ತನ್ನದೇ ವಿಶ್ವ ದಾಖಲೆ ಮುರಿದ ಅಯೋಧ್ಯೆ : ದೀಪಾವಳಿ ಮುನ್ನಾದಿನ ಏಕಕಾಲದಲ್ಲಿ ಬೆಳಗಿದ 22 ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆ ದೀಪಗಳು

ಅಯೋಧ್ಯೆ: ದೀಪಾವಳಿ ಆಚರಣೆಯ ಅಂಗವಾಗಿ 22,23, 000 ದೀಪಗಳನ್ನು (ಮಣ್ಣಿನ ಹಣಣೆ ದೀಪಗಳು) ಬೆಳಗಿಸಿದ ನಂತರ ಅಯೋಧ್ಯೆಯಲ್ಲಿ ದೀಪಾಳಿಯ ದೀಪೋತ್ಸವವು ಮತ್ತೊಮ್ಮೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ವಿಶ್ವದಾಖಲೆ ಮಾಡಿದೆ. ದೀಪೋತ್ಸವದ ಸಮಯದಲ್ಲಿ, ರಾಮ್ ಕಿ ಪೈರಿಯಲ್ಲಿ 24 ಲಕ್ಷ ‘ದಿಯಾಗಳು’ (ಮಣ್ಣಿನ ದೀಪಗಳು) ಬೆಳಗಿವೆ. ಒಂದೇ ಸ್ಥಳದಲ್ಲಿ ಏಕಕಾಲದಲ್ಲಿ ಅಭೂತಪೂರ್ವ ಸಂಖ್ಯೆಯ ದೀಪಗಳನ್ನು ಬೆಳಗಿಸುವ … Continued

ನೋಂದಣಿಯಾಗದ ಮದರಸಾಗಳು ದಿನಕ್ಕೆ ₹10 ಸಾವಿರ ದಂಡ ಪಾವತಿಸಬೇಕು : ಉತ್ತರಪ್ರದೇಶ ಶಿಕ್ಷಣ ಇಲಾಖೆ

ಮುಜಾಫರ್‌ನಗರ : ನೋಂದಣಿಯಾಗದೆ ಕಾರ್ಯನಿರ್ವಹಿಸುತ್ತಿರುವ ಮದರಸಾಗಳಿಗೆ ದಿನಕ್ಕೆ ₹10 ಸಾವಿರ ದಂಡ ವಿಧಿಸಲಾಗುವುದು ಎಂದು ಉತ್ತರಪ್ರದೇಶದ ಶಿಕ್ಷಣ ಇಲಾಖೆ ಹೇಳಿದೆ. ದಾಖಲೆಗಳಿಲ್ಲದೆ ಮುಜಾಫರ್‌ನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸಾಗಳಿಗೆ ಪ್ರಾಥಮಿಕ ಶಿಕ್ಷಣ ಇಲಾಖೆ ನೋಟಿಸ್‌ ಜಾರಿ ಮಾಡಿದ್ದು, ನೋಟಿಸ್‌ ತಲುಪಿದ ಮೂರು ದಿನಗಳೊಳಗೆ ಸರಿಯಾದ ದಾಖಲೆಗಳನ್ನು ಸಲ್ಲಿಸಬೇಕು ಇಲ್ಲವೇ ಕ್ರಮ ಎದುರಿಸಬೇಕು ‘ ಎಂದು ಸೂಚನೆ ನೀಡಲಾಗಿದೆ. … Continued

ʼಜೈ ಶ್ರೀ ರಾಮ’ ಘೋಷಣೆ ಕೂಗಿದ ವಿದ್ಯಾರ್ಥಿಯನ್ನು ವೇದಿಕೆಯಿಂದ ಹೊರಹೋಗುವಂತೆ ಸೂಚಿಸಿದ ಇಬ್ಬರು ಅಧ್ಯಾಪಕರ ಅಮಾನತು | ವೀಡಿಯೊ

ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಕಾಲೇಜೊಂದರ ನೂತನ ವಿದ್ಯಾರ್ಥಿಗಳ ಪ್ರವೇಶ ಸಮಾರಂಭದಲ್ಲಿ ‘ಜೈ ಶ್ರೀರಾಮ’ ಎಂದು ವೇದಿಕೆಯಲ್ಲಿ ಹೇಳಿದ್ದ ವಿದ್ಯಾರ್ಥಿಯನ್ನು ಅಲ್ಲಿಂದ ನಿರ್ಗಮಿಸುವಂತೆ ಸೂಚಿಸಿದ ವಿವಾದದ ಪ್ರಕರಣದಲ್ಲಿ ಇಬ್ಬರು ಪ್ರಾಧ್ಯಾಪಕಿಯರನ್ನು ಅಮಾನತು ಮಾಡಲಾಗಿದೆ. ಎಬಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣದ ಸಂಬಂಧ ನೇಮಿಸಲಾಗಿದ್ದ, ತನಿಖಾ ಸಮಿತಿ ಸಲ್ಲಿಸಿದ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ … Continued

2019 ನಕಲಿ ಜನನ ಪ್ರಮಾಣಪತ್ರ ಪ್ರಕರಣ : ಆಜಂ ಖಾನ್, ಪತ್ನಿ, ಪುತ್ರನಿಗೆ 7 ವರ್ಷ ಜೈಲು ಶಿಕ್ಷೆ

ರಾಂಪುರ : 2019 ರ ನಕಲಿ ಜನನ ಪ್ರಮಾಣಪತ್ರ ಪ್ರಕರಣದಲ್ಲಿ ಉತ್ತರ ಪ್ರದೇಶದ ರಾಂಪುರದ ನ್ಯಾಯಾಲಯವು ಬುಧವಾರ (ಅಕ್ಟೋಬರ್ 18) ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಜಂ ಖಾನ್, ಅವರ ಪತ್ನಿ ತನ್ಜೀಮ್ ಫಾತಿಮಾ ಮತ್ತು ಮಗ ಅಬ್ದುಲ್ಲಾ ಅಜಮ್ ಖಾನ್ ಅವರನ್ನು ದೋಷಿಗಳೆಂದು ಘೋಷಿಸಿ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ನ್ಯಾಯಾಲಯದ ತೀರ್ಪಿನ … Continued

ಪ್ರೇಮಿ ವಿರುದ್ಧ ಅತ್ಯಾಚಾರ ಪ್ರಕರಣ : ಸಾಕ್ಷ್ಯ ಹೇಳಲು ನಿರಾಕರಿಸಿದ ಗರ್ಭಿಣಿ ಮಗಳನ್ನು ಸಾಯಿಸಿದ ಪೋಷಕರು

ಮುಜಫ್ಫರನಗರ: ತನ್ನ ಪ್ರೇಮಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ನಿರಾಕರಿಸಿದ ಕಾರಣಕ್ಕೆ ಎಂಟು ತಿಂಗಳ ಗರ್ಭಿಣಿಯನ್ನು ಆಕೆಯ ಪೋಷಕರೇ ಕತ್ತು ಹಿಸುಕಿ ಸಾಯಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಪ್ರೇಮಿಯ ವಿರುದ್ಧ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯ ಹೇಳಲು ಆಕೆ ನ್ಯಾಯಾಲಯಕ್ಕೆ ಹಾಜರಾಗುವ ಮುನ್ನ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು … Continued

ಭಗವಾನ್‌ ಶಿವನನ್ನು ಮೆಚ್ಚಿಸಲು ಮರ ಕಡಿಯುವ ಯಂತ್ರ ಬಳಸಿ ತಲೆಯನ್ನೇ ಕತ್ತರಿಸಿಕೊಂಡು ಅರ್ಪಿಸಲು ಮುಂದಾದ ಭಕ್ತ..!

ಲಕ್ನೋ: ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯಲ್ಲಿ 28 ವರ್ಷದ ವ್ಯಕ್ತಿಯೊಬ್ಬರು ಶಿವನಿಗೆ ನೈವೇದ್ಯವಾಗಿ ಅರ್ಪಿಸಲು ಮರ ಕಡಿಯುವ ಯಂತ್ರವನ್ನು ಬಳಸಿ ತನ್ನ ತಲೆಯನ್ನು ತಾನೇ ಕತ್ತರಿಸಿಕೊಳ್ಳಲು ಯತ್ನಿಸಿ ತೀವ್ರವಾಗಿ ಗಾಯಗೊಂಡಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಝಾನ್ಸಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯ ಸದರ್ ಕೊತ್ವಾಲಿ ವ್ಯಾಪ್ತಿಯ ರಘುನಾಥಪುರ ಗ್ರಾಮದ ನಿವಾಸಿ … Continued

ತನ್ನದೇ ಕುಟುಂಬದ ಐವರನ್ನು ಕೊಡಲಿಯಿಂದ ಕೊಚ್ಚಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ…!

ಲಕ್ನೋ : ವ್ಯಕ್ತಿಯೊಬ್ಬ ತನ್ನದೇ ಕುಟುಂಬದ ಐವರನ್ನು ಕೊಡಲಿಯಿಂದ ಕೊಚ್ಚಿ ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಭಯಾನಕ ಘಟನೆ ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯಲ್ಲಿ ನಡೆದಿದೆ. ಮೈನ್ಪುರಿ ಜಿಲ್ಲೆಯ ಗೋಕುಲ್ಪುರ ಅರ್ಸಾರಾ ಗ್ರಾಮದಲ್ಲಿ ಹತ್ಯೆ ನಡೆದಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ. ತನ್ನದೇ ಮನೆಯವರನ್ನು ಕೊಡಲಿಯಿಂದ ಕೊಚ್ಚಿ ಕೊಂದ ನಂತರ 30 ವರ್ಷದ ಶಿವವೀರ ಯಾದವ್ … Continued

ಲಿಂಗ ಬದಲಾಯಿಸುವುದಾಗಿ ನಂಬಿಸಿ ಮಹಿಳೆ ಕೊಂದ ತಾಂತ್ರಿಕ

ಶಹಜಾನಪುರ: ಉತ್ತರ ಪ್ರದೇಶದ ಶಹಜಹಾನಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಸಲಿಂಗ ಪ್ರೇಮಿಯನ್ನು ಮದುವೆಯಾಗಲು ತಾನು ಲಿಂಗ ಪರಿವರ್ತನೆ ಮಾಡುವುದಾಗಿ ಭರವಸೆ ನೀಡಿ ನಂತರ ತಾಂತ್ರಿಕನು ಆ ಯುವತಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಳನ್ನು ಆರ್‌ಸಿ ಮಿಷನ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಪೂನಂ ಎಂದು ಗುರುತಿಸಲಾಗಿದೆ, ಈಕೆ ಪುವಾಯನ್ ನಿವಾಸಿ ಪ್ರೀತಿ ಎಂಬಾಕೆಯೊಂದಿಗೆ ಸ್ನೇಹ … Continued

ಡಿಕ್ಕಿ ಹೊಡೆದ ನಂತರ ಕೆಳಗೆ ಸಿಲುಕಿದ ಸ್ಕೂಟರ್‌ ಅನ್ನು 2 ಕಿಮೀಗೂ ದೂರ ಎಳೆದೊಯ್ದ ಡಂಪರ್ ಟ್ರಕ್ : ಬಾಲಕ ಸೇರಿ ಇಬ್ಬರು ಸಾವು- ರಸ್ತೆಗೆ ಕಲ್ಲು ಹಾಕಿ ಲಾರಿ ತಡೆದ ಸ್ಥಳೀಯರು..!

ಮತ್ತೊಂದು ಹಿಟ್ ಅಂಡ್ ಡ್ರ್ಯಾಗ್ ಪ್ರಕರಣದಲ್ಲಿ, ಉತ್ತರ ಪ್ರದೇಶದ ಮಹೋಬಾದಲ್ಲಿ ಟ್ರಕ್ ಅಡಿ ಸಿಲುಕಿದ ಆರು ವರ್ಷದ ಮಗುವನ್ನು ಬೈಕ್‌ ಸಮೇತ ಟ್ರಕ್‌ ಎರಡು ಕಿಲೋಮೀಟರ್‌ಗೂ ಹೆಚ್ಚು ದೂರ ಟ್ರಕ್‌ ಎಳೆದೊಯ್ದ ನಂತರ ಬಾಲಕ ಮೃತಪಟ್ಟಿದ್ದಾನೆ. ಈ ದುರ್ಘಟನೆಯಲ್ಲಿ ಸಾತ್ವಿಕ್ ಹಾಗೂ ಆತನ ಅಜ್ಜ ಇಬ್ಬರು ಮೃತಪಟ್ಟಿದ್ದಾರೆ. ಉದಿತ್ ನಾರಾಯಣ ಚಾನ್ಸೋರಿಯಾ (67) ಮತ್ತು ಅವರ … Continued

ದಿನಕ್ಕೆ 500 ರೂ.ದುಡಿಯುವ ರಸ್ತೆ ಬದಿ ಬಟ್ಟೆ ವ್ಯಾಪಾರಿ ಮೇಲೆ 366 ಕೋಟಿ ರೂ. ಜಿಎಸ್‌ಟಿ ವಂಚನೆ ಕೇಸ್‌…!

ಆಗ್ರಾ: ಉತ್ತರ ಪ್ರದೇಶದ ಆಗ್ರಾದಿಂದ ಬೀದಿಬದಿಯಲ್ಲಿ ಬಟ್ಟೆ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಬೀದಿಬದಿ ವ್ಯಾಪಾರಿಯೊಬ್ಬರ ಮೇಲೆ 366 ಕೋಟಿ ಜಿಎಸ್‌ಟಿ ವಂಚನೆ ಆರೋಪ ಹೊರಿಸಿದ ಆಘಾತಕಾರಿ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ, ಬಟ್ಟೆ ಮಾರಾಟಗಾರ ದಿನಕ್ಕೆ 500 ರೂ.ಗಳನ್ನು ದುಡಿಯುತ್ತಾರೆ. ಅವರ ಮೇಲೆ 366 ಕೋಟಿ ರೂ.ಗಳ ಜಿಎಸ್‌ಟಿ ವಂಚನೆ ಆರೋಪ ಹೊರಿಸಲಾಗಿದೆ…! ವ್ಯಕ್ತಿಯನ್ನು … Continued