ತಾನು ಬದುಕಿರುವಾಗಲೇ ಮರಣಾ ನಂತರದ ಕ್ರಿಯಾ ಕರ್ಮ ನೆರವೇರಿಸಿ ಸಾವಿರಾರು ಜನರಿಗೆ ಊಟ ಹಾಕಿಸಿದ ವೃದ್ಧ ; ಕಾರಣ..?

ಶಿವಪುರಿ (ಮಧ್ಯಪ್ರದೇಶ) : ನನ್ನ ಮರಣದ ನಂತರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವವರು ಯಾರು ಎಂಬ ಚಿಂತೆ ಆ 60 ವರ್ಷದ ವೃದ್ಧನನ್ನು ಬಹುವಾಗಿ ಕಾಡುತ್ತಿತ್ತು. ಇದೇ ಕಾರಣಕ್ಕೆ ಆತ ಬದುಕಿರುವಾಗಲೇ ತನಗಾಗಿ ಸ್ವತಃ ತಾನೇ ಮರಣೋತ್ತರ ಕ್ರಿಯಾ ಕರ್ಮಗಳನ್ನು ನೆರವೇರಿಸಿದ ಅಪರೂಪದ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ. ಈ ವಿಲಕ್ಷಣ ಘಟನೆ ಶಿವಪುರಿಯ ಕರೇರಾ ವ್ಯಾಪ್ತಿಯ … Continued

ಮಾಘ ಮೇಳ : 40 ವರ್ಷದಿಂದ ಮುಳ್ಳಿನ ಹಾಸಿಗೆ ಮೇಲೆ ಮಲಗುತ್ತಿರುವ ‘ಕಾಂಟೇ ವಾಲೆ ಬಾಬಾ’ ವೀಡಿಯೊ ವೈರಲ್

 ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಪವಿತ್ರ ಮಾಘ ಮೇಳಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ದಿನನಿತ್ಯ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. 2025ರ ಮಹಾಕುಂಭದಂತೆಯೇ ಈ ವರ್ಷವೂ ಜನಜಂಗುಳಿ ಕಂಡುಬರುತ್ತಿದೆ. ಈ ನಡುವೆ, ಮೇಳದಲ್ಲಿರುವ ಒಬ್ಬರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರೇ ‘ಕಾಂಟೇ ವಾಲೆ … Continued

ಎರಡು ಬಾರಿ ಕಚ್ಚುವ ಬೀದಿ ನಾಯಿಗಳಿಗೆ ಜೀವಾವಧಿ ಶಿಕ್ಷೆ …! ಏನಿದು ಆದೇಶ…?

ಲಕ್ನೋ: ನಾಯಿ ಕಡಿತದ ಘಟನೆಗಳನ್ನು ನಿಯಂತ್ರಿಸಲು ಉತ್ತರ ಪ್ರದೇಶ ಸರ್ಕಾರವು ನೂತನ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಿರ್ದೇಶನದ ಮೇರೆಗೆ, ಜನರನ್ನು ಎರಡು ಬಾರಿ ಕಚ್ಚುವ ಯಾವುದೇ ಬೀದಿ ನಾಯಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗುತ್ತದೆ, ಇದು ಬೀದಿ ನಾಯಿಗಳ ಹೆಚ್ಚುತ್ತಿರುವ ಉಪಟಳವನ್ನು ತಡೆಯುವ ಉದ್ದೇಶ ಹೊಂದಿರುವ ಹೊಂದಿರುವ ವಿವಾದಾತ್ಮಕ ಹೆಜ್ಜೆಯಾಗಿದೆ. … Continued

‘ನನ್ನನ್ನು ಮುಟ್ಟಿದ್ರೆ ನಿನ್ನನ್ನು 35 ತುಂಡುಗಳಾಗಿ ಕತ್ತರಿಸ್ತೇನೆ..; ಮದುವೆ ಮೊದಲ ರಾತ್ರಿ ಚಾಕು ಹಿಡಿದು ಗಂಡನಿಗೆ ಕೊಲೆ ಬೆದರಿಕೆ ಹಾಕಿದ ನವವಿವಾಹಿತೆ…!

ನವವಿವಾಹಿತೆಯೊಬ್ಬಳು ಮೊದಲ ರಾತ್ರಿಯೇ ಚಾಕು ಹಿಡಿದುಕೊಂಡು ನನ್ನನ್ನು ಮುಟ್ಟಿದರೆ 35 ತುಂಡುಗಳಾಗಿ ಕತ್ತರಿಸುವೆ ಎಂದು ಗಂಡನಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. “ನನ್ನನ್ನು ಮುಟ್ಟಿದರೆ ನಿನ್ನನ್ನು 35 ತುಂಡುಗಳಾಗಿ ಕತ್ತರಿಸುವೆ. ನಾನು ಅಮನ್‌ಗೆ ಸೇರಿದವಳು” ಎಂದು ಎಚ್ಚರಿಸುತ್ತ ಪತ್ನಿ ಕೋಣೆಯ ಒಂದು ಮೂಲೆಯಲ್ಲಿ ಕುಳಿತು, ತಲೆಯ ಮುಸುಕಿನ ಕೆಳಗೆ ಹರಿತವಾದ ಚಾಕುವನ್ನು … Continued

ಮದುವೆಯಾದ ಎರಡನೇ ದಿನಕ್ಕೆ ಮಗುವನ್ನು ಹೆತ್ತ ಮದುಮಗಳು…! ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ

ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯ ಮದುವೆಯ ಪ್ರಕರಣವೊಂದು ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಮದುವೆ ಬಹಳ ವೈಭವದಿಂದ ನಡೆಯಿತು. ಮತ್ತು ನವವಿವಾಹಿತರು ಎರಡು ದಿನಗಳನ್ನು ಒಟ್ಟಿಗೆ ಕಳೆದರು. ಆದರೆ, ಎರಡನೇ ದಿನ ಇದ್ದಕ್ಕಿದ್ದಂತೆ ವಧು ಆಸ್ಪತ್ರೆಗೆ ಹೋಗಬೇಕಾಐಇತು. ಹಾಗೂ ಅಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದು, ಇಲ್ಲಿ … Continued

ಮಹಾಕುಂಭ ಮೇಳ 2025 : ಒಟ್ಟು 45 ದಿನಗಳಲ್ಲಿ 66.21 ಕೋಟಿ ಭಕ್ತರಿಂದ ಪುಣ್ಯಸ್ನಾನ

ಪ್ರಯಾಗರಾಜ್‌ : ವಿಶ್ವದ ಅತಿದೊಡ್ಡ ಧಾರ್ಮಿಕ ಸೇರುವಿಕೆಯಾದ ಮಹಾಕುಂಭ ಬುಧವಾರ ಮುಕ್ತಾಯವಾಯಿತು. ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳವು ನಂಬಿಕೆ, ಭಕ್ತಿಯ ಸೇರುವಿಕೆಯಾಗಿತ್ತು. 45 ದಿನಗಳ ಕಾಲ ನಡೆದ ಮಹಾಕುಂಭ ಮೇಳೆ 2025ರಲ್ಲಿ 66.21 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, … Continued

ಮಹಾಕುಂಭ ಮೇಳ : ತಪ್ಪು ಮಾಹಿತಿ ಹರಡಿದ 140 ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳ ವಿರುದ್ಧ ಪ್ರಕರಣ ದಾಖಲು

ಪ್ರಯಾಗರಾಜ್ : ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ 140 ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ವಿರುದ್ಧ 13 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಮಹಾಕುಂಭದ ಉಪಪೊಲೀಸ್ ಮಹಾನಿರೀಕ್ಷಕ (ಡಿಐಜಿ) ವೈಭವ ಕೃಷ್ಣ ದೃಢಪಡಿಸಿದ್ದಾರೆ. ಫೆಬ್ರವರಿ 26ರಂದು ಮುಂಬರುವ ಮಹಾ ಶಿವರಾತ್ರಿ ಹಬ್ಬಕ್ಕೆ ಪೊಲೀಸರು ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದಾರೆ ಎಂದು ಅವರು ತಿಳಿಸಿದರು. “ಹಾದಿತಪ್ಪಿಸುವ ವಿಷಯವನ್ನು ಹಂಚಿಕೊಂಡ … Continued

ಕುಂಭಮೇಳಕ್ಕೆ​ ತೆರಳುತ್ತಿದ್ದ ​ ವಾಹನ ಅಪಘಾತ: ಗೋಕಾಕದ 6 ಮಂದಿ ಸಾವು

ಬೆಳಗಾವಿ :ಪ್ರಯಾಗರಾಜ್‌ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ(Gokak)ದ ಆರು ಮಂದಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಜಬಲಪುರ ಪೆಹರಾ‌ ಟೋಲ್ ನಾಕಾ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಗೋಕಾಕ ತಾಲೂಕಿನ ಲಕ್ಷ್ಮಿ ಬಡಾವಣೆ ನಿವಾಸಿಗಳಾದ ಬಾಲಚಂದ್ರ‌ ಗೌಡರ (50), ಸುನೀಲ … Continued

ಪ್ರಯಾಗರಾಜ್‌ ತ್ರಿವೇಣಿ ಸಂಗಮ ನೀರು ಸ್ನಾನಕ್ಕೆ ಯೋಗ್ಯವಲ್ಲ ; ಸಿಪಿಸಿಬಿ ವರದಿಯಲ್ಲಿ ಬಹಿರಂಗ

ಪ್ರಯಾಗರಾಜ್‌ ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದವರ ಸಂಖ್ಯೆ ಮಂಗಳವಾರ 55 ಕೋಟಿ ದಾಟಿದ್ದು, ಹೊಸ ದಾಖಲೆ ಬರೆದಿದೆ. ಆದರೆ ಇದೇವೇಳೆ ಕುಂಭಮೇಳ ನಡೆಯುತ್ತಿರುವ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದ ಹಲವೆಡೆ ನದಿಯ ನೀರು ಕಲುಷಿತವಾಗಿದ್ದು, ಸ್ನಾನಕ್ಕೆ ಯೋಗ್ಯವಲ್ಲ ಎಂಬ ವರದಿಯೊಂದು ಬಹಿರಂಗಪಡಿಸಿದೆ. ಮಹಾ ಕುಂಭಮೇಳ ನಡೆಯುತ್ತಿರುವ ಪ್ರಯಾಗರಾಜ್‌ನ ಹಲವಾರು ಸ್ಥಳಗಳು ನೀರಿನಲ್ಲಿ ಹೆಚ್ಚಿನ ಪ್ರಮಾಣದ ಫೀಕಲ್ ಕೋಲಿಫಾರ್ಮ್‌ನಿಂದಾಗಿ … Continued

ದಾಖಲೆ ಬರೆದ ಮಹಾಕುಂಭ ಮೇಳ 2025 ; ಈವರೆಗೆ ತ್ರಿವೇಣಿ ಸಂಗಮದಲ್ಲಿ 50 ಕೋಟಿಗೂ ಹೆಚ್ಚು ಭಕ್ತರಿಂದ ಪವಿತ್ರ ಸ್ನಾನ

ನವದೆಹಲಿ : ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಶುಕ್ರವಾರ ಸಂಜೆಯವರೆಗೆ 50 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಶುಕ್ರವಾರ ಸಂಜೆ 6 ಗಂಟೆ ವರೆಗೆ 92.84 ಲಕ್ಷ ಜನರು ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದ್ದಾರೆ. ಗುರುವಾರ ರಾತ್ರಿ … Continued