ಕಾಶಿ ವಿಶ್ವನಾಥ ದೇವಾಲಯದಲ್ಲಿ ಪೊಲೀಸರಿಗೆ ನೂತನ ವಸ್ತ್ರಸಂಹಿತೆ : ಅರ್ಚಕರ ತರಹದ ಸಮವಸ್ತ್ರ…! ಅಖಿಲೇಶ ಯಾದವ್ ಆಕ್ಷೇಪ

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥ ಧಾಮ ಸಂಕೀರ್ಣದಲ್ಲಿ ನಿಯೋಜನೆಗೊಂಡಿರುವ ಪೊಲೀಸರು ಇನ್ನು ಮುಂದೆ ಧೋತಿ-ಕುರ್ತಾ ಧರಿಸಿ ʼಭಕ್ತ ಸ್ನೇಹಿʼ ವಾತಾವರಣ ಮೂಡಿಸಲಿದ್ದಾರೆ. ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿ, ಹಣೆಯಲ್ಲಿ ತಿಲಕ ಅಥವಾ ವಿಭೂತಿ ಹಚ್ಚಿಕೊಂಡು, ಕಿತ್ತಳೆ ಬಣ್ಣದ ವಸ್ತ ಧರಿಸಿಕೊಂಡು ಥೇಟ್‌ ಅರ್ಚಕರಂತೆ ಇವರು ಕಾಶಿ ವಿಶ್ವನಾಥ ದೇಗುಲದ ಗರ್ಭಗುಡಿಯಲ್ಲಿ ಉತ್ತರಪ್ರದೇಶದ ಪೊಲೀಸ್‌ … Continued

ಸ್ಮಶಾನದಿಂದ ಹೊರಬಂದ ಎರಡು ದೆವ್ವಗಳಿಂದ ಜಮೀನು ಮಾರಾಟದ ವ್ಯವಹಾರ..! ಅಸಲಿ ವಿಷಯ ತಿಳಿದರೆ….

ಬಲ್ಲಿಯಾ: ನೀವು ದೆವ್ವಗಳ ಅನೇಕ ಕಥೆಗಳನ್ನು ಕೇಳಿರಬಹುದು. ಆದರೆ ಇದು ಅದ್ಭುತ ಮತ್ತು ವಿಚಿತ್ರ ದೆವ್ವಗಳ ಕಥೆ. ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಮರಣದ ನಂತರವೂ ಭೂಮಿ ಮಾರಾಟದ ವ್ಯವಹಾರ ಮಾಡುತ್ತಿದ್ದ ಕಥೆ…! ಬಲ್ಲಿಯಾದ ರಾಸ್ರಾ ಪ್ರದೇಶದ ನಿವಾಸಿ ಅಜಿಮುದ್ದೀನ್ 1961 ರಲ್ಲಿ ನಿಧನರಾಗಿದ್ದರು. ಶೋಯೆಬ್ ಎಂಬವರು 2019 ರಲ್ಲಿ ನಿಧನರಾದರು. ಆ … Continued

ಎಂಥಾ ಲೋಕವಯ್ಯ…! ಪತಿಯನ್ನು ಕೊಂದವರಿಗೆ ₹ 50 ಸಾವಿರ ಬಹುಮಾನ ನೀಡುವೆ : ವಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿಕೊಂಡ ಮಹಿಳೆ…!

ಲಕ್ನೋ: ಪತಿಯನ್ನು ಕೊಲೆ ಮಾಡಿದವರಿಗೆ ₹50 ಸಾವಿರ ನಗದು ಬಹುಮಾನ ನೀಡಲಾಗುವುದು’ ಎಂದು ಮಹಿಳೆಯೊ‌ಬ್ಬರು ತಮ್ಮ ವಾಟ್ಸ್‌ಆಪ್‌ ಖಾತೆಯಲ್ಲಿ ಸ್ಟೇಟಸ್‌ ಹಾಕಿಕೊಂಡಿದ್ದಾರೆ. ಉತ್ತರ ಪ್ರದೇಶದ ಆಗ್ರಾದ ಬಹ್ ಜಿಲ್ಲೆಯ ದಂಪತಿ ನಡುವಿನ ಭಿನ್ನಾಭಿಪ್ರಾಯ ಎಷ್ಟು ತೀವ್ರವಾಗಿದೆಯೆಂದರೆ, ಪತಿ ಹತ್ಯೆಗೆ ಪತ್ನಿ ₹ 50,000 ಬಹುಮಾನ ಘೋಷಿಸಿದ್ದಾರೆ. ಆಕೆ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಈ ಆಫರ್ ನೀಡಿದ್ದಾಳೆ…!! … Continued

ಪಕ್ಕದ ಮನೆಗೆ ಹೋಗಿ ಚಹಾ ಕೇಳಿದ ನಂತರ ರೇಜರ್‌ ನಿಂದ ಇಬ್ಬರು ಮಕ್ಕಳ ಕತ್ತು ಸೀಳಿ ಕೊಂದ ಕ್ಷೌರಿಕ : ನಂತರ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವು

ಲಕ್ನೋ: ಉತ್ತರ ಪ್ರದೇಶದ ಬದೌನ್‌ನಲ್ಲಿ ಕ್ಷೌರಿಕನೊಬ್ಬ ಪಕ್ಕದಲ್ಲಿ ವಾಸಿಸುತ್ತಿದ್ದ ಇಬ್ಬರು ಮಕ್ಕಳನ್ನು ಕೊಂದು ಮತ್ತೊಬ್ಬನನ್ನು ತೀವ್ರವಾಗಿ ಗಾಯಗೊಳಿಸಿದ ಘಟನೆ ಮಂಗಳವಾರ ನಡೆದಿದೆ. ನಂತರ ಕ್ಷೌರಿಕ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಂಗಳವಾರ ಸಂಜೆ ನಡೆದ ಘಟನೆ ನಗರದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ವರದಿಯಾಗಿದೆ. ಆರೋಪಿಯನ್ನು ಸಾಜಿದ್ ಎಂದು … Continued

ಲೋಕಸಭೆ ಚುನಾವಣೆ : 6 ರಾಜ್ಯಗಳ ಗೃಹ ಕಾರ್ಯದರ್ಶಿಗಳು, ಪಶ್ಚಿಮ ಬಂಗಾಳದ ಪೊಲೀಸ್ ಮುಖ್ಯಸ್ಥರನ್ನು ವರ್ಗಾವಣೆ ಮಾಡಿದ ಚುನಾವಣಾ ಆಯೋಗ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಹಲವು ರಾಜ್ಯಗಳಲ್ಲಿ ಹಲವಾರು ಪ್ರಮುಖ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಭಾರತೀಯ ಚುನಾವಣಾ ಆಯೋಗ(ಇಸಿಐ) ಸೋಮವಾರ ಸೂಚನೆ ನೀಡಿದೆ. ಗುಜರಾತ್, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ ಆರು ರಾಜ್ಯಗಳ ಗೃಹ ಕಾರ್ಯದರ್ಶಿಗಳನ್ನು ವರ್ಗಾವಣೆ ಮಾಡಿ ಚುನಾವಣಾ ಆಯೋಗವು ಆದೇಶಿಸಿದೆ. ಹೆಚ್ಚುವರಿಯಾಗಿ, ಚುನಾವಣಾ ಸಮಿತಿಯು … Continued

ಅಯೋಧ್ಯೆಗೆ ಬರುವ ಯಾತ್ರಿಕರಿಗೆ ಉಚಿತ ಚಿಕಿತ್ಸೆ ನೀಡಲು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ : ಅಪೋಲೋ ಹಾಸ್ಪಿಟಲ್ಸ್ ಘೋಷಣೆ

ಅಯೋಧ್ಯೆ : ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಯಾತ್ರಾಸ್ಥಳದಲ್ಲಿ ಅತ್ಯಾಧುನಿಕ ಮಲ್ಟಿ-ಸ್ಪೆಷಾಲಿಟಿ ತುರ್ತು ವೈದ್ಯಕೀಯ ಕೇಂದ್ರ ಪ್ರಾರಂಭಿಸುವುದಾಗಿ ಘೋಷಿಸಿದೆ. ಕೇಂದ್ರದ ಸುಧಾರಿತ ಸೇವೆಗಳ ಕುರಿತು ಮಾತನಾಡಿದ ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ ಅಧ್ಯಕ್ಷ ಡಾ. ಪ್ರತಾಪ್ ಸಿ.ರೆಡ್ಡಿ ಈ ಮಲ್ಟಿ-ಸ್ಪೆಷಾಲಿಟಿ ತುರ್ತು ವೈದ್ಯಕೀಯ ಕೇಂದ್ರ(multi-specialty emergency medical centre)ದಲ್ಲಿ ಉತ್ತಮವಾದ ವಿಸ್ತೃತ ವೈದ್ಯಕೀಯ ಸೇವೆಗಳು … Continued

ಗೇಟ್‌ ಹಾಕಲು ಮರೆತಿದ್ದಕ್ಕೆ ಪಕ್ಕದ ಮನೆಯವನ ಕಿವಿ ಕಚ್ಚಿ ತುಂಡರಿಸಿ ನುಂಗಿದ ಮಹಿಳೆ…!

ಆಗ್ರಾ: ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರು ತಮ್ಮ ಪಕ್ಕದ ಮನೆಯಾತನ ಕಿವಿಯನ್ನು ಕಚ್ಚಿ ತುಂಡರಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದ ದೇವಿ ನಗರ ಪ್ರದೇಶದಲ್ಲಿ ಶನಿವಾರ ನಡೆದಿದೆ. ರಾಮವೀರ ಬಘೇಲ್ ಎಂಬ ವ್ಯಕ್ತಿ ಈ ಬಗ್ಗೆ ನ್ಯೂ ಆಗ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಾಧ್ಯವಾಗದಂತೆ ಕತ್ತರಿಸಿದ ಕಿವಿಯನ್ನು ನುಂಗಿದ್ದಾಳೆ ಎಂದು ಅವರು … Continued

ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಂದ ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

ಲಕ್ನೋ : ಉತ್ತರ ಪ್ರದೇಶದ ಜೌನ್‌ಪುರದ ಬೋಧಾಪುರ ಗ್ರಾಮದಲ್ಲಿ ಗುರುವಾರ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಭಾರತೀಯ ಜನತಾ ಪಕ್ಷದ ನಾಯಕ ಪ್ರಮೋದ ಯಾದವ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಬಿಜೆಪಿ ನಾಯಕನನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಆದರೆ ಅವರು ಮಾರ್ಗದ ಮಧ್ಯೆಯೇ ಮೃತಪಟ್ಟಿದ್ದಾರೆ ವೈದ್ಯರು ಪ್ರಕಟಿಸಿದರು. ಪ್ರಮೋದಯಾದವ್ ಅವರು 2012 … Continued

ಲೋಕಸಭೆ ಚುನಾವಣೆ : ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌-ಸಮಾಜವಾದಿ ಪಕ್ಷದ ಮಧ್ಯೆ ಸ್ಥಾನ ಹಂಚಿಕೆ ಅಂತಿಮ

ಲಕ್ನೋ : 2024ರ ಲೋಕಸಭೆ ಚುನಾವಣೆಗೆ ಅಖಿಲೇಶ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಬಹುತೇಕ ಅಂತಿಮವಾಗಿದ್ದು,ಈ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ರವಿದಾಸ್ ಮೆಹ್ರೋತ್ರಾ ಕಾಂಗ್ರೆಸ್ ಜೊತೆ ಮೈತ್ರಿಯನ್ನು ಖಚಿತಪಡಿಸಿದ್ದಾರೆ. ಈ ಬಗ್ಗೆ ವಿವರಗಳನ್ನು ಹಂಚಿಕೊಂಡ ಮೆಹ್ರೋತ್ರಾ ಅವರು, ಉತ್ತರ ಪ್ರದೇಶದಲ್ಲಿ ಸ್ಥಾನ ಹೊಂದಾಣಿಕೆಯಲ್ಲಿ ಸಮಾಜವಾದಿ ಪಕ್ಷ 63 … Continued

ಇಂಡಿಯಾ ಮೈತ್ರಿಕೂಟಕ್ಕೆ ಮತ್ತೊಂದು ಆಘಾತ : ಬಿಜೆಪಿ-ಆರ್‌ಎಲ್‌ಡಿ ಮೈತ್ರಿ ಅಂತಿಮ; ಉತ್ತರ ಪ್ರದೇಶದ ೨ ಲೋಕಸಭಾ ಕ್ಷೇತ್ರದಲ್ಲಿ ಆರ್‌ಎಲ್‌ಡಿ ಸ್ಪರ್ಧೆ-ಮೂಲಗಳು

ಲಕ್ನೋ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ರಾಷ್ಟ್ರೀಯ ಲೋಕದಳ (RLD) ಹೆಜ್ಜೆ ಹಾಕಲಿದೆ ಎಂದು ವರದಿಗಳು ತಿಳಿಸಿವೆ. ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಭಾಗವಾಗಲಿದ್ದು, ಭಾರತೀಯ ಜನತಾ ಪಕ್ಷವು (ಬಿಜೆಪಿ) ಆರ್‌ಎಲ್‌ಡಿಯೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ. 2+1 ಸೂತ್ರವನ್ನು ಎರಡೂ ಪಕ್ಷಗಳು ಒಪ್ಪಿಕೊಂಡಿವೆ ಎಂದು ವರದಿಗಳು ತಿಳಿಸಿವೆ. 2+1 ಸೂತ್ರ   ಉಭಯ ಪಕ್ಷಗಳು … Continued