ವಿಡಿಯೋ |ಉತ್ತರ ಪ್ರದೇಶ ಕಾಂಗ್ರೆಸ್‌ ಕಚೇರಿಯಲ್ಲಿ ಹೈಡ್ರಾಮಾ : ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲೇ ಶೂ ಎಸೆತ, ಘರ್ಷಣೆ

ಲಕ್ನೋ : ಉತ್ತರ ಪ್ರದೇಶ ಕಾಂಗ್ರೆಸ್‌ ಘಟಕದ ನೂತನ ಅಧ್ಯಕ್ಷರಾದ ಆರಾಧನಾ ಮಿಶ್ರಾ ಹಾಗೂ ಕಾರ್ಯಾಧ್ಯಕ್ಷ ಇಮ್ರಾನ್ ಮಸೂದ್ ಅವರ ಪದಗ್ರಹಣ ಸಮಾರಂಭದ ವೇಳೆ ಪಕ್ಷದ ರಾಜ್ಯ ಕಚೇರಿಯಲ್ಲೇ ಕಾರ್ಯಕರ್ತರು ಪರಸ್ಪರ ಘರ್ಷಣೆ ನಡೆಸಿದ್ದು, ಶೂಗಳನ್ನು ಎಸೆದಾಡಿದ ಘಟನೆ ನಡೆದಿದೆ. ನಿರ್ಗಮಿತ ರಾಜ್ಯಾಧ್ಯಕ್ಷ ಅಜಯ ರೈ ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್‌ ಮುಖಂಡೆ, ಪರಿಷತ್ ಸದಸ್ಯೆ … Continued

ಗ್ರಿಲ್‌ಗೆ ಕೈಗಳನ್ನು ಕಟ್ಟಿದ್ದರು…ಬಾಯಿಗೆ ಬಟ್ಟೆ ತುರುಕಿದ್ದರು..: ಕಿಡ್ನ್ಯಾಪ್ ಪ್ರಕರಣ ಬೆನ್ನತ್ತಿದ ಪೊಲೀಸರು-ಕುಟುಂಬಸ್ಥರೇ ಬೆಸ್ತುಬಿದ್ದರು…!

 ಸೂರತ್: ಗುಜರಾತಿನ ಸೂರತ್‌ನಲ್ಲಿ 36 ವರ್ಷದ ಉದ್ಯಮಿಯೊಬ್ಬರು ಹಠಾತ್ತನೆ ನಾಪತ್ತೆಯಾಗಿದ್ದರು. ಇದರಿಂದ ಆತಂಕಗೊಂಡ ಅವರ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದ್ದರು. ದೂರು ದಾಖಲಾದ ಬೆನ್ನಲ್ಲೇ, ಕುಟುಂಬ ಸದಸ್ಯರಿಗೆ ಆ ವ್ಯಕ್ತಿಯ ಫೋನ್‌ನಿಂದ ಬೆದರಿಕೆ ಸಂದೇಶಗಳು ಬರಲಾರಂಭಿಸಿದವು. ಅದರಲ್ಲಿ ಆತನನ್ನು ಅಪಹರಿಸಲಾಗಿದೆ ಎಂದು ಹೇಳಲಾಗಿತ್ತು. ಹಾಗೂ ಸುರಕ್ಷಿತವಾಗಿ ಬಿಡಲು  50 ಲಕ್ಷ ರೂ.ಹಣ ನೀಡಬೇಕು ಎಂದು ಬೇಡಿಕೆ … Continued

ಒಬ್ಬಳೇ ʼವಧುʼವನ್ನು ಮದುವೆಯಾಗಲು ದಿಬ್ಬಣ ಸಮೇತ ಬಂದ ಇಬ್ಬರು ವರರನ್ನು ನೋಡಿ ಬೆಚ್ಚಿಬಿದ್ದ ವಧುವಿನ ಕುಟುಂಬ..!

ಅಮ್ರೋಹಾ (ಉತ್ತರ ಪ್ರದೇಶ): ಇತ್ತೀಚಿನ ದಿನಗಳಲ್ಲಿ ಮದುವೆ ಮನೆಗಳಲ್ಲಿ ಸಣ್ಣಪುಟ್ಟ ಗಲಾಟೆಗಳು ಸಾಮಾನ್ಯ. ಆದರೆ ಇಲ್ಲೊಂದು ಕಡೆ ವಧುವೊಬ್ಬಳನ್ನು ವರಿಸಲು ಇಬ್ಬರು ವರರು ಮೆರವಣಿಗೆಯೊಂದಿಗೆ ಏಕಕಾಲಕ್ಕೆ ಮಂಟಪಕ್ಕೆ ಬಂದಿಳಿದು ಅಕ್ಷರಶಃ ಸಿನಿಮಾ ಸ್ಟೈಲ್‌ನಲ್ಲಿ ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ ! ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಬೇಕಾದ ಅನಿವಾರ್ಯತೆ ಎದುರಾಯಿತು. ಅಮ್ರೋಹಾದ ಬ್ಯಾಂಕ್ವೆಟ್ ಹಾಲ್ ಒಂದರಲ್ಲಿ ಮದುವೆ … Continued