‘ಭಿಕ್ಷುಕನ ಜೊತೆ ಓಡಿಹೋದ ಮಹಿಳೆ’ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್ ; ಆಕೆ ಭಿಕ್ಷುಕನೊಂದಿಗೆ ಓಡಿಹೋಗಿಲ್ಲ : ಮಹಿಳೆ ಮನೆ ಬಿಟ್ಟ ಕಾರಣ….

ಹರ್ದೋಯಿ : ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬಳು ಭಿಕ್ಷುಕನ ಜೊತೆ ಓಡಿಹೋಗಿದ್ದಾಳೆ ಎಂಬ ವ್ಯಾಪಕವಾಗಿ ಪ್ರಸಾರವಾದ ಸುದ್ದಿಗೆ ಈಗ ಟ್ವಿಸ್ಟ್ ಹೊರಹೊಮ್ಮಿದೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಭಿಕ್ಷುಕನ ಜೊತೆ ಓಡಿಹೋಗಿದ್ದಾಳೆ ಎಂದು ಪತಿ ಆರೋಪಿಸಿರುವ ಮಹಿಳೆ, ತನ್ನ ಪತಿ ಪದೇ ಪದೇ ನಿಂದಿಸುತ್ತಿದ್ದುದರಿಂದ ಮತ್ತು ಥಳಿಸುತ್ತಿದ್ದುದರಿಂದ ಸಂಬಂಧಿಕರ ಮನೆಗೆ ತೆರಳಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ತಾನು … Continued

ವೀಡಿಯೊ…| ಮನೆಯ ಟೆರೇಸ್ ಮೇಲೆ ಗಾಳಿಪಟ ಹಾರಿಸಿದ ಮಂಗ…! ಬೆರಗಾದ ಇಂಟರ್ನೆಟ್‌….

ಭಾರತದಲ್ಲಿ ಗಾಳಿಪಟ ಹಾರಿಸುವ ಹಬ್ಬವನ್ನು ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಆಚರಿಸಲಾಗುತ್ತದೆ ಮತ್ತು ಗುಜರಾತ್ ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸುತ್ತದೆ. ಉತ್ತರಾಯಣ ಎಂದು ಕರೆಯಲ್ಪಡುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ ಮತ್ತು ಗಾಳಿಪಟಗಳನ್ನು ಹಾರಿಸುತ್ತಾರೆ. ಆದರೆ, ಕೋತಿಯೊಂದು ಕಟ್ಟಡದ ಟೆರೇಸ್ ಮೇಲೆ ಗಾಳಿಪಟ ಹಾರಿಸುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ … Continued

ಗೆಳತಿಯನ್ನು ಇಂಪ್ರೆಸ್‌ ಮಾಡಲು ಸಿಂಹದ ಪಂಜರ ಹೊಕ್ಕ ಭೂಪ..! ಆಮೇಲೆ ನಡೆದಿದ್ದು ಭಯಾನಕ

ಪ್ರೇಯಸಿಯನ್ನು ಇಂಪ್ರೆಸ್‌ ಮಾಡಲು ಹೋಗಿ ವ್ಯಕ್ತಿಯೊಬ್ಬ ಸಿಂಹಕ್ಕೆ ಆಹಾರವಾದ ಘಟನೆ ವರದಿಯಾಗಿದೆ. ಈ ಘಟನೆ ಉಜ್ಬೇಕಿಸ್ತಾನದಲ್ಲಿ ನಡೆದಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ವ್ಯಕ್ತಿಯು ಉಜ್ಬೇಕಿಸ್ತಾನ್‌ನ ಪಾರ್ಕೆಂಟ್‌ನಲ್ಲಿರುವ ಖಾಸಗಿ ಮೃಗಾಲಯದಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಅತ ತನ್ನ ಗೆಳತಿಯನ್ನು ಮೆಚ್ಚಿಸಲು ಸಿಂಹ ಇರುವ ಗುಹೆಗೆ ಪ್ರವೇಶಿಸಿದ್ದಾನೆ. ಆಗ ಸಿಂಹಗಳು ಆತನ ಮೇಲೆ ದಾಳಿ ಮಾಡಿದ್ದರಿಂದ ಆತ … Continued

ಪವಾಡ…! ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ಘೋಷಿಸಿದ್ದ ವ್ಯಕ್ತಿ ರೋಡ್‌ ಹಂಪ್‌ ನಿಂದಾಗಿ ಜೀವಂತ…!!

ಕೊಲ್ಲಾಪುರ: ಅಸಾಮಾನ್ಯ ಘಟನೆಯೊಂದರಲ್ಲಿ ಪಶ್ಚಿಮ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಸಬಾ-ಬವಾಡ ನಿವಾಸಿಯೊಬ್ಬರ ಮೃತದೇಹವನ್ನು ಅಂಬುಲೆನ್ಸ್‌ನಲ್ಲಿ ಒಯ್ಯುತ್ತಿದ್ದಾಗ ಅದು ಸ್ಪೀಡ್‌ ಬ್ರೇಕರ್‌ ಮೇಲೆ ಹಾಯ್ದುಹೋಗುವಾಗ ಹಾರಿದ್ದಕ್ಕೆ ಶವಕ್ಕೆ ಪ್ರಜ್ಞೆ ಬಂದ ಘಟನೆ ವರದಿಯಾಗಿದೆ…! ಪಾಂಡುರಂಗ ಉಲ್ಪೆ ಎಂಬ 65 ವರ್ಷದ ವ್ಯಕ್ತಿ ಕುಟುಂಬದವರು ಆತನ ಮೃತದೇಹವನ್ನು ಆಸ್ಪತ್ರೆಯಿಂದ ಆಂಬ್ಯುಲೆನ್ಸ್‌ನಲ್ಲಿ ಸಾಗಿಸುತ್ತಿದ್ದರು, ಅವರು ಪಾಂಡುರಂಗ ಉಲ್ಪೆ ಮೃತಪಟ್ಟಿದ್ದಾರೆ ಎಂದು … Continued

ವೀಡಿಯೊ..| ಈ ಮಂಗ ಚಪಾತಿ ಮಾಡುತ್ತದೆ…ಪಾತ್ರೆ ತೊಳೆಯುತ್ತದೆ…ಮಸಾಲೆ ರುಬ್ಬುತ್ತದೆ…!

ರಾಯ್ಬರೇಲಿ : ಉತ್ತರ ಪ್ರದೇಶದ ರಾಯ್ಬರೇಲಿ ಜಿಲ್ಲೆಯಲ್ಲಿ ರಾಣಿ ಎಂಬ ಮಂಗನ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಕೋತಿ ರೊಟ್ಟಿ ಮಾಡುವುದರಿಂದ ಹಿಡಿದು ಪಾತ್ರೆ ತೊಳೆಯುವವರೆಗೆ ಮನೆಕೆಲಸಗಳನ್ನು ಮಾಡುತ್ತದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಮನೆಯ ಕೆಲಸಗಳನ್ನು ಮಾಡುತ್ತಿರುವ ಕೋತಿಯನ್ನು ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ರಾಣಿ ಸಾಮಾಜಿಕ ಜಾಲತಾಣಗಳಲ್ಲಿ … Continued

6 ಜನರನ್ನು ಮದುವೆಯಾದ ಮಹಿಳೆ ; ನಂತರ ನಗದು-ಚಿನ್ನಾಭರಣಗಳೊಂದಿಗೆ ಪರಾರಿ; 7ನೇ ಮದುವೆಗೆ ಯತ್ನಿಸಿದಾಗ ಸಿಕ್ಕಿಬಿದ್ದ ಗ್ಯಾಂಗ್‌…!

ನವದೆಹಲಿ : ಒಬ್ಬಂಟಿ ಪುರುಷರನ್ನು ಮದುವೆಯಾಗಿ ನಂತರ ಅವರ ಮನೆಯಿಂದ ಹಣ ಮತ್ತು ಚಿನ್ನಾಭರಣ ಕದಿಯುತ್ತಿದ್ದ ಗ್ಯಾಂಗ್ ಅನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಬಂಧಿಸಲಾಗಿದೆ. ಇಬ್ಬರು ಮಹಿಳೆಯರಲ್ಲಿ, ಪೂನಂ ವಧುವಿನಂತೆ ಪೋಸ್ ಕೊಡುತ್ತಿದ್ದರೆ ಇನ್ನೊಬ್ಬಳು ಸಂಜನಾ ಗುಪ್ತಾ ಎಂಬವಳು ತಾಯಿಯಂತೆ ಪೋಸ್ ನೀಡುತ್ತಿದ್ದಳು. ವಿಮಲೇಶ … Continued

ನಂಬಲಾಗದ ವೀಡಿಯೊ ; ಸತ್ತ ಮೊಸಳೆಯನ್ನು ತಿನ್ನುವ ಶಾರ್ಕ್‌

ಹಸಿದ ಶಾರ್ಕ್ ಸತ್ತ ಮೊಸಳೆಯನ್ನು ತಿನ್ನುವ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಈ ಘಟನೆ ಡಿಸೆಂಬರ್ 13 ರಂದು ಆಸ್ಟ್ರೇಲಿಯಾದ ನ್ಹುಲುನ್‌ಬುಯ್‌ನಲ್ಲಿರುವ ಟೌನ್ ಬೀಚ್‌ನಲ್ಲಿ ನಡೆದಿದೆ. ಆಲಿಸ್ ಬೆಡ್‌ವೆಲ್ ಎಂಬವರು ಅಸಾಮಾನ್ಯ ಘಟನೆಯ ವೀಡಿಯೊ ಹಂಚಿಕೊಂಡಿದ್ದಾರೆ. ಬೆನ್ನು ಅಡಿಗೆ ಮಾಡಿ ಮಲಗಿ ತಲೆಯು ನೀರಿನಲ್ಲಿರುವ ಸ್ಥಿತಿಯಲ್ಲಿ ಮೊಸಳೆ ಇರುವಾಗ ವೀಡಿಯೊ ಪ್ರಾರಂಭವಾಗುತ್ತದೆ. ಶೀಘ್ರದಲ್ಲೇ, ದೊಡ್ಡ ಶಾರ್ಕ್ ನಿಧಾನವಾಗಿ … Continued

ವೀಡಿಯೊ..| : ಪಾಕಿಸ್ತಾನದ ಸಿಂಧ್ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾದ ʼಬಿಹಾರಿʼ ಎಂಬ ಪದ…!

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಅಸೆಂಬ್ಲಿಯಲ್ಲಿ ಪಾಕಿಸ್ತಾನದಾದ್ಯಂತ ‘ಬಿಹಾರಿ’ ಪದದ ಬಳಕೆಯ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಿತು. ಶಾಸಕ ಸೈಯದ್ ಎಜಾಜ್ ಉಲ್ ಹಕ್ ಅವರು ‘ಬಿಹಾರಿ’ ಎಂದು ಕರೆದು ಗೇಲಿ ಮಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಿಂಧ್‌ ಪ್ರಾಂತ್ಯದ ವಿಧಾನಸಭೆಯಲ್ಲಿ ಶಾಸಕರು ಈ ಪದವನ್ನು ತಪ್ಪಾಗಿ ಪ್ರಸ್ತುತಪಡಿಸುವುದು … Continued

40 ವರ್ಷದಲ್ಲಿ ಬರೋಬ್ಬರಿ 12 ಸಲ ಡೈವೋರ್ಸ್‌; 12 ಬಾರಿ ಮರುಮದುವೆಯಾದ ಅದೇ ದಂಪತಿ..! ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ…

ಈ ದಂಪತಿ 40 ವರ್ಷಗಳಲ್ಲಿ ಬರೋಬ್ಬರಿ 12 ಬಾರಿ ಡಿವೋರ್ಸ್‌ ನೀಡಿ 12 ಸಲ ಮರುಮದುವೆಯಾಗಿದ್ದಾರೆ. ಇದೀಗ ಈ ದಂಪತಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಈ ದಂಪತಿಯ ಡೈವೋರ್ಸ್‌ ಸುದ್ದಿ ಭಾರೀ ವೈರಲ್‌ ಆಗುತ್ತಿದೆ. ಆಸ್ಟ್ರಿಯನ್ ದಂಪತಿ ಸರ್ಕಾರದಿಂದ ಕೊಡುವ ಪಿಂಚಣಿಯ ಲಾಭ ಪಡೆಯುವ ಸಲುವಾಗಿ 73 ವರ್ಷ ವಯಸ್ಸಿನ ಮಹಿಳೆಯು ಪಿಂಚಣಿ ಪಡೆಯಲು ಕಾನೂನನ್ನು … Continued

ಜೀವಂತ ಕೋಳಿಮರಿ ನುಂಗಿದ ವ್ಯಕ್ತಿ ಸಾವು ; ಆದ್ರೆ ದೇಹದೊಳಗೆ ಬದುಕುಳಿದ ಕೋಳಿಮರಿ…!!

ವಿಚಿತ್ರ ಘಟನೆಯೊಂದರಲ್ಲಿ ಛತ್ತೀಸ್‌ಗಢದ ವ್ಯಕ್ತಿಯೊಬ್ಬ ಜೀವಂತ ಕೋಳಿಮರಿಯನ್ನು ನುಂಗಿ ಉಸಿರುಗಟ್ಟಿ ಸಾವಿಗೀಡಾಗಿದ್ದಾನೆ. ಆದರೆ ವಿಚಿತ್ರವೆಂದರೆ ಆತ ನುಂಗಿದ ಕೋಳಿಮರಿ ದೇಹದೊಳಗೆ ಜೀವಂತವಾಗಿ ಪತ್ತೆಯಾಗಿದೆ…! ಗ್ರಾಮಸ್ಥರ ಪ್ರಕಾರ ಇದು ನಿಗೂಢ ಕ್ಷುದ್ರ ಆಚರಣೆ ಭಾಗವಾಗಿ ನಡೆದ ವಿದ್ಯಮಾನವಾಗಿದೆ. ಛತ್ತೀಸ್‌ಗಢದ ಅಂಬಿಕಾಪುರದ ಚಿಂಡ್ಕಾಲೋ ಗ್ರಾಮದ ಆನಂದ ಯಾದವ ಎಂಬ 35 ವರ್ಷದ ವ್ಯಕ್ತಿ, ಸ್ನಾನ ಮುಗಿಸಿ ಬಂದ ಸ್ವಲ್ಪ … Continued