ಜಮ್ಮುವಿನಲ್ಲಿ ೯.೭೫ ಕೆಜಿ ಸ್ಫೋಟಕ ಪತ್ತೆ

ಶ್ರೀನಗರ: ಜಮ್ಮುವಿನ ದೋಡಾ ಜಿಲ್ಲೆಯಲ್ಲಿ ೯.೭೫ ಕೆಜಿಯಷ್ಟು ಸ್ಫೋಟಕ ಸಾಗಿಸುತ್ತಿದ್ದ ವ್ಯಕ್ತಿಯನ್ನು ಭದ್ರತಾ ಪಡೆಗಳು ಬಂಧಿಸಿವೆ. ಗುಂಡಾ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ವ್ಯಕ್ತಿಯನ್ನು ಬಂಧಿಸಿ ಅವನಿಂದ ೭೮ ಜಿಲೆಟಿನ್‌ ಕಡ್ಡಿಗಳು, ೨೭೫ ಮೀಟರ್‌ ತಂತಿ ವಶಪಡಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಕಿಸ್ತ್ವಾರ್‌ ಜಿಲ್ಲೆಯ ಜಲವಿದ್ಯುತ್‌ ಯೋಜನಾ ಪ್ರದೇಶದ ಸಮೀಪ ಅಡಗುದಾಣದಿಂದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.