ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರ ಮಸೂದೆ ಅಂಗೀಕಾರ : ಪಿಒಕೆ ನಮ್ಮದು, ಅದಕ್ಕೂ 24 ಸೀಟುಗಳನ್ನು ಕಾಯ್ದಿಟ್ಟಿದ್ದೇವೆ ಎಂದ ಅಮಿತ್ ಶಾ

ನವದೆಹಲಿ: ಇಂದು, ಬುಧವಾರ (ಡಿಸೆಂಬರ್‌ 6) ಲೋಕಸಭೆಯಲ್ಲಿ ಅಂಗೀಕಾರಗೊಂಡ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆಯು 70 ವರ್ಷಗಳಿಂದ ಧ್ವನಿಯೇ ಇಲ್ಲದ ಜನರ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ ಶಾ ಹೇಳಿದ್ದಾರೆ. ಅಮಿತ್ ಶಾ ಅವರು ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ -ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆ, … Continued

ಐತಿಹಾಸಿಕ ಮೈಲಿಗಲ್ಲು…: ಕೇಂದ್ರದ ಜೊತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಅತ್ಯಂತ ಹಳೆಯ ಸಶಸ್ತ್ರ ಗುಂಪು ಯು ಎನ್‌ ಎಲ್‌ ಎಫ್‌

ನವದೆಹಲಿ: ಐತಿಹಾಸಿಕ ಬೆಳವಣಿಗೆಯಲ್ಲಿ, ಭಾರತ ಸರ್ಕಾರ ಮತ್ತು ಮಣಿಪುರ ಸರ್ಕಾರವು ಬುಧವಾರ ನವದೆಹಲಿಯಲ್ಲಿ ಮಣಿಪುರದ ಅತ್ಯಂತ ಹಳೆಯ ಕಣಿವೆ ಮೂಲದ ಸಶಸ್ತ್ರ ಗುಂಪು ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (UNLF) ಜೊತೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ಶಾಂತಿ ಒಪ್ಪಂದವನ್ನು ಶ್ಲಾಘಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈಶಾನ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲು … Continued

ಅಮಿತ್ ಶಾ ವಿರುದ್ಧ “ಆಕ್ಷೇಪಾರ್ಹ” ಹೇಳಿಕೆ: ರಾಹುಲ್ ಗಾಂಧಿಗೆ ನ್ಯಾಯಾಲಯದಿಂದ ಸಮನ್ಸ್

ಲಕ್ನೋ : ಐದು ವರ್ಷಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯವು ಡಿಸೆಂಬರ್ 16 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದೆ. ಈ ಆದೇಶವನ್ನು ನೀಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಯೋಗೇಶಕುಮಾರ ಯಾದವ್ ಅವರು … Continued

ಅಮಿತ್ ಶಾ ಬಂದು ಮನೆಯಲ್ಲಿ 2 ಗಂಟೆ ಕೂತು ಜೀವ ತೆಗೆದ್ರು : 2 ಕಡೆ ಸ್ಪರ್ಧೆ ವಿಚಾರಕ್ಕೆ ಸೋಮಣ್ಣ ಬೇಸರ

ತುಮಕೂರು: ಬಿಜೆಪಿ ನಾಯಕತ್ವದ ವಿರುದ್ಧ ಅಸಮಾಧಾನಗೊಂಡು ಒಂದು ಕಾಲನ್ನು ಪಕ್ಷದಿಂದ ಹೊರಗಿಟ್ಟಿರುವ ಮಾಜಿ ಸಚಿವ ವಿ.ಸೋಮಣ್ಣ ಅವರು, ಗೃಹ ಸಚಿವ ಅಮಿತ್ ಶಾ ಬಗ್ಗೆ ಶನಿವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ಸಂದರ್ಭದಲ್ಲಿ ವಿ ಸೋಮಣ್ಣ ಅವರು ಸಿದ್ದಲಿಂಗ ಸ್ವಾಮೀಜಿ ಬಳಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ … Continued

ಮಧ್ಯಪ್ರಾಚ್ಯ ನೋಡಿದರೆ… ಭಾರತೀಯರಾಗಿ ನಾವು ಅದೃಷ್ಟವಂತರು’ : ಪ್ರಧಾನಿ ಮೋದಿ, ಅಮಿತ್ ಶಾರನ್ನು ಹೊಗಳಿದ ಅವರಿಬ್ಬರ ಕಟು ಟೀಕಾಕಾರ್ತಿ ಶೆಹ್ಲಾ ರಶೀದ್

ನವದೆಹಲಿ: ಪ್ರಧಾನಿ ಮೋದಿ ಕಟು ಟೀಕಾಕಾರ್ತಿ ಹಾಗೂ ಮಾಜಿ ಜೆಎನ್‌ಯು ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ಕಾಶ್ಮೀರದಲ್ಲಿ ದೀರ್ಘಾವಧಿಯ ಶಾಂತಿ ಮತ್ತು ಸುರಕ್ಷತೆ ಖಾತ್ರಿಪಡಿಸಿದ್ದಕ್ಕಾಗಿ ಭಾರತೀಯ ಸೇನೆ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಶ್ಲಾಘಿಸಿದ್ದಾರೆ. ಶನಿವಾರ ಇಸ್ರೇಲ್-ಹಮಾಸ್ ಸಂಘರ್ಷ ಎಂಟನೇ ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅವರ ಈ ಪ್ರಶಂಸೆ ಬಂದಿದೆ. … Continued

ವೀಡಿಯೊ | ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಜೆಡಿಎಸ್‌ ಪಕ್ಷ ಸೇರ್ಪಡೆ

ನವದೆಹಲಿ: ಜೆಡಿಎಸ್‌ ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಮುನ್ನ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿದೆ. ಶುಕ್ರವಾರ ಮಧ್ಯಾಹ್ನ ಜೆಡಿಎಸ್ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ದಕ್ಷಿಣ … Continued

‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಮಿತಿಯಲ್ಲಿ ಅಮಿತ್ ಶಾ, ಅಧೀರ ರಂಜನ್ ಚೌಧರಿ ಸೇರಿ ಏಳು ಸದಸ್ಯರು

ನವದೆಹಲಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಾಧ್ಯತೆಯನ್ನು ಪರಿಶೀಲಿಸಲು ರಚಿಸಲಾಗಿರುವ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸೇರಿದಂತೆ ಎಂಟು ಮಂದಿ ಸದಸ್ಯರಿದ್ದಾರೆ. ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಅಧ್ಯಕ್ಷ ಹಾಗೂ 15 ನೇ ಹಣಕಾಸು ಆಯೋಗದ ಮಾಜಿ … Continued

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರಿದ ಸಮಾಜವಾದಿ ಪಕ್ಷದ ಮಾಜಿ ಮಿತ್ರ ಪಕ್ಷ ಎಸ್‌ಬಿಎಸ್‌ಪಿ

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಮುನ್ನ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ)ವು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) ಮರಳಿದೆ. ಎಸ್‌ಬಿಎಸ್‌ಪಿ ಮುಖ್ಯಸ್ಥ ಓಪಿ ರಾಜಭರ್ ಅವರು ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಬಿಜೆಪಿ ನೇತೃತ್ವದ ಎನ್‌ಡಿಎಗೆ ತಮ್ಮ ಪಕ್ಷದ ಸೇರುವಿಕೆಯನ್ನು ಅಧಿಕೃತಗೊಳಿಸಿದರು. ಎನ್‌ಡಿಎ ಮೈತ್ರಿಕೂಟಕ್ಕೆ ರಾಜಭರ್ … Continued

ಬಿಜೆಪಿಗೆ ಮೋಸ ಮಾಡಿದ ಲಕ್ಷ್ಮಣ ಸವದಿ ಸೋಲಿಸಿ: ಅಮಿತ್ ಶಾ

ಅಥಣಿ : ಕಾಂಗ್ರೆಸ್ ನಾಯಕರು ಪದೇ ಪದೇ ವೀರ ಸಾವರ್ಕರಗೆ ಅಪಮಾನ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಕೂಡ ಅವಮಾನ ಮಾಡಿದ್ದಾರೆ. ನೀವು ಹತ್ತು ಜನ್ಮ ತಾಳಿದರೂ ಸಾವರ್ಕರ್ ಅವರಂತಹ ತ್ಯಾಗ ನಿಮ್ಮಿಂದ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. ಇಲ್ಲಿಯ ಭೋಜರಾಜ ಕ್ರೀಡಾಂಗಣದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ … Continued

ಪಾಕ್‌ ಗಡಿ ಬಳಿ ಶಾರದಾ ದೇವಾಲಯ ಉದ್ಘಾಟನೆ : ಕರ್ತಾರಪುರ ಕಾರಿಡಾರ್ ಮಾದರಿಯಲ್ಲಿ ಪಿಒಕೆಯಲ್ಲಿ ಶಾರದಾ ಪೀಠದ ಪುನರುತ್ಥಾನ-ಅಮಿತ್ ಶಾ

ಶ್ರೀನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದ ಕರ್ನಾಹ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಮಾತಾ ಶಾರದಾ ದೇವಿ ದೇವಸ್ಥಾನವನ್ನು ಬುಧವಾರ ವರ್ಚುವಲ್‌ ಉದ್ಘಾಟನೆ ಮಾಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ದೇವಾಲಯದ ಉದ್ಘಾಟನೆಯು ಹೊಸ ಉದಯದ ಆರಂಭ ಮತ್ತು ಇದು ಕಾಶ್ಮೀರದ … Continued