ಮದುಮಗನನ್ನು ಮದುವೆ ಮಂಟಪದಿಂದಲೇ ಅಪಹರಿಸಿದ ನೃತ್ಯಗಾರರ ತಂಡ…!

ಮದುವೆಯೊಂದರಲ್ಲಿ ಸಾಂಪ್ರದಾಯಿಕ ಸಂಭ್ರಮಾಚರಣೆಗೆಂದು ಕರೆಸಿದ್ದ ನೃತ್ಯ ತಂಡವು ವರನನ್ನು ಮಂಟಪದಿಂದಲೇ ಅಪಹರಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಈ ಘಟನೆ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸ್ಥಳದಲ್ಲಿದ್ದ ಜನರ ಪ್ರಕಾರ, “ಲೌಂಡಾ ನಾಚ್ ಪಾರ್ಟಿ” – ಸಾಮಾನ್ಯವಾಗಿ ಮದುವೆಗಳಿಗೆ ನೇಮಿಸಿಕೊಳ್ಳುವ ಸಾಂಪ್ರದಾಯಿಕ ನೃತ್ಯ ತಂಡವಾಗಿದ್ದು, ಈ ನೃತ್ಯ … Continued

ಜಮಖಂಡಿಯಲ್ಲಿ ಘೋರ ದುರಂತ ; ತಾಳಿ ಕಟ್ಟಿದ 15-20 ನಿಮಿಷದಲ್ಲೇ ಮದುಮಗ ಸಾವು…!

ಬಾಗಲಕೋಟೆ : ತಾಳಿ ಕಟ್ಟಿದ 15- 20 ನಿಮಿಷದಲ್ಲಿ ವರ (Groom) ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಜಮಖಂಡಿಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ವೇದಿಕೆಯ ಮೇಲೆ ತಾಳಿಕಟ್ಟಿ ಅಕ್ಷತೆ ಬಿದ್ದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಮದುಮಗ ಕುಸಿದುಬಿದ್ದಿದ್ದಾರೆ. ಇದೆಲ್ಲವೂ ಎರಡೂ ಕುಟುಂಬಗಳು ಹಾಗೂ ಆಪ್ತರ … Continued

ಪಹಲ್ಗಾಮ್ ದಾಳಿ | ಪಾಕ್‌ ಹುಡುಗಿ ಜತೆ ನಡೆಯಬೇಕಿದ್ದ ವಿವಾಹಕ್ಕೆ ಭಾರತದ ವರನಿಗೆ ಗಡಿಯಲ್ಲಿ ನೋ ಎಂಟ್ರಿ ; ದಿಬ್ಬಣ ವಾಪಸ್‌..

ನವದೆಹಲಿ: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಭಾರತ-ಪಾಕಿಸ್ತಾನ ಸಂಬಂಧಗಳನ್ನು ಹದಗೆಟ್ಟ ನಂತರ, ಭಾರತ- ಪಾಕಿಸ್ತಾನದ ವಧು-ವರರ ನಡುವೆ ನಡೆಯಬೇಕಿದ್ದ ಮದುವೆಯೊಂದು ಸ್ಥಗಿತಗೊಂಡಿದೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಕುಟುಂಬವೊಂದರ ವರ ಪಾಕಿಸ್ತಾನದ ಯುವತಿಯ ಜೊತೆ ಮದುವೆ ನಿಶ್ಚಯವಾಗಿತ್ತು. ಏಪ್ರಿಲ್ 30 ರಂದು ನಿಗದಿಯಾಗಿದ್ದ ವಿವಾಹದ ಕಾರ್ಯಕ್ರಮಕ್ಕೆ ದಿಬ್ಬಣದೊಂದಿಗೆ ಗುರುವಾರ ವಾಘಾ-ಅಟ್ಟಾರಿ ಗಡಿಯನ್ನು … Continued

60ನೇ ವಯಸ್ಸಿನಲ್ಲಿ ಪಕ್ಷದ ಸಹೋದ್ಯೋಗಿ ಜೊತೆ ವಿವಾಹವಾದ ಪಶ್ಚಿಮ ಬಂಗಾಳದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ದಿಲೀಪ ಘೋಷ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ಮಾಜಿ ಅಧ್ಯಕ್ಷ ದಿಲೀಪ ಘೋಷ್ ಅವರು ಪಕ್ಷದ ಸಹೋದ್ಯೋಗಿ ರಿಂಕು ಮಜುಂದಾರ್ ಅವರನ್ನು ಶುಕ್ರವಾರ ವಿವಾಹವಾದರು. ಸಾಂಪ್ರದಾಯಿಕ ಬಂಗಾಳಿ ವಿವಾಹ ಉಡುಪನ್ನು ಧರಿಸಿ ತಲೆಯ ಮೇಲೆ ‘ಟೋಪೋರ್’ ಧರಿಸಿ, ದಿಲೀಪ್ ಘೋಷ್ ಅವರು ವಿವಾಹದ ವಿಧಿವಿಧಾನಗಳನ್ನು ಪೂರೈಸಿದರು. “ಎಲ್ಲರ ಶುಭ ಹಾರೈಕೆಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ನನಗೆ ಶುಭ ಹಾರೈಸಿದ … Continued

ಮದುವೆಗೆ 10 ದಿನಗಳ ಮೊದಲು ತನ್ನ ಮಗಳ ಜೊತೆಗೆ ಮದುವೆ ನಿಶ್ಚಿತಾರ್ಥವಾದ ವರನೊಂದಿಗೆ ಪರಾರಿಯಾದ ವಧುವಿನ ತಾಯಿ…!

ಅಲಿಗಢದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಮದ್ರಾಕ್ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದ ಮಹಿಳೆಯೊಬ್ಬರು ಮದುವೆಗೆ ಕೇವಲ ಒಂಬತ್ತು ದಿನಗಳ ಮೊದಲು ತನ್ನ ಮಗಳ ಜೊತೆ ಮದುವೆ ನಿಶ್ಚಯವಾಗಿದ್ದ ಹುಡುಗನೊಂದಿಗೆ ಪರಾರಿಯಾದ ಘಟನೆ ವರದಿಯಾಗಿದೆ. ವರನ ಪ್ರೇಮಪಾಶದಲ್ಲಿ ಸಿಲುಕಿದ್ದ ವಧುವಿನ ತಾಯಿ ಹಾಗೂ ತನ್ನ ಭಾವಿ ಅತ್ತೆಯ ಪ್ರೇಮಪಾಶದಲ್ಲಿ ಸಿಲುಕಿದ ವರ ಇಬ್ಬರೂ ಓಡಿಹೋಗಲು ಯೋಜನೆ ರೂಪಿಸಿದರು. … Continued

ವೀಡಿಯೊ…| ನೆನಪಿಡುವ ಪ್ರೇಮಕಥೆ ! ಒಂದೇ ಸಮಾರಂಭದಲ್ಲಿ ಇಬ್ಬರು ಯುವತಿಯರನ್ನು ಮದುವೆಯಾದ ವರ…!

ಹೈದರಾಬಾದ್‌ : ಅಪರೂಪದ ಮತ್ತು ಅಚ್ಚರಿಯ ಘಟನೆಯೊಂದರಲ್ಲಿ, ತೆಲಂಗಾಣದ ಕೊಮಾರಂ ಭೀಮ್ ಆಸಿಫಾಬಾದ್ ಜಿಲ್ಲೆಯ ವ್ಯಕ್ತಿಯೊಬ್ಬರು ಇತ್ತೀಚೆಗೆ ಇಬ್ಬರು ಮಹಿಳೆಯರನ್ನು ಒಂದೇ ಸಮಾರಂಭದಲ್ಲಿ ವಿವಾಹವಾಗಿದ್ದಾರೆ…! ಲಿಂಗಾಪುರ ಮಂಡಲದ ಗುಮ್ನೂರ್ ಗ್ರಾಮದಲ್ಲಿ ನಡೆದ ಮದುವೆಯಲ್ಲಿ ವರ ಸೂರ್ಯದೇವ ಎಂಬವರು ಲಾಲದೇವಿ ಮತ್ತು ಜಲ್ಕರಿ ದೇವಿ ಎಂಬ ಇಬ್ಬರು ಯುವತಿಯರನ್ನು ಇಬ್ಬರನ್ನು ಒಂದೇ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ಸೂರ್ಯದೇವ ಅವರು … Continued

ಚಿತ್ರದುರ್ಗ | ಆರತಕ್ಷತೆ ಭೋಜನದ ವೇಳೆ ಕುಡಿಯುವ ನೀರಿನ ವಿಚಾರಕ್ಕೆ ಜಗಳ ; ಮದುವೆಯೇ ರದ್ದಾಯ್ತು…!

ಚಿತ್ರದುರ್ಗ: ಮದುವೆ ಮಂಟಪದಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ನಡೆದ ಗಲಾಟೆಯಿಂದಾಗಿ ಮದುವೆಯೇ ಮುರಿದು ಬಿದ್ದ ಘಟನೆ (Wedding Cancelled) ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ದಾವಣಗೆರೆ ಜಿಲ್ಲೆ ಜಗಳೂರಿನ ವರ ಹಾಗೂ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿರತಹಳ್ಳಿಯ ವಧುವಿನ ವಿವಾಹ ಅರತಕ್ಷತೆ ಸಮಾರಂಭ ಹಿರಿಯೂರಿನ ಬಲಿಜ ಶ್ರೇಯಾ ಭವನದಲ್ಲಿ ಶನಿವಾರ … Continued

ಬೆಂಗಳೂರು | ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಜೆಪಿ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ಬೆಂಗಳೂರಿನ ಯುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭರತನಾಟ್ಯ ಹಾಗೂ ಸಂಗೀತ ಕಲಾವಿದೆ ಶಿವಶ್ರೀ ಸ್ಕಂದಪ್ರಸಾದ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನಕಪುರ ರಸ್ತೆಯ ರೆಸಾರ್ಟ್ ನಲ್ಲಿ ಮದುವೆ ನಡೆದಿದ್ದು, ಸಂಸದ ತೇಜಸ್ವಿ ಸೂರ್ಯ, ಚೆನ್ನೈ ಮೂಲದ ಗಾಯಕಿ ಶಿವಶ್ರೀ ಸ್ಕಂದಪ್ರಸಾದ ಅವರು ಗುರುವಾರ ಬೆಳಿಗ್ಗೆ ಶುಭ ಮೂಹರ್ತದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. … Continued

ಕುಡಿದ ಅಮಲಿನಲ್ಲಿ ವಧುವಿನ ಬದಲು ಗೆಳೆಯನ ಕೊರಳಿಗೆ ಮಾಲೆ ಹಾಕಿದ ವರ…! ಕೋಪದಿಂದ ಮದುವೆ ರದ್ದುಗೊಳಿಸಿದ ವಧು…!!

ಬರೇಲಿ : ಮದ್ಯದ ಅಮಲಿನಲ್ಲಿದ್ದ ವರನೊಬ್ಬ ಮದುವೆಯ ಮಾಲೆಯನ್ನು ವಧುವಿನ ಕೊರಳಿಗೆ ಹಾಕುವ ಬದಲು ತನ್ನ ಸ್ನೇಹಿತನ ಕೊರಳಿಗೆ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಈ ವಿಲಕ್ಷಣ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ವರ ಕುಡಿದಿದ್ದನ್ನು ಕಂಡು ಕೋಪಗೊಂಡ ವಧು, ಆತನನ್ನು ಮದುವೆಯಾಗಲು ನಿರಾಕರಿಸಿ ಮದುವೆಯನ್ನು ರದ್ದುಗೊಳಿಸಿದ್ದಾಳೆ. … Continued

ವೈದ್ಯೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಸಿನೆಮಾ ನಟ ಡಾಲಿ ಧನಂಜಯ

ಮೈಸೂರು : ಕನ್ನಡ ಸಿನೆಮಾ ನಟ ಡಾಲಿ ಧನಂಜಯ ಮತ್ತು ವೈದ್ಯೆ​ ಧನ್ಯತಾ ಭಾನುವಾರ ಸಪ್ತಪದಿ ತುಳಿದಿದ್ದಾರೆ. ಭಾನುವಾರ ಬೆಳಿಗ್ಗೆ 9:10 ರಿಂದ 10:10ರ ವರೆಗಿನ, ಸಂಕಷ್ಟ ಚತುರ್ದರ್ಶಿಯ ಶುಭ ಲಗ್ನದಲ್ಲಿ ಅವರು ವಿವಾಹವಾಗಿದ್ದಾರೆ. ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಡಾಲಿ ಧನಂಜಯ ಹಾಗೂ ಧನ್ಯತಾ ಇಬ್ಬರು ದಾಂಪತ್ಯ ಜೀವನಕ್ಕೆ … Continued