ಸ್ಮಶಾನದಿಂದ ಹೊರಬಂದ ಎರಡು ದೆವ್ವಗಳಿಂದ ಜಮೀನು ಮಾರಾಟದ ವ್ಯವಹಾರ..! ಅಸಲಿ ವಿಷಯ ತಿಳಿದರೆ….

ಬಲ್ಲಿಯಾ: ನೀವು ದೆವ್ವಗಳ ಅನೇಕ ಕಥೆಗಳನ್ನು ಕೇಳಿರಬಹುದು. ಆದರೆ ಇದು ಅದ್ಭುತ ಮತ್ತು ವಿಚಿತ್ರ ದೆವ್ವಗಳ ಕಥೆ. ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಮರಣದ ನಂತರವೂ ಭೂಮಿ ಮಾರಾಟದ ವ್ಯವಹಾರ ಮಾಡುತ್ತಿದ್ದ ಕಥೆ…!
ಬಲ್ಲಿಯಾದ ರಾಸ್ರಾ ಪ್ರದೇಶದ ನಿವಾಸಿ ಅಜಿಮುದ್ದೀನ್ 1961 ರಲ್ಲಿ ನಿಧನರಾಗಿದ್ದರು. ಶೋಯೆಬ್ ಎಂಬವರು 2019 ರಲ್ಲಿ ನಿಧನರಾದರು. ಆ ನಂತರವೂ ಇಬ್ಬರ ಹೆಸರಿನಲ್ಲಿ ಭೂ ವ್ಯವಹಾರ ನಡೆಯುತ್ತಿತ್ತು. ಅದು ಹೇಗೆಂದು ಅನೇಕರಿಗೆ ಸೋಜಿಗವಾಗಿತ್ತು. ಆದರೂ ಅವರ ಹೆಸರಲ್ಲಿ ಭೂ ವ್ಯವಹಾರ ನಡೆಯುತ್ತಿತ್ತು. ಈ ವಿಷಯ ಪೊಲೀಸರನ್ನೂ ಬೆರಗುಗೊಳಿಸಿತ್ತು. ಇದರ ಹಿಂದಿನ ಸತ್ಯ ಹೊರಬಂದಾಗ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ..!! ನಂತರ ಒಂಬತ್ತು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದೂರುದಾರ ಬಲ್ಲಿಯಾದ ರಾಸ್ರಾ ಪ್ರದೇಶದ ಪುರ್ಬಾ ಮೊಹಲ್ಲಾ ಹೊಸ ಮಸೀದಿ ನಿವಾಸಿ ಫಹೀಮ್ ಖುರೇಷಿ ಎಂಬವರು ಈ ಬಗ್ಗೆ ಪೊಲೀಸರಿಗೆ ನೀಡಿದ ದೂರು ಮತ್ತು ನ್ಯಾಯಾಲಯದ ಆದೇಶದ ನಂತರ ಪೊಲೀಸರು ತನಿಖೆ ನಡೆಸಿ ವಿಷಯ ಪತ್ತೆ ಮಾಡಿದ್ದಾರೆ. ಹಾಗೂ ಈ ಮೋಸದಾಟದಲ್ಲಿ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇವರ ಮೋಸದಾಟ ಅಂತಿಂಥದ್ದಲ್ಲ. ಇವರು ಮೃತರ ಸಹಿ ನಕಲಿ ಮಾಡಿ ಜಮೀನು ನೋಂದಣಿ ಮಾಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಇವರು ಮೃತರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದರಲ್ಲಿ ಶೋಯೆಬ್ 2019 ರಲ್ಲಿ ನಿಧನರಾದರು ಮತ್ತು ಅಜಿಮುದ್ದೀನ್ 1961 ರಲ್ಲಿ ನಿಧನರಾಗಿದ್ದರು. ಸಾವಿನ ನಂತರವೂ, ಈ ಆರೋಪಿಗಳು ಸತ್ತವರನ್ನು ಕಕ್ಷಿದಾರರನ್ನಾಗಿ ಮಾಡಿದರು…! ಮತ್ತು ಸೆಕ್ಷನ್ 229 ಬಿ ಅಡಿಯಲ್ಲಿ ಎಸ್‌ಡಿಎಂ ರಾಸ್ರಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಯಿತು.

ಪ್ರಮುಖ ಸುದ್ದಿ :-   ವೀಡಿಯೊ...| ಶಿವಸೇನೆ ನಾಯಕಿ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಅಪಘಾತ

ಭೂಮಿಗೆ ಸಂಬಂಧಿಸಿ ದೊಡ್ಡ ಆಟ…
ಮೃತರ ಜಮೀನನ್ನು ಕಬಳಿಸುವ ಉದ್ದೇಶದಿಂದ ಗುಂಪು ಕಟ್ಟಿಕೊಂಡು ಕೆಲವರು ಮೃತರನ್ನು ಬದುಕಿಸಿದ್ದು ಮಾತ್ರವಲ್ಲದೆ 05/10/2021 ರಂದು ಮೃತರ ಪರ ವಕೀಲರನ್ನು ನೇಮಿಸಿ ಇತ್ಯರ್ಥ ಪಡಿಸಿದ್ದರು. ಇವರ ಈ ಆಟ ಇಲ್ಲಿಗೆ ಮುಗಿಯುವುದಿಲ್ಲ. ಅವರ ಹೆಸರಲ್ಲಿ ಭೂಮಿಯನ್ನು ಖರೀದಿಸಿ ಅದನ್ನು ಮಾರಲಾಯಿತು. ನ್ಯಾಯಾಲಯದ ಆದೇಶದ ನಂತರವೇ ಇವರ ಮೋಸದಾಟ ಬಯಲಾಗಿದೆ. ರಾಸ್ರಾ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ಒಂಬತ್ತು ಜನರ ವಿರುದ್ಧ ಪ್ರಕರಣ…
ರಸ್ರಾ ಪೊಲೀಸರು ಆರೋಪಿಗಳಾದ ರಿಯಾಜ್ ಅಹ್ಮದ್, ಫೈಯಾಜ್ ಅಹಮದ್, ಮುಸ್ತಾಕ್, ಮುಮ್ತಾಜ್, ಮುಷರಫ್ ಜಹಾಂಗೀರ್, ಸಾಯಿರಾ ಬಾನೋ, ಸುಮನ್ ಜೈಸ್ವಾಲ್ ಮತ್ತು ಇಬ್ಬರು ಅಪರಿಚಿತರ ವಿರುದ್ಧ ಸೆಕ್ಷನ್ 419, 20, 67, 68, 71 ಮತ್ತು 506 ರ ಅಡಿಯಲ್ಲಿ ಅಕ್ರಮವಾಗಿ ಭೂಮಿ ಕಬಳಿಸಲು ಯತ್ನಿಸಿದ ಪ್ರಕರಣದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement