ದಿನಕ್ಕೆ 500 ರೂ.ದುಡಿಯುವ ರಸ್ತೆ ಬದಿ ಬಟ್ಟೆ ವ್ಯಾಪಾರಿ ಮೇಲೆ 366 ಕೋಟಿ ರೂ. ಜಿಎಸ್‌ಟಿ ವಂಚನೆ ಕೇಸ್‌…!

ಆಗ್ರಾ: ಉತ್ತರ ಪ್ರದೇಶದ ಆಗ್ರಾದಿಂದ ಬೀದಿಬದಿಯಲ್ಲಿ ಬಟ್ಟೆ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಬೀದಿಬದಿ ವ್ಯಾಪಾರಿಯೊಬ್ಬರ ಮೇಲೆ 366 ಕೋಟಿ ಜಿಎಸ್‌ಟಿ ವಂಚನೆ ಆರೋಪ ಹೊರಿಸಿದ ಆಘಾತಕಾರಿ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ, ಬಟ್ಟೆ ಮಾರಾಟಗಾರ ದಿನಕ್ಕೆ 500 ರೂ.ಗಳನ್ನು ದುಡಿಯುತ್ತಾರೆ. ಅವರ ಮೇಲೆ 366 ಕೋಟಿ ರೂ.ಗಳ ಜಿಎಸ್‌ಟಿ ವಂಚನೆ ಆರೋಪ ಹೊರಿಸಲಾಗಿದೆ…!
ವ್ಯಕ್ತಿಯನ್ನು ಎಜಾಜ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಅವರು ಉತ್ತರ ಪ್ರದೇಶದ ಮುಜಾಫರ್ ನಗರದ ಬೀದಿಯಲ್ಲಿ ಬಟ್ಟೆ ಮಾರಾಟ ಮಾಡುತ್ತಿದ್ದಾರೆ. ಅಧಿಕಾರಿಗಳು ವ್ಯಕ್ತಿಯನ್ನು ಸಂಪರ್ಕಿಸಿ 366 ಕೋಟಿ ರೂಪಾಯಿ ತೆರಿಗೆ ವಂಚನೆ ಆರೋಪ ಹೊರಿಸಿದ ನಂತರ, ಅಹ್ಮದ್ ಆಘಾತಕ್ಕೊಳಗಾದರು. ಅಧಿಕಾರಿಗಳ ಆರೋಪದ ನಂತರ, ಅಹ್ಮದ್ ಜಿಎಸ್‌ಟಿ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳ ಬಳಿ ಧಾವಿಸಿ ಈ ವಿಷಯದಲ್ಲಿ ಕಾಲಾವಕಾಶ ಕೋರಿದರು.
ಅಹ್ಮದ್ ಅವರು ಈ ಮೊದಲು ಕಾವಲ್ ಎಂಬ ಗ್ರಾಮದಲ್ಲಿ ಜಿಎಸ್‌ಟಿ ನಂಬರ್ ಹೊಂದಿದ್ದ ಸಣ್ಣ ಸ್ಕ್ರ್ಯಾಪ್ ಅಂಗಡಿಯನ್ನು ನಡೆಸುತ್ತಿದ್ದರು ಎಂದು ವರದಿಯಾಗಿದೆ. ವ್ಯಾಪಾರ ನಡೆಸುವಾಗ 500 ರಿಂದ 1000 ರೂ.ಗಳ ವರೆಗೆ ತ್ಯಾಜ್ಯವನ್ನು ವ್ಯಾಪಾರ ಮಾಡುತ್ತಿದ್ದು, ಆದರೆ, ನಷ್ಟವಾದ ನಂತರ, ಅಹಮದ್ ಸ್ಕ್ರ್ಯಾಪ್ ಅಂಗಡಿಯ ಕೆಲಸವನ್ನು ಬಿಟ್ಟು ಬಟ್ಟೆ ಮಾರಾಟ ಮಾಡಲು ಆರಂಭಿಸಿರುವುದಾಗಿ ಹೇಳಿದ್ದಾರೆ.
40 ವರ್ಷದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಕ್ರ್ಯಾಪ್ ಅಂಗಡಿಯ ಜಿಎಸ್‌ಟಿ ಸಂಖ್ಯೆಯನ್ನು ಕ್ಲೋಸ್‌ ಮಾಡಲು ತನ್ನ ಚಾರ್ಟರ್ಡ್ ಅಕೌಂಟೆಂಟ್‌ಗೆ ಹೇಳಿದ್ದೆ ಎಂದು ಹೇಳಿದರು, ಆದಾಗ್ಯೂ, ನಂತರ ಏನಾಯಿತು ಎಂಬುದರ ಬಗ್ಗೆ ನಾನು ಫಾಲೋ ಮಾಡಲಿಲ್ಲ ಎಂದು ಹೇಳಿದರು. ಅಹ್ಮದ್ ಅವರು ತಾವು ಈಗ ಎರಡು ವರ್ಷಗಳಿಂದ ಬಟ್ಟೆ ಮಾರಾಟ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ತಪ್ಪು ಮಾಹಿತಿ ನೀಡಲಾಗಿದೆ : ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಮೋದಿ ಭೇಟಿಗೆ ಸಮಯಾವಕಾಶ ಕೋರಿ ಬಹಿರಂಗ ಪತ್ರ ಬರೆದ ಖರ್ಗೆ

ಅವರು ಈ ಹಿಂದೆ ನಗರದಲ್ಲಿ ಜಂಕ್ ಮತ್ತು ಸ್ಕ್ರ್ಯಾಪ್‌ ಸರಬರಾಜು ಖರೀದಿಸುತ್ತಿದ್ದರು, ಆದಾಗ್ಯೂ, ಸ್ಕ್ರ್ಯಾಪ್ ಅಂಗಡಿ ವ್ಯಾಪಾರವು ಸರಿಯಾಗಿ ನಡೆಯದೇ ಇದ್ದಾಗ ಅದನ್ನು ಬಿಟ್ಟುಬಿಟ್ಟೆ ಎಂದು ಅಹ್ಮದ್ ಹೇಳಿದರು.  ತೆರಿಗೆ ವಂಚನೆ ಮಾಡಿದ ನಿಜವಾದ ಆರೋಪಿಯನ್ನು ಅಧಿಕಾರಿಗಳು ಪತ್ತೆ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಅಹ್ಮದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
300 ಕೋಟಿ ಮೌಲ್ಯದ ಬಿಲ್‌ಗಳನ್ನು ನೀಡಲಾಗಿದೆ ಎಂದು ಪಶ್ಚಿಮ ಉತ್ತರ ಪ್ರದೇಶದ ಜಿಎಸ್‌ಟಿ ವಿಭಾಗದ ವಿಶೇಷ ತನಿಖಾ ವಿಭಾಗದ ಜಂಟಿ ಆಯುಕ್ತ ಜೆಎಸ್ ಶುಕ್ಲಾ ತಿಳಿಸಿದ್ದಾರೆ. ಇಲಾಖೆಯು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದೆ ಮತ್ತು ಕೆಲವು ಸಂಸ್ಥೆಗಳು ಮತ್ತು ವ್ಯಕ್ತಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದಾರೆ ಎಂದು ಜಂಟಿ ಆಯುಕ್ತರು ಹೇಳಿದರು.
ಮಾರಾಟಗಾರರ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ನಂತರ ಅಹ್ಮದ್ ಜಿಎಸ್‌ಟಿ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ನ್ಯಾಯಯುತ ತನಿಖೆ ನಡೆಸಲಾಗುವುದು ಎಂದು ಜಂಟಿ ಆಯುಕ್ತರು ಭರವಸೆ ನೀಡಿದ್ದಾರೆ.

ಜಿಎಸ್‌ಟಿ ಅಧಿಕಾರಿಯೊಬ್ಬರು “ಕೆಲವರು ತಮ್ಮ ಸಂಸ್ಥೆಯ ಖಾತೆ ಸಂಖ್ಯೆಯನ್ನು ಬೇರೆಯವರು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಎಜಾಜ್ ಅಹ್ಮದ್ ಮತ್ತು ಅವರ ಲೆಕ್ಕಪರಿಶೋಧಕರನ್ನೂ ವಿಚಾರಣೆ ನಡೆಸಲಾಗುತ್ತಿದೆ. ತನಿಖೆಯ ನಂತರವೇ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಬಹುದು. ವಾರದ ಹಿಂದೆ ಜಿಎಸ್‌ಟಿಯ ಹಿರಿಯ ಅಧಿಕಾರಿಗಳು ಕೆಲ ಮಾರಾಟಗಾರರ ಮನೆ ಮೇಲೆ ದಾಳಿ ನಡೆಸಿದ್ದರು. ಮನೆಯಲ್ಲಿ ಇಲ್ಲದ ಅಹ್ಮದ್ ನಂತರ ಜಿಎಸ್‌ಟಿ ಇಲಾಖೆಗೆ ದೂರು ನೀಡಿದ್ದರು. ಅವರು ಇಲಾಖೆಗೆ “ಎಲ್ಲಾ ವಿವರಗಳನ್ನು” ಒದಗಿಸಿದ್ದಾರೆ ಮತ್ತು ಈ ವಿಷಯದಲ್ಲಿ “ನ್ಯಾಯಯುತ ತನಿಖೆ” ಯನ್ನು ಕೋರಿದ್ದಾರೆ ಎಂದು ಅಧಿಕಾರಿ ಹೇಳಿದರು.

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement