ಮಹಾಕುಂಭ ಮೇಳ 2025 : ‘ಲೌಕಿಕ ಜೀವನʼ ತ್ಯಜಿಸಿ ಸನ್ಯಾಸಿ(ಸಾಧ್ವಿ)ಯಾದ ಐಎಎಸ್ ಆಗಬೇಕೆಂದು ಹಂಬಲಿಸಿದ್ದ 13 ವರ್ಷದ ಬಾಲಕಿ

ಪ್ರಯಾಗರಾಜ್‌ : ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಆಗ್ರಾದ ರಾಖಿ ಎಂಬ 13 ವರ್ಷದ ಬಾಲಕಿ ಮಹಾ ಕುಂಭಮೇಳದಲ್ಲಿ ‘ಸಾಧ್ವಿ’ ಆಗುವ ಇಚ್ಛೆ ವ್ಯಕ್ತಪಡಿಸಿದ ನಂತರ ಆಕೆಯ ಪೋಷಕರು ಆಕೆಯ ನಿರ್ಧಾರವನ್ನು ದೈವಿಕ ಇಚ್ಛೆಯಂತೆ ಸ್ವೀಕರಿಸಿ, ಅವಳನ್ನು ಜುನಾ ಅಖಾಡಾದ ಸುಪರ್ದಿಗೆ ನೀಡಿದ್ದಾರೆ. ವರದಿಗಳ ಪ್ರಕಾರ, ಆಗ್ರಾದ 13 ವರ್ಷದ ಬಾಲಕಿಯೊಬ್ಬಳು ಐಎಎಸ್ ಅಧಿಕಾರಿಯಾಗುವ ಕನಸನ್ನು … Continued

ವೀಡಿಯೊ..| ನಿದ್ದೆ ಅಂದ್ರೆ ಇದಪ್ಪ..! ಪಕ್ಕದಲ್ಲಿ ರೈಲು ನಿಂತ್ರೂ ಹಳಿ ಮೇಲೆ ಗಡದ್ದಾಗಿ ಮಲಗಿದ್ದ ಈ ವ್ಯಕ್ತಿ ; ಲೋಕೊ ಪೈಲಟ್‌ ಎಬ್ಬಿಸಬೇಕಾಯ್ತು..!!

ನವದೆಹಲಿ : ಜೀವನದ ಜಂಜಾಟವನ್ನು ಮರೆಯಲು ಕೆಲವೊಮ್ಮೆ ಒಳ್ಳೆಯ ನಿದ್ದೆ ಸಾಕಾಗುತ್ತದೆ. ಆದರೆ ಅದರಿಂದ ಜೀವಕ್ಕೆ ಕುತ್ತು ಬರುವ ಸಾಧ್ಯತೆಯೂ ಇರುತ್ತದೆ ಎಂಬುದಕ್ಕೆ ಘಟನೆಯೊಂದು ಸಾಕ್ಷಿಯಾಗಿದೆ. ಈ ಘಟನೆಯಲ್ಲಿ ರೈಲ್ವೆ ಹಳಿಯ ಮೇಲೆ ಗಡದ್ದಾಗಿ ನಿದ್ದೆ ಹೋಗಿದ್ದ ವ್ಯಕ್ತಿಯೊಬ್ಬರನ್ನು ರೈಲ್ವೆಯ ಲೋಕೊ ಪೈಲಟ್‌ ಅವರ ಸಮಯ ಪ್ರಜ್ಞೆಯಿಂದ ಜೀವ ಕಳೆದುಕೊಳ್ಳುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿದ್ದಾರೆ. ವೈರಲ್‌ ಆದ … Continued

ಪ್ಲೇಟ್‌ಲೆಟ್‌ಗಳ ಬದಲಿಗೆ ಹಣ್ಣಿನ ರಸ ತುಂಬಿದ ಡ್ರಿಪ್ಸ್‌ ನೀಡಿದ ಸಿಬ್ಬಂದಿ : ರೋಗಿ ಸಾವು, ಆಸ್ಪತ್ರೆ ಸೀಲ್…!

ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ರಕ್ತದ ಪ್ಲೇಟ್‌ಲೆಟ್‌ಗಳ ಬದಲಿಗೆ ಹಣ್ಣಿನ ರಸವನ್ನು ತುಂಬಿಸಿ ಡ್ರಿಪ್ಸ್‌ ಮೂಲಕ ನೀಡಿದ ನಂತರ ಡೆಂಗ್ಯೂ ರೋಗಿ ಮೃತಪಟ್ಟ ಘಟನೆಯ ಬಗ್ಗೆ ಜಿಲ್ಲಾಡಳಿತದ ಪ್ರಾಥಮಿಕ ತನಿಖೆ ನಡೆಸಿದ್ದು, ಆಸ್ಪತ್ರೆಯ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೋಗಿಯ … Continued