ತಾನೊಬ್ಬ ಅಧಿಕಾರಿ ಎಂದು ನಂಬಿಸಿ ಆಪ್ ನಾಯಕನನ್ನು ಮದುವೆ ಬಲೆಗೆ ಬೀಳಿಸಿದ ಮಹಿಳೆ ; ನಂತ್ರ ಚಿನ್ನಾಭರಣದೊಂದಿಗೆ ಪರಾರಿ !

ಪಂಜಾಬ್‌ನ ಫತೇಗಢ್ ಸಾಹಿಬ್‌ನಲ್ಲಿ ಆಮ್ ಆದ್ಮಿ ಪಕ್ಷದ (ಆಪ್) ನಾಯಕರೊಬ್ಬರು ಮದುವೆ ಹೆಸರಿನಲ್ಲಿ ವಂಚನೆಗೆ ಒಳಗಾಗಿರುವ ಆರೋಪ ಬೆಳಕಿಗೆ ಬಂದಿದೆ. ಪಿಸಿಎಸ್ (PCS) ಅಧಿಕಾರಿ ಎಂದು ಸುಳ್ಳು ಹೇಳಿ ಮದುವೆಯಾದ ಮಹಿಳೆ, ಕೆಲವೇ ತಿಂಗಳಲ್ಲಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಮನೆ ಬಿಟ್ಟು ಹೋಗಿದ್ದಾಳೆ ಎಂದು ಆರೋಪಿಸಲಾಗಿದೆ. ಆಪ್‌ನ ಜಂಟಿ ಕಾರ್ಯದರ್ಶಿ, … Continued

ಪಾಕಿಸ್ತಾನದಲ್ಲಿ ಇಂಧನ ಬಿಕ್ಕಟ್ಟು: ಲಾಕ್‌ಡೌನ್‌ ಮಾದರಿ ನಿರ್ಬಂಧ ; ವಾಹನ ಖರೀದಿಗೆ ನಿಷೇಧ, ಮದುವೆ ಊಟಕ್ಕೂ ಮಿತಿ….

ಇಸ್ಲಾಮಾಬಾದ್: ಇರಾನ್–ಅಮೆರಿಕ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಹಾಗೂ ತೈಲ ಬೆಲೆ ಏರಿಕೆಯಾಗುವ ಆತಂಕ ಹೆಚ್ಚಿರುವುದರಿಂದ ಪಾಕಿಸ್ತಾನ ಸರ್ಕಾರ ಮತ್ತೆ ಮಿತವ್ಯಯ (ಆಸ್ಟೆರಿಟಿ) ಕ್ರಮಗಳನ್ನು ಜಾರಿಗೊಳಿಸಿದೆ. ಇಂಧನ ಉಳಿತಾಯ ಮತ್ತು ಅನಗತ್ಯ ಸರ್ಕಾರಿ ವೆಚ್ಚ ನಿಯಂತ್ರಿಸುವ ಉದ್ದೇಶದಿಂದ ಘೋಷಿಸಲಾದ ಈ ಕ್ರಮಗಳು ತಕ್ಷಣದಿಂದಲೇ ಜಾರಿಗೆ … Continued

ವಿಚಿತ್ರ ಮದುವೆ…: ಹೆಂಡತಿಯನ್ನು ಕೈಬಿಟ್ಟು ಅತ್ತೆಯನ್ನೇ ವರಿಸಿದ ಅಳಿಯ ! ವಿಲಕ್ಷಣ ಮದುವೆಯ ವಿಡಿಯೋ ವೈರಲ್

ಉತ್ತರ ಪ್ರದೇಶದ ಕಾನ್ಪುರ ದೇಹತ್‌ನಿಂದ ಇತ್ತೀಚೆಗೆ ವರದಿಯಾಗಿರುವ ಅತ್ಯಂತ ವಿಲಕ್ಷಣ ಹಾಗೂ ಅಚ್ಚರಿಯ ವಿವಾದವೊಂದು ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣ ಸೃಷ್ಟಿಸಿದೆ. ಪ್ರೀತಿ, ಸಂಬಂಧಗಳ ಎಲ್ಲ ಕಲ್ಪನೆಗಳನ್ನೂ ಮೀರಿ ನಿಂತಿರುವ ಈ ಘಟನೆಯಲ್ಲಿ, ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೈಬಿಟ್ಟು ಸ್ವತಃ ತನ್ನ ಅತ್ತೆಯನ್ನೇ ವಿವಾಹವಾಗಿದ್ದಾನೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಈ ವಿಲಕ್ಷಣ ಘಟನೆ ಉತ್ತರ ಪ್ರದೇಶದ … Continued

ಯುವತಿಯ ಹೆಣಕ್ಕೆ ತಾಳಿ ಕಟ್ಟಿ ಮದುವೆಯಾದ ಯುವಕ…!

ಗಿರೀದಿಹ್ (ಜಾರ್ಖಂಡ್) : ಗಿರೀದಿಹ್ (ಜಾರ್ಖಂಡ್): ಜಾರ್ಖಂಡ್‌ನ ಗಿರೀದಿಹ್ ಜಿಲ್ಲೆಯಲ್ಲಿ ಯುವತಿಯೊಬ್ಬಳ ನಿಗೂಢ ಸಾವಿನ ಪ್ರಕರಣವೊಂದು ಅತ್ಯಂತ ವಿಚಿತ್ರ ಹಾಗೂ ಆಘಾತಕಾರಿ ತಿರುವು ಪಡೆದುಕೊಂಡಿದೆ. ಯುವತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಯುವಕನೇ, ಜೈಲಿನಿಂದ ಪೊಲೀಸ್ ಭದ್ರತೆಯಲ್ಲಿ ಬಂದು, ಆಕೆಯ ಮೃತದೇಹಕ್ಕೆ ಶಾಸ್ತ್ರೋಕ್ತವಾಗಿ ಸಿಂಧೂರವಿಟ್ಟು, ಮದುವೆ ವಿಧಿವಿಧಾನಗಳನ್ನು ಪೂರೈಸಿ ತಾಳಿಕಟ್ಟಿ ಮದುವೆಯಾಗಿದ್ದಾನೆ. ನಂತರ ಚಿತೆಗೆ … Continued

ಹುಡುಗಿಯ ಮೌನವೇ ಮದುವೆಗೆ ಒಪ್ಪಿಗೆ ; ಅಫ್ಘಾನಿಸ್ತಾನದಲ್ಲಿ ಬಾಲ್ಯ ವಿವಾಹಕ್ಕೆ ಹೊಸ ಕಾನೂನು ಜಾರಿಗೆ ತಂದ ತಾಲಿಬಾನ್‌ !

ತಾಲಿಬಾನ್ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂದ್ಜಾದಾ ಅವರ ಅನುಮೋದನೆ ನಂತರ ಅಫ್ಘಾನಿಸ್ತಾನದಲ್ಲಿ ನೂತನ ಕೌಟುಂಬಿಕ ಕಾನೂನು ನಿಯಂತ್ರಣವನ್ನು ಜಾರಿಗೆ ತರಲಾಗಿದೆ. ಇಸ್ಲಾಮಿಕ್ ಕಾನೂನಿನ ತನ್ನದೇ ಆದ ವ್ಯಾಖ್ಯಾನದಡಿಯಲ್ಲಿ ವಿವಾಹ, ವಿಚ್ಛೇದನ ಮತ್ತು ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ನಿಯಮಗಳನ್ನು ಒಳಗೊಂಡ “ದಂಪತಿಗಳ ನಡುವಿನ ಪ್ರತ್ಯೇಕತೆಯ ತತ್ವಗಳು” (Principles of Separation Between Spouses) ಎಂಬ 31 ವಿಧಿಗಳ … Continued

ಮದುವೆಯಲ್ಲಿ ಏರ್‌ ಕೂಲರ್​​ಗಾಗಿ ಬಡಿದಾಡಿಕೊಂಡ ನೆಂಟರು ; ಸಾವಿನ ಮನೆಯಾದ ಮದುವೆ ಮನೆ…!

ನವದೆಹಲಿ: ಮದುವೆ ಮನೆಯೊಂದರ ಸಂಭ್ರಮವು ಕ್ಷುಲ್ಲಕ ಕಾರಣಕ್ಕೆ ರಣರಂಗವಾಗಿ ಮಾರ್ಪಟ್ಟ ಘಟನೆ ಉತ್ತರ ಪ್ರದೇಶದ ಅಜಂಗಢದಲ್ಲಿ ನಡೆದಿದೆ. ಕೇವಲ ಒಂದು ಏರ್ ಕೂಲರ್ ಗಾಳಿ ಯಾವ ದಿಕ್ಕಿಗೆ ಮಾಡಬೇಕು ಎಂಬ ವಿಚಾರವಾಗಿ ಶುರುವಾದ ಸಣ್ಣ ಜಗಳ ವಿಕೋಪಕ್ಕೆ ತಿರುಗಿ, ಓರ್ವ ಯುವಕ ಮೃತಪಟ್ಟಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ. ಅಜಂಗಢದ ಜಿಯಾನ್‌ಪುರ ಪೊಲೀಸ್ ಠಾಣಾ … Continued

ಡಿಜೆ ಸೌಂಡ್ ಅಬ್ಬರಕ್ಕೆ ಹಾರ್ಟ್ ಅಟ್ಯಾಕ್ ಆಗಿ 140 ಕೋಳಿಗಳು ಸಾವು ; ದೂರು ದಾಖಲಿಸಿದ ಮಾಲೀಕ…!

ಮದುವೆ ಸಂಭ್ರಮದ ಡಿಜೆ ಶಬ್ದವು ಪ್ರಾಣಿ-ಪಕ್ಷಿಗಳ ಮೇಲೆ ಎಂತಹ ಭೀಕರ ಪರಿಣಾಮ ಬೀರಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಸಲ್ತಾನ್‌ಪುರ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಸಂಭ್ರಮದಿಂದ ಸಾಗುತ್ತಿದ್ದ ಮದುವೆ ಮೆರವಣಿಗೆಯ (ಬರಾತ್) ಅಬ್ಬರದ ಡಿಜೆ ಶಬ್ದವು, ಹತ್ತಿರದ ಕೋಳಿ ಫಾರಂನಲ್ಲಿದ್ದ 140 ಕೋಳಿಗಳ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿ ದೂರು ದಾಖಲಾಗಿದೆ. ಏಪ್ರಿಲ್ 25ರ … Continued

ಮದುವೆ ಮಂಟಪಕ್ಕೆ ನುಗ್ಗಿ 60ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಬೀದಿ ನಾಯಿ…!

ಬುದೌನ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬುದೌನ್ ಜಿಲ್ಲೆಯ ಮದುವೆ ಸಮಾರಂಭವೊಂದರಲ್ಲಿ ಬೀದಿ ನಾಯಿಗಳು ಅಟ್ಟಹಾಸ ಮೆರೆದಿದ್ದು, ಮದುವೆ ಸಮಾರಂಭಕ್ಕೆ ನುಗ್ಗಿದ ನಾಯಿ 60ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿದೆ. ವಧುವಿನ ಬೀಳ್ಕೊಡುಗೆಯ (Farewell) ಸಂಭ್ರಮದಲ್ಲಿದ್ದ ಜನರು ನಾಯಿ ದಾಳಿಯಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಸೋಮವಾರ ಬಿಸೌಲಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲ್ಸಿ ರಸ್ತೆಯಲ್ಲಿರುವ ‘ಅಭಿನಂದನ್ ಬ್ಯಾಂಕ್ವೆಟ್ … Continued

ಒಬ್ಬಳೇ ʼವಧುʼವನ್ನು ಮದುವೆಯಾಗಲು ದಿಬ್ಬಣ ಸಮೇತ ಬಂದ ಇಬ್ಬರು ವರರನ್ನು ನೋಡಿ ಬೆಚ್ಚಿಬಿದ್ದ ವಧುವಿನ ಕುಟುಂಬ..!

ಅಮ್ರೋಹಾ (ಉತ್ತರ ಪ್ರದೇಶ): ಇತ್ತೀಚಿನ ದಿನಗಳಲ್ಲಿ ಮದುವೆ ಮನೆಗಳಲ್ಲಿ ಸಣ್ಣಪುಟ್ಟ ಗಲಾಟೆಗಳು ಸಾಮಾನ್ಯ. ಆದರೆ ಇಲ್ಲೊಂದು ಕಡೆ ವಧುವೊಬ್ಬಳನ್ನು ವರಿಸಲು ಇಬ್ಬರು ವರರು ಮೆರವಣಿಗೆಯೊಂದಿಗೆ ಏಕಕಾಲಕ್ಕೆ ಮಂಟಪಕ್ಕೆ ಬಂದಿಳಿದು ಅಕ್ಷರಶಃ ಸಿನಿಮಾ ಸ್ಟೈಲ್‌ನಲ್ಲಿ ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ ! ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಬೇಕಾದ ಅನಿವಾರ್ಯತೆ ಎದುರಾಯಿತು. ಅಮ್ರೋಹಾದ ಬ್ಯಾಂಕ್ವೆಟ್ ಹಾಲ್ ಒಂದರಲ್ಲಿ ಮದುವೆ … Continued

1 ಬಿಲಿಯನ್ ಡಾಲರ್ ಕೊಡಿ, ಟರ್ಕಿ ಸುಂದರಿ ಜೊತೆ ನನಗೆ ಮದುವೆ ಮಾಡಿ : ಟರ್ಕಿಗೆ ಉಗಾಂಡಾ ಸೇನಾಪತಿಯ ವಿಚಿತ್ರ ಷರತ್ತು…!

ಕಂಪಾಲ: ಉಗಾಂಡಾದ ಅಧ್ಯಕ್ಷ ಯೋವೇರಿ ಮುಸೆವೆನಿ ಅವರ ಪುತ್ರ ಹಾಗೂ ದೇಶದ ಸೇನಾ ಮುಖ್ಯಸ್ಥ (Chief of Defence Forces) ಮುಹೂಜಿ ಕೈನೆರುಗಾಬಾ ಅವರು ಟರ್ಕಿ ದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಅತ್ಯಂತ ವಿಲಕ್ಷಣ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಟರ್ಕಿ ಸರ್ಕಾರವು ಉಗಾಂಡಾಗೆ 1 ಬಿಲಿಯನ್ ಡಾಲರ್ (ಸುಮಾರು 8,300 ಕೋಟಿ ರೂ.) ಪರಿಹಾರ ನೀಡಬೇಕು ಮತ್ತು … Continued