ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್​​​​ ಪಟ್ಟಿಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಹೆಸರು ಸೇರ್ಪಡೆ

ಹುಬ್ಬಳ್ಳಿ: ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್​​​​ ಪಟ್ಟಿಯಲ್ಲಿ ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಹೆಸರು ಸೇರ್ಪಡೆ ಮಾಡಲಾಗಿದೆ. ಭಾರತದಲ್ಲಿ ಪ್ರಕಟವಾದ 2024ನೇ ಸಾಲಿನ ವಾರ್ಷಿಕ ಪುಸ್ತಕದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ದಾಖಲೆಗಳನ್ನು ಪ್ರಕಟ ಮಾಡಲಾಗಿದೆ.
1980 ರಿಂದ ಸ್ಪರ್ಧಿಸಿದ ಎಲ್ಲಾ ಚುನಾವಣೆಗಳಲ್ಲಿ ಜಯ ಗಳಿಸಿರುವ ಬಸವರಾಜ ಹೊರಟ್ಟಿ ಅವರು, ವಿಧಾನ ಪರಿಷತ್ ಪ್ರವೇಶಿಸಿ 43 ವರ್ಷ 201 ದಿನಗಳಾಗಿವೆ.
ಕಳೆದ ನಾಲ್ಕು ದಶಕಗಳಿಂದ ಒಂದೇ ಕ್ಷೇತ್ರದಿಂದ ಸತತ ಎಂಟು ಬಾರಿ ಆಯ್ಕೆಯಾಗಿರುವ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು 1980 ರಿಂದ ಸ್ಪರ್ಧಿಸಿದ ಎಲ್ಲ ಚುನಾವಣೆಗಳಲ್ಲಿ ಜಯ ಗಳಿಸಿದ ಅಂಕಿ ಸಂಖ್ಯೆಗಳು ಹಾಗೂ ಇನ್ನಿತರ ಮಾಹಿತಿಯನ್ನು ಪ್ರಕಟಿಸಲಾಗಿದೆ. 2022ರಲ್ಲಿ ಲಂಡನ್​ನ ವರ್ಲ್ಡ್ ಬುಕ್ ಆಫ್ ದಾಖಲೆಗೆ ಬಸವರಾಜ ಹೊರಟ್ಟಿ ಹೆಸರು ಸೇರ್ಪಡೆ ಆಗಿದೆ. ಈಗ ಅವರ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗೆ ಸೇರ್ಪಡೆಯಾಗಿದೆ.

ಹೊರಟ್ಟಿಯವರು ಈವರೆಗೆ ಸತತ ಎಂಟು ಬಾರಿಗೆ ಒಂದೇ ಕ್ಷೇತ್ರದಿಂದ ಗೆಲುವು ಸಾಧಿಸುವ ಮೂಲಕ ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ.
ಹೊರಟ್ಟಿ ಅವರು, ವಿಧಾನ ಪರಿಷತ್ ಪ್ರವೇಶಿಸಿ 43 ವರ್ಷ 201 ದಿನಗಳಾಗಿವೆ. ದೇಶದ ಇತಿಹಾಸದಲ್ಲಿಯೇ ಇದೊಂದು ಐತಿಹಾಸಿಕ ದಾಖಲೆ. ಪರಿಷತ್‌ನಲ್ಲಿ ಇಷ್ಟೊಂದು ಸುದೀರ್ಘ ಚುನಾವಣಾ ಅವಧಿಯ ರಾಜಕಾರಣವನ್ನು ಮತ್ತೊಬ್ಬರು ಮಾಡಿಲ್ಲ. ಭಾರತದ ಚುನಾವಣಾ ಆಯೋಗದಲ್ಲಿ ಇವರ ಸುಧೀರ್ಘ ಸೇವಾ ಅವಧಿಯ ದಾಖಲೆಗಳು ಅಂಕಿ ಸಂಖ್ಯಾ ಇಲಾಖೆಯಲ್ಲಿ ದಾಖಲಿಕರಣಗೊಂಡು ಗೆಜೆಟ್ ನಲ್ಲಿ ಪ್ರಕಟವಾಗಿವೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಯಡಹಳ್ಳಿಯಲ್ಲಿ ಜನಿಸಿರುವ ಹೊರಟ್ಟಿ, ರೈತಾಪಿ ಕುಟುಂಬದಲ್ಲಿ ಜನಿಸಿದ್ದವರು. ಪ್ರಾಥಮಿಕ, ಫ್ರೌಡ ಶಿಕ್ಷಣವನ್ನ ಮುಗಿಸಿದ್ದ ಅವರು ಹುಬ್ಬಳ್ಳಿಯಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. ಅಲ್ಲದೆ 1975 ರಿಂದ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಮುಖ ಸುದ್ದಿ :-   ಕುಮಟಾ : ಬಾಡದಲ್ಲಿ ಚಿರತೆ ದಾಳಿಗೆ ಇಬ್ಬರಿಗೆ ಗಾಯ ; ಮನೆಯೊಳಗೆ ನುಗ್ಗಿ ಅವಿತುಕೊಂಡ ಚಿರತೆ

ಈ ಬಾರಿಯ ವಾರ್ಷಿಕ ಪುಸ್ತಕದಲ್ಲಿ ಸಿಕ್ಕಿಂ ಮಾಜಿ ಮುಖ್ಯಮಂತ್ರಿಗಳಾದ ಪವನಕುಮಾರ 24 ವರ್ಷ 165 ದಿನಗಳ ಕಾಲ ಮುಖ್ಯಮಂತ್ರಿಗಳಾಗಿ ಸಲ್ಲಿಸಿದ ಸೇವಾ ಅವಧಿ ದಿನಗಳನ್ನು ದಾಖಲಿಸಲಾಗಿದೆ.  12 ಡಿಸೆಂಬರ್ 1994 ರಿಂದ 26 ಮೇ 2019 ವರೆಗೆ ಅಂದರೆ 24 ವರ್ಷ 165 ದಿನಗಳು ಐದು ಭಾರಿ ಆ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ.ಅಲ್ಲದೆ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರ 23 ವರ್ಷ 137 ದಿನಗಳ ಕಾಲ ಮುಖ್ಯಮಂತ್ರಿಗಳಾಗಿದ್ದ ಅವಧಿಯನ್ನೂ ದಾಖಲಿಸಲಾಗಿದೆ.

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement