆಯೊಂದರಲ್ಲಿ ಸಂಸತ್‌ ಭದ್ರತಾ ಉಲ್ಲಂಘನೆ ಪ್ರಕರಣದ ಪ್ರಮುಖ ಆರೋಪಿ ಲಲಿತ್‌ ಝಾ ನಾಶಪಡಿಸಿದ್ದ ಮೊಬೈಲ್‌ ಫೋನ್‌ಗಳ ಭಾಗಗಳನ್ನು ದೆಹಲಿ ಪೊಲೀಸರು ಭಾನುವಾರ ರಾಜಸ್ಥಾನದಲ್ಲಿ ವಶಪಡಿಸಿಕೊಂಡಿದ್ದಾರೆ. ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಎಲ್ಲಾ ಫೋನ್‌ಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ. ಲೋಕಸಭೆ ಭದ್ರತಾ ಉಲ್ಲಂಘನೆ ಘಟನೆಯ ಮಾಸ್ಟರ್ ಮೈಂಡ್ ಲಲಿತ್ ಝಾ ಎಲ್ಲಾ ಆರೋಪಿಗಳ … Continued

ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣ : ಪ್ರಧಾನಿ ಮೋದಿ ‘ಕಾಣೆಯಾದ ವ್ಯಕ್ತಿ’ ಎಂಬ ಕರಪತ್ರ ಹೊಂದಿದ್ದ ಆರೋಪಿಗಳು ; ಪೊಲೀಸರು

ನವದೆಹಲಿ: ಸಂಸತ್ತಿನ ಭದ್ರತಾ ಉಲ್ಲಂಘನೆ ಮಾಡಿದ ಆರೋಪಿಗಳು ಕರಪತ್ರಗಳನ್ನು ಹೊತ್ತೊಯ್ದಿದ್ದು, ಅದರಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯನ್ನು “ಕಾಣೆಯಾದ” ವ್ಯಕ್ತಿ ಎಂದು ಕರೆದಿದ್ದಾರೆ ಮತ್ತು ಅವರನ್ನು ಪತ್ತೆ ಮಾಡಿದವರಿಗೆ ಸ್ವಿಸ್ ಬ್ಯಾಂಕ್‌ನಿಂದ ಬಹುಮಾನ ಘೋಷಿಸಲಾಗಿದೆ ಎಂದು ಹೇಳಲಾಗಿದೆ ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ (ಎಪಿಪಿ) ಗುರುವಾರ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದರು. “ಅವರನ್ನು (ಮೋದಿ) ಘೋಷಿತ ಅಪರಾಧಿಯಂತೆ … Continued

ಲೋಕಸಭೆಗೆ ಗೈರಾಗಿದ್ದ ಡಿಎಂಕೆ ಸಂಸದ ಪಾರ್ಥಿಬನ್ ತಪ್ಪಾಗಿ ಅಮಾನತು: ನಂತರ ಸ್ಪಷ್ಟಪಡಿಸಿದ ಸರ್ಕಾರ

ನವದೆಹಲಿ: ಸದನ ನಡೆಯಲು ಅಡ್ಡಿಪಡಿಸಿದ್ದಕ್ಕಾಗಿ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಲೋಕಸಭೆಯಿಂದ ಗುರುವಾರ ಅಮಾನತುಗೊಂಡ 14 ವಿರೋಧ ಪಕ್ಷದ ಸಂಸದರಲ್ಲಿ ಡಿಎಂಕೆ ನಾಯಕ ಎಸ್.ಆರ್ ಪಾರ್ಥಿಬನ್ ಅವರ ಹೆಸರು ಸೇರಿದೆ. ಪಾರ್ಥಿಬನ್ ಸೇರ್ಪಡೆ ‘ತಪ್ಪಾದ ಗುರುತಿನ’ ಪ್ರಕರಣ ಎಂದು ಸರ್ಕಾರ ನಂತರ ಸ್ಪಷ್ಟಪಡಿಸಿದೆ. ಹಾಗೂ ಅವರ ಅಮಾನತನ್ನು ಹಿಂಪಡೆದಿದೆ. ಒಟ್ಟಾರೆಯಾಗಿ ವಿಪಕ್ಷಗಳ 13 ಸಂಸದರನ್ನು ಲೋಕಸಭೆಯಿಂದ … Continued

ಸಂಸತ್ ಭದ್ರತಾ ಲೋಪ: ಇ-ರಿಕ್ಷಾ ಚಾಲಕನಿಂದ ಇಂಜಿನಿಯರ್ ವರೆಗೆ ಆರು ಆರೋಪಿಗಳು ಯಾರು…?

ನವದೆಹಲಿ: ಸಂಸತ್ತಿನಲ್ಲಿ ಬುಧವಾರ ನಡೆದ ಅಭೂತಪೂರ್ವ ಭದ್ರತಾ ಉಲ್ಲಂಘನೆಯ ಆರೋಪಿಗಳು ವಿವಿಧ ಶೈಕ್ಷಣಿಕ ಹಿನ್ನೆಲೆಗಳು, ಸಮಾಜದ ವಿವಿಧ ಸ್ತರಗಳಿಂದ ಬಂದವರು ಮತ್ತು ದೇಶದ ವಿವಿಧ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ. ಮೇಲ್ನೋಟಕ್ಕೆ ಆರೋಪಿಗಳಾದ ಸಾಗರ ಶರ್ಮಾ, ನೀಲಂ ಆಜಾದ್, ಮನೋರಂಜನ ಡಿ, ಅಮೋಲ್ ಶಿಂಧೆ, ವಿಕ್ಕಿ ಶರ್ಮಾ ಮತ್ತು ಲಲಿತ್ ಝಾ ನಡುವೆ ಯಾವುದೇ ಸಾಮಾನ್ಯ ಉದ್ದೇಶಗಳಿಲ್ಲ ಎಂದು … Continued