2027ರ ಉತ್ತರ ಪ್ರದೇಶ ಚುನಾವಣೆ | ಯೋಗಿ-ಅಖಿಲೇಶ ಜನಪ್ರಿಯತೆ-ಕಾರ್ಯಕ್ಷಮತೆ ; ನ್ಯೂಸ್18 ಸಮೀಕ್ಷೆಯಲ್ಲಿ ಕಂಡುಬಂದಿದ್ದೇನು ?

ನವದೆಹಲಿ: ಉತ್ತರ ಪ್ರದೇಶದಲ್ಲಿ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಅಖಾಡ ನಿಧಾನವಾಗಿ ಸಜ್ಜಾಗುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ತಂತ್ರಗಾರಿಕೆ ರೂಪಿಸುತ್ತಿದ್ದರೆ, ಅದನ್ನು ಮಣಿಸಿ ಮತ್ತೆ ಅಧಿಕಾರಕ್ಕೇರಲು ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್‌ ಸಿದ್ಧತೆ ನಡೆಸುತ್ತಿವೆ. ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಬೇಕಿರುವ ಎಸ್‌ಪಿ–ಕಾಂಗ್ರೆಸ್‌ ಮೈತ್ರಿಕೂಟದಲ್ಲಿ ಸ್ಥಾನ ಹೊಂದಾಣಿಕೆ ಮತ್ತು ಚುನಾವಣಾ ಕಾರ್ಯತಂತ್ರದ ಸವಾಲುಗಳಿವೆ. 2027ರ … Continued

ಅಖಿಲೇಶ ಯಾದವಗೆ ಹಿನ್ನಡೆ : ಬಿಜೆಪಿಗೆ ಸೇರಿದ ಮೂವರು ಸಮಾಜವಾದಿ ಪಕ್ಷದ ಬಂಡಾಯ ಶಾಸಕರು

ಲಕ್ನೋ : ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ ಯಾದವ್‌ ಅವರಿಗೆ ಭಾರಿ ರಾಜಕೀಯ ಹಿನ್ನಡೆಯಾಗಿದೆ. ಸಮಾಜವಾದಿ ಪಕ್ಷದ ಮೂವರು ಬಂಡಾಯ ಶಾಸಕರು ಬುಧವಾರ (ಅಕ್ಟೋಬರ್‌ 14) ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅಮೇಥಿ ಜಿಲ್ಲೆಯ ಗೌರಿಗಂಜ್‌ ಕ್ಷೇತ್ರದ ರಾಕೇಶ ಪ್ರತಾಪ ಸಿಂಗ್‌, ಅಯೋಧ್ಯೆ ಜಿಲ್ಲೆಯ ಗೊಸಾಯಿಗಂಜ್‌ ಕ್ಷೇತ್ರದ ಅಭಯ ಸಿಂಗ್‌ ಹಾಗೂ ಜಲೌನ್‌ ಜಿಲ್ಲೆಯ … Continued

ಉತ್ತರ ಪ್ರದೇಶ ಚುನಾವಣೆ 2027 : ʼಗೆಲ್ಲುವ ಸಾಮರ್ಥ್ಯವೇ ಮಾನದಂಡ’: ಅಖಿಲೇಶ ಹೇಳಿಕೆಯಿಂದ ಕಾಂಗ್ರೆಸ್–ಎಸ್‌ಪಿ ನಡುವೆ ಅಪಸ್ವರ

ಲಕ್ನೋ: 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ)–ಕಾಂಗ್ರೆಸ್ ಮೈತ್ರಿಕೂಟವು 80 ಸ್ಥಾನಗಳಲ್ಲಿ 43 ಸ್ಥಾನಗಳನ್ನು ಗೆದ್ದು ಗಮನಾರ್ಹ ಯಶಸ್ಸು ಸಾಧಿಸಿತ್ತು. ಈ ಗೆಲುವಿನ ಉತ್ಸಾಹದಲ್ಲಿರುವ ಎರಡೂ ಪಕ್ಷಗಳು 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲೂ ಒಟ್ಟಾಗಿ ಸ್ಪರ್ಧಿಸಲು ನಿರ್ಧರಿಸಿವೆ. ಆದರೆ ಸ್ಥಾನ ಹಂಚಿಕೆ ಸೂತ್ರದ ವಿಚಾರದಲ್ಲಿ ಈಗಾಗಲೇ ಭಿನ್ನಾಭಿಪ್ರಾಯದ ಲಕ್ಷಣಗಳು ಕಾಣಿಸಿಕೊಳ್ಳತೊಡಗಿವೆ. … Continued

ವಿಡಿಯೋ | ಅಖಿಲೇಶ ಯಾದವ್‌ ಮುಂದೆಯೇ ಎಸ್‌ಪಿ ನಾಯಕರ ಕಿತ್ತಾಟ ; ಪರಸ್ಪರ ನಿಂದಿಸಿಕೊಂಡ ನಾಯಕರು

ಲಕ್ನೋ : ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ ಯಾದವ್ ಪಾಲ್ಗೊಂಡಿದ್ದ ಸಭೆಯಲ್ಲಿ ಅವರ ಸುಮ್ಮುಖದಲ್ಲೇ ಇಬ್ಬರು ಹಿರಿಯ ನಾಯಕರು ಪರಸ್ಪರ ವಾಗ್ವಾದಕ್ಕಿಳಿದು, ಜಗಳವಾಡಿಕೊಂಡ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಶನಿವಾರ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಇಬ್ಬರು ನಾಯಕರನ್ನೂ ಸಭೆಯಿಂದ ಹೊರಗೆ ಹೋಗುವಂತೆ ಅಖಿಲೇಶ ಯಾದವ್ ಸೂಚಿಸಿದ್ದಾರೆ. ಘಟನೆಯ ಬೆನ್ನಲ್ಲೇ ಎಟಾ ಮತ್ತು … Continued

ಮುಲಾಯಂ ಸಿಂಗ್ ಯಾದವ್ ಕಿರಿಯ ಪುತ್ರ, ಅಖಿಲೇಶ ಮಲಸಹೋದರ ಪ್ರತೀಕ ಯಾದವ್ ನಿಧನ

ಲಕ್ನೋ: ಸಮಾಜವಾದಿ ಪಕ್ಷದ ಸಂಸ್ಥಾಪಕ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಪುತ್ರ ಹಾಗೂ ಎಸ್‌ಪಿ ಮುಖ್ಯಸ್ಥ ಅಖಿಲೇಶ ಯಾದವ್ ಅವರ ಸಹೋದರ ಪ್ರತೀಕ ಯಾದವ್ (38) ಅವರು ಬುಧವಾರ ಲಕ್ನೋದಲ್ಲಿ ನಿಧನರಾಗಿದ್ದಾರೆ. ಪ್ರತೀಕ್ ಅವರು ಬಿಜೆಪಿ ನಾಯಕಿ ಅಪರ್ಣಾ ಯಾದವ್ ಅವರ ಪತಿ. ಮೂಲಗಳ ಪ್ರಕಾರ, ಪ್ರತೀಕ ಅವರನ್ನು ಬುಧವಾರ ಮುಂಜಾನೆ ಸುಮಾರು … Continued

ದೇಶಕ್ಕೆ ಅವಮಾನ : ಎಐ ಸಮ್ಮಿಟ್‌ನಲ್ಲಿ ಯುವ ಕಾಂಗ್ರೆಸ್ ‘ಶರ್ಟ್‌ಲೆಸ್’ ಪ್ರತಿಭಟನೆಗೆ ವಿಪಕ್ಷಗಳಿಂದಲೇ ಅಸಮಾಧಾನ

ನವದೆಹಲಿ/ಝಾನ್ಸಿ: ಭಾರತ ಮಂಟಪದಲ್ಲಿ ನಡೆದ ‘ಎಐ (AI) ಇಂಪ್ಯಾಕ್ಟ್ ಸಮ್ಮಿಟ್’ನಲ್ಲಿ ಭಾರತೀಯ ಯೂತ್ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ  ಶರ್ಟ್‌ಲೆಸ್‌  ಪ್ರತಿಭಟನೆಯನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಇಂಡಿಯಾ (INDIA) ಮೈತ್ರಿಕೂಟದ ಮಿತ್ರ ಪಕ್ಷದ ನಾಯಕ ಅಖಿಲೇಶ ಯಾದವ್ ತೀವ್ರವಾಗಿ ಟೀಕಿಸಿದ್ದಾರೆ. ಈ ಘಟನೆಯು ದೇಶಕ್ಕೆ “ಅವಮಾನ” ತಂದಿದೆ ಎಂದು ಅವರು ಶನಿವಾರ ಹೇಳಿದ್ದಾರೆ. ಝಾನ್ಸಿಯಲ್ಲಿ ಸುದ್ದಿಗಾರರೊಂದಿಗೆ … Continued

ಪತಿ ಹತ್ಯೆ ಪ್ರಕರಣದಲ್ಲಿ ನ್ಯಾಯ ಕೊಡಿಸಿದ್ದಕ್ಕಾಗಿ ಸಿಎಂ ಯೋಗಿಗೆ ಧನ್ಯವಾದ ಹೇಳಿದ ಶಾಸಕಿಗೆ ಸಮಾಜವಾದಿ ಪಕ್ಷದಿಂದಲೇ ಗೇಟ್‌ಪಾಸ್‌…!

ನವದೆಹಲಿ: ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕಿ ಪೂಜಾ ಪಾಲ್ ಅವರನ್ನು ವಿಭಿನ್ನ ಕಾರಣಕ್ಕೆ ಪಕ್ಷದಿಂದ ಉಚ್ಚಾಟಿಸಲಾಗಿದೆ. ತಮ್ಮ ಪತಿಯ ಕೊಲೆ ಪ್ರಕರಣದಲ್ಲಿ “ನ್ಯಾಯ ಒದಗಿಸಿದ್ದಕ್ಕಾಗಿ” ಹಾಗೂ ಅಪರಾಧಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಜಾರಿಗೆ ತಂದಿದ್ದಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಧನ್ಯವಾದ ಅರ್ಪಿಸಿ ಶ್ಲಾಘಿಸಿದ ಶಾಸಕಿ ಪೂಜಾ ಪಾಲ್ ಅವರನ್ನು ಗಂಟೆಗಳ … Continued

ಲಕ್ಷಾಂತರ ಜನರು ಪ್ರಯಾಗರಾಜ್‌ ಗೆ ಭೇಟಿ ನೀಡಲು ಬಯಸುತ್ತಿದ್ದಾರೆ ; ಮಹಾಕುಂಭ ಮೇಳದ ಅವಧಿ ವಿಸ್ತರಣೆ ಮಾಡಿ : ಅಖಿಲೇಶ ಯಾದವ್ ಒತ್ತಾಯ

ಲಕ್ನೋ: ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವನ್ನು ಗುರುತಿಸುವ ತ್ರಿವೇಣಿ ಸಂಗಮದ ಘಾಟ್‌ನಲ್ಲಿ ಹೆಚ್ಚಿನ ಭಕ್ತರು ಪವಿತ್ರ ಸ್ನಾನ ಮಾಡಲು ಮಹಾಕುಂಭದ ಅವಧಿಯನ್ನು ವಿಸ್ತರಿಸುವಂತೆ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ ಯಾದವ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಸೇರುವಿಕೆಯಾದ … Continued

ಹರಿಯಾಣದಲ್ಲಿ ಶಾಕಿಂಗ್‌ ಸೋಲಿನ ನಂತರ ಕಾಂಗ್ರೆಸ್‌ ಕಡೆಗಣಿಸುತ್ತಿರುವ ಇಂಡಿಯಾ ಬಣದ ಮಿತ್ರಪಕ್ಷಗಳು…!

ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ ಬೆನ್ನಲ್ಲೇ ಅದರ ಮಿತ್ರಪಕ್ಷಗಳು ಅದರ ಗಾಯಕ್ಕೆ ಉಪ್ಪು ಸವರುತ್ತಿವೆ. ಮಹಾರಾಷ್ಟ್ರ, ಜಾರ್ಖಂಡ್ ಮತ್ತು ದೆಹಲಿಯ ಮುಂದಿನ ಹಂತದ ಚುನಾವಣೆಗೆ ತನ್ನ ಚುನಾವಣಾ ಕಾರ್ಯತಂತ್ರವನ್ನು ಪರಿಶೀಲಿಸುವಂತೆ ಕಾಂಗ್ರೆಸ್​ಗೆ ಇಂಡಿಯಾ ಬ್ಲಾಕ್​ನ ಮಿತ್ರ ಪಕ್ಷಗಳು ಹೇಳುತ್ತಿವೆ. ಈ ಮಧ್ಯೆ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಒಂದು ದಿನದ … Continued

ಲೋಕಸಭೆ ಚುನಾವಣೆ ಫಲಿತಾಂಶ : ಸ್ಪರ್ಧಿಸಿದ್ದ 12 ಮಾಜಿ ಸಿಎಂಗಳಲ್ಲಿ ಗೆದ್ದವರು ಯಾರು..? ಸೋತವರು ಯಾರು..?

ನವದೆಹಲಿ : ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಹಲವಾರು ಮಾಜಿ ಮುಖ್ಯಮಂತ್ರಿಗಳು ಸ್ಪರ್ಧಿಸಿದ್ದರು. ಪ್ರಮುಖ ಸ್ಪರ್ಧಿಗಳಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಚರಂಜಿತ್ ಸಿಂಗ್ ಚನ್ನಿ, ಮನೋಹರ್ ಲಾಲ್ ಖಟ್ಟರ್, ಬಸವರಾಜ ಬೊಮ್ಮಾಯಿ, ಭೂಪೇಶ ಬಾಘೇಲ್, ಜಗದೀಶ ಶೆಟ್ಟರ್, ಅಖಿಲೇಶ ಯಾದವ್, ಶಿವರಾಜ್ ಸಿಂಗ್ ಚೌಹಾಣ್, ಎಚ್‌.ಡಿ.ಕುಮಾರಸ್ವಾಮಿ ಮತ್ತು ದಿಗ್ವಿಜಯ್ ಸಿಂಗ್ … Continued