ಜ್ಞಾನವಾಪಿಯಲ್ಲಿ ಪೂಜೆ ಸಲ್ಲಿಸಿದ ಸಿಎಂ ಯೋಗಿ ಆದಿತ್ಯನಾಥ

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಂಗಳವಾರ ಜ್ಞಾನವಾಪಿ ಆವರಣಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ವಾರಾಣಸಿಯ ನ್ಯಾಯಾಲಯವು ಹಿಂದೂ ಭಕ್ತರಿಗೆ ಜ್ಞಾನವಾಪಿ ಮಸೀದಿಯ ಮೊಹರು ಮಾಡಿದ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ಅನುಮತಿ ನೀಡಿದ ಕೆಲವು ದಿನಗಳ ನಂತರ ಆವರು ಆಗಮಿಸಿ ಅಲ್ಲಿ ಪೂಜೆ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ … Continued

ಇಂಡಿಯಾ ಮೈತ್ರಿಕೂಟಕ್ಕೆ ಮತ್ತೊಂದು ಆಘಾತ : ಬಿಜೆಪಿ-ಆರ್‌ಎಲ್‌ಡಿ ಮೈತ್ರಿ ಅಂತಿಮ; ಉತ್ತರ ಪ್ರದೇಶದ ೨ ಲೋಕಸಭಾ ಕ್ಷೇತ್ರದಲ್ಲಿ ಆರ್‌ಎಲ್‌ಡಿ ಸ್ಪರ್ಧೆ-ಮೂಲಗಳು

ಲಕ್ನೋ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ರಾಷ್ಟ್ರೀಯ ಲೋಕದಳ (RLD) ಹೆಜ್ಜೆ ಹಾಕಲಿದೆ ಎಂದು ವರದಿಗಳು ತಿಳಿಸಿವೆ. ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಭಾಗವಾಗಲಿದ್ದು, ಭಾರತೀಯ ಜನತಾ ಪಕ್ಷವು (ಬಿಜೆಪಿ) ಆರ್‌ಎಲ್‌ಡಿಯೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ. 2+1 ಸೂತ್ರವನ್ನು ಎರಡೂ ಪಕ್ಷಗಳು ಒಪ್ಪಿಕೊಂಡಿವೆ ಎಂದು ವರದಿಗಳು ತಿಳಿಸಿವೆ. 2+1 ಸೂತ್ರ   ಉಭಯ ಪಕ್ಷಗಳು … Continued

ಅಯೋಧ್ಯೆ ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ: ಇಬ್ಬರು ಆರೋಪಿಗಳ ಬಂಧನ

ನವದೆಹಲಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳಲಿರುವ ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಇಬ್ಬರನ್ನು ಬಂಧಿಸಿದೆ. ಎಸ್‌ಟಿಎಫ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) ಅಮಿತಾಬ್‌ ಯಶ ಮತ್ತು ದೇವೇಂದ್ರ ತಿವಾರಿ ಎಂಬ ವ್ಯಕ್ತಿಗೂ ಬಾಂಬ್ ಬೆದರಿಕೆಗಳನ್ನು ಕಳುಹಿಸಲಾಗಿದೆ. ಬಂಧಿತ ಆರೋಪಿಗಳಾದ ತಹರ್ ಸಿಂಗ್ … Continued

ತನ್ನದೇ ವಿಶ್ವ ದಾಖಲೆ ಮುರಿದ ಅಯೋಧ್ಯೆ : ದೀಪಾವಳಿ ಮುನ್ನಾದಿನ ಏಕಕಾಲದಲ್ಲಿ ಬೆಳಗಿದ 22 ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆ ದೀಪಗಳು

ಅಯೋಧ್ಯೆ: ದೀಪಾವಳಿ ಆಚರಣೆಯ ಅಂಗವಾಗಿ 22,23, 000 ದೀಪಗಳನ್ನು (ಮಣ್ಣಿನ ಹಣಣೆ ದೀಪಗಳು) ಬೆಳಗಿಸಿದ ನಂತರ ಅಯೋಧ್ಯೆಯಲ್ಲಿ ದೀಪಾಳಿಯ ದೀಪೋತ್ಸವವು ಮತ್ತೊಮ್ಮೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ವಿಶ್ವದಾಖಲೆ ಮಾಡಿದೆ. ದೀಪೋತ್ಸವದ ಸಮಯದಲ್ಲಿ, ರಾಮ್ ಕಿ ಪೈರಿಯಲ್ಲಿ 24 ಲಕ್ಷ ‘ದಿಯಾಗಳು’ (ಮಣ್ಣಿನ ದೀಪಗಳು) ಬೆಳಗಿವೆ. ಒಂದೇ ಸ್ಥಳದಲ್ಲಿ ಏಕಕಾಲದಲ್ಲಿ ಅಭೂತಪೂರ್ವ ಸಂಖ್ಯೆಯ ದೀಪಗಳನ್ನು ಬೆಳಗಿಸುವ … Continued

ನೋಂದಣಿಯಾಗದ ಮದರಸಾಗಳು ದಿನಕ್ಕೆ ₹10 ಸಾವಿರ ದಂಡ ಪಾವತಿಸಬೇಕು : ಉತ್ತರಪ್ರದೇಶ ಶಿಕ್ಷಣ ಇಲಾಖೆ

ಮುಜಾಫರ್‌ನಗರ : ನೋಂದಣಿಯಾಗದೆ ಕಾರ್ಯನಿರ್ವಹಿಸುತ್ತಿರುವ ಮದರಸಾಗಳಿಗೆ ದಿನಕ್ಕೆ ₹10 ಸಾವಿರ ದಂಡ ವಿಧಿಸಲಾಗುವುದು ಎಂದು ಉತ್ತರಪ್ರದೇಶದ ಶಿಕ್ಷಣ ಇಲಾಖೆ ಹೇಳಿದೆ. ದಾಖಲೆಗಳಿಲ್ಲದೆ ಮುಜಾಫರ್‌ನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸಾಗಳಿಗೆ ಪ್ರಾಥಮಿಕ ಶಿಕ್ಷಣ ಇಲಾಖೆ ನೋಟಿಸ್‌ ಜಾರಿ ಮಾಡಿದ್ದು, ನೋಟಿಸ್‌ ತಲುಪಿದ ಮೂರು ದಿನಗಳೊಳಗೆ ಸರಿಯಾದ ದಾಖಲೆಗಳನ್ನು ಸಲ್ಲಿಸಬೇಕು ಇಲ್ಲವೇ ಕ್ರಮ ಎದುರಿಸಬೇಕು ‘ ಎಂದು ಸೂಚನೆ ನೀಡಲಾಗಿದೆ. … Continued

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥಗೆ ಕೊರೊನಾ ಸೋಂಕು

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರು ಕ್ವಾರಂಟೈನ್‌ ಆಗಿದ್ದೇನೆ ಎಂದು ಬುಧವಾರ ಮಧ್ಯಾಹ್ನ ಟ್ವೀಟ್ ಮಾಡಿದ್ದಾರೆ. ಅವರ ಕಚೇರಿಯ ಕೆಲವು ಅಧಿಕಾರಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಕ್ವಾರಂಟೈನ್‌ಗೆ ಒಳಗಾಗಿ ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ. ರಾಜ್ಯ ಸರ್ಕಾರದ ಎಲ್ಲಾ ಚಟುವಟಿಕೆಗಳನ್ನು ಸಾಮಾನ್ಯವಾಗಿ … Continued

ಬಲವಂತದ ಮತಾಂತರ ಕಾನೂನು ಜಾರಿಗೊಳಿಸಿದ ಎಲ್‌ಡಿಎಫ್‌, ಯುಡಿಎಫ್‌ ಸರಕಾರಗಳು: ಯೋಗಿ ಆದಿತ್ಯನಾಥ ಖಂಡನೆ

ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ಜಾರಿಗೊಳಿಸದ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಹಾಗೂ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಸರಕಾರಗಳನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಖಂಡಿಸಿದ್ದಾರೆ. ಅವರು ಕೇರಳದ ಆಲಪ್ಪುಳ ಜಿಲ್ಲೆಯ ಹರಿಪಾಡ್‌ನಲ್ಲಿ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿ, ಎಲ್‌ಡಿಎಫ್‌ ಹಾಗೂ ಯುಡಿಎಫ್‌ ಸರಕಾರಗಳು ಬಲವಂತದ ಮತಾಂತರ ತಡೆಗೆ ಕಾನೂನು ಜಾರಿ ಮಾಡುವಲ್ಲಿ ವಿಫಲವಾಗಿವೆ … Continued

ದೀದಿ ಭೀತಿಯಿಂದ ಯೋಗಿ ಜೀವನಚರಿತ್ರೆ ಪ್ರಕಾಶನಕ್ಕೆ ಮುಂದಾಗದ ಪಶ್ಚಿಮ ಬಂಗಾಳ ಪ್ರಕಾಶಕರು

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಅವರ ಜೀವನಚರಿತ್ರೆ “ದಿ ಮಾಂಕ್‌ ಹೂ ಬಿಕಮ್‌ ಚೀಫ್‌ ಮಿನಿಸ್ಟರ್‌ʼ ಕೃತಿಯ ಬಂಗಾಳಿ ಆವೃತ್ತಿ ಪ್ರಕಟಿಸಲು ಪಶ್ಚಿಮ ಬಂಗಾಳದ ಪ್ರಕಾಶಕರು ಮುಂದಾಗದಿರಲು ಮಮತಾ ಬ್ಯಾನರ್ಜಿ ಅವರ ಭೀತಿಯೇ ಕಾರಣ ಎಂದು ಕೃತಿಯ ಲೇಖಕ ಶಾಂತನು ಗುಪ್ತಾ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಆಡಳಿತದ ಭಯದಿಂದಾಗಿ ಪಶ್ಚಿಮ ಬಂಗಾಳದ ಪ್ರಕಾಶನ ಸಂಸ್ಥೆಗಳು … Continued

ಜೈ ಶ್ರೀರಾಮ್ ಉತ್ತರ ಪ್ರದೇಶ, ಬಂಗಾಳದಲ್ಲಷ್ಟೇ ಅಲ್ಲ ಭಾರತದಾದ್ಯಂತ ಕೆಲಸ ಮಾಡುತ್ತದೆ: ಯೋಗಿ ಆದಿತ್ಯನಾಥ್

“ಜೈ ಶ್ರೀ ರಾಮ್ ಉತ್ತರ ಪ್ರದೇಶ ಮೇ ಭೀ ಚಾಲೆಗಾ, ಬಂಗಾಳ ಮೇ ಭೀ ಚಲೆಗಾ, ಪೂರೇ ದೇಶ್ ಮೇ ಭೀ ಚಲೆಗಾ (ಜೈ ಶ್ರೀ ರಾಮ್ ಉತ್ತರ ಪ್ರದೇಶ, ಬಂಗಾಳ ಮತ್ತು ಭಾರತದಾದ್ಯಂತ ಕೆಲಸ ಮಾಡುತ್ತದೆ)” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಸುದ್ದಿ ಚಾನೆಲ್ ನ್ಯೂಸ್ ನೇಷನ್ ಆಯೋಜಿಸಿದ್ದ ಉತ್ತರ … Continued