ಆನ್‌ಲೈನ್ ಗೇಮಿಂಗ್‌ ಹುಚ್ಚಿಗೆ ಆಕ್ಷೇಪ ; 9ನೇ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡ ಮೂವರು ಸಹೋದರಿಯರು..!

ಘಾಜಿಯಾಬಾದ್: “ಮಮ್ಮಿ, ಪಪ್ಪಾ, ಕ್ಷಮಿಸಿ” — ಇವು ಮಂಗಳವಾರ ತಡರಾತ್ರಿ ಘಾಜಿಯಾಬಾದ್‌ನ ತಮ್ಮ ವಸತಿ ಕಟ್ಟಡದ ಒಂಬತ್ತನೇ ಮಹಡಿಯಿಂದ ಜಿಗಿದು ಸಾವಿಗೀಡಾದ ಮೂವರು ಸಹೋದರಿಯರು ಬರೆದಿಟ್ಟ ಕೊನೆಯ ಮಾತುಗಳು. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಮೂವರು ಅಪ್ರಾಪ್ತ ಸಹೋದರಿಯರು ಅತಿಯಾದ ಆನ್‌ಲೈನ್ ಗೇಮಿಂಗ್ ಗೀಳಿಗೆ ಬಿದ್ದಿದ್ದಕ್ಕೆ ಪೋಷಕರ ಆಕ್ಷೇಪಿಸಿದ್ದಕ್ಕೆ ತಮ್ಮ ಅಪಾರ್ಟ್‌ಮೆಂಟ್ ಕಟ್ಟಡದ ಒಂಬತ್ತನೇ ಮಹಡಿಯಿಂದ ಹಾರಿ … Continued

ವೀಡಿಯೊ..| ಟೋಲ್ ಬೂತ್ ಬಳಿ ಕಾರುಗಳಿಗೆ ಡಿಕ್ಕಿ ಹೊಡೆದ ನಂತರ ನೌಕರನನ್ನು 50 ಮೀಟರ್ ಎಳೆದೊಯ್ದ ಟ್ರಕ್…

ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಅತಿವೇಗವಾಗಿ ಬಂದ ಟ್ರಕ್ ಒಂದು ಟೋಲ್ ಪ್ಲಾಜಾದಲ್ಲಿ ನಿಂತಿದ್ದ ಎರಡು ಕಾರುಗಳಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಈ ಭೀಕರ ಘಟನೆಯಲ್ಲಿ ಟೋಲ್ ಸಿಬ್ಬಂದಿ ಹಾಗೂ ಕಾರಿನಲ್ಲಿದ್ದ ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶನಿವಾರ ಮಧ್ಯಾಹ್ನ ಸುಮಾರು 2:00 ಗಂಟೆಗೆ ಕಾನ್ಪುರ ಹೆದ್ದಾರಿಯ ಸೆಮ್ರಿ ಟೋಲ್ ಪ್ಲಾಜಾದಲ್ಲಿ ಈ ಅಪಘಾತ ಸಂಭವಿಸಿದೆ. … Continued

ಇದು ಪವಾಡವೇ…? : ಹನುಮಂತನ ಮೂರ್ತಿಗೆ 36 ತಾಸುಗಳ ಕಾಲ ಪ್ರದಕ್ಷಿಣೆ ಹಾಕಿದ ನಾಯಿ ; ವೀಡಿಯೊ ವೈರಲ್‌…!

ಬಿಜ್ನೋರ್ : ನಂಬಿಕೆ ಮತ್ತು ವಿಜ್ಞಾನದ ನಡುವಿನ ಚರ್ಚೆಗೆ ವೇದಿಕೆಯೊದಗಿಸುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಗಿನಾ ಎಂಬಲ್ಲಿ ನಡೆದಿದೆ. ಇಲ್ಲಿನ ಹನುಮಂತನ ಮೂರ್ತಿಯೊಂದರ ಸುತ್ತ ನಾಯಿಯೊಂದು ಸತತ 36 ಗಂಟೆಗಳ ಕಾಲ ಪ್ರದಕ್ಷಿಣೆ ಹಾಕಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸ್ಥಳೀಯರ ಪ್ರಕಾರ, ಈ ನಾಯಿಯು ದಣಿವಿಲ್ಲದೆ … Continued

ತಂದೆ-ಮಗಳ ಕೂಡಿ ಹಾಕಿ 5 ವರ್ಷ ಚಿತ್ರ ಹಿಂಸೆ ನೀಡಿದ ಮನೆಗೆಲಸದವರು ; ತಂದೆ ಸಾವು, ಹಸಿವಿನಿಂದ ಅಸ್ತಿಪಂಜರದಂತಾದ ಮಗಳ ದೇಹ..!

ಮಹೋಬ (ಉತ್ತರ ಪ್ರದೇಶ): ಮನೆಯಲ್ಲಿ ಕೆಲಸಕ್ಕಿದ್ದವರೇ ಮನೆಯ ಯಜಮಾನ ಹಾಗೂ ಅವರ ಮಗಳನ್ನು ಐದು ವರ್ಷಗಳ ಕಾಲ ಕೋಣೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿದ ದಾರುಣ ಘಟನೆಯೊಂದು ಉತ್ತರ ಪ್ರದೇಶದ ಮಹೋಬ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ…! ಆರೋಪಿಗಳ ಕ್ರೌರ್ಯಕ್ಕೆ ವೃದ್ಧ ತಂದೆ ಸಾವಿಗೀಡಾಗಿದ್ದು, ಮಾನಸಿಕ ಅಸ್ವಸ್ಥ ಮಗಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮೃತ ವ್ಯಕ್ತಿಯನ್ನು ನಿವೃತ್ತ … Continued

ಮೈ ಜುಂ ಎನ್ನುವ ವೀಡಿಯೊ..| ಅರಣ್ಯ ಸಿಬ್ಬಂದಿ ಮೇಲೆ ಕಾಡುಹಂದಿ ಭೀಕರ ದಾಳಿ ; ಗಂಭೀರ ಗಾಯ

ಬದೌನ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಸಿರ್ಸೌಲಿ ಗ್ರಾಮದಲ್ಲಿ ಕಾಡುಹಂದಿಯೊಂದನ್ನು ಹಿಡಿಯಲು ಹೋದ ಅರಣ್ಯ ಇಲಾಖೆಯ ತಂಡದ ಮೇಲೆ ಹಂದಿ ದಿಢೀರ್ ದಾಳಿ ನಡೆಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬದೌನ್ ಜಿಲ್ಲೆಯ ಉಝಾನಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿರ್ಸೌಲಿ ಗ್ರಾಮದ ಕೃಷಿ ಜಮೀನುಗಳಲ್ಲಿ ಕಳೆದ ಕೆಲವು ದಿನಗಳಿಂದ ಕಾಡುಹಂದಿಯೊಂದು ಸುತ್ತಾಡುತ್ತಿದ್ದು, … Continued

ಯೂಟ್ಯೂಬ್ ನೋಡಿ ನಕಲಿ ವೈದ್ಯನಿಂದ ಶಸ್ತ್ರಚಿಕಿತ್ಸೆ : ಮಹಿಳೆ ಸಾವು

ಬಾರಾಬಂಕಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಯೂಟ್ಯೂಬ್ ವೀಡಿಯೊ ನೋಡಿ ಕಾನೂನು ಬಾಹಿರ ಕ್ಲಿನಿಕ್‌ನ ಮಾಲೀಕ ಮತ್ತು ಆತನ ಸೋದರಳಿಯ ನಡೆಸಿದ ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಕ್ಲಿನಿಕ್‌ನವರು ಯಾವುದೇ ಮಾನ್ಯತೆ ಇಲ್ಲದೆ ಅದನ್ನು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತೇಹಬಹದ್ದೂರ ರಾವತ್ ಅವರ ಪತ್ನಿ ಮುನಿಶ್ರ ರಾವತ್ ಅವರು … Continued

ವೀಡಿಯೊ…| ಕೇವಲ ₹ 25,000 ವೆಚ್ಚದಲ್ಲಿ AI ರೋಬೋಟ್ ಶಿಕ್ಷಕಿ ತಯಾರಿಸಿದ 17 ವರ್ಷದ ವಿದ್ಯಾರ್ಥಿ….!

ಉತ್ತರ ಪ್ರದೇಶದ ಬುಲಂದ್‌ಶಹರ್‌ನ 17 ವರ್ಷದ ವಿದ್ಯಾರ್ಥಿಯೊಬ್ಬ ಎಐ (AI) ರೋಬೋಟ್ ಶಿಕ್ಷಕರೊಬ್ಬರನ್ನು ಅಭಿವೃದ್ಧಿಪಡಿಸುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾನೆ ಶಿವ ಚರಣ ಇಂಟರ್ ಕಾಲೇಜಿನ 12ನೇ ತರಗತಿಯ ವಿದ್ಯಾರ್ಥಿ ಆದಿತ್ಯಕುಮಾರ ಎಂಬ ವಿದ್ಯಾರ್ಥಿ ಕೇವಲ ₹ 25,000 ವೆಚ್ಚದಲ್ಲಿ ಈ AI ರೋಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾನೆ. ಇದು ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಬಗ್ಗೆ ಬೋಧನೆ … Continued

ಸಹೋದರನ ಕೊಲೆ ಮಾಡಿ ಧರ್ಮ, ಹೆಸರು ಬದಲಿಸಿಕೊಂಡು 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧಿ ಕೊನೆಗೂ ಅಂದರ್…!

ಬರೇಲಿ (ಉತ್ತರ ಪ್ರದೇಶ): ಕಾಲ ಮತ್ತು ದಾಖಲೆಗಳಿಗೆ ಒಂದು ಸಾಮ್ಯತೆ ಇದೆ – ಅವು ಏನನ್ನೂ ಮರೆಯುವುದಿಲ್ಲ. ಉತ್ತರ ಪ್ರದೇಶದ ಬರೇಲಿಯ ಪ್ರದೀಪ ಸಕ್ಸೇನಾ ಎಂಬಾತ ತನ್ನ ಸಹೋದರನ ಕೊಲೆಗಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ 36 ವರ್ಷಗಳ ಹಿಂದೆ ಪೊಲೀಸ್ ಬಲೆಯಿಂದ ತಪ್ಪಿಸಿಕೊಂಡಿದ್ದ. ಪೊಲೀಸರಿಂದ ಪಾರಾಗಲು ತನ್ನ ಧರ್ಮ, ಹೆಸರು ಮತ್ತು ರೂಪವನ್ನು ಬದಲಾಯಿಸಿಕೊಂಡರೂ, 36 … Continued

ಸ್ಕೂಟರ್ ಬೆಲೆ 1 ಲಕ್ಷ ರೂ…..ಹೆಲ್ಮೆಟ್ ಧರಿಸದ ಕಾರಣಕ್ಕೆ ಸವಾರನಿಗೆ ಬಿತ್ತು 21 ಲಕ್ಷ ರೂ. ದಂಡ…! ಆಗಿದ್ದೇನು..?

ಮುಜಫ್ಫರನಗರ : ಉತ್ತರ ಪ್ರದೇಶದ ಮುಜಫ್ಫರನಗರ ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸದ ಸ್ಕೂಟರ್ ಸವಾರನಿಗೆ ಬರೊಬ್ಬರಿ ₹21 ಲಕ್ಷ ಸಂಚಾರ ದಂಡ ವಿಧಿಸಲಾಗಿದ್ದು, ಇದು ಆತನ ವಾಹನದ ಮೌಲ್ಯಕ್ಕಿಂತ 20 ಪಟ್ಟು ಹೆಚ್ಚಾಗಿದೆ.. ಈ ವಿಚಿತ್ರ ಘಟನೆ ಈಗ ಭಾರೀ ಸುದ್ದಿಯಲ್ಲಿದೆ. ಚಲನ್‌ನ (ದಂಡದ ರಸೀದಿ) ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಸ್ಕೂಟರ್‌ ಸವಾರನಿಗೆ … Continued

ಯಾವುದೇ ಅಪರಾಧ ಮಾಡದಿದ್ರೂ 11 ವರ್ಷ ಜೈಲಿನಲ್ಲಿ ಕಳೆದ ರೈತ…!

ಮೀರತ್: ಬುಲಂದಶಹರದ 60 ವರ್ಷದ ರೈತ ಸಂಜಯಕುಮಾರ, ತಾವು ಮಾಡದ ಅಪರಾಧಕ್ಕಾಗಿ ನ್ಯಾಯಕ್ಕಾಗಿ ಕಾಯುತ್ತಾ 11 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಅವರಿಗೆ ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗದೆ ಅವರು 11 ವರ್ಷಗಳ ಜೈಲಿನಲ್ಲಿ ಕಳೆಯಬೇಕಾಯಿತು. ಈಗ ನ್ಯಾಯಾಲಯವು ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದೆ. ಬುಧವಾರ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (ADJ) ಮೊಹಮ್ಮದ್ ನಸೀಮ್ ಅವರ ನ್ಯಾಯಾಲಯವು ಸಂಜಯಕುಮಾರ … Continued