ಚಿತ್ರದುರ್ಗ | ಆರತಕ್ಷತೆ ಭೋಜನದ ವೇಳೆ ಕುಡಿಯುವ ನೀರಿನ ವಿಚಾರಕ್ಕೆ ಜಗಳ ; ಮದುವೆಯೇ ರದ್ದಾಯ್ತು…!

ಚಿತ್ರದುರ್ಗ: ಮದುವೆ ಮಂಟಪದಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ನಡೆದ ಗಲಾಟೆಯಿಂದಾಗಿ ಮದುವೆಯೇ ಮುರಿದು ಬಿದ್ದ ಘಟನೆ (Wedding Cancelled) ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ದಾವಣಗೆರೆ ಜಿಲ್ಲೆ ಜಗಳೂರಿನ ವರ ಹಾಗೂ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿರತಹಳ್ಳಿಯ ವಧುವಿನ ವಿವಾಹ ಅರತಕ್ಷತೆ ಸಮಾರಂಭ ಹಿರಿಯೂರಿನ ಬಲಿಜ ಶ್ರೇಯಾ ಭವನದಲ್ಲಿ ಶನಿವಾರ … Continued

ಬೆಂಗಳೂರು | ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಜೆಪಿ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ಬೆಂಗಳೂರಿನ ಯುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭರತನಾಟ್ಯ ಹಾಗೂ ಸಂಗೀತ ಕಲಾವಿದೆ ಶಿವಶ್ರೀ ಸ್ಕಂದಪ್ರಸಾದ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನಕಪುರ ರಸ್ತೆಯ ರೆಸಾರ್ಟ್ ನಲ್ಲಿ ಮದುವೆ ನಡೆದಿದ್ದು, ಸಂಸದ ತೇಜಸ್ವಿ ಸೂರ್ಯ, ಚೆನ್ನೈ ಮೂಲದ ಗಾಯಕಿ ಶಿವಶ್ರೀ ಸ್ಕಂದಪ್ರಸಾದ ಅವರು ಗುರುವಾರ ಬೆಳಿಗ್ಗೆ ಶುಭ ಮೂಹರ್ತದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. … Continued

ಕುಡಿದ ಅಮಲಿನಲ್ಲಿ ವಧುವಿನ ಬದಲು ಗೆಳೆಯನ ಕೊರಳಿಗೆ ಮಾಲೆ ಹಾಕಿದ ವರ…! ಕೋಪದಿಂದ ಮದುವೆ ರದ್ದುಗೊಳಿಸಿದ ವಧು…!!

ಬರೇಲಿ : ಮದ್ಯದ ಅಮಲಿನಲ್ಲಿದ್ದ ವರನೊಬ್ಬ ಮದುವೆಯ ಮಾಲೆಯನ್ನು ವಧುವಿನ ಕೊರಳಿಗೆ ಹಾಕುವ ಬದಲು ತನ್ನ ಸ್ನೇಹಿತನ ಕೊರಳಿಗೆ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಈ ವಿಲಕ್ಷಣ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ವರ ಕುಡಿದಿದ್ದನ್ನು ಕಂಡು ಕೋಪಗೊಂಡ ವಧು, ಆತನನ್ನು ಮದುವೆಯಾಗಲು ನಿರಾಕರಿಸಿ ಮದುವೆಯನ್ನು ರದ್ದುಗೊಳಿಸಿದ್ದಾಳೆ. … Continued

ವೈದ್ಯೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಸಿನೆಮಾ ನಟ ಡಾಲಿ ಧನಂಜಯ

ಮೈಸೂರು : ಕನ್ನಡ ಸಿನೆಮಾ ನಟ ಡಾಲಿ ಧನಂಜಯ ಮತ್ತು ವೈದ್ಯೆ​ ಧನ್ಯತಾ ಭಾನುವಾರ ಸಪ್ತಪದಿ ತುಳಿದಿದ್ದಾರೆ. ಭಾನುವಾರ ಬೆಳಿಗ್ಗೆ 9:10 ರಿಂದ 10:10ರ ವರೆಗಿನ, ಸಂಕಷ್ಟ ಚತುರ್ದರ್ಶಿಯ ಶುಭ ಲಗ್ನದಲ್ಲಿ ಅವರು ವಿವಾಹವಾಗಿದ್ದಾರೆ. ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಡಾಲಿ ಧನಂಜಯ ಹಾಗೂ ಧನ್ಯತಾ ಇಬ್ಬರು ದಾಂಪತ್ಯ ಜೀವನಕ್ಕೆ … Continued

ವೀಡಿಯೊ…| ಮದುವೆ ಮೆರವಣಿಗೆ ವೇಳೆ ಕುದುರೆ ಮೇಲೆ ಬರುತ್ತಿದ್ದ ಮದುಮಗ ಹೃದಯಾಘಾತದಿಂದ ಸಾವು

ಭೋಪಾಲ್: ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯಲ್ಲಿ 27 ವರ್ಷದ ಮದುಮಗ ತನ್ನ ಮದುವೆಯ ಮೆರವಣಿಗೆಯಲ್ಲಿ ಕುದುರೆ ಮೇಲೆ ಬರುತ್ತಿರುವಾಗಲೇ ಅಲ್ಲಿಯೇ ಕುಸಿದು ಮೃತಪಟ್ಟಿದ್ದಾನೆ. ಶುಕ್ರವಾರ ರಾತ್ರಿ ಪ್ರದೀಪ ಜಾಟ್ ಎಂಬ ಮದುಮಗ ಜಾಟ್ ಹಾಸ್ಟೆಲಿನಲ್ಲಿ ಆಯೋಜಿಸಿದ್ದ ಮದುವೆಯ ಸ್ಥಳಕ್ಕೆ ಕುದುರೆ ಮೇಲೆ ಮೆರವಣಿಗೆಯಲ್ಲಿ ಬರುತ್ತಿರುವಾಗ ಈ ಘಟನೆ ನಡೆದಿದೆ. ಮದುವೆಯ ಸ್ಥಳಕ್ಕೆ ಕುದುರೆ ಸವಾರಿ ಮಾಡುವ ಮೊದಲು … Continued

ಊಟ-ತಿಂಡಿಯ ಬಗ್ಗೆ ಮಂಟಪದಲ್ಲೇ ಮುರಿದುಬಿದ್ದ ಮದುವೆ ; ನಂತ್ರ ಪೊಲೀಸ್‌ ಠಾಣೆಯಲ್ಲಿ ನಡೆಯಿತು ವಿವಾಹ…!

ಸೂರತ್: ಸೂರತ್‌ನಲ್ಲಿ ನಡೆದ ಮದುವೆ ವೇಳೆ ಊಟ ಕಡಿಮೆ ಬಿದ್ದಿದೆ ಎಂಬ ಕಾರಣದಿಂದ ಹಠಾತ್ತನೆ ಸ್ಥಗಿತಗೊಂಡಿದ್ದ ಮದುವೆಯ ವಿಧಿವಿದಾನವನ್ನು ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಪೊಲೀಸ್ ಠಾಣೆಯಲ್ಲಿ ಮದುವೆ ಮಾಡಿಸಿದ ಘಟನೆ ಭಾನುವಾರ ಸೂರತ್‌ನ ವರಾಚಾ ಪ್ರದೇಶದಲ್ಲಿ ನಡೆದಿದೆ. ವರನ ಕುಟುಂಬವು ಮದುವೆ ಮುರಿದುಕೊಳ್ಳುವ ನಿರ್ಧಾರದ ವಿರುದ್ಧ ಪೊಲೀಸರನ್ನು ಮದುಮಗಳು ಸಂಪರ್ಕಿಸಿದ ನಂತರ ಪೊಲೀಸರು ಠಾಣೆಯಲ್ಲಿ ಮದುವೆ … Continued

ವಿಪರೀತ ಚಳಿಯಿಂದಾಗಿ ಮದುವೆ ಮಂಟಪದಲ್ಲಿ ಮೂರ್ಛೆ ಹೋದ ವರ…! ಮದುವೆಯನ್ನೇ ರದ್ದುಗೊಳಿಸಿದ ವಧು…!!

ಜಾರ್ಖಂಡದ ದಿಯೋಗರ್‌ನಲ್ಲಿ ಭಾನುವಾರ ರಾತ್ರಿ ವಿಪರೀತ ಚಳಿಯಿಂದಾಗಿ ಮದುಮಗ ಮೂರ್ಛೆ ಹೋಗಿದ್ದು, ನಂತರ ಮದುಮಗಳು ವರನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಮದುವೆಯೇ ರದ್ದುಗೊಂಡ ಘಟನೆ ನಡೆದ ವರದಿಯಾಗಿದೆ. ಡಿಸೆಂಬರ್ 15 ರಂದು, ದಿಯೋಘರ್‌ನ ಘೋರ್ಮಾರಾದಿಂದ ವರ ಅರ್ನವ್‌ ಬಿಹಾರದ ಭಾಗಲ್‌ಪುರದ ಅಂಕಿತಾ ಅವರನ್ನು ವಿವಾಹ ಆಗಬೇಕಿತ್ತು. ಆದರೆ, ಅರ್ನವ್‌ ಅವರಿಗೆ ಚಳಿ ತಡೆದುಕೊಳ್ಳಲು ಸಾಧ್ಯವಾಗದ ಕಾರಣ ಅವರಿಗೆ … Continued

ಮದುವೆಗೆ ಮುಂಚೆ ಮದುಮಗ ನಾಪತ್ತೆ, ಪೊಲೀಸರು ಹುಡುಕಿದ ನಂತ್ರ ಆತನನ್ನು ಒತ್ತೆಯಾಳಾಗಿಟ್ಟುಕೊಂಡ ವಧುವಿನ ಕುಟುಂಬ…! ಏನಿದರ ಹಕೀಕತ್ತು..?

ಅಮೇಥಿ : ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದ ಮದುವೆಯೊಂದು ವಿಲಕ್ಷಣ ತಿರುವು ಪಡೆದಿದ್ದು, ವಧುವಿನ ಕುಟುಂಬದ ಸದಸ್ಯರು ವರನನ್ನು ಒತ್ತೆಯಾಳಾಗಿಟ್ಟುಕೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ. ವರನಿಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಿ ವಧುವಿನ ಮನೆಯವರು ಮದುವೆಯನ್ನು ರದ್ದುಗೊಳಿಸಿದ್ದಾರೆ. ವಧುವಿನ ಕುಟುಂಬವು ಮದುವೆ ಸಿದ್ಧತೆಗೆ ಆದ ಖರ್ಚನ್ನು ವಾಪಸ್‌ ಕೊಡಬೇಕು ಎಂದು ಪಟ್ಟು ಹಿಡಿದು … Continued

ವರನಿಗೆ ತಿಂಗಳಿಗೆ 1.20 ಲಕ್ಷ ರೂ. ಸಂಬಳವಿದ್ರೂ ಅದು ಸರ್ಕಾರಿ ನೌಕರಿ ಅಲ್ಲದ ಕಾರಣ ಮದುವೆಗೆ ಒಪ್ಪದೆ ಮಂಟಪದಿಂದ ಎದ್ದು ಹೋದ ವಧು…!

ವಧು-ವರರು ಮದುವೆ ಮಂಟಪದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡ ನಂತರ ತಾನು ನಂಬಿದಂತೆ ಮದುಮಗ ಸರ್ಕಾರಿ ನೌಕರಿಯಲ್ಲಿ ಇಲ್ಲ, ಬದಲಾಗಿ ಖಾಸಗಿ ಉದ್ಯೋಗದಲ್ಲಿದ್ದಾನೆ ಎಂದು ತಿಳಿದ ಮದುಮಗಳು ನಂತರ ಮದುವೆ ಬೇಡ ಎಂದು ಹಠ ಹಿಡಿದು ರದ್ದುಪಡಿಸಿದ ಘಟನೆ ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ…! ವರನ ಕುಟುಂಬ ಪ್ರಕರಣ ಸುಖಾಂತ್ಯವಾಗಬಹುದು ಎಂದು  ನಿರೀಕ್ಷಿಸಿ … Continued

‘ಸೌರಭ್ ಪ್ರವೇಶ ನಿಷೇಧಿಸಲಾಗಿದೆ, ಈತ ಮದುವೆಗೆ ಬಂದರೆ ಓಡಿಸಿ ‘: ಮದುವೆ ಆಮಂತ್ರಣ ಕಾರ್ಡ್‌ನಲ್ಲಿ ಬರೆದ ಸಾಲು ವೈರಲ್…!

ಎತಾಹ್ : ಭಾರತೀಯ ವಿವಾಹಗಳು ವಿಸ್ತೃತ ಕುಟುಂಬಗಳು ಮತ್ತು ವಿಸ್ತೃತ ಸ್ನೇಹಿತರ ವಲಯಗಳನ್ನು ಒಳಗೊಂಡಿರುತ್ತದೆ. ಆಮಂತ್ರಣ ಪತ್ರಿಕೆಗಳ ಮುದ್ರಣದಿಂದ ಆರಂಭವಾಗಿ ತಿಂಗಳ ಮೊದಲೇ ವಿವಾಹದ ಸಿದ್ಧತೆಗಳು ಆರಂಭವಾಗುತ್ತವೆ. ಆದರೆ ಇದೀಗ ಒಂದು ಮದುವೆಯ ಆಮಂತ್ರಣ ಪತ್ರಿಕೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಆಮಂತ್ರಣವು ವೈರಲ್ ಆಗಿರುವುದು ಅದರ ವಿನ್ಯಾಸ ಅಥವಾ ಶೈಲಿಗಾಗಿ ಅಲ್ಲ, ಇದಕ್ಕೆ ಕಾರಣ … Continued