ಮಹಾಕುಂಭ ಕಾಲ್ತುಳಿತದಲ್ಲಿ 30 ಸಾವು, 60 ಮಂದಿಗೆ ಗಾಯ

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾಕುಂಭ ಮೇಳದಲ್ಲಿ ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನರು ಮೃತಪಟ್ಟಿದ್ದಾರೆ ಎಂದು ಮಹಾಕುಂಭದ ಉಪ ಮಹಾನಿರೀಕ್ಷಕ (ಡಿಐಜಿ) ವೈಭವ ಕೃಷ್ಣ ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿ ವೈಭವ್ ಕೃಷ್ಣ ಅವರು, 25 ಶವಗಳನ್ನು ಗುರುತಿಸಲಾಗಿದೆ, ಘಟನೆಯಲ್ಲಿ 60 ಮಂದಿ ಗಾಯಗೊಂಡಿದ್ದಾರೆ. ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು … Continued

ಪ್ರಯಾಗರಾಜ್‌ ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ; ತಾಯಿ, ಮಗಳು ಸೇರಿ ಬೆಳಗಾವಿಯ ನಾಲ್ವರು ಸಾವು

ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಜನವರಿ 29ರಂದು ಬೆಳಗ್ಗೆ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬೆಳಗಾವಿ ನಗರದ ವಡಗಾವಿ ನಿವಾಸಿಗಳಾದ ತಾಯಿ-ಮಗಳಾದ ಜ್ಯೋತಿ ಹತ್ತರವಾಠ (50) ಹಾಗೂ ಮೇಘಾ ಹತ್ತರವಾಠ, ಶೆಟ್ಟಿ ಗಲ್ಲಿಯ ಅರುಣ ಕೋರ್ಪಡೆ ಹಾಗೂ ಶಿವಾಜಿನಗರ ನಿವಾಸಿ ಮಹಾದೇವಿ ಬಾವನೂರ ಮೃತರು ಎಂದು … Continued

ಮಹಾಕುಂಭ ಮೇಳ ; ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರಿಗೆ ಗಾಯ

ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ಇಬ್ಬರು ಬಿಜೆಪಿ ಕಾರ್ಯಕರ್ತೆಯರು ಹಾಗೂ ಇಬ್ಬರು ಬಾಲಕಿಯರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇಲ್ಲಿನ ವಡಗಾವಿಯ ನಿವಾಸಿ ಸರೋಜಿನಿ ನಡುವಿನಹಳ್ಳಿ ಹಾಗೂ ಕಾಂಚನ್ ಕೋಪಾರ್ಡೆ ಎಂಬವರು ಗಾಯಗೊಂಡ ಬಿಜೆಪಿ ಕಾರ್ಯಕರ್ತೆಯರು. ಅವರೊಂದಿಗೇ ಇದ್ದ ಬಾಲಕಿಯರಾದ ಮೇಘಾ, ಜ್ಯೋತಿ ಅವರಿಗೂ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲಿನ … Continued

ಮಹಾಕುಂಭ ಮೇಳ 2025 : ಪ್ರಯಾಗರಾಜ್‌ ನಲ್ಲಿದ್ದಾರೆ ಈಗ ಸುಮಾರು 10 ಕೋಟಿ ಭಕ್ತರು…!

ಪ್ರಯಾಗರಾಜ್‌ : ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾ ಕುಂಭಮೇಳದಲ್ಲಿ ಕಾಲ್ತುಳಿತದಂತಹ ಸ್ಥಿತಿ ನಿರ್ಮಾಣವಾದ ನಂತರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬುಧವಾರ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪರಿಸ್ಥಿತಿ “ನಿಯಂತ್ರಣದಲ್ಲಿದೆ” ಮತ್ತು ‘ಮೌನಿ ಅಮಾವಾಸ್ಯೆ’ ಸಂದರ್ಭದಲ್ಲಿ ‘ಅಮೃತ ಸ್ನಾನ’ (ರಾಯಲ್ ಟಬ್) ಪುನರಾರಂಭವಾಗಲಿದೆ ಎಂದು ಹೇಳಿದ್ದಾರೆ. “ಘಟನೆಯು ಮಂಗಳವಾರ ಮಧ್ಯರಾತ್ರಿ 1 ಗಂಟೆ ಮತ್ತು 2 … Continued

ಮಹಾಕುಂಭದಲ್ಲಿ ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣ ; 30 ಜನರಿಗೆ ಗಾಯ

ಪ್ರಯಾಗರಾಜ್‌ : ಮೌನಿ ಅಮಾವಾಸ್ಯೆಯ ಬೆಳಿಗ್ಗೆ ಮಹಾಕುಂಭದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿ ಸುಮಾರು 30 ಮಹಿಳೆಯರು ಗಾಯಗೊಂಡಿದ್ದಾರೆ. ‘ಅಮೃತ ಸ್ನಾನ’ಕ್ಕೆ ಮುನ್ನ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಟೆಂಟ್‌ ಸಿಟಿಗೆ ಕೋಟಿಗಟ್ಟಲೆ ಭಕ್ತರು ಹರಿದು ಬಂದರಂತೆ. ‘ಸಂಗಮ’ದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಜನಸಂದಣಿಯ ಮಧ್ಯೆ, ಬ್ಯಾರಿಕೇಡ್‌ಗಳನ್ನು ಮುರಿದು ಒಳನುಗ್ಗಿದರು. ಈ ವೇಳೆ ಜನದಟ್ಟೆಣೆಯಿಂದಾಗಿ ಉಸಿರಾಟದ ಸಮಸ್ಯೆ … Continued

ವೀಡಿಯೊ…| ಮಹಾಕುಂಭಕ್ಕೆ ಹೋಗುವ ವಿಶೇಷ ರೈಲಿನ ಕಂಪಾರ್ಟ್‌ಮೆಂಟುಗಳ ಬಾಗಿಲು ಲಾಕ್‌ ; ರೈಲಿಗೆ ಕಲ್ಲು ತೂರಿದ ಪ್ರಯಾಣಿಕರು

ಮಹಾಕುಂಭ ಶಾಹಿ ಸ್ನಾನಕ್ಕಾಗಿ ಝಾನ್ಸಿಯಿಂದ ಪ್ರಯಾಗರಾಜ್‌ಗೆ ತೆರಳುತ್ತಿದ್ದ ವಿಶೇಷ ರೈಲಿನ ಮೇಲೆ ಮಂಗಳವಾರ ದಾಳಿ ನಡೆದಿದ್ದು, ಹರ್ಪಾಲಪುರ ರೈಲು ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ ಹಲವಾರು ಪ್ರಯಾಣಿಕರು ರೈಲು ಕಂಪಾರ್ಟ್‌ಮೆಂಟ್‌ಗಳಿಗೆ ಬಾಗಿಲು ಹಾಕಿರುವುದನ್ನು ಕಂಡು ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಯು ರೈಲು ಒಳಗಿದ್ದ ಪ್ರಯಾಣಿಕರಿಗೆ ಆಘಾತಗೊಳಿಸಿತು. ಕಲ್ಲು ತೂರಾಟದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು … Continued

ಬಾಹ್ಯಾಕಾಶದಿಂದ ಮಹಾ ಕುಂಭಮೇಳ ಹೇಗೆ ಕಾಣುತ್ತದೆ..? ಫೊಟೋ ಬಿಡುಗಡೆ ಮಾಡಿದ ಇಸ್ರೋ

ಪ್ರಯಾಗರಾಜ್: ಭಾರತದ ಬಾಹ್ಯಾಕಾಶ ಸಂಸ್ಥೆ (ISRO), ಭಾರತೀಯ ಉಪಗ್ರಹಗಳನ್ನು ಬಳಸಿ, ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ವಿಶ್ವದ ಏಕೈಕ ದೊಡ್ಡ ಧಾರ್ಮಿಕ ಮೇಳದ ಚಿತ್ರಗಳನ್ನು ಬೀಮ್ ಮಾಡಿದೆ. ಇಸ್ರೋ (ISRO)ದ ಚಿತ್ರಗಳು ಮೇಳದಲ್ಲಿ ಮಾಡಿದ ಬೃಹತ್ ಮೂಲಸೌಕರ್ಯವನ್ನು ತೋರಿಸುತ್ತವೆ, ಕುಂಭಮೇಳದ 45 ದಿನಗಳ ಅವಧಿಯಲ್ಲಿ ಸುಮಾರು 40 ಕೋಟಿ ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಭಾರತದ … Continued

ಮಹಾ ಕುಂಭದಲ್ಲಿ ಬೆಂಕಿ ಅನಾಹುತ : ಸುಮಾರು 100 ಟೆಂಟ್‌ಗಳು ಸುಟ್ಟು ಕರಕಲು

ಪ್ರಯಾಗರಾಜ್ : ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿರುವ ಮಹಾಕುಂಭ ಸ್ಥಳದಲ್ಲಿ ಟೆಂಟ್‌ನಲ್ಲಿ ಎರಡು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡ ನಂತರ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. 100ಕ್ಕೂ ಹೆಚ್ಚು ಡೇರೆಗಳಿಗೆ ಬೆಂಕಿ ವ್ಯಾಪಿಸಿ ಸುಟ್ಟು ಕರಕಲಾಗಿದೆ ಎಂದು ವರದಿ ತಿಳಿಸಿದೆ. ಅದೃಷ್ವಶಾತ್‌ ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬೃಹತ್ ಮಹಾಕುಂಭದಲ್ಲಿ ಸುರಕ್ಷತಾ ವ್ಯವಸ್ಥೆಯ … Continued

ಮಹಾಕುಂಭ 2025 : ತಲೆ ಮೇಲೆ 45 ಕಿಲೋ ತೂಕದ ರದ್ರಾಕ್ಷಿ ಸರ ಹೊತ್ತ ಸನ್ಯಾಸಿ….!

ಪ್ರಯಾಗರಾಜ್‌ : ಉತ್ತರ ಪ್ರದೇಶದ ಪ್ರಯಾಗರಾಜದ ಸಂಗಮದ ಮಹಾ ಕುಂಭ 2025 ಸೋಮವಾರದಿಂದ ಆರಂಭವಾಗಿದೆ. ಇಲ್ಲಿ ಸೇರುವ ಸಂತರು ಮತ್ತು ಭಕ್ತ ಸಾಗರದ ನಡುವೆ, ಅತೀಂದ್ರಿಯ ಮತ್ತು ತಪಸ್ವಿಗಳ ಒಂದು ಅನನ್ಯ ಸಮೂಹ ಇದೆ, ಅವರ ನಿಗೂಢ ನೋಟ ಮತ್ತು ಅಸಾಧಾರಣ ಆಚರಣೆಗಳು ಅವರನ್ನು ಧಾರ್ಮಿಕ ಉತ್ಸವದಲ್ಲಿ ಆಕರ್ಷಣೆಯ ಕೇಂದ್ರವನ್ನಾಗಿ ಮಾಡಿದೆ. ಅಂಥವರಲ್ಲಿ ರುದ್ರಾಕ್ಷ ಬಾಬಾ … Continued

ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ ಆ್ಯಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್‌ ಪತ್ನಿ ಲಾರೆನ್ ; 2 ವಾರ ಪ್ರಯಾಗರಾಜ್‌ ನಲ್ಲಿ ವಾಸ್ತವ್ಯ

ನವದೆಹಲಿ: ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ವಿಧವೆ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರು ಜನವರಿ 13ರಿಂದ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶ್ವದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ಲಾರೆನ್‌ ಜಾಬ್‌ ಅವರು ಕುಂಭ ಮೇಳದ ಸಮಯದಲ್ಲಿ ಅಭ್ಯಾಸ ಮಾಡುವ ಪುರಾತನ ಆಧ್ಯಾತ್ಮಿಕ ಪದ್ಧತಿ ʼಕಲ್ಪವಾಸʼಕ್ಕೆ ಸಿದ್ಧರಾಗಿದ್ದಾರೆ. ಲಾರೆನ್ ಪೊವೆಲ್ … Continued