ಅಣ್ಣನ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ವ್ಯಕ್ತಿಯಿಂದ ಅತ್ತಿಗೆ, ಆಕೆಯ ಮೂವರು ಮಕ್ಕಳ ಹತ್ಯೆ…!

ಬಹ್ರೈಚ್‌: ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ತನ್ನ ಸಹೋದರನ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ವ್ಯಕ್ತಿ, ತನ್ನ ವಿಧವೆ ಅತ್ತಿಗೆ ಮತ್ತು ಆಕೆಯ ಮೂವರು ಹೆಣ್ಣು ಮಕ್ಕಳನ್ನು ನದಿಗೆ ತಳ್ಳಿ ಕೊಲೆ ಮಾಡಿದ ಆರೋಪದ ಮೇಲೆ ಮತ್ತೆ ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಆಸ್ತಿ ವಿವಾದದ ಹಿನ್ನೆಲೆಯಲ್ಲಿ 2018 ರಲ್ಲಿ ತನ್ನ ಅಣ್ಣ ಸಂತೋಷಕುಮಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹ್ರೈಚ್‌ನ ರಾಮೈಪೂರ್ವ ಗ್ರಾಮದ ನಿವಾಸಿ ಅನಿರುದ್ಧಕುಮಾರ ಎಂಬಾತನನ್ನು ಜೈಲಿಗೆ ಹಾಕಲಾಗಿತ್ತು ಎಂದು ಎಎಸ್ಪಿ(ಗ್ರಾಮೀಣ) ದುರ್ಗಾಪ್ರಸಾದ ತಿವಾರಿ ಅವರು ಹೇಳಿದ್ದಾರೆ.
ಕೊಲೆಯಾದ ಕೆಲವು ತಿಂಗಳ ನಂತರ ಜಾಮೀನು ಪಡೆದಿದ್ದ ಆರೋಪಿ ಅನಿರುದ್ಧ ತನ್ನ ಸಹೋದರನ ಪತ್ನಿ ಸುಮನ್(36) ಜೊತೆ ವಾಸಿಸಲು ಆರಂಭಿಸದ್ದ ಮತ್ತು ಆಕೆಯೊಂದಿಗೆ ಸಂಬಂಧ ಹೊಂದಿದ್ದ. ಅವರಿಗೆ ಆರು ವರ್ಷದ ಅಂಶಿಕಾ ಮತ್ತು ಮೂರು ವರ್ಷದ ಲಾಡೊ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಸುಮನ್‌ಗೆ ಸಂತೋಷ ಜೊತೆಗಿನ ಮದುವೆಯಿಂದ 12 ವರ್ಷದ ಮಗಳು ನಂದಿನಿ ಕೂಡ ಇದ್ದಳು. ಸುಮನ್ ತನ್ನ ಪತಿಯ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದರಿಂದ, ಅನಿರುದ್ಧ ತನ್ನ ವಿರುದ್ಧ ಸಾಕ್ಷಿ ಹೇಳದಂತೆ ಅವಳನ್ನು ಒತ್ತಾಯಿಸುತ್ತಿದ್ದ. ಆದರೆ ಇದಕ್ಕೆ ಸುಮನ್ ಒಪ್ಪಿರಲಿಲ್ಲ. ಹೀಗಾಗಿ ಸುಮನ್ ಇತ್ತೀಚೆಗೆ ತನ್ನ ಮೂವರು ಹೆಣ್ಣುಮಕ್ಕಳೊಂದಿಗೆ ತನ್ನ ತಾಯಿಯ ಮನೆಗೆ ಸ್ಥಳಾಂತರಗೊಂಡಿದ್ದರು.
ಆಗಸ್ಟ್ 19 ರಂದು, ಸುಮನ್ ತಾಯಿ ರಾಮಪಟ ಅವರು ತಮ್ಮ ಮಗಳು ಮತ್ತು ಮೂವರು ಮಕ್ಕಳು ಆಗಸ್ಟ್ 14 ರಿಂದ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಅನಿರುದ್ದ ಮತ್ತು ಅವರ ಸಹಚರರು, ನಾಲ್ವರನ್ನು ಅಪಹರಿಸಿದ್ದಾರೆ ಮತ್ತು ಅವರನ್ನು ಕೊಲ್ಲುವ ಉದ್ದೇಶದಿಂದ ಅಪಹರಿಸಿದ್ದಾರೆ ಎಂದು ಆರೋಪಿಸಿದ್ದರು.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಪ್ರಕರಣ ದಾಖಲಿಸಿಕೊಂಡು ಶೋಧ ನಡೆಸಿದ ಪೊಲೀಸರು ಮೋತಿಪುರ ಪ್ರದೇಶದ ಗೈಘಾಟ್ ಸೇತುವೆಯಲ್ಲಿ ಅನಿರುದ್ಧನನ್ನು ಬಂಧಿಸಿದರು. ವಿಚಾರಣೆಯ ಸಮಯದಲ್ಲಿ, ಅನಿರುದ್ಧ ತನ್ನ ಸಹಚರರ ಸಹಾಯದಿಂದ ಆಗಸ್ಟ್ 14 ರಂದು ಸುಮನ್ ಮತ್ತು ಮೂವರು ಹುಡುಗಿಯರನ್ನು ಮಿಹಿಪುರ್ವಾ ಪಟ್ಟಣಕ್ಕೆ ಕರೆದೊಯ್ದಿದ್ದಾಗಿ ಒಪ್ಪಿಕೊಂಡಿದ್ದಾನೆ. ನಂತರ ಅವರನ್ನು ಲಖಿಂಪುರ ಖೇರಿ ಜಿಲ್ಲೆಯ ಖಮ್ಹರಿಯಾ ಪ್ರದೇಶದ ಶಾರದಾ ನದಿಯ ಸೇತುವೆಗೆ ಕರೆದೊಯ್ದು ಸಹಚರನ ಸಹಾಯದಿಂದ ನದಿಗೆ ತಳ್ಳಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ಸುಮನ್ ಮತ್ತು ಹುಡುಗಿಯರ ಬಟ್ಟೆಗಳು, ಹುಡುಗಿಯರಲ್ಲಿ ಒಬ್ಬಳ ಬೂಟುಗಳು ಮತ್ತು ಅಪರಾಧಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ಸ್ಥಳದ ಸಮೀಪದ ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ ಎಂದು ಎಎಸ್ಪಿ ಹೇಳಿದ್ದಾರೆ. ಆದರೆ ಶವಗಳು ಇನ್ನೂ ಪತ್ತೆಯಾಗಿಲ್ಲ. ಅನಿರುದ್ಧ ಸಹಚರ ಪರಾರಿಯಾಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement