ಬೆಂಗಳೂರಿನ ಟ್ರಾಫಿಕ್ ನಿರ್ವಹಣೆ ‘ಅತ್ಯಂತ ಕಳಪೆ’…: ಎಸ್‌.ಪಿ. ಸಂಸದ ರಾಜೀವ ರೈ ಟೀಕೆ

ಬೆಂಗಳೂರು: ಸಮಾಜವಾದಿ ಪಕ್ಷದ (ಎಸ್ಪಿ) ಸಂಸದ ರಾಜೀವ ರೈ ಅವರು ಭಾನುವಾರ ಬೆಂಗಳೂರಿನ ಸಂಚಾರ ನಿರ್ವಹಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರದ ಸಂಚಾರ ನಿರ್ವಹಣೆಯು “ಅತ್ಯಂತ ಕಳಪೆ” ಯಾಗಿದೆ ಮತ್ತು ಟ್ರಾಫಿಕ್ ಪೊಲೀಸರು “ಬೇಜವಾಬ್ದಾರಿಯುತರು ಹಾಗೂ ನಿಷ್ಪ್ರಯೋಜಕರು” ಎಂದು ಕಟುವಾಗಿ ಟೀಕಿಸಿದ್ದಾರೆ. ತಮ್ಮ X ಖಾತೆಯಲ್ಲಿ ಪೋಸ್ಟ್‌ ಮಾಡಿ ಅಸಮಾಧಾನ ಹೊರಹಾಕಿದ ಅವರು, … Continued

ಪತಿ ಹತ್ಯೆ ಪ್ರಕರಣದಲ್ಲಿ ನ್ಯಾಯ ಕೊಡಿಸಿದ್ದಕ್ಕಾಗಿ ಸಿಎಂ ಯೋಗಿಗೆ ಧನ್ಯವಾದ ಹೇಳಿದ ಶಾಸಕಿಗೆ ಸಮಾಜವಾದಿ ಪಕ್ಷದಿಂದಲೇ ಗೇಟ್‌ಪಾಸ್‌…!

ನವದೆಹಲಿ: ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕಿ ಪೂಜಾ ಪಾಲ್ ಅವರನ್ನು ವಿಭಿನ್ನ ಕಾರಣಕ್ಕೆ ಪಕ್ಷದಿಂದ ಉಚ್ಚಾಟಿಸಲಾಗಿದೆ. ತಮ್ಮ ಪತಿಯ ಕೊಲೆ ಪ್ರಕರಣದಲ್ಲಿ “ನ್ಯಾಯ ಒದಗಿಸಿದ್ದಕ್ಕಾಗಿ” ಹಾಗೂ ಅಪರಾಧಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಜಾರಿಗೆ ತಂದಿದ್ದಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಧನ್ಯವಾದ ಅರ್ಪಿಸಿ ಶ್ಲಾಘಿಸಿದ ಶಾಸಕಿ ಪೂಜಾ ಪಾಲ್ ಅವರನ್ನು ಗಂಟೆಗಳ … Continued

ವಿದ್ಯುತ್ ಕಳ್ಳತನದ ಆರೋಪ ; ಸಮಾಜವಾದಿ ಪಕ್ಷದ ಸಂಸದರಿಗೆ ₹ 1.9 ಕೋಟಿ ದಂಡ..!

ಲಕ್ನೋ:  ಸಮಾಜವಾದಿ ಪಕ್ಷದ ಉತ್ತರ ಪ್ರದೇಶದ  ಸಂಭಾಲ್ ಸಂಸದ ಜಿಯಾ ಉರ್ ರೆಹಮಾನ್ ಬಾರ್ಕ್ ತಮ್ಮ ನಿವಾಸದಲ್ಲಿ ವಿದ್ಯುತ್ ಕಳ್ಳತನ ಮಾಡಿದ ಆರೋಪಿತ ಪ್ರಕರಣದಲ್ಲಿ ಅವರಿಗೆ ₹ 1.91 ಕೋಟಿ ದಂಡ ವಿಧಿಸಲಾಗಿದೆ. ಸಂಸದರ ನಿವಾಸದಲ್ಲಿ ಎರಡು ವಿದ್ಯುತ್ ಮೀಟರ್‌ಗಳನ್ನು ಟ್ಯಾಂಪರಿಂಗ್ ಮಾಡಿರುವ ಪುರಾವೆಗಳು ಕಂಡುಬಂದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ವಿದ್ಯುತ್ ಇಲಾಖೆ ಈ ದಂಡ … Continued

ಇಂಡಿಯಾ ಬಣ ಮುನ್ನಡೆಸುವ ಮಮತಾ ಬ್ಯಾನರ್ಜಿ ಹೇಳಿಕೆಗೆ ಕಾಂಗ್ರೆಸ್ ಎಚ್ಚರಿಕೆಯ ಪ್ರತಿಕ್ರಿಯೆ ; ಸಮಾಜವಾದಿ ಪಕ್ಷ, ಎನ್‌ಸಿಪಿ ಬೆಂಬಲ

 ನವದೆಹಲಿ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿಪಕ್ಷಗಳ ʼಇಂಡಿಯಾʼ ಮೈತ್ರಿಕೂಟ ಮುನ್ನಡೆಸುವ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆಗಳು ಒಕ್ಕೂಟದೊಳಗಿನ ಮಿತ್ರಪಕ್ಷಗಳಲ್ಲಿ ಪರ-ವಿರುದ್ಧ ಪ್ರತಿಕ್ರಿಯೆಗಳಿಂದಾಗಿ ಕೋಲಾಹಲಕ್ಕೆ ಕಾರಣವಾಗಿವೆ. ಶುಕ್ರವಾರ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿದ ಮಮತಾ ಬ್ಯಾನರ್ಜಿ, ʼಇಂಡಿಯಾʼ ಮೈತ್ರಿಕೂಟದ ನಾಯಕತ್ವ ಮತ್ತು ಸಮನ್ವಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು. “ನಾನು ಇಂಡಿಯಾ ಮೈತ್ರಿಕೂಟವನ್ನು ರಚಿಸಿದ್ದೇನೆ, … Continued

ವೀಡಿಯೊ..| ದೇವಸ್ಥಾನಕ್ಕೆ ಭೇಟಿ ನೀಡಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದಕ್ಕಾಗಿ ಎಸ್‌ಪಿ ಅಭ್ಯರ್ಥಿ ನಸೀಮ್ ಸೋಲಂಕಿ ವಿರುದ್ಧ ಫತ್ವಾ…!

ಕಾನ್ಪುರ : ಉತ್ತರ ಪ್ರದೇಶದ ಒಂಬತ್ತು ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 13 ರಂದು ಉಪಚುನಾವಣೆ ನಡೆಯಲಿದ್ದು, ಸಮಾಜವಾದಿ ಪಕ್ಷದ (ಎಸ್‌ಪಿ) ಸಿಶಾಮೌ ಅಭ್ಯರ್ಥಿ ನಸೀಮ್ ಸೋಲಂಕಿ ಕಾನ್ಪುರ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಈಗ ವಿವಾದದ ಬಣ್ಣ ಪಡೆದುಕೊಂಡಿದೆ. ಅಕ್ಟೋಬರ್ 31 ರಂದು ದೀಪಾವಳಿಯ ರಾತ್ರಿ ತನ್ನ ಪ್ರಚಾರದ ಸಮಯದಲ್ಲಿ ನಸೀಮ್‌ ಸೋಲಂಕಿ ವಂಖಂಡೇಶ್ವರ ದೇವಸ್ಥಾನಕ್ಕೆ ಭೇಟಿ … Continued

2 ಕ್ಷೇತ್ರಗಳಲ್ಲಿ ಒಂದೇ ಪಕ್ಷದ ತಲಾ ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ;ತಾವೇ ಅಧಿಕೃತ ಅಭ್ಯರ್ಥಿಗಳೆಂದು ಹಕ್ಕು ಮಂಡನೆ…!

ನವದೆಹಲಿ: ಉತ್ತರ ಪ್ರದೇಶದ ರಾಂಪುರ ಮತ್ತು ಮೊರಬಾಬಾದ್ ಲೋಕಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ಕುರಿತು ಗೊಂದಲ ಉಂಟಾಗಿದೆ. ಯಾಕೆಂದರೆ ತಾವೇ ಅಧಿಕೃತ ಪಕ್ಷದ ಅಭ್ಯರ್ಥಿಗಳು ಎಂದು ಹೇಳಿಕೊಂಡು ಈ ಎರಡೂ ಕ್ಷೇತ್ರಗಳಿಂದ ತಲಾ ಇಬ್ಬರು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ರಾಂಪುರದಲ್ಲಿ, 2022 ರ ಲೋಕಸಭಾ ಉಪಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಸೀಮ್ ರಾಜಾ … Continued

ಲೋಕಸಭೆ ಚುನಾವಣೆ : ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌-ಸಮಾಜವಾದಿ ಪಕ್ಷದ ಮಧ್ಯೆ ಸ್ಥಾನ ಹಂಚಿಕೆ ಅಂತಿಮ

ಲಕ್ನೋ : 2024ರ ಲೋಕಸಭೆ ಚುನಾವಣೆಗೆ ಅಖಿಲೇಶ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಬಹುತೇಕ ಅಂತಿಮವಾಗಿದ್ದು,ಈ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ರವಿದಾಸ್ ಮೆಹ್ರೋತ್ರಾ ಕಾಂಗ್ರೆಸ್ ಜೊತೆ ಮೈತ್ರಿಯನ್ನು ಖಚಿತಪಡಿಸಿದ್ದಾರೆ. ಈ ಬಗ್ಗೆ ವಿವರಗಳನ್ನು ಹಂಚಿಕೊಂಡ ಮೆಹ್ರೋತ್ರಾ ಅವರು, ಉತ್ತರ ಪ್ರದೇಶದಲ್ಲಿ ಸ್ಥಾನ ಹೊಂದಾಣಿಕೆಯಲ್ಲಿ ಸಮಾಜವಾದಿ ಪಕ್ಷ 63 … Continued

ಅಖಿಲೇಶ ಯಾದವ ಸಮಾಜವಾದಿ ಪಕ್ಷ ತೊರೆದ ಸ್ವಾಮಿ ಪ್ರಸಾದ ಮೌರ್ಯ

ಲಕ್ನೋ: ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ ಒಂದು ವಾರದ ನಂತರ, ಸ್ವಾಮಿ ಪ್ರಸಾದ ಮೌರ್ಯ ಮಂಗಳವಾರ ಸಮಾಜವಾದಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಉತ್ತರ ಪ್ರದೇಶ ವಿಧಾನ ಪರಿಷತ್ತಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. “ನನಗೆ ನಿಮ್ಮೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿತು. ಆದರೆ ಫೆಬ್ರವರಿ 12 ರಂದು … Continued

ಕಾಂಗ್ರೆಸ್ಸಿಗೆ ಸಡ್ಡು ಹೊಡೆದ ಅಖಿಲೇಶ ಯಾದವ್‌ : ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ಷರತ್ತು : ಏನದು..?

ನವದೆಹಲಿ: ಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿಯವರ ಭಾರತ ಜೋಡೋ ನ್ಯಾಯ ಯಾತ್ರೆಯಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ ಯಾದವ್ ಭಾಗವಹಿಸುವ ಬಗ್ಗೆ ಇನ್ನೂ ಅನಿಶ್ಚಿತತೆ ಮುಂದುವರಿದಿದೆ. ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಅಂತಿಮ ಆಗುವವರೆಗೆ ರಾಹುಲ್ ಗಾಂಧಿ ಅವರ ಭಾರತ ಜೋಡೋ ನ್ಯಾಯ ಯಾತ್ರೆಯಲ್ಲಿ ಸಮಾಜವಾದಿ ಪಕ್ಷವು ಭಾಗವಹಿಸುವುದಿಲ್ಲ ಎಂದು … Continued

ಇಂಡಿಯಾ ಮೈತ್ರಿಕೂಟಕ್ಕೆ ಮತ್ತೊಂದು ಆಘಾತ : ಬಿಜೆಪಿ-ಆರ್‌ಎಲ್‌ಡಿ ಮೈತ್ರಿ ಅಂತಿಮ; ಉತ್ತರ ಪ್ರದೇಶದ ೨ ಲೋಕಸಭಾ ಕ್ಷೇತ್ರದಲ್ಲಿ ಆರ್‌ಎಲ್‌ಡಿ ಸ್ಪರ್ಧೆ-ಮೂಲಗಳು

ಲಕ್ನೋ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ರಾಷ್ಟ್ರೀಯ ಲೋಕದಳ (RLD) ಹೆಜ್ಜೆ ಹಾಕಲಿದೆ ಎಂದು ವರದಿಗಳು ತಿಳಿಸಿವೆ. ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಭಾಗವಾಗಲಿದ್ದು, ಭಾರತೀಯ ಜನತಾ ಪಕ್ಷವು (ಬಿಜೆಪಿ) ಆರ್‌ಎಲ್‌ಡಿಯೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ. 2+1 ಸೂತ್ರವನ್ನು ಎರಡೂ ಪಕ್ಷಗಳು ಒಪ್ಪಿಕೊಂಡಿವೆ ಎಂದು ವರದಿಗಳು ತಿಳಿಸಿವೆ. 2+1 ಸೂತ್ರ   ಉಭಯ ಪಕ್ಷಗಳು … Continued