ವಿಚಿತ್ರ ಮದುವೆ…: ಹೆಂಡತಿಯನ್ನು ಕೈಬಿಟ್ಟು ಅತ್ತೆಯನ್ನೇ ವರಿಸಿದ ಅಳಿಯ ! ವಿಲಕ್ಷಣ ಮದುವೆಯ ವಿಡಿಯೋ ವೈರಲ್

ಉತ್ತರ ಪ್ರದೇಶದ ಕಾನ್ಪುರ ದೇಹತ್‌ನಿಂದ ಇತ್ತೀಚೆಗೆ ವರದಿಯಾಗಿರುವ ಅತ್ಯಂತ ವಿಲಕ್ಷಣ ಹಾಗೂ ಅಚ್ಚರಿಯ ವಿವಾದವೊಂದು ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣ ಸೃಷ್ಟಿಸಿದೆ. ಪ್ರೀತಿ, ಸಂಬಂಧಗಳ ಎಲ್ಲ ಕಲ್ಪನೆಗಳನ್ನೂ ಮೀರಿ ನಿಂತಿರುವ ಈ ಘಟನೆಯಲ್ಲಿ, ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೈಬಿಟ್ಟು ಸ್ವತಃ ತನ್ನ ಅತ್ತೆಯನ್ನೇ ವಿವಾಹವಾಗಿದ್ದಾನೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಈ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯ ಅಕ್ಬರಪುರ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಯುವಕನೊಬ್ಬ ತನ್ನ ಪತ್ನಿಯೊಂದಿಗಿನ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಇಟ್ಟು, ತನ್ನ ತಾಯಿಯ ಸಮಾನವಾದ ಅತ್ತೆಯ ಜೊತೆ ನ್ಯಾಯಾಲಯದಲ್ಲಿ (ಕೋರ್ಟ್ ಮ್ಯಾರೇಜ್) ವಿವಾಹವಾಗಿದ್ದಾನೆ ಎನ್ನಲಾಗಿದೆ. ಈ ಮದುವೆಯ ಹಿಂದಿನ ಸಂಪೂರ್ಣ ವಿವರಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಿಲ್ಲದಿದ್ದರೂ, ಸದ್ಯ ಹರಿದಾಡುತ್ತಿರುವ ಈ ಸುದ್ದಿ ಇಂಟರ್ನೆಟ್‌ನಲ್ಲಿ ತೀವ್ರ ಸಂಚಲನ ಮೂಡಿಸಿದೆ. ನೆಟ್ಟಿಗರು ಈ ವಿಷಯವನ್ನು ಕೇಳಿ ಆಘಾತ, ಆಶ್ಚರ್ಯ ಹಾಗೂ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಈ ವಿಲಕ್ಷಣ ಮದುವೆಯ ವಿವಾದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ, ಈ ದಂಪತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್ ಆಗಿರುವ ಈ ವಿಡಿಯೋ ಕ್ಲಿಪ್‌ನಲ್ಲಿ, ಅತ್ತೆ ಮತ್ತು ಅಳಿಯ (ವಿಡಿಯೋ ಪ್ರಕಾರ ಪತಿ-ಪತ್ನಿ) ತಮ್ಮ ಮದುವೆ ಪ್ರಮಾಣಪತ್ರವನ್ನು ಕೈಯಲ್ಲಿ ಹಿಡಿದುಕೊಂಡು ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಈ ವಿಚಿತ್ರ ಸಂಬಂಧವನ್ನು ಸಮಾಜ ಮುಕ್ತವಾಗಿ ಒಪ್ಪಿಕೊಳ್ಳಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ ಹಾಗೂ ಸಾರ್ವಜನಿಕರಿಂದ ಆಶೀರ್ವಾದವನ್ನೂ ಕೋರಿದ್ದಾರೆ.
ಮಗಳ ಮದುವೆಯಾದ ನಂತರ ಅತ್ತೆ ಮತ್ತು ಅಳಿಯನ ನಡುವೆ ಅನ್ಯೋನ್ಯತೆ ಬೆಳೆದಿತ್ತು, ಅದು ದಿನಕಳೆದಂತೆ ಪ್ರೀತಿಯಾಗಿ ಬದಲಾಗಿ ಈ ನಿರ್ಧಾರಕ್ಕೆ ಕಾರಣವಾಗಿದೆ ಎಂದು ವರದಿಗಳು ಹೇಳುತ್ತಿವೆ.

ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿದ್ದರೂ, ಈ ದಂಪತಿಯ ವಿರುದ್ಧ ಇದುವರೆಗೆ ಯಾವುದೇ ಅಧಿಕೃತ ಪೊಲೀಸ್ ದೂರು ದಾಖಲಾಗಿಲ್ಲ. ಹಾಗೆಯೇ, ಅಧಿಕಾರಿಗಳು ಕೂಡ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ಕ್ರಮವನ್ನು ಪ್ರಕಟಿಸಿಲ್ಲ.
ಈ ಅಸಹಜ ಮುದವೆ ಬಗ್ಗೆ ತೀವ್ರ ಆಕ್ರೋಶ ಹಾಗೂ ಟೀಕೆಗಳೂ ವ್ಯಕ್ತವಾಗುತ್ತಿವೆ. ಸಮಾಜದ ನೈತಿಕತೆಯನ್ನು ಪ್ರಶ್ನಿಸಿರುವ ಮಹಿಳೆಯೊಬ್ಬರು, “ಪುರುಷರು ಯಾವಾಗಲೂ ಹೀಗೆಯೇ. ಆದರೆ ವಿಕೃತ ಮನಸ್ಸಿನ ಆ ಮಹಿಳೆಯ ಬಗ್ಗೆ ಏನು ಹೇಳುವುದು? ಸ್ವತಃ ಹೆತ್ತ ತಾಯಿಯೇ ತನ್ನ ಮಗಳ ಜೀವನವನ್ನು ಇಷ್ಟು ಕ್ರೂರವಾಗಿ ಹೇಗೆ ತಾನೇ ಹಾಳುಮಾಡಲು ಸಾಧ್ಯ?” ಎಂದು ಆಕ್ರೋಶದಿಂದ ಪ್ರಶ್ನಿಸಿದ್ದಾರೆ.
ಒಟ್ಟಾರೆಯಾಗಿ, ಸಂಬಂಧಗಳ ಪಾವಿತ್ರ್ಯತೆಯನ್ನೇ ಪ್ರಶ್ನಿಸುವಂತೆ ಮಾಡಿರುವ ಈ ವಿಲಕ್ಷಣ ಪ್ರೇಮಕಥೆ ಸದ್ಯ ದೇಶಾದ್ಯಂತ ಭಾರಿ ಸಂಚಲನಕ್ಕೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ವಿಡಿಯೋ | ಕಾರವಾರದಿಂದ ಹೊರಟಿದ್ದ ತೈಲ ಸಾಗಣೆ ಹಡಗಿಗೆ ಒಮಾನ್‌ ಕರಾವಳಿಯಲ್ಲಿ ಹೊತ್ತಿಕೊಂಡ ಬೆಂಕಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement