ಗುಜರಾತ್ ಸ್ಥಳೀಯ ಸಂಸ್ಥೆಗಳ ಉಪಚುನಾವಣೆ : ಎಲ್ಲ ಮೂರು ನಗರಪಾಲಿಕೆಗಳಲ್ಲೂ ಬಿಜೆಪಿ ಭರ್ಜರಿ ಗೆಲುವು

ಅಹಮದಾಬಾದ್‌ : ಗುಜರಾತ್‌ನ ಗಾಂಧಿನಗರ ಮಹಾನಗರ ಪಾಲಿಕೆ (ಜಿಎಂಸಿ) ಚುನಾವಣೆಯಲ್ಲಿ ಬಿಜೆಪಿ 44 ಸ್ಥಾನಗಳ ಪೈಕಿ 38 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಪ್ರಾಬಲ್ಯ ಮೆರೆದಿದೆ. ಇದೇ ವೇಳೆ ಥಾರಾ ಮತ್ತು ಓಖಾ ನಗರಸಭೆಗಳಲ್ಲಿಯೂ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಗಾಂಧಿನಗರ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದು ಎರಡನೇ ಸ್ಥಾನ ಪಡೆದಿದೆ. ಒಬ್ಬ … Continued

ಹಿಮಾಚಲಪ್ರದೇಶ ಮಹಾನಗರ ಪಾಲಿಕೆ ಚುನಾವಣೆ: ಆಡಳಿತಾರೂಢ ಕಾಂಗ್ರೆಸ್ಸಿಗೆ ಮುಖಭಂಗ, ಬಿಜೆಪಿಗೆ ಭರ್ಜರಿ ಜಯ

ಶಿಮ್ಲಾ; ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ಭಾನುವಾರ ಪ್ರಕಟಗೊಂಡ ನಾಲ್ಕು ಮಹಾನಗರ ಪಾಲಿಕೆ (MC) ಚುನಾವಣೆಗಳ ಫಲಿತಾಂಶದಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮೂರು ಪಾಲಿಕೆಗಳನ್ನು ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್‌ ಒಂದರಲ್ಲಿ ಗೆಲುವು ಸಾಧಿಸಿದೆ. 2027ರಲ್ಲಿ ರಾಜ್ಯದಲ್ಲಿ ನಡೆಯಲಿರುವ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ “ಸೆಮಿಫೈನಲ್” ಎಂದೇ ಬಿಂಬಿತವಾಗಿದ್ದ ಈ ಚುನಾವಣೆಯಲ್ಲಿ ಮಂಡಿ, … Continued

ಎರಡು ಬಾರಿ ಕಚ್ಚುವ ಬೀದಿ ನಾಯಿಗಳಿಗೆ ಜೀವಾವಧಿ ಶಿಕ್ಷೆ …! ಏನಿದು ಆದೇಶ…?

ಲಕ್ನೋ: ನಾಯಿ ಕಡಿತದ ಘಟನೆಗಳನ್ನು ನಿಯಂತ್ರಿಸಲು ಉತ್ತರ ಪ್ರದೇಶ ಸರ್ಕಾರವು ನೂತನ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಿರ್ದೇಶನದ ಮೇರೆಗೆ, ಜನರನ್ನು ಎರಡು ಬಾರಿ ಕಚ್ಚುವ ಯಾವುದೇ ಬೀದಿ ನಾಯಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗುತ್ತದೆ, ಇದು ಬೀದಿ ನಾಯಿಗಳ ಹೆಚ್ಚುತ್ತಿರುವ ಉಪಟಳವನ್ನು ತಡೆಯುವ ಉದ್ದೇಶ ಹೊಂದಿರುವ ಹೊಂದಿರುವ ವಿವಾದಾತ್ಮಕ ಹೆಜ್ಜೆಯಾಗಿದೆ. … Continued

ಹರಿಯಾಣ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು…

ಚಂಡೀಗಢ: ಹರಿಯಾಣದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಆಡಳಿತಾರೂಢ ಬಿಜೆಪಿ ಬುಧವಾರ ತನ್ನ ಭದ್ರಕೋಟೆಯನ್ನು ಉಳಿಸಿಕೊಂಡಿದೆ. ಬಿಜೆಪಿಯು ರೋಹ್ಟಕ್, ಸಿರ್ಸಾ ಮತ್ತು ಕರ್ನಾಲ್‌ನಲ್ಲಿ ದೊಡ್ಡ ಗೆಲುವುಗಳನ್ನು ದಾಖಲಿಸಿದೆ, ಅಲ್ಲಿ ಅಭ್ಯರ್ಥಿಗಳು ತಮ್ಮ ಕಾಂಗ್ರೆಸ್ ವಿರೋಧಿಗಳ ವಿರುದ್ಧ ಭಾರಿ ಅಂತರದಿಂದ ವಿಜಯಶಾಲಿಯಾಗಿದ್ದಾರೆ. ಬಿಜೆಪಿಯು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 10 ಮೇಯರ್ ಸ್ಥಾನಗಳಲ್ಲಿ 9 ಸ್ಥಾನಗಳನ್ನು ಗೆದ್ದಿದೆ. … Continued