ವೀಡಿಯೊ..| ಬಾಲಕನ ಮೇಲೆ ದಾಳಿ ಮಾಡಿದ ಪಿಟ್ ಬುಲ್ ; ಇಬ್ಬರು ಸುಮ್ಮನೆ ನೋಡುತ್ತಿದ್ದರೆ ಬಾಲಕನ ರಕ್ಷಣೆಗೆ ಬಂದ ಬೀದಿ ನಾಯಿಗಳು…!

ಗಾಜಿಯಾಬಾದ್: ಮಂಗಳವಾರ ಮಧ್ಯಾಹ್ನ ಪಕ್ಕದ ಮನೆಯ ನಾಯಿ ದಾಳಿ ಮಾಡಿದ ನಂತರ 15 ವರ್ಷದ ಬಾಲಕನಿಗೆ ಗಂಭೀರ ಗಾಯಗಳಾಗಿವೆ.
ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ದೆಹಲಿಯ ಪಕ್ಕದ ಗಾಜಿಯಾಬಾದ್‌ ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಹುಡುಗನನ್ನು ಅಲ್ತಾಫ್ ಎಂದು ಗುರುತಿಸಲಾಗಿದ್ದು, ಪಿಟ್ ಬುಲ್ ತಳಿಯ ನಾಯಿ ಆತನ ಮೇಲೆ ದಾಳಿ ಮಾಡಿದೆ. ಅದು ದಾಳಿ ಮಾಡುವುದನ್ನು ವೀಡಿಯೊ ತೋರಿಸುತ್ತದೆ, ಒಬ್ಬ ಪುರುಷ ಮತ್ತು ಮಹಿಳೆ ದೂರದಿಂದ ನೋಡುತ್ತಿದ್ದರೂ ಮಧ್ಯಪ್ರವೇಶಿಸಲಿಲ್ಲ.
ಬಾಲಕ ನಾಯಿಗೆ ಜೋರಾಗಿ ಒದೆಯುತ್ತಿದ್ದರೂ ನಾಯಿ ಆತನನ್ನು ಬಿಡಲಿಲ್ಲ. ಹುಡುಗ ನಾಯಿಯಿಂದ ಬಿಡಿಸಿಕೊಳ್ಳಲು ನೆಲದ ಬಿದ್ದು ಸುತ್ತಲೂ ಉರುಳುವುದನ್ನು ಕ್ಲಿಪ್ ತೋರಿಸುತ್ತದೆ. ನಾಯಿಯ ಗಮನವನ್ನು ಬೇರೆಡೆಗೆ ಸೆಳೆಯಲು ಮನೆಯ ಮಹಡಿಯಿಂದ ಯಾರೋ ನೀರನ್ನು ಅದರತ್ತ ಎಸೆದರು. ಹುಡುಗ ಎದ್ದೇಳಲು ಪ್ರಯತ್ನಿಸುತ್ತಾನೆ, ಹಾಗೂ ಎದ್ದು ಸುರಕ್ಷಿತ ಸ್ಥಳಕ್ಕೆ ಓಡುತ್ತಾನೆ, ಆದರೆ ನಾಯಿಯೂ ಆತನನ್ನು ಹಿಂಬಾಲಿಸುತ್ತದೆ.

ಅಷ್ಟರಲ್ಲಿ ಎರಡು ಬೀದಿ ನಾಯಿಗಳು ಆಗಮಿಸುತ್ತವೆ. ಅದರಲ್ಲಿ ಒಂದು ಬೀದಿ ನಾಯಿ ಪಿಟ್ ಬುಲ್‌ ಮೇಲೆ ದಾಳಿ ಮಾಡಿ ಬಾಲಕನ ರಕ್ಷಣೆಗೆ ಮುಂದಾಗುತ್ತದೆ. ಬೀದಿ ನಾಯಿ ಪಿಟ್‌ ಬುಲ್‌ ಬಾಲ ಹಿಡಿದೆಳೆಯುತ್ತದೆ. ಆಗ ಹುಡುಗ ಮನೆಯೊಳಗೆ ಪ್ರವೇಶಿಸಿ ಬಾಗಿಲು ಹಾಕಿಕೊಳ್ಳುತ್ತಾನೆ.
ಈ ಸಾಕು ನಾಯಿ ಸೇರಿದ ಕುಟುಂಬ ಇತ್ತೀಚೆಗಷ್ಟೇ ಗಾಜಿಯಾಬಾದ್‌ಗೆ ತೆರಳಿತ್ತು. ನಾಯಿಯನ್ನು ಮಹಾನಗರ ಪಾಲಿಕೆ ವಶಕ್ಕೆ ಪಡೆದಿದೆ.ಈ ರೀತಿಯ ನಾಯಿಯನ್ನು ಸಾಕುವುದು ಇಲ್ಲಿ ಸ್ವೀಕಾರಾರ್ಹವಲ್ಲ ಎಂದು ಕುಟುಂಬಕ್ಕೆ ಎಚ್ಚರಿಕೆ ನೀಡಲಾಗಿತ್ತು ಎಂದು ನೆರೆಹೊರೆಯವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

ಸ್ಥಳೀಯ ಪೊಲೀಸರ ಪ್ರಕಾರ, ಈ ಬಗ್ಗೆ ಯಾವುದೇ ದೂರು ಬಂದಿಲ್ಲ. ಇದೀಗ ಬಾಲಕ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಾಕು ನಾಯಿಗಳ ದಾಳಿ ಹೆಚ್ಚುತ್ತಿರುವ ನಿದರ್ಶನಗಳ ನಡುವೆ ಪಿಟ್ ಬುಲ್ ಟೆರಿಯರ್, ಅಮೆರಿಕನ್ ಬುಲ್‌ಡಾಗ್, ರೋಟ್‌ವೀಲರ್ ಮತ್ತು ಮ್ಯಾಸ್ಟಿಫ್ಸ್ ಸೇರಿದಂತೆ 23 ತಳಿಗಳ ಉಗ್ರ ನಾಯಿಗಳ ಮಾರಾಟ ಮತ್ತು ಸಂತಾನೋತ್ಪತ್ತಿಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ಕಳೆದ ತಿಂಗಳು ರಾಜ್ಯಗಳಿಗೆ ನಿರ್ದೇಶನ ನೀಡಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement