ಪತ್ರಕರ್ತರ ಮೇಲೆ ಹಲ್ಲೆ ಆರೋಪ: ಮಾಜಿ ಸಿಎಂ ಅಖಿಲೇಶ್ ಯಾದವ್ ವಿರುದ್ಧ ಎಫ್ಐಆರ್

 

ಲಕ್ನೋ: ಪತ್ರಕರ್ತರ ದೂರಿನ ಮೇರೆಗೆ ಮೊರಾದಾಬಾದ್ ಪೊಲೀಸರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಮೇಲೆ ದೂರು ದಾಖಲಿಸಿದ್ದಾರೆ.
ಮಾರ್ಚ್ 11 ರಂದು ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ ಸಿಂಗ್‌ ಯಾದ ಹಾಗೂ 20 ಅಪರಿಚಿತ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಸ್ಥಳೀಯ ಪತ್ರಕರ್ತ ಸಂಘದ ಅಧ್ಯಕ್ಷ ಡಾ.ಅವದೇಶ್ ಪರಾಶರ್ ಅವರು ಎಸ್‌ಎಸ್‌ಪಿಗೆ ದೂರು ನೀಡಿದ ನಂತರ ಮೊರಾದಾಬಾದ್‌ನ ಪಾಕ್‌ಬಾಡಾ ಪೊಲೀಸ್ ಠಾಣೆಯಲ್ಲಿ ಅಖಿಲೇಶ್ ಮತ್ತು ಇತರ 20 ಜನರ ವಿರುದ್ಧ ಐಪಿಸಿಯ ಸೆಕ್ಷನ್ 147, 342, 323 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಾರ್ಚ್ 11 ರಂದು ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯ ನಂತರ ಎಸ್‌ಪಿ ಕಾರ್ಯಕರ್ತರು ಮತ್ತು ಅಖಿಲೇಶ್ ಅವರ ಸೆಕ್ಯುರಿಟಿಗಳು ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಹೇಳಲಾಗಿದ್ದು, ಇದರಲ್ಲಿ ಕೆಲವು ಪತ್ರಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಡಿಯೋ ಪತ್ರಕರ್ತ ಫರೀದ್ ಶಂಶಿ ಅವರ ಕಾಲು ಮುರಿದಿದೆ.
ಐಪಿಸಿಯ 160, 341, 332, 53, 504, 499 ಮತ್ತು 120-ಬಿ ಸೆಕ್ಷನ್‌ಗಳ ಅಡಿಯಲ್ಲಿ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಜೈವೀರ್ ಸಿಂಗ್ ಅವರು ಎಬಿಪಿ ನ್ಯೂಸ್‌ನ ಉಬೈದೂರ್ ರೆಹಮಾನ್ ಮತ್ತು ನ್ಯೂಸ್ 18 ರ ಫರೀದ್ ಶಮ್ಸಿ ವಿರುದ್ಧ ಕೌಂಟರ್ ಎಫ್‌ಐಆರ್ ದಾಖಲಿಸಿದ್ದಾರೆ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement