ವೀಡಿಯೊ…| ಮಹಾ ಕುಂಭಮೇಳಕ್ಕೆ ಹೋಗಲು ರೈಲು ಹತ್ತಲು ಸಾಧ್ಯವಾಗದ್ದಕ್ಕೆ ರೈಲಿನ ಕಿಟಿಕಿಯನ್ನೇ ಒಡೆದು ಹಾಕಿದ ಪ್ರಯಾಣಿಕರು…

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳುತ್ತಿರುವ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ರೈಲು ಹತ್ತಲು ಸಾಧ್ಯವಾಗದೆ ಸ್ವತಂತ್ರ ಸೇನಾನಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ನ ಗಾಜಿನ ಕಿಟಕಿಗಳನ್ನು ಒಡೆದ ಘಟನೆ ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. ರೈಲು ಹತ್ತಲಾಗದೆ ಹತಾಶೆಗೊಂಡ ಪ್ರಯಾಣಿಕರು ರೈಲಿಗೆ ಕಲ್ಲು ಎಸೆದು ಎಸಿ ಕಂಪಾರ್ಟ್‌ಮೆಂಟ್‌ಗಳ ಗಾಜುಗಳನ್ನು … Continued

ವೀಡಿಯೊ..| ಪ್ರಯಾಗರಾಜ್‌ ಮಹಾ ಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಪ್ರಯಾಗರಾಜ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು, ಸೋಮವಾರ ಬೆಳಿಗ್ಗೆ ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ತೇಲುವ ಜೆಟ್ಟಿಯ ಮೇಲೆ ಭದ್ರತಾ ಸಿಬ್ಬಂದಿ ರಾಷ್ಟ್ರಪತಿ ಮುರ್ಮು ಅವರನ್ನು ಕರೆದುಕೊಂಡು ಹೋದರು, ನಂತರ ಅವರು ರಾಂಪ್ ಮೇಲೆ ಹತ್ತಿ ಸ್ನಾನ ಮಾಡಿದರು. ರಾಷ್ಟ್ರಪತಿ ಮುರ್ಮು ಅವರು … Continued

ವೀಡಿಯೊಗಳು…| ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್‌..! ಮಹಾಕುಂಭದಿಂದ 300 ಕಿಮೀ ವರೆಗೆ ಟ್ರಾಫಿಕ್ ಜಾಮ್ ; ಪ್ರಯಾಗರಾಜ್‌ ವಾಹನಗಳ ಸಮುದ್ರ…!!

ಮಹಾಕುಂಭಮೇಳ 2025 ಕ್ಕೆ ಉತ್ತರ ಪ್ರದೇಶದ ಪ್ರಯಾಗರಾಜ್‌ಗೆ ಲಕ್ಷಾಂತರ ಭಕ್ತರು ಹರಿದುಬರುತ್ತಿರುವುದರಿಂದ, ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಅಭೂತಪೂರ್ವಸಂಚಾರ ದಟ್ಟಣೆಗೆ ಸಾಕ್ಷಿಯಾಗುತ್ತಿದೆ, ಸುಮಾರು 300 ಕಿಲೋಮೀಟರ್ ದೂರದ ವರೆಗೆ ಟ್ರಾಫಿಕ್ ಜಾಮ್‌ ಉಂಟಾಗಿದೆ. ಪ್ರಯಾಗರಾಜ್ ಮಹಾಕುಂಭಮೇಳ ವಾಹನಗಳ ಸಮುದ್ರದಂತೆ ಭಾಸವಾಗುತ್ತಿದ್ದು, ಲಕ್ಷಾಂತರ ಜನರು ಟ್ರಾಫಿಕ್‌ರು ಜಾಮ್‌ಗಳಲ್ಲಿ ಭಾನುವಾರ ಸಿಲುಕಿಕೊಂಡಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ … Continued

ವೀಡಿಯೊ…| ಮಹಾಕುಂಭ ಮೇಳ ; ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಧಾನಿ ಮೋದಿ

ಪ್ರಯಾಗರಾಜ್‌ : ಪ್ರಧಾನಿ ನರೇಂದ್ರ ಮೋದಿ ಮಹಾಕುಂಭ ಮೇಳಕ್ಕೆ ಆಗಮಿಸಿದ್ದು, ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಕೇಸರಿ ಬಟ್ಟೆ ಧರಿಸಿ, ಕೈಯಲ್ಲಿ ‘ರುದ್ರಾಕ್ಷಿ ಮಾಲೆ’ ಹಿಡಿದು ಅವರು ಪ್ರಾರ್ಥಿಸಿದ್ದಾರೆ. ಇದಕ್ಕೂ ಮೊದಲು, ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಏರಿಯಲ್ ಘಾಟ್‌ನಿಂದ ಮಹಾಕುಂಭಕ್ಕೆ ದೋಣಿ ವಿಹಾರ ಮಾಡಿದ್ದಾರೆ. … Continued

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ : ಚಿತ್ರದುರ್ಗದಿಂದ ತೆರಳಿದ್ದ ನಾಗಸಾಧು ಸಾವು

ಚಿತ್ರದುರ್ಗ: ಉತ್ತರ ಪ್ರದೇಶದ ಪ್ರಯಾಗ​ರಾಜ್ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕರ್ನಾಟಕದ ಮತ್ತೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕಳೆದ ಆರೇಳು ವರ್ಷಗಳಿಂದ ಚಿತ್ರದುರ್ಗ ತಾಲೂಕಿನ ಸಿಬಾರ ಬಳಿಯ ಬಂಜಾರ ಗುರುಪೀಠದಲ್ಲಿ ವಾಸವಾಗಿದ್ದ ನಾಗಾಸಾಧು ರಾಜನಾಥ ಮಹಾರಾಜ್ (48) ಮೃತಪಟ್ಟಿದ್ದಾರೆ ಎಂದು ತಿಳುದುಬಂದಿದೆ. ರಾಜನಾಥ ಮಹಾರಾಜ್ ಅವರು ಹದಿನೈದು ದಿನಗಳ ಹಿಂದೆ ಕುಂಭಮೇಳಕ್ಕೆ ತೆರಳಿದ್ದರು. ಕಾಲ್ತುಳಿತದಲ್ಲಿ ಗಾಯಗೊಂಡಿದ್ದ ಅವರು … Continued

ಮಹಾಕುಂಭ ಮೇಳ : ಕಿನ್ನರ ಅಖಾಡದಿಂದ ನಟಿ ಮಮತಾ ಕುಲಕರ್ಣಿ ಉಚ್ಛಾಟನೆ

ಲಕ್ನೋ : ಬಾಲಿವುಡ್‌ ಮಾಜಿ ನಟಿ ಮಮತಾ ಕುಲಕರ್ಣಿ (Mamata Kulkarni) ಅವರನ್ನು ಅವರನ್ನು ಕಿನ್ನರ ಅಖಾಡದ ಮಹಾಮಂಡಲೇಶ್ವರ ಹುದ್ದೆಯಿಂದ ತೆಗೆದುಹಾಕಲಾಗಿದೆ. ಇವರೊಂದಿಗೆ ಲಕ್ಷ್ಮೀ ನಾರಾಯಣ ತ್ರಿಪಾಠಿ (Laxmi Narayan) ಅವರನ್ನು ಆಚಾರ್ಯ ಮಹಾಮಂಡಲೇಶ್ವರ ಹುದ್ದೆಯಿಂದ ತೆಗೆದುಹಾಕಲಾಗಿದೆ. ಕಿನ್ನರ್ ಅಖಾಡದ ಸಂಸ್ಥಾಪಕ ಅಜಯ ದಾಸ್ ಅವರು ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ … Continued

ವೀಡಿಯೊ…| ಮಹಾಕುಂಭ ಮೇಳದಲ್ಲಿ ಸಿದ್ಧವಾಗುತ್ತಿದ್ದ ಅಡುಗೆಗೆ ಬೂದಿ ಹಾಕಿದ ಪೊಲೀಸ್ ಅಧಿಕಾರಿ…!

ಪ್ರಯಾಗರಾಜ್: ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಕ್ತರಿಗೆ ಭಂಡಾರ (ಸಮುದಾಯ ಹಬ್ಬ)ದಲ್ಲಿ ನೀಡಲಾಗುವ ಆಹಾರಕ್ಕೆ ಬೂದಿ ಬೆರೆಸಿದ ವೀಡಿಯೊ ವೈರಲ್ ಆಗಿದ್ದು, ಈ ಸಂಬಂಧ ಪೊಲೀಸ್ ಅಧಿಕಾರಿಯೊಬ್ಬರನ್ನು ಗುರುವಾರ ಅಮಾನತು ಮಾಡಲಾಗಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಸೊರನ್‌ನ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಬ್ರಿಜೇಶಕುಮಾರ ತಿವಾರಿ ಎಂಬವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ … Continued

27 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಮಹಾಕುಂಭ ಮೇಳದಲ್ಲಿ ‘ಅಘೋರಿ’ ಬಾಬಾ ಆಗಿ ಕುಟುಂಬದವರಿಗೆ ಪತ್ತೆ…!

27 ವರ್ಷಗಳ ಹಿಂದೆ ಕಳೆದುಹೋಗಿದ್ದ ತಮ್ಮ ಮನೆಯ ವ್ಯಕ್ತಿಯನ್ನು ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪತ್ತೆಹಚ್ಚಿರುವುದಾಗಿ ಜಾರ್ಖಂಡದ ಕುಟುಂಬವೊಂದು ಬುಧವಾರ ಹೇಳಿಕೊಂಡಿದೆ…! ಅವರ ಪ್ರಕಾರ, 27 ವರ್ಷಗಳ ಹಿಂದೆ ಕಳೆದು ಹೋಗಿದ್ದ ವ್ಯಕ್ತಿ ಗಂಗಾಸಾಗರ ಯಾದವ್ ಎಂಬವರು ಈಗ 65 ವರ್ಷದ ‘ಅಘೋರಿ’ ಸನ್ಯಾಸಿ ಬಾಬಾ ರಾಜಕುಮಾರ ಎಂಬ ಹೆಸರಿನ ಸಾಧುವಾಗಿದ್ದು, ನಿರ್ದಿಷ್ಟ ಸನ್ಯಾಸಿಗಳ ವರ್ಗಕ್ಕೆ ಸೇರಿದವರಾಗಿದ್ದಾರೆ. … Continued

ʼಮೌನಿ ಅಮಾವಾಸ್ಯೆ’ಯಂದು ಮಹಾಕುಂಭ ಕಾಲ್ತುಳಿತ : 1954ರಿಂದ ಕುಂಭಮೇಳದಲ್ಲಿ ಸಂಭವಿಸಿದ ಪ್ರಮುಖ ಕಾಲ್ತುಳಿತದ ಘಟನೆಗಳು…

ನವದೆಹಲಿ: ‘ಮೌನಿ ಅಮಾವಾಸ್ಯೆ’ ಸಂದರ್ಭದಲ್ಲಿ ಪವಿತ್ರ ಸ್ನಾನ ಮಾಡಲು ಲಕ್ಷಾಂತರ ಯಾತ್ರಾರ್ಥಿಗಳು ಒಟ್ಟಾಗಿ ಸೇರಿದ್ದರಿಂದ ಮಹಾಕುಂಭದ ಸಂಗಮ ಪ್ರದೇಶದಲ್ಲಿ ಬುಧವಾರ ಮುಂಜಾನೆ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದು, 60 ಮಂದಿ ಗಾಯಗೊಂಡಿದ್ದಾರೆ. ಕುಂಭಮೇಳದ ಸಮಯದಲ್ಲಿ ಅತ್ಯಂತ ಮಂಗಳಕರ ಸಮಯವೊಂದರಲ್ಲಿ ಅಪಾರ ಸಂಖ್ಯೆಯ ಭಕ್ತರಿಂದ ಸ್ನಾನಕ್ಕಾಗಿ ನೂಕುನುಗ್ಗಲು ಉಂಟಾದ ಕಾರಣ ಈ … Continued

ಮಹಾಕುಂಭ ಕಾಲ್ತುಳಿತದಲ್ಲಿ 30 ಸಾವು, 60 ಮಂದಿಗೆ ಗಾಯ

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾಕುಂಭ ಮೇಳದಲ್ಲಿ ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನರು ಮೃತಪಟ್ಟಿದ್ದಾರೆ ಎಂದು ಮಹಾಕುಂಭದ ಉಪ ಮಹಾನಿರೀಕ್ಷಕ (ಡಿಐಜಿ) ವೈಭವ ಕೃಷ್ಣ ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿ ವೈಭವ್ ಕೃಷ್ಣ ಅವರು, 25 ಶವಗಳನ್ನು ಗುರುತಿಸಲಾಗಿದೆ, ಘಟನೆಯಲ್ಲಿ 60 ಮಂದಿ ಗಾಯಗೊಂಡಿದ್ದಾರೆ. ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು … Continued