ತಂದೆಯ ಫೋನ್-ಬ್ಯಾಗ್‌ ಕದ್ದ ಕಳ್ಳನನ್ನು ʼಗೂಗಲ್ ಮ್ಯಾಪ್‌ʼ ಸಹಾಯದಿಂದ ಹಿಡಿದ ಮಗ..! : ಅದು ಹೇಗಾಯ್ತು ಎಂಬುದು ಇಲ್ಲಿದೆ..

ಒಂದೆಡೆ, ಜನರು ಕುರುಡಾಗಿ ಗೂಗಲ್‌ ಮ್ಯಾಪ್‌ (Google Map) ಅನುಸರಿಸಿ ಅಪಾಯಕ್ಕೆ ಸಿಲುಕಿದ್ದನ್ನು ಆಗಾಗ್ಗೆ ಕೇಳುತ್ತೇವೆ, ಕೆಲವೊಮ್ಮೆ ಅದನ್ನು ಅನುಸಿರಿಸಿ ದುರದೃಷ್ಟಕರ ಅಪಘಾತಗಳಿಗೆ ಕಾರಣವಾದ ಘಟನೆಗಳೂ ವರದಿಯಾಗಿವೆ. ಆದರೆ ಈ ಘಟನೆಯಲ್ಲಿ ಜಿಪಿಎಸ್‌ (GPS) ‘ಸೂಪರ್‌ ಹೀರೋ’ ಆಗಿ ಕಳ್ಳನನ್ನು ಹಿಡಿಯಲು ನೆರವಾದ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.
ಈ ನಿರ್ದಿಷ್ಟ ಘಟನೆಯಲ್ಲಿ, ವ್ಯಕ್ತಿಯೊಬ್ಬ ತನ್ನ ತಂದೆಯ ಮೊಬೈಲ್ ಫೋನ್ ಕಳ್ಳತನ ಮಾಡಿದ ಕಳ್ಳನನ್ನು ಹಿಂಬಾಲಿಸಲು ಮತ್ತು ಆತನನ್ನು ಹಿಡಿಯಲು ಗೂಗಲ್‌ ನಕ್ಷೆ (Google Map) ಬಳಸಿ ಯಶಸ್ವಿಯಾಗಿದ್ದಾನೆ.
ರಾಜ ಭಗತ್ ಪಿ ಎಂಬ ಟೆಕ್ಕಿ ಈ ಬಗ್ಗೆ ‘X’ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ನನ್ನ ತಂದೆ ನಾಗರ್‌ಕೋಯಿಲ್‌ನಿಂದ ತಿರುಚ್ಚಿಗೆ ನಾಗರಕೋಯಿಲ್ – ಕಾಚೇಗುಡ್‌ ಎಕ್ಸ್‌ಪ್ರೆಸ್‌ನಲ್ಲಿ ಸ್ಲೀಪರ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅವರು ನಾಗರಕೋಯಿಲ್ ನಿಂದ ಬೆಳಿಗ್ಗೆ 1:43ಕ್ಕೆ ರೈಲು ಹತ್ತಿದರು. ರೈಲು ಸ್ವಲ್ಪ ಖಾಲಿಯಿತ್ತು. ನನ್ನ ತಂದೆಯೊಂದಿಗೆ ಹತ್ತಿದ ಇನ್ನೊಬ್ಬ ವ್ಯಕ್ತಿ ನನ್ನ ತಂದೆಯ ಬ್ಯಾಗ್ ಮತ್ತು ಮೊಬೈಲ್ ಫೋನ್ ಕದ್ದು ತಿರುನೆಲ್ವೇಲಿ ಜಂಕ್ಷನ್‌ನಲ್ಲಿ ಇಳಿದಿದ್ದಾನೆ. ತಂದೆ ರಾಜ ಭಗತ್ ಅವರಿಗೆ ತಮ್ಮ ಸ್ನೇಹಿತನ ಮೂಲಕ ಸುಮಾರು ಬೆಳಿಗ್ಗೆ 3:50 ಗಂಟೆಗೆ ಸುಮಾರಿಗೆ ಕಳುವಾದ ಬಗ್ಗೆ ತಿಳಿಸುವ ಸಂಕಟದ ಕರೆ ಮಾಡಿದ್ದಾರೆ. ಅದೃಷ್ಟವಶಾತ್, ಕುಟುಂಬವು ತನ್ನ ಹತ್ತಿರದ ಸದಸ್ಯರಲ್ಲಿ ಸ್ಥಳದ ಬಗ್ಗೆ ಮಾಹಿತಿ ಹಂಚಿಕೆ ಮಾಡುವ ಆಯ್ಕೆಯನ್ನು ಸಕ್ರಿಯಗೊಳಿಸಿತ್ತು, ಇದು ರಾಜ ಭಗತ್ ಮೊಬೈಲ್ ಚಲನೆಯನ್ನು ಟ್ರ್ಯಾಕ್ ಮಾಡಲು ಅವಕಾಶ ಮಾಡಿಕೊಟ್ಟಿತು ಎಂದು ರಾಜ ಭಗತ್‌ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮಧ್ಯಂತರ ಜಾಮೀನು ಸಿಕ್ಕರೂ ಕೇಜ್ರಿವಾಲ್‌ ದೆಹಲಿ ಸಿಎಂ ಕಚೇರಿಗೆ ಹೋಗುವಂತಿಲ್ಲ...

ಕಳುವಾದ ಮೊಬೈಲ್‌ ಎಲ್ಲಿದೆ ಎಂದು ಸ್ಥಳವನ್ನು ಟ್ರ್ಯಾಕ್‌ ಮಾಡಿದ ಅವರು, ಕಳ್ಳ ಮತ್ತೊಂದು ರೈಲಿನಲ್ಲಿ ನಾಗರಕೋಯಿಲ್‌ಗೆ ಹಿಂತಿರುಗುತ್ತಿದ್ದಾನೆ ಎಂದು ಕಂಡುಕೊಂಡರು. ತ್ವರಿತ ಕ್ರಮ ಕೈಗೊಂಡ ಅವರು ಮತ್ತು ಆವರ ಸ್ನೇಹಿತ ಪೊಲೀಸ್ ಠಾಣೆಗೆ ಈ ಬಗ್ಗೆ ತಿಳಿಸಿ ಅವರಿಂದ ನೆರವು ಕೋರಿದರು. ಹಾಗೂ ನಾಗರಕೋಯಿಲ್‌ಗೆ ಬಂದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಕಳ್ಳ ನಾಗರಕೋಯಿಲ್‌ ಬರುತ್ತಾನೆಂದು ನಿರೀಕ್ಷಿಸಿ ಇವರಿಬ್ಬರ ಜೊತೆ ರೈಲ್ವೆ ನಿಲ್ದಾಣಕ್ಕೆ ತೆರಳಿದರು. ಅಲ್ಲಿ ಕಳ್ಳನನ್ನು ಪತ್ತೆ ಮಾಡಿದರೂ ಆತ ಗುಂಪಿನಲ್ಲಿ ಸೇರಿ ಸ್ವಲ್ಪ ಸಮಯದಲ್ಲೇ ಅವರಿಂದ ತಪ್ಪಿಸಿಕೊಂಡ. “ಆತನ ಚಲನವಲನಗಳನ್ನು ಜಿಪಿಎಸ್‌ ಮೂಲಕ ಟ್ರ್ಯಾಕ್‌ ಮಾಡಿದಾಗ ಆತ ರೈಲ್ವೆ ನಿಲ್ದಾಣದ ಮುಖ್ಯ ಗೇಟ್ ಮೂಲಕ ನಿರ್ಗಮಿಸಿದ್ದು ಕಂಡುಬಂತು.

ಕಳ್ಳ ನಂತರ ಅಣ್ಣಾ ಬಸ್ ನಿಲ್ದಾಣ ನಿಲ್ದಾಣ ಹಾಗೂ ನಾಗರಕೋಯಿಲ್ ರೈಲ್ವೆ ನಿಲ್ದಾಣ ಸಂಪರ್ಕಿಸುವ ಸ್ಥಳೀಯ ಬಸ್ ಏರಿದ್ದ. ಆದ್ದರಿಂದ ರಾಜ ಭಗತ್‌ ಹಾಗೂ ಪೊಲೀಸರು ಬೈಕ್‌ನಲ್ಲಿ ಬಸ್‌ ಅನ್ನು ಹಿಂಬಾಲಿಸಿದರು. ಗೂಗಲ್‌ ಮ್ಯಾಪ್‌ ಸರ್ಚ್‌ ಅವರಿಗೆ ಅಣ್ಣಾ ಬಸ್ ನಿಲ್ದಾಣಕ್ಕೆ ಕರೆದೊಯ್ದಿತು, ಅಲ್ಲಿ ಕಳ್ಳನನ್ನು ನೋಡಿದರು. ಅವರು ಅಕ್ಕಪಕ್ಕದವರ ಸಹಾಯದಿಂದ ಕಳ್ಳನನ್ನು ಹಿಡಿದರು. ಕದ್ದ ಫೋನ್ ಮತ್ತು ಬ್ಯಾಗ್ ಅನ್ನು ವಶಕ್ಕೆ ಪಡೆದರು.
ರಾಜ್ ಭಗತ್ ಅವರು ಗೂಗಲ್ ಮ್ಯಾಪ್‌ ಈ ಘಟನೆಯಲ್ಲಿ ಹೇಗೆ ಹೀರೋ ಆಯಿತು ಎಂಬುದನ್ನು ಹೇಳಿದ್ದಾರೆ. ಕಳ್ಳ ತಾನು ಕದ್ದ ನಂತರ ಮೊಬೈಲ್‌ನ ಸ್ಥಳ ಶೇರ್‌ ಮಾಡುವ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಲು ಮರೆತಿದ್ದರಿಂದ ಅದು ಕಳ್ಳನನ್ನು ಬೆನ್ನಟ್ಟುವಲ್ಲಿ ಸಹಾಯ ಮಾಡಿತು ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಇಂಡಿಯಾ ಮೈತ್ರಿಕೂಟ ಅಧಿಕಾರ ಬಂದ್ರೆ ಅಯೋಧ್ಯೆ ರಾಮಮಂದಿರ ಶುದ್ಧೀಕರಿಸ್ತೇವೆ : ವಿವಾದ ಸೃಷ್ಟಿಸಿದ ಕಾಂಗ್ರೆಸ್‌ ನಾಯಕನ ಹೇಳಿಕೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement