ಗೋಹತ್ಯೆಗೆ ಸಂಪೂರ್ಣ ನಿಷೇಧ: ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ

ಚೆನ್ನೈ: ತಮಿಳುನಾಡಿನಲ್ಲಿ ಹಸು ಹಾಗೂ ಕರುಗಳ ವಧೆಗೆ ಸಂಪೂರ್ಣ ನಿಷೇಧ ಹೇರಿರುವ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ತಮಿಳುನಾಡು ಸರ್ಕಾರ ತನ್ನ ಮೇಲ್ಮನವಿಯಲ್ಲಿ, ಮದ್ರಾಸ್ ಹೈಕೋರ್ಟ್ ನೀಡಿರುವ ಸಂಪೂರ್ಣ ನಿಷೇಧದ ಆದೇಶವು ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ, 1958ರ ವಿರುದ್ಧವಾಗಿದೆ ಎಂದು ವಾದಿಸಿದೆ. ಈ ಕಾಯ್ದೆಯ … Continued

ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದು ಬೆಳ್ಳಿ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ

ಉಡುಪಿ : ತಮಿಳುನಾಡು ಮುಖ್ಯಮಂತ್ರಿ ವಿಜಯ ಅವರು ಇಂದು, ಶುಕ್ರವಾರ (ಜೂನ್‌ 12) ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ ಮುಖ್ಯಮಂತ್ರಿ ವಿಜಯ ಅವರನ್ನು ದೇವಸ್ಥಾನದ ಆಡಳಿತ ಮಂಡಳಿಯ ಟ್ರಸ್ಟಿಗಳು ಸ್ವಾಗತಿಸಿದರು. ಬಳಿಕ ಅರ್ಚಕರು ಮಂತ್ರ ಘೋಷದೊಂದಿಗೆ ಅವರನ್ನು ದೇವಾಲಯದ ಒಳಗೆ ಬರಮಾಡಿಕೊಂಡರು. ಮುಖ್ಯಮಂತ್ರಿಯಾಗಿ ಅಧಿಕಾರ … Continued

ಎಐಎಡಿಎಂಕೆಗೆ ಮತ್ತೆ ಆಘಾತ ; ಟಿವಿಕೆ ಸೇರಿದ 4 ಮಾಜಿ ಸಚಿವರು, 6 ಮಾಜಿ ಶಾಸಕರು

ಚೆನ್ನೈ: ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದಲ್ಲಿನ ಬಿಕ್ಕಟ್ಟು ಮುಂದುವರಿದಿದೆ. ಎಐಎಡಿಎಂಕೆಗೆ (AIADMK) ಶನಿವಾರ ಮತ್ತೊಂದು ಭಾರಿ ಆಘಾತ ಎದುರಾಗಿದ್ದು, ಪಕ್ಷದ ನಾಲ್ವರು ಪ್ರಭಾವಿ ಮಾಜಿ ಸಚಿವರು ಹಾಗೂ ಮಾಜಿ ಶಾಸಕರು ಸೇರಿದಂತೆ 300ಕ್ಕೂ ಹೆಚ್ಚು ಪ್ರಮುಖ ಪದಾಧಿಕಾರಿಗಳು ಆಡಳಿತಾರೂಢ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಇದು ಎಐಎಡಿಎಂಕೆಯ ಸಾಂಸ್ಥಿಕ ಬಲವನ್ನು ಮತ್ತಷ್ಟು ಕುಗ್ಗಿಸಿದೆ. … Continued

“ಕಾಂಗ್ರೆಸ್ ಅನ್ನು ಎಂದಿಗೂ ಹತ್ತಿರ ಸೇರಿಸಲ್ಲ” : ವಿಜಯ ಸರ್ಕಾರಕ್ಕೆ ಬೆಂಬಲಿಸಿದ ‘ಕಾಂಗ್ರೆಸ್‌’ ವಿರುದ್ಧ ಡಿಎಂಕೆ ತೀವ್ರ ವಾಗ್ದಾಳಿ

ಚೆನ್ನೈ: ತಮಿಳುನಾಡಿನಲ್ಲಿ ಮುಖ್ಯಮಂತ್ರಿ ವಿಜಯ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಅಲ್ಪಸಂಖ್ಯಾತ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ ನೀಡಿದ ಬೆನ್ನಲ್ಲೇ, ಡಿಎಂಕೆ (DMK) ನಾಯಕ ಮತ್ತು ಪಕ್ಷದ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಡಿಎಂಕೆ ಇನ್ನು ಮುಂದೆ “ಕಾಂಗ್ರೆಸ್ ಅನ್ನು ಎಂದಿಗೂ ನಂಬಬಾರದು” ಎಂದು … Continued

ವಿಜಯ ಸರ್ಕಾರದ ಪರ ಮತ ; ಎಐಎಡಿಎಂಕೆ 25 ಶಾಸಕರನ್ನು ಪಕ್ಷದ ಹುದ್ದೆಗಳಿಂದ ಕಿತ್ತೊಗೆದ ಪಳನಿಸ್ವಾಮಿ !

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಬುಧವಾರ ನಡೆದ ನಾಟಕೀಯ ಬೆಳವಣಿಗೆಯಲ್ಲಿ, ಮುಖ್ಯಮಂತ್ರಿ ವಿಜಯ ನೇತೃತ್ವದ ಟಿವಿಕೆ (TVK) ಸರ್ಕಾರವು ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಬೆನ್ನಲ್ಲೇ ಪ್ರತಿಪಕ್ಷ ಎಐಎಡಿಎಂಕೆಯಲ್ಲಿ (AIADMK) ಬಂಡಾಯದ ಸ್ಫೋಟಗೊಂಡಿದ್ದು, ಪಕ್ಷದ ಹಿರಿಯ ನಾಯಕರ ವಿರುದ್ಧ ಇಪಿಎಸ್ ಕಠಿಣ ಕ್ರಮ ಕೈಗೊಂಡಿದ್ದಾರೆ. ಪಕ್ಷದ ಹೈಕಮಾಂಡ್ ಸೂಚನೆಯನ್ನು ಧಿಕ್ಕರಿಸಿ ವಿಜಯ ಸರ್ಕಾರದ ಪರವಾಗಿ ಮತ … Continued

ಮೈತ್ರಿಪಕ್ಷಗಳ ವಿರೋಧಕ್ಕೆ ಮಣಿದ ಸಿಎಂ ವಿಜಯ : ಜ್ಯೋತಿಷಿ ವೆಟ್ರಿವೇಲ್ ಒಎಸ್‌ಡಿ ನೇಮಕಾತಿ ಆದೇಶ ವಾಪಸ್

ನವದೆಹಲಿ: ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ವಕ್ತಾರ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ತಮಿಳುನಾಡು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ (OSD) ಹುದ್ದೆಗೆ ನೇಮಿಸಿದ ಕೇವಲ 24 ಗಂಟೆಗಳಲ್ಲಿ ವಿಜಯ ತಮ್ಮ ಆದೇಶವನ್ನು ಹಿಂಪಡೆದಿದ್ದಾರೆ. ಮೈತ್ರಿಕೂಟದ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಮೇ 12, 2026 ರಂದು … Continued

ತಮಿಳುನಾಡು : ವಿಶ್ವಾಸ ಮತ ಗೆದ್ದ ಸಿಎಂ ವಿಜಯ ; ಎಐಡಿಎಂಕೆ ಛಿದ್ರ…! 25 ಶಾಸಕರಿಂದ ವಿಜಯ ಪರ ಅಡ್ಡಮತದಾನ !!

 ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ದಶಕಗಳಿಂದ ಬೇರೂರಿದ್ದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಪಕ್ಷಗಳ 62 ವರ್ಷಗಳ ಅಧಿಪತ್ಯಕ್ಕೆ ತೆರೆಬಿದ್ದಿದೆ. ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ನಾಯಕ, ನಟ ‘ದಳಪತಿ’ ವಿಜಯ ಬುಧವಾರ ನಡೆದ ಹೈಡ್ರಾಮಾದಿಂದ ಕೂಡಿದ್ದ ವಿಶ್ವಾಸ ಮತಯಾಚನೆಯಲ್ಲಿ ಜಯಗಳಿಸುವ ಮೂಲಕ ತಮಿಳುನಾಡಿನ ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಗೆದ್ದಿದ್ದಾರೆ. ತಮಿಳುನಾಡು ವಿಧಾನಸಭೆಯಲ್ಲಿ ವಿಜಯ ಪರವಾಗಿ … Continued

ಸಿಎಂ ವಿಜಯ ವಿಶೇಷಾಧಿಕಾರಿಯಾಗಿ ಜ್ಯೋತಿಷಿ ವೆಟ್ರಿವೇಲ್ ನೇಮಕ ; ಕಾಂಗ್ರೆಸ್‌ ಅಸಮಾಧಾನ

 ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ  ವಿಜಯ ಅವರ ಆಪ್ತ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿಯವರ ವಿಶೇಷಾಧಿಕಾರಿಯಾಗಿ (OSD) ನೇಮಕ ಮಾಡಿ ಮಂಗಳವಾರ ಆದೇಶ ಹೊರಡಿಸಲಾಗಿದೆ. ತಮಿಳುನಾಡು ಸರ್ಕಾರದ ಸಾರ್ವಜನಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಈ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ. ವೆಟ್ರಿವೇಲ್ ಅವರು ಮುಖ್ಯಮಂತ್ರಿಯವರ ರಾಜಕೀಯ ವಿಭಾಗದ ವಿಶೇಷಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದು, ಅಧಿಕಾರ ವಹಿಸಿಕೊಂಡ … Continued

ವಿಡಿಯೋ | ಕೇಂದ್ರದ ಮಾರ್ಗಸೂಚಿಗೆ ವಿಜಯ ಸಹಮತ : ಸಿಎಂ ಪ್ರಮಾಣವಚನ ಸಮಾರಂಭದಲ್ಲಿ ಮೊಳಗಿದ ಸಂಪೂರ್ಣ ‘ವಂದೇ ಮಾತರಂ’

ಚೆನ್ನೈ : ಕೇಂದ್ರ ಸರ್ಕಾರವು ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯ ಆರೂ ಚರಣಗಳನ್ನು ಹಾಡಬೇಕು ಎಂದು ಹೊರಡಿಸಿದ್ದ ಹೊಸ ಮಾರ್ಗಸೂಚಿಯ ಬೆನ್ನಲ್ಲೇ, ತಮಿಳುನಾಡಿನಲ್ಲಿ ಭಾನುವಾರ ನಡೆದ ವಿಜಯ ಅವರ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಈ ನಿಯಮವನ್ನು ಪಾಲಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ, ರಾಷ್ಟ್ರಗೀತೆಗಿಂತ ಮೊದಲು ಸಂಪೂರ್ಣ ಆರು ಚರಣಗಳ ವಂದೇ ಮಾತರಂ ಗೀತೆಯನ್ನು … Continued

ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ ಪ್ರಮಾಣ ವಚನ

ಚೆನ್ನೈ: ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಚಂದ್ರಶೇಖರ ಜೋಸೆಫ್ ವಿಜಯ ಅವರು ಭಾನುವಾರ (ಮೇ 10) ತಮಿಳುನಾಡಿನ ಒಂಬತ್ತನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅವರು ವಿಜಯ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು ದೇವರ ಹೆಸರಿನಲ್ಲಿ ಪ್ರಮಾಣ ವಚನ … Continued