ವಿಡಿಯೋ | ಕೇಂದ್ರದ ಮಾರ್ಗಸೂಚಿಗೆ ವಿಜಯ ಸಹಮತ : ಸಿಎಂ ಪ್ರಮಾಣವಚನ ಸಮಾರಂಭದಲ್ಲಿ ಮೊಳಗಿದ ಸಂಪೂರ್ಣ ‘ವಂದೇ ಮಾತರಂ’

ಚೆನ್ನೈ : ಕೇಂದ್ರ ಸರ್ಕಾರವು ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯ ಆರೂ ಚರಣಗಳನ್ನು ಹಾಡಬೇಕು ಎಂದು ಹೊರಡಿಸಿದ್ದ ಹೊಸ ಮಾರ್ಗಸೂಚಿಯ ಬೆನ್ನಲ್ಲೇ, ತಮಿಳುನಾಡಿನಲ್ಲಿ ಭಾನುವಾರ ನಡೆದ ವಿಜಯ ಅವರ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಈ ನಿಯಮವನ್ನು ಪಾಲಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ, ರಾಷ್ಟ್ರಗೀತೆಗಿಂತ ಮೊದಲು ಸಂಪೂರ್ಣ ಆರು ಚರಣಗಳ ವಂದೇ ಮಾತರಂ ಗೀತೆಯನ್ನು ಹಾಡಲಾಯಿತು.
ಆದರೆ, ಇಂದು ಭಾನುವಾರ ಮುಖ್ಯಮಂತ್ರಿಯಾಗಿ ವಿಜಯ ಅವರ ಪ್ರಮಾಣ ವಚನ ಸಮಾರಂಭದಲ್ಲಿ ರಾಹುಲ್ ಗಾಂಧಿ ಮತ್ತು ವಿಜಯ ಅವರು ವೇದಿಕೆ ಹಂಚಿಕೊಂಡಿದ್ದ ವೇಳೆ, ರಾಷ್ಟ್ರಗೀತೆಗಿಂತ ಮೊದಲು ವಂದೇ ಮಾತರಂ ಗೀತೆಯನ್ನು ಹಾಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ವಂದೇ ಮಾತರಂ ಮತ್ತು ಜನ ಗಣ ಮನ ಗೀತೆಗಳ ನಂತರ ತಮಿಳುನಾಡಿನ ರಾಜ್ಯ ಗೀತೆ ‘ತಮಿಳು ತಾಯಿ ವಾಳ್ತು’ ಅನ್ನು ಹಾಡಲಾಯಿತು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ ರಾಷ್ಟ್ರಗೀತೆ ‘ಜನ ಗಣ ಮನ’ಗೆ ನೀಡಲಾಗುವ ಸಮಾನ ಸ್ಥಾನಮಾನವನ್ನು ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ರಾಜ್ಯಪಾಲ ಆರ್‌.ವಿ. ಅರ್ಲೇಕರ ಅವರು ವಿಜಯ ಮತ್ತು ಅವರ ಒಂಬತ್ತು ಕ್ಯಾಬಿನೆಟ್ ಸದಸ್ಯರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಮುಖ್ಯಮಂತ್ರಿಯಾಗಿ ಸರ್ಕಾರಿ ಕಡತಗಳಿಗೆ ವಿಜಯ ಅವರು ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಒದಗಿಸುವುದು, ಮಹಿಳಾ ಸುರಕ್ಷತೆಗಾಗಿ ವಿಶೇಷ ಪಡೆ ರಚಿಸುವ ಯೋಜನೆಗಳಿಗೆ ಮೊದಲ ಸಹಿ ಹಾಕಿದ್ದಾರೆ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement