ತಾನು ಸಾಕಿದ ನಾಯಿ, ಬೆಕ್ಕಿಗೆ ₹23 ಕೋಟಿ ಮೌಲ್ಯದ ಆಸ್ತಿ ಬರೆದ ಮಹಿಳೆ…! ಯಾಕೆಂದರೆ….

ಶಾಂಘೈ: ಚೀನಾದಲ್ಲಿ ವಯಸ್ಸಾದ ಮಹಿಳೆಯೊಬ್ಬರು ತನ್ನ 20 ಮಿಲಿಯನ್ ಯುವಾನ್ (23.58 ಕೋಟಿ ರೂ.) ಸಂಪತ್ತನ್ನು ತನ್ನ ಬೆಕ್ಕು ಮತ್ತು ನಾಯಿಗಳ ಹೆಸರಿಗೆ ಮಾಡಿದ್ದಾರೆ…!
ಅವರು ತನ್ನ ವೃದ್ಧಾಪ್ಯದಲ್ಲಿ ತನ್ನನ್ನು ನೋಡಿಕೊಳ್ಳದ ಸ್ವಾರ್ಥಿ ಮಕ್ಕಳಿಗೆ ಏನನ್ನೂ ಕೊಡಲಿಲ್ಲ. ಶಾಂಘೈನ ಲಿಯು ಎಂಬವರು, ಕೆಲವು ವರ್ಷಗಳ ಹಿಂದೆ ತನ್ನ ಮೂರು ಮಕ್ಕಳಿಗೆ ಎಲ್ಲವನ್ನೂ ಬಿಟ್ಟುಕೊಡುವ ಮನಸ್ಸು ಮಾಡಿದ್ದರು. ಆದರೆ ನಂತರ ತನ್ನ ಮನಸ್ಸನ್ನು ಬದಲಾಯಿಸಿದರು.
ಲಿಯು ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರ ಮಕ್ಕಳು ಅವರನ್ನು ಭೇಟಿ ಮಾಡಲೂ ಬಂದಿರಲಿಲ್ಲ. ಫೋನ್‌ನಲ್ಲಿಯೂ ಮಾತನಾಡಿಸಿ ಆರೋಗ್ಯ ವಿಚಾರಿಸಿರಲಿಲ್ಲ. ಇದ್ರಿಂದ ತೀವ್ರವಾಗಿ ನೊಂದಿದ್ದ ವೃದ್ಧೆ ನಂತರ ತನ್ನ ಇಚ್ಛೆಯನ್ನು ಬದಲಾಯಿಸಲು ನಿರ್ಧರಿಸಿದರು. ತನ್ನ ಸಾಕು ಬೆಕ್ಕುಗಳು ಮತ್ತು ನಾಯಿಗಳು ಮಾತ್ರ ತನ್ನೊಂದಿಗೆ ಇವೆ. ತನ್ನ ಒಟ್ಟು 23 ಕೋಟಿ ರೂಪಾಯಿ ಆಸ್ತಿಯನ್ನು ತಾನು ಮುದ್ದಿನಿಂದ ಸಾಕಿದ್ದ ನಾಯಿ ಮತ್ತು ಬೆಕ್ಕಿನ ಹೆಸರಿಗೆ ವರ್ಗಾವಣೆ ಮಾಡಿರುವುದಾಗಿ ಲಿಯು ಹೇಳಿದ್ದಾರೆ ಎಂದು ಝೋಂಗ್ಲಾನ್ ನ್ಯೂಸ್ ವರದಿ ಮಾಡಿದೆ.

‘ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಮಕ್ಕಳು ನನ್ನ ಯೋಗಕ್ಷೇಮ ವಿಚಾರಿಸಲು ಬರಲಿಲ್ಲ. ಕನಿಷ್ಠ ಫೋನ್‌ನಲ್ಲಿ ಆರೋಗ್ಯ ವಿಚಾರಿಸಿ ಮಾತನಾಡಬಹುದಿತ್ತು. ಆದರೆ ಅದನ್ನೂ ಮಾಡಲಿಲ್ಲ. ಪ್ರತೀ ಕ್ಷಣ ನನಗೆ ಸಂತೋಷ ಕೊಡುತ್ತಿರುವುದು ನಾನು ಸಾಕಿದ ನನ್ನ ನಾಯಿ ಮತ್ತು ಬೆಕ್ಕು. ಈ ಮೂಕ ಜೀವಿಗಳು ಸದಾ ನನ್ನೊಂದಿಗೆ ಇರುತ್ತವೆ. ಆದ್ದರಿಂದ ಸಂಪೂರ್ಣ ಆಸ್ತಿಯನ್ನು ಈ ಮೂಕ ಜೀವಿಗಳ ಹೆಸರಿಗೆ ವರ್ಗಾವಣೆ ಮಾಡುತ್ತಿದ್ದೇನೆ. ತನ್ನ ನಾಯಿ ಮತ್ತು ಬೆಕ್ಕನ್ನು ಸಾಕುವವರಿಗೆ ಈ ಆಸ್ತಿ ಸೇರುತ್ತದೆ ಎಂದು ವಿಲ್​​ನಲ್ಲಿ ಬರೆದಿದ್ದಾರೆ.

ಲಿಯು ಅವರ ಇಚ್ಛೆಯ ಪ್ರಕಾರ, ಸ್ಥಳೀಯ ಪಶುವೈದ್ಯಕೀಯ ಚಿಕಿತ್ಸಾಲಯವನ್ನು ಅವರ ಸಂಪತ್ತಿನ ನಿರ್ವಾಹಕರಾಗಿ ನೇಮಿಸಲಾಗಿದೆ. ಸಾಕುಪ್ರಾಣಿಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನೂ ಪಶುವೈದ್ಯಕೀಯ ಚಿಕಿತ್ಸಾಲಯಕ್ಕೆ ನೀಡಲಾಗಿದೆ. ಲಿಯು ತನ್ನ ಪಿತ್ರಾರ್ಜಿತ ಆಸ್ತಿಯನ್ನು ತನ್ನ ಸಾಕುಪ್ರಾಣಿಗಳಿಗೆ ನೇರವಾಗಿನೀಡಲು ಬಯಸಿದ್ದರು, ಆದಾಗ್ಯೂ, ಅದು ಚೀನಾದಲ್ಲಿ ಕಾನೂನುಬದ್ಧವಾಗಿಲ್ಲ. ಈ ಕಾರಣಕ್ಕೆ ಸ್ಥಳೀಯ ಪಶುವೈದ್ಯಕೀಯ ಚಿಕಿತ್ಸಾಲಯವನ್ನು ಅವರ ಸಂಪತ್ತಿನ ನಿರ್ವಾಹಕರಾಗಿ ನೇಮಿಸಲಾಗಿದೆ.
“ಲಿಯು ಅವರ ಪ್ರಸ್ತುತ ಇಚ್ಛೆಯು ಒಂದು ಮಾರ್ಗವಾಗಿದೆ, ಮತ್ತು ಸಾಕುಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಲು ವೈದ್ಯಕೀಯ ಕ್ಲಿನಿಕ್ ಅನ್ನು ಈ ಸಾಕು ಪ್ರಾಣಿಗಳ ಮೇಲ್ವಿಚಾರಣೆ ಮಾಡಲು ನೇಮಿಸುವಂತೆ ನಾವು ಅವರಿಗೆ ಸಲಹೆ ನೀಡಿದ್ದೇವೆ” ಎಂದು ಬೀಜಿಂಗ್‌ನಲ್ಲಿರುವ ದೇಶದ ವಿಲ್ ನೋಂದಣಿ ಕೇಂದ್ರದ ಪ್ರಧಾನ ಕಚೇರಿಯ ಅಧಿಕಾರಿ ಚೆನ್ ಕೈ ತಿಳಿಸಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement