ಹಾಗಾದ್ರೆ ಕೇರಳದ ಕಾಂಗ್ರೆಸ್‌ ಸಿಎಂ, ತಮಿಳುನಾಡು ಟಿವಿಕೆ ಸಿಎಂ ಕೂಡ ಮತಗಳ್ಳರೇ: ಸಿಜೆಪಿ ಹೇಳಿಕೆಗೆ ಚೇತನ್ ಅಹಿಂಸಾ ಆಕ್ಷೇಪ

ಬೆಂಗಳೂರು : ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಿನಲ್ಲೇ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಎಸ್‌ಐಆರ್‌ ಬಗ್ಗೆ ಪ್ರತಿಭಟನಾನಿರತ ಕಾಕ್ರೋಚ್ ಜನತಾ ಪಾರ್ಟಿ (CJP) ಹಾಗೂ ವಿಪಕ್ಷಗಳ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ. ಈ … Continued

ಬೈಇಲೆಕ್ಷನ್‌ : ನಂದಿಗ್ರಾಮದಲ್ಲಿ ಶೇ.75ಕ್ಕೂ ಹೆಚ್ಚು ಮತಗಳಿಂದ ಬಿಜೆಪಿ ಗೆಲುವು, ಬಂಗಾಳ, ಅಸ್ಸಾಂನಲ್ಲಿ ಬಿಜೆಪಿ, ತಮಿಳುನಾಡಿನಲ್ಲಿ ಟಿವಿಕೆಗೆ ಮುನ್ನಡೆ

ನವದೆಹಲಿ: ಪಶ್ಚಿಮ ಬಂಗಾಳದ ಪ್ರತಿಷ್ಠೆಯ ಕಣವಾಗಿದ್ದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಭೂತಪೂರ್ವ ಗೆಲುವು ಸಾಧಿಸಿದ್ದು, ಕ್ಷೇತ್ರವನ್ನು ತನ್ನ ಹಿಡಿತದಲ್ಲೇ ಉಳಿಸಿಕೊಂಡಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಮಾಜಿ ಆಪ್ತ ಸಹಾಯಕ ಚಂದ್ರನಾಥ ರಾಥ್ ಅವರ ತಾಯಿ ಹಾಗೂ ಬಿಜೆಪಿ ಅಭ್ಯರ್ಥಿ ಹಸಿನ್ ರಾಣಿ ರಾಥ್ ಅವರು ತಮ್ಮ ಸಮೀಪದ … Continued

ʼಹಿಂದೂʼ ವಿರೋಧಿ ನಿಲುವಿನ ಉದಯನಿಧಿ ಸ್ಟಾಲಿನ್‌ ಬಾಯಲ್ಲಿ ‘ಓಂ ಕಾಳಿ..ಜೈ ಕಾಳಿ’ ಸ್ಲೋಗನ್‌ : ಎಲ್ಲೆಡೆ ಹೇಳಲು ಪಕ್ಷದವರಿಗೆ ಕರೆ !

ಚೆನ್ನೈ: ಡಿಎಂಕೆ ವಿರುದ್ಧ ತಮಿಳುನಾಡಿನ ಆಡಳಿತಾರೂಢ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿ ವಿಜಯ ಅವರು ಬಳಸುತ್ತಿರುವ ಚುನಾವಣಾ ಘೋಷಣೆಗೆ ಪ್ರತಿಯಾಗಿ ಹೊಸ ಪ್ರತಿಘೋಷಣೆಯನ್ನು ರೂಪಿಸಿ, ಅದನ್ನು ವ್ಯಾಪಕವಾಗಿ ಜನರ ನಡುವೆ ತಲುಪಿಸುವಂತೆ ಡಿಎಂಕೆ ಕಾರ್ಯಕರ್ತರಿಗೆ ಡಿಎಂಕೆ ಯುವ ನಾಯಕ ಉದಯನಿಧಿ ಸ್ಟಾಲಿನ್ ಕರೆ ನೀಡಿದ್ದಾರೆ. ಸೆಪ್ಟೆಂಬರ್ 27ರಂದು ನಡೆದ ಪಕ್ಷದ … Continued

ಈಗ ಲೋಕಸಭೆ ಚುನಾವಣೆ ನಡೆದ್ರೆ ಎನ್‌ಡಿಎ ಗೆಲ್ಲುತ್ತದೆಯೋ ಇಂಡಿಯಾ ಮೈತ್ರಿಕೂಟವೋ ? ʼಮೂಡ್ ಆಫ್ ದಿ ನೇಷನ್ʼ ಸಮೀಕ್ಷೆಯಲ್ಲಿ ಬಹಿರಂಗ

ನವದೆಹಲಿ: ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಇಂಡಿಯಾ ಟುಡೇ–ಸಿ-ವೋಟರ್ ನಡೆಸಿದ ಇತ್ತೀಚಿನ ‘ಮೂಡ್ ಆಫ್ ದಿ ನೇಷನ್’ (MOTN) ಸಮೀಕ್ಷೆಯಲ್ಲಿ ಕಂಡುಬಂದಿದೆ. ಆದರೆ ಹಿಂದಿನ ಸಮೀಕ್ಷೆಗೆ ಹೋಲಿಸಿದರೆ ಎನ್‌ಡಿಎ ಮೈತ್ರಿಕೂಟದ ಜನಪ್ರಿಯತೆಯಲ್ಲಿ ಅಲ್ಪ ಕುಸಿತ ಕಂಡುಬಂದಿದೆ. ಈ … Continued

ತಮಿಳುನಾಡು ಸಿಎಂ ವಿಜಯ ವಿರುದ್ಧದ ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸಂಗೀತಾ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ ಮತ್ತು ಅವರ ಪತ್ನಿ ಸಂಗೀತಾ ಸೋರ್ನಲಿಂಗಂ ಅವರ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಗೀತಾ ಅವರು ತಮ್ಮ ಅರ್ಜಿಯನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಇಂದು, ಶುಕ್ರವಾರ (ಆಗಸ್ಟ್‌ ೭)ನ್ಯಾಯಾಲಯ ಪ್ರಕರಣವನ್ನು ಅಧಿಕೃತವಾಗಿ ಮುಕ್ತಾಯಗೊಳಿಸಿದೆ. ಇಂದು, ಶುಕ್ರವಾರ ನಡೆದ ವಿಚಾರಣೆಯಲ್ಲಿ ಸಂಗೀತಾ ವಿಡಿಯೊ ಕಾನ್ಫರೆನ್ಸ್ … Continued

ಕರೂರು ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ : ತಮಿಳುನಾಡು ಸರ್ಕಾರದ ಆದೇಶ ರದ್ದುಗೊಳಿಸಿದ ಹೈಕೋರ್ಟ್

ಚೆನ್ನೈ: ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ ಕರೂರು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 41 ಮಂದಿಯ ಕುಟುಂಬಗಳಿಗೆ ತಮಿಳುನಾಡು ಸರ್ಕಾರ ನೀಡಿದ್ದ ಅನುಕಂಪ ಆಧಾರಿತ ಸರ್ಕಾರಿ ಉದ್ಯೋಗದ ಆದೇಶವನ್ನು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ ಸೋಮವಾರ (ಜುಲೈ 27) ರದ್ದುಪಡಿಸಿದೆ. ನ್ಯಾಯಮೂರ್ತಿಗಳಾದ ಸಿ.ವಿ. ಕಾರ್ತಿಕೇಯನ್ ಹಾಗೂ ಆರ್. ಶಕ್ತಿವೇಲ ಅವರ ವಿಭಾಗೀಯ ಪೀಠ, ಈ ನೇಮಕಾತಿಗಳು ಭಾರತ … Continued

ವಿಜಯ ಸರ್ಕಾರ ಉರುಳಿಸಲು ಡಿಎಂಕೆ ಸಂಚು ? ಟಿವಿಕೆಯಿಂದ ಶಾಸಕರಿಗೆ ₹35 ಕೋಟಿ ಆಮಿಷದ ಆರೋಪ ; ಮೂವರ ಬಂಧನ

ಚೆನ್ನೈ: ವಿಜಯ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಎರಡು ತಿಂಗಳು ಕೂಡ ಪೂರ್ಣಗೊಳ್ಳುವ ಮುನ್ನವೇ ರಾಜ್ಯ ರಾಜಕೀಯದಲ್ಲಿ ಕುದುರೆ ವ್ಯಾಪಾರ (ಹಾರ್ಸ್ ಟ್ರೇಡಿಂಗ್) ಆರೋಪದ ವಿವಾದ ಭುಗಿಲೆದ್ದಿದೆ. ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಶಾಸಕರನ್ನು ಸೆಳೆಯಲು ಪ್ರತಿಪಕ್ಷ ಡಿಎಂಕೆ ನಾಯಕರಿಗೆ ಸಂಬಂಧಿಸಿದ ವ್ಯಕ್ತಿಗಳು ₹10 ಕೋಟಿಯಿಂದ ₹50 ಕೋಟಿವರೆಗೆ ಆಮಿಷ ಒಡ್ಡಿದ್ದಾರೆ … Continued

ಎಐಎಡಿಎಂಕೆಗೆ ಮತ್ತೆ ಆಘಾತ ; ಟಿವಿಕೆ ಸೇರಿದ 4 ಮಾಜಿ ಸಚಿವರು, 6 ಮಾಜಿ ಶಾಸಕರು

ಚೆನ್ನೈ: ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದಲ್ಲಿನ ಬಿಕ್ಕಟ್ಟು ಮುಂದುವರಿದಿದೆ. ಎಐಎಡಿಎಂಕೆಗೆ (AIADMK) ಶನಿವಾರ ಮತ್ತೊಂದು ಭಾರಿ ಆಘಾತ ಎದುರಾಗಿದ್ದು, ಪಕ್ಷದ ನಾಲ್ವರು ಪ್ರಭಾವಿ ಮಾಜಿ ಸಚಿವರು ಹಾಗೂ ಮಾಜಿ ಶಾಸಕರು ಸೇರಿದಂತೆ 300ಕ್ಕೂ ಹೆಚ್ಚು ಪ್ರಮುಖ ಪದಾಧಿಕಾರಿಗಳು ಆಡಳಿತಾರೂಢ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಇದು ಎಐಎಡಿಎಂಕೆಯ ಸಾಂಸ್ಥಿಕ ಬಲವನ್ನು ಮತ್ತಷ್ಟು ಕುಗ್ಗಿಸಿದೆ. … Continued

ಡಿಎಂಕೆ-ಕಾಂಗ್ರೆಸ್ ಮೈತ್ರಿಯಲ್ಲಿ ಬಿರುಕು ಹೆಚ್ಚಳ : ಮಹತ್ವದ ‘ಇಂಡಿಯಾ’ ಮೈತ್ರಿಕೂಟದ ಸಭೆಗೆ ಸ್ಟಾಲಿನ್ ಗೈರು !

ನವದೆಹಲಿ: ತಮಿಳುನಾಡು ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ದಕ್ಷಿಣ ಭಾರತದ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ವಿಪಕ್ಷಗಳ ರಾಷ್ಟ್ರೀಯ ಒಕ್ಕೂಟವಾದ ‘ಇಂಡಿಯಾ’ (INDIA)ಮೈತ್ರಿಕೂಟದಲ್ಲಿ ದೊಡ್ಡ ಬಿರುಕು ಮೂಡಿದೆ. ತಮಿಳುನಾಡಿನಲ್ಲಿ ಉಂಟಾದ ರಾಜಕೀಯ ಮರುಮೈತ್ರಿಯಿಂದ ಬೇಸತ್ತಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ (DMK), ಜೂನ್ 8 ರಂದು ನವದೆಹಲಿಯಲ್ಲಿ ಕರೆಯಲಾಗಿರುವ ‘ಇಂಡಿಯಾ’ ಮೈತ್ರಿಕೂಟದ ಮಹತ್ವದ ಸಭೆಯನ್ನು ಬಹಿಷ್ಕರಿಸಲು … Continued

ಎಐಎಡಿಎಂಕೆಗೆ ಮತ್ತೊಂದು ಆಘಾತ : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಆಡಳಿತಾರೂ ಟಿವಿಕೆ ಪಕ್ಷ ಸೇರಿದ ಮೂವರು ಶಾಸಕರು !

 ಚೆನ್ನೈ: ಇತ್ತೀಚಿನ ಚುನಾವಣಾ ಸೋಲಿನ ಬೆನ್ನಲ್ಲೇ ತೀವ್ರ ಆಂತರಿಕ ಕಲಹಕ್ಕೆ ಸಿಲುಕಿರುವ ಎಐಎಡಿಎಂಕೆಗೆ (AIADMK) ಸೋಮವಾರ ಮತ್ತೊಂದು ಭಾರಿ ಆಘಾತ ಎದುರಾಗಿದೆ. ಪಕ್ಷದ ಮೂವರು ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತದನಂತರ ಮುಖ್ಯಮಂತ್ರಿ ವಿಜಯ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಶಾಸಕರಾದ ಮರಗತಂ ಕುಮಾರವೇಲು, ಜಯಕುಮಾರ ಮತ್ತು … Continued