ದೀದಿ ಪಕ್ಷದಲ್ಲಿ ‘ಮಹಾಬಂಡಾಯ’ | ಸ್ಪೀಕರ್‌ಗೆ 20 ಟಿಎಂಸಿ ಸಂಸದರ ಪತ್ರ ; ಪ್ರತ್ಯೇಕ ಪಕ್ಷ ರಚಿಸುವ ಸಾಧ್ಯತೆ ; ಎನ್‌ಡಿಎ ಒಕ್ಕೂಟ ಸೇರಲು ಸಜ್ಜು !

ನವದೆಹಲಿ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಭಾರಿ ರಾಜಕೀಯ ಭೂಕಂಪ ಸಂಭವಿಸಿದೆ.  ಟಿಎಂಸಿ ಪಕ್ಷದ 20ಕ್ಕೂ ಹೆಚ್ಚು ಲೋಕಸಭಾ ಸದಸ್ಯರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಲೋಕಸಭೆಯಲ್ಲಿ ಟಿಎಂಸಿಯ ಪ್ರತ್ಯೇಕ ಬಣವೊಂದು ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದ್ದು, ಸೂಕ್ತ ಸಮಯದಲ್ಲಿ ಅಂತಿಮ ನಿರ್ಧಾರ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ. ಪಕ್ಷದೊಳಗಿನ ಭಿನ್ನಮತ … Continued

ಸ್ಪೀಕರ್ ಮೇಲೆ ಪೇಪರ್‌ಗಳನ್ನು ಎಸೆದಿದ್ದಕ್ಕಾಗಿ ವಿಪಕ್ಷಗಳ 8 ಸಂಸದರು ಲೋಕಸಭೆಯಿಂದ ಅಮಾನತು

ನವದೆಹಲಿ: ಸ್ಪೀಕರ್‌ ಕುರ್ಚಿಯ ಮೇಲೆ ಕಾಗದಗಳನ್ನು ಎಸೆದಿದ್ದಕ್ಕಾಗಿ ಎಂಟು ಲೋಕಸಭಾ ಸಂಸದರನ್ನು ಸಂಪೂರ್ಣ ಬಜೆಟ್ ಅಧಿವೇಶನಕ್ಕೆ ಅಮಾನತುಗೊಳಿಸಲಾಗಿದೆ. ಅಮಾನತುಗೊಂಡ ಶಾಸಕರಲ್ಲಿ ಮಾಣಿಕಮ್ ಟ್ಯಾಗೋರ್, ಗುರ್ಜೀತ್ ಸಿಂಗ್ ಔಜ್ಲಾ, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಕಿರಣಕುಮಾರ ರೆಡ್ಡಿ, ಎಸ್ ವೆಂಕಟೇಶನ್, ಹಿಬಿ ಈಡನ್, ಡೀನ್ ಕುರಿಯಾಕೋಸ್ ಮತ್ತು ಪ್ರಶಾಂತ ಪಡೋಲೆ ಸೇರಿದ್ದಾರೆ. ಈ ಸಂಸದರಲ್ಲಿ ಏಳು ಮಂದಿ … Continued

ಸ್ಪೀಕರ್ ಯು.ಟಿ ಖಾದರ್ ವಿರುದ್ಧ ‘ಭ್ರಷ್ಟಾಚಾರ’ ಆರೋಪ; ನ್ಯಾಯಾಂಗ ತನಿಖೆಗೆ ಕಾಗೇರಿ ಆಗ್ರಹ

ಬೆಂಗಳೂರು: ಸ್ಪೀಕರ್ ಯು.ಟಿ. ಖಾದರ್ ಅವರ (UT Khader) ಅವಧಿಯಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ ಎಂದು ಸಂಸದ ಮತ್ತು ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪೀಕರ್ ಸ್ಥಾನದ ವಿರುದ್ಧ ಬಂದಿರುವ ಆರೋಪಗಳಿಂದ ಆ ಸ್ಥಾನವು ಮುಕ್ತವಾಗಬೇಕು. ಯು.ಟಿ. … Continued

ವಿಧಾಸಭೆಯಿಂದ 18 ಬಿಜೆಪಿ ಶಾಸಕರು ಅಮಾನತು ; ಸದನದಿಂದ ಹೊರಗೆ ಹೊತ್ತೊಯ್ದ ಮಾರ್ಷಲ್‌ ಗಳು

ಬೆಂಗಳೂರು : ಕರ್ನಾಟಕ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು ಶುಕ್ರವಾರ 18 ಬಿಜೆಪಿ ಶಾಸಕರನ್ನು ಆರು ತಿಂಗಳವರೆಗೆ ಅಮಾನತುಗೊಳಿಸಿದ್ದಾರೆ. ಸಭಾಪತಿ ಆದೇಶವನ್ನು ಧಿಕ್ಕರಿಸಿ ಅಶಿಸ್ತು ಮತ್ತು ಅಗೌರವದಿಂದ ನಡೆದುಕೊಂಡು ಸದಸ್ಯರು ವಿಧಾನಸಭೆ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಮಾನತುಗೊಂಡ ಶಾಸಕರು ಸಭಾಧ್ಯಕ್ಷರ ವೇದಿಕೆ ಏರುವುದು, ಸಭಾಧ್ಯಕ್ಷರತ್ತ ಪೇಪರ್ ಎಸೆದು ಸದನದ ಬಾವಿಗಿಳಿದು … Continued

ಸಚಿವರು, ಶಾಸಕರ ವೇತನ ದ್ವಿಗುಣ ಸಾಧ್ಯತೆ : ವೇತನ. ಭತ್ಯೆ ಹೆಚ್ಚಳಕ್ಕೆ ತಿದ್ದುಪಡಿ ಮಸೂದೆ ಸಿದ್ಧ

ಬೆಂಗಳೂರು: ಕರ್ನಾಟಕದ ಚುನಾಯಿತ ಪ್ರತಿನಿಧಿಗಳು ಶೀಘ್ರದಲ್ಲೇ ಎರಡು ಪಟ್ಟು ಹೆಚ್ಚು ಸಂಬಳ ಪಡೆಯಲಿದ್ದಾರೆ, ಕರಡು ಮಸೂದೆಯು ಮುಖ್ಯಮಂತ್ರಿ, ಮಂತ್ರಿಗಳು ಮತ್ತು ಶಾಸಕರಿಗೆ 100%ರಷ್ಟು ವೇತನ ಹೆಚ್ಚಳವನ್ನು ಪ್ರಸ್ತಾಪಿಸುತ್ತದೆ. ಪಿಂಚಣಿಗಳು ಮತ್ತು ವಿಮಾನ/ರೈಲು ಪ್ರಯಾಣ ಭತ್ಯೆಗಳಲ್ಲಿ ಶೇಕಡಾ 50 ರಷ್ಟು ಹೆಚ್ಚಳದಿಂದ ಹಿಡಿದು ಇತರ ಸೌಲಭ್ಯಗಳ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ. ಕರ್ನಾಟಕ ಶಾಸಕಾಂಗದ ವೇತನಗಳು, ಪಿಂಚಣಿಗಳು … Continued

ವೀಡಿಯೊ..| ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದ ಬಿಜೆಪಿಯ ಓಂ ಬಿರ್ಲಾ

ನವದೆಹಲಿ: ಇಂದು ಬುಧವಾರ (ಜೂನ್‌ ೨೬) ನಡೆದ ಚುನಾವಣೆಯಲ್ಲಿ ಬಿಜೆಪಿಯ ಓಂ ಬಿರ್ಲಾ ಅವರು ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಓಂ ಬಿರ್ಲಾ ಅವರನ್ನು ಲೋಕಸಭೆಯ ಸ್ಪೀಕರ್ ಕುರ್ಚಿಗೆ ಕರೆದೊಯ್ದರು. ಲೋಕಸಭೆ ಸ್ಪೀಕರ್ ಆಯ್ಕೆಗೆ ಮೊದಲ ಬಾರಿಗೆ ಮತದಾನ ನಡೆದಿದೆ. ಅವಿರೋಧವಾಗಿ … Continued

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್​​​​ ಪಟ್ಟಿಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಹೆಸರು ಸೇರ್ಪಡೆ

ಹುಬ್ಬಳ್ಳಿ: ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್​​​​ ಪಟ್ಟಿಯಲ್ಲಿ ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಹೆಸರು ಸೇರ್ಪಡೆ ಮಾಡಲಾಗಿದೆ. ಭಾರತದಲ್ಲಿ ಪ್ರಕಟವಾದ 2024ನೇ ಸಾಲಿನ ವಾರ್ಷಿಕ ಪುಸ್ತಕದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ದಾಖಲೆಗಳನ್ನು ಪ್ರಕಟ ಮಾಡಲಾಗಿದೆ. 1980 ರಿಂದ ಸ್ಪರ್ಧಿಸಿದ ಎಲ್ಲಾ ಚುನಾವಣೆಗಳಲ್ಲಿ ಜಯ ಗಳಿಸಿರುವ ಬಸವರಾಜ ಹೊರಟ್ಟಿ ಅವರು, ವಿಧಾನ … Continued

ಸಾವರ್ಕರ್ ಫೋಟೋ ತೆರವಿಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ : ಸ್ಪೀಕರ್‌ ಯುಟಿ ಖಾದರ್‌

ಬೆಳಗಾವಿ: ವಿಧಾನಸಭೆ ಸಭಾಂಗಣದಲ್ಲಿ ವೀರ್‌ ಸಾವರ್ಕರ್ ಫೋಟೋ ತೆರವಿಗಾಗಿ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ. ಬೆಳಗಾವಿ ಸುವರ್ಣಸೌಧದಲ್ಲಿ‌ ಗುರುವಾರ ಪ್ರತಿಕ್ರಿಯೆ ನೀಡಿದ ಅವರು, ವಿಧಾನಸಭೆ ಸಭಾಂಗಣದಲ್ಲಿರುವ ಸಾವರ್ಕರ್ ಭಾವಚಿತ್ರ ತೆರವುಗೊಳಿಸಲು ಯಾವುದೇ ಪ್ರಸ್ತಾವನೆ ಬಂದಿಲ್ಲ.‌ ಪ್ರಸ್ತಾವನೆ ಬಂದ ಮೇಲೆ ಆ ಬಗ್ಗೆ ವಿಚಾರ ಮಾಡೋಣ. ಈಗಲೇ ಅದರ ಬಗ್ಗೆ ಏಕೆ..? … Continued

ಅಧಿವೇಶನದಲ್ಲಿ ಬಿಲ್‌ ಪಾಸ್‌: ಮುಖ್ಯಮಂತ್ರಿ, ಸಚಿವರು, ಶಾಸಕರ ಸಂಬಳ-ಭತ್ಯೆ ಹೆಚ್ಚಳ-ಯಾರ್ಯಾರಿಗೆ ಎಷ್ಟೆಷ್ಟು ಇಲ್ಲಿದೆ ಮಾಹಿತಿ

ಬೆಂಗಳೂರು: ಬೆಂಗಳೂರು: ವಿಧಾನಸಭೆ ಸರಿಯಾಗಿ ನಡೆಯಲಿಲ್ಲ. ಆದರೆ ಕಳೆದ ಐದು ದಿನಗಳಿಂದ ಗದ್ದಲದಲ್ಲೇ ವ್ಯರ್ಥವಾಗುತ್ತಿರುವ ಸದನದಲ್ಲಿ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರ ಸಂಬಳ ಹಾಗೂ ಭತ್ಯೆಯನ್ನು ಹೆಚ್ಚಳ ಮಾಡಿಕೊಳ್ಳಲಾಗಿದೆ. ನಿವೃತ್ತಿ ವೇತನ ತಿದ್ದುಪಡಿ ವಿಧೇಯಕವೂ ಅಂಗೀಕಾರವಾಗಿದೆ ಈ ನಡುವೆಯೂ ಇಂದು, ಮಂಗಳವಾರ ಮುಖ್ಯಮಂತ್ರಿ, ಮಂತ್ರಿಗಳು, ಸಭಾಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಶಾಸಕರು, ಪರಿಷತ್ ಸದಸ್ಯರ ವೇತನ ಹೆಚ್ಚಳ … Continued

ಸಂಸದೀಯ ವ್ಯವಸ್ಥೆ ಅಡಿ ಸಚಿವ ಸುಧಾಕರ ಮೇಲೆ ಕ್ರಮ: ಕಾಗೇರಿ

ಬೆಂಗಳೂರು: ಶಾಸಕರ ಕುರಿತಾಗಿ ಸಚಿವ ಡಾ.ಕೆ.ಸುಧಾಕರ್ ಅವರ ಮೇಲೆ ಸಂಸದೀಯ ವ್ಯವಸ್ಥೆ ಅಡಿಯಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇನೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಡಾ.ಕೆ.ಸುಧಾಕರ್ ಆಕ್ಷೇಪಾರ್ಹ ಹೇಳಿಕೆ ಸರಿಯಲ್ಲ. ಅದರ ಬಗ್ಗೆ ಅವರೇ ಸ್ಪಷ್ಟೀಕರಣ ಕೂಡಾ ಕೊಟ್ಟಿದ್ದಾರೆ. ಆದರೂ ಸಹ ಸಭಾಧ್ಯಕ್ಷನಾಗಿ ಸಂಸದೀಯ ವ್ಯವಸ್ಥೆ … Continued