ಅತ್ಯಾಚಾರ ಆರೋಪಿಗೆ ಭವ್ಯ ಸ್ವಾಗತ: ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ರಸ್ತೆಯಲ್ಲಿ ಮೆರವಣಿಗೆ

ಘಾಜಿಯಾಬಾದ್ : ಕಾನೂನು ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರದ ಆರೋಪದಡಿ ಜೈಲು ಪಾಲಾಗಿದ್ದ ಸುಶೀಲ ಪ್ರಜಾಪತಿ ಎಂಬಾತ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಂತೆ ಆತನಿಗೆ ಹೂವಿನ ಹಾರ ಹಾಕಿ, ವೀರನಂತೆ ಭವ್ಯ ಸ್ವಾಗತ ಕೋರಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ … Continued

“ನೀವು ಭಾರತೀಯರು…ನಾವು ಕೊರಿಯನ್ನರು”: ಮೂವರು ಸೋದರಿಯರ ಸಾವಿನ ಪ್ರಕರಣದ ಡೈರಿಯಲ್ಲಿ ಬೆಚ್ಚಿಬೀಳಿಸುವ ವಿವರಗಳು…

ನವದೆಹಲಿ/ಘಾಜಿಯಾಬಾದ್: ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದ ಮೂವರು ಅಪ್ರಾಪ್ತ ಸಹೋದರಿಯರ ಆತ್ಮಹತ್ಯೆ ಪ್ರಕರಣವು ಬೆಚ್ಚಿಬೀಳಿಸುವ ಸತ್ಯಗಳನ್ನು ಹೊರಹಾಕಿದೆ. ಈ ಬಾಲಕಿಯರ ಸಾವಿನ ಹಿಂದೆ ಕೊರಿಯನ್ ಸಂಸ್ಕೃತಿಯ ಮೇಲಿನ ಅತಿಯಾದ ಗೀಳು ಮತ್ತು ಟಾಸ್ಕ್ ಆಧಾರಿತ ಅಪಾಯಕಾರಿ ಆಟವೊಂದು ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ. 12 ವರ್ಷದ ಪಾಖಿ, 14 ವರ್ಷದ ಪ್ರಾಚಿ ಮತ್ತು 16 ವರ್ಷದ ವಿಶಿಕಾ … Continued

ಆನ್‌ಲೈನ್ ಗೇಮಿಂಗ್‌ ಹುಚ್ಚಿಗೆ ಆಕ್ಷೇಪ ; 9ನೇ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡ ಮೂವರು ಸಹೋದರಿಯರು..!

ಘಾಜಿಯಾಬಾದ್: “ಮಮ್ಮಿ, ಪಪ್ಪಾ, ಕ್ಷಮಿಸಿ” — ಇವು ಮಂಗಳವಾರ ತಡರಾತ್ರಿ ಘಾಜಿಯಾಬಾದ್‌ನ ತಮ್ಮ ವಸತಿ ಕಟ್ಟಡದ ಒಂಬತ್ತನೇ ಮಹಡಿಯಿಂದ ಜಿಗಿದು ಸಾವಿಗೀಡಾದ ಮೂವರು ಸಹೋದರಿಯರು ಬರೆದಿಟ್ಟ ಕೊನೆಯ ಮಾತುಗಳು. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಮೂವರು ಅಪ್ರಾಪ್ತ ಸಹೋದರಿಯರು ಅತಿಯಾದ ಆನ್‌ಲೈನ್ ಗೇಮಿಂಗ್ ಗೀಳಿಗೆ ಬಿದ್ದಿದ್ದಕ್ಕೆ ಪೋಷಕರ ಆಕ್ಷೇಪಿಸಿದ್ದಕ್ಕೆ ತಮ್ಮ ಅಪಾರ್ಟ್‌ಮೆಂಟ್ ಕಟ್ಟಡದ ಒಂಬತ್ತನೇ ಮಹಡಿಯಿಂದ ಹಾರಿ … Continued

ವೀಡಿಯೊಗಳು…| ಭಾರತದ ಹಲವೆಡೆ ಆಕಾಶವನ್ನೇ ಬೆಳಗಿದ ಅಪರೂಪದ ಉಲ್ಕಾಪಾತ | ಈ ಅದ್ಭುತ-ಅಪರೂಪದ ದೃಶ್ಯ ವೀಕ್ಷಿಸಿ

ನವದೆಹಲಿ: ಶುಕ್ರವಾರ ದೆಹಲಿ, ನೋಯ್ಡಾ, ಗಾಜಿಯಾಬಾದ್ ಮತ್ತು ಗುರಗಾಂವ್‌ ಮೇಲಿನ ರಾತ್ರಿ ಆಕಾಶವು ಅದ್ಭುತವಾದ ಆಕಾಶ ಘಟನೆಯೊಂದಿಗೆ ಗಮನ ಸೆಳೆದಿದೆ. ಯಾಕೆಂದರೆ ಪ್ರಕಾಶಮಾನವಾದ ಉಲ್ಕೆಯು ದಿಗಂತವನ್ನು ಕೆಲಕಾಲ ಬೆಳಗಿಸಿದೆ. ದೆಹಲಿಯ ದೊಡ್ಡ ಭಾಗಗಳಲ್ಲಿ ಗೋಚರಿಸುತ್ತಿದ್ದ ಈ ಉಲ್ಕಾಶಿಲೆಯು ಆಗಸದಲ್ಲಿ ತನ್ನ ಉರಿಯುತ್ತಿರುವ ಬೆಂಕಿ ಮತ್ತು ನಂತರದ ವಿಘಟನೆಯಿಂದಾಗಿ ನೋಡುಗರನ್ನು ಆಕರ್ಷಿಸಿತು. ಬಾಹ್ಯಾಕಾಶದಿಂದ ಕೆಳಗೆ ಬಂದ ಉರಿಯುತ್ತಿರುವ … Continued

ಬಾಲಿವುಡ್‌ ನಟಿ ನೋರಾ ಫತೇಹಿ ರೀತಿ ತನ್ನ ಹೆಂಡತಿಯೂ ಅದೇ ತರಹದ ಆಕಾರ ಪಡೆಯಬೇಕೆಂದು ಆಕೆಗೆ ಆಹಾರ ಕೊಡದ ಗಂಡ..!

ವಿಚಿತ್ರ ಘಟನೆಯೊಂದರಲ್ಲಿ, ಬಾಲಿವುಡ್ ನಟಿ ನೋರಾ ಫತೇಹಿಯಂತಹ ಶರೀರದ ಆಕೃತಿಯನ್ನು ಹೊಂದಲು ತನ್ನನ್ನು ಒತ್ತಾಯಿಸಿ ತನ್ನ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಗಾಜಿಯಾಬಾದ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಉತ್ತರ ಪ್ರದೇಶದ ಗಜೈಬಾದ್ ಮುರಾದ್‌ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ, ವೃತ್ತಿಯಲ್ಲಿ ಸರ್ಕಾರಿ ದೈಹಿಕ ಶಿಕ್ಷಣ ಶಿಕ್ಷಕ ಶಿವಂ ಉಜ್ವಲ್ ಹೆಸರಿನ ತನ್ನ … Continued

ನಕಲಿ ರಾಯಭಾರ ಕಚೇರಿ ಹಗರಣ : 162 ವಿದೇಶ ಪ್ರವಾಸಗಳು, 300 ಕೋಟಿ ರೂ. ವಂಚನೆ….

ನವದೆಹಲಿ: ಸುಮಾರು 300 ಕೋಟಿ ರೂಪಾಯಿಗಳ ಹಗರಣ, 10 ವರ್ಷಗಳಲ್ಲಿ 162 ವಿದೇಶ ಪ್ರವಾಸಗಳು ಮತ್ತು ಅನೇಕ ವಿದೇಶಿ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಸಂಭಾವ್ಯ ಸಂಬಂಧಗಳು. ಇವು ಗಾಜಿಯಾಬಾದ್‌ನಲ್ಲಿ ಎಂಟು ವರ್ಷಗಳ ಕಾಲ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ ಜೈನ್ ವಿರುದ್ಧದ ತನಿಖೆ ವೇಳೆ ಹೊರಬಿದ್ದ ಆಘಾತಕಾರಿ ವಿವರಗಳು… ಕಳೆದ ವಾರ ಗಾಜಿಯಾಬಾದ್‌ನಲ್ಲಿ ಬಾಡಿಗೆಗೆ … Continued

ವೀಡಿಯೊ..| ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹತ್ತಿಸಿದ ಮಹಿಳೆ, ನಂತರ ಅಲ್ಲಿಂದ ಪರಾರಿ ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹೌಸಿಂಗ್‌ ಸೊಸೈಟಿಯೊಂದರಲ್ಲಿ ಆಟವಾಡುತ್ತಿದ್ದ ಐದು ವರ್ಷದ ಮಗುವಿಗೆ ಕಾರು ಡಿಕ್ಕಿ ಹೊಡೆದು ಅದು ತೀವ್ರವಾಗಿ ಗಾಯಗೊಂಡಿದೆ. ಫೆಬ್ರವರಿ 24 ರಂದು ಸಂಜೆ 4:30 ರ ಸುಮಾರಿಗೆ ಗಾಜಿಯಾಬಾದ್‌ನ ರಾಜೇಂದ್ರ ನಗರ ವಿಸ್ತರಣೆಯಲ್ಲಿರುವ ಎಸ್‌ಜಿ ಗ್ರ್ಯಾಂಡ್ ಸೊಸೈಟಿಯಲ್ಲಿ ಸಂಭವಿಸಿದ ಘಟನೆಯ ನಂತರ ಕಾರು ಚಲಾಯಿಸುತ್ತಿದ್ದ ಮಹಿಳೆ ಸ್ಥಳದಿಂದ ಪರಾರಿಯಾಗಿದ್ದಾಳೆ. ಇಡೀ ಘಟನೆಯು ಸೊಸೈಟಿಯಲ್ಲಿ … Continued

ವೀಡಿಯೊ..| ನ್ಯಾಯಾಲಯದಲ್ಲಿ ವಿಕೋಪಕ್ಕೆ ತಿರುಗಿದ ನ್ಯಾಯಾಧೀಶರ ಜತೆ ವಕೀಲರ ವಾಗ್ವಾದ ; ಪೊಲೀಸರಿಂದ ಲಾಠಿ ಚಾರ್ಜ್

ಗಾಜಿಯಾಬಾದ್: ಗಾಜಿಯಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ (ಅ.29) ನ್ಯಾಯಾಧೀಶರು ಮತ್ತು ವಕೀಲರ ನಡುವಿನ ವಾಗ್ವಾದ ಹಿಂಸಾ ರೂಪಕ್ಕೆ ತಿರುಗಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆ ನಡೆದಿದೆ. ನ್ಯಾಯಾಧೀಶರ ಕೊಠಡಿಯಲ್ಲಿ ಹೆಚ್ಚಿನ ವಕೀಲರು ಜಮಾಯಿಸಿ ಗದ್ದಲ ಸೃಷ್ಟಿಸಿದ್ದರಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರನ್ನು ಕರೆಸಬೇಕಾಯಿತು. ಪೊಲೀಸರು ಕುರ್ಚಿಗಳನ್ನು ಎತ್ತಿ ವಕೀಲರನ್ನು ಓಡಿಸುತ್ತಿರುವ ಆಘಾತಕಾರಿ ದೃಶ್ಯಗಳು ಕಂಡುಬಂದಿವೆ. … Continued

ಜ್ಯೂಸ್‌ ಗೆ ಮೂತ್ರ ಬೆರೆಸಿ ಮಾರಾಟ ; ವ್ಯಾಪಾರಿಗೆ ಸಾರ್ವಜನಿಕರಿಂದ ಗೂಸಾ, ಅಂಗಡಿ ಧ್ವಂಸ…

ಗಾಜಿಯಾಬಾದ್‌ : ಅಂಗಡಿಯ ವ್ಯಾಪಾರಿಯೊಬ್ಬ ತನ್ನ ಗ್ರಾಹಕರಿಗೆ ಜ್ಯೂಸ್‌ ನೀಡುವಾಗ ಅದಕ್ಕೆ ಮೂತ್ರ ಬೆರೆಸಿ ಜ್ಯೂಸ್‌ ಮಾರಾಟ ಮಾಡುತ್ತಿದ್ದ ಪ್ರಕರಣವೊಂದು ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ಇದರ ಬಗ್ಗೆ ಜನರಿಗೆ ತಿಳಿಯುತ್ತಿದ್ದಂತೆ ಅಕ್ರೋಶಗೊಂಡ ಜನರು ವ್ಯಾಪಾರಿಯನ್ನು ಮನಬಂದಂತೆ ಥಳಿಸಿದ್ದು, ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರು ಖುಷಿ ಜ್ಯೂಸ್ ಕಾರ್ನರ್ ಮಾಲೀಕ ಅಮೀರ್ … Continued

ವೀಡಿಯೊ..| ಬಾಲಕನ ಮೇಲೆ ದಾಳಿ ಮಾಡಿದ ಪಿಟ್ ಬುಲ್ ; ಇಬ್ಬರು ಸುಮ್ಮನೆ ನೋಡುತ್ತಿದ್ದರೆ ಬಾಲಕನ ರಕ್ಷಣೆಗೆ ಬಂದ ಬೀದಿ ನಾಯಿಗಳು…!

ಗಾಜಿಯಾಬಾದ್: ಮಂಗಳವಾರ ಮಧ್ಯಾಹ್ನ ಪಕ್ಕದ ಮನೆಯ ನಾಯಿ ದಾಳಿ ಮಾಡಿದ ನಂತರ 15 ವರ್ಷದ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ದೆಹಲಿಯ ಪಕ್ಕದ ಗಾಜಿಯಾಬಾದ್‌ ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಹುಡುಗನನ್ನು ಅಲ್ತಾಫ್ ಎಂದು ಗುರುತಿಸಲಾಗಿದ್ದು, ಪಿಟ್ ಬುಲ್ ತಳಿಯ ನಾಯಿ ಆತನ ಮೇಲೆ ದಾಳಿ ಮಾಡಿದೆ. ಅದು ದಾಳಿ ಮಾಡುವುದನ್ನು ವೀಡಿಯೊ … Continued