ವೀಡಿಯೊ..| ಆಸ್ಪತ್ರೆ ಬಿಲ್ ಕೇಳಿ ಐಸಿಯುವಿನಿಂದ ಹೊರಬಂದ ‘ಕೋಮಾ’ ದಲ್ಲಿದ್ದ ವ್ಯಕ್ತಿ…! ವಂಚನೆ ಪ್ರಕರಣ ಬೆಳಕಿಗೆ ಬಂತು…!!

ರತ್ಲಾಮ್ (ಮಧ್ಯಪ್ರದೇಶ): ಮಧ್ಯಪ್ರದೇಶದ ರತ್ಲಾಮ್‌ನಲ್ಲಿ, ಒಬ್ಬ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿ ಕೋಮಾದಲ್ಲಿದ್ದಾನೆ ಎಂದು ಹೇಳಲಾದ ವ್ಯಕ್ತಿಯೊಬ್ಬ ಆಸ್ಪತ್ರೆಯ ಬಿಲ್‌ ಕೇಳಿ ಆಮ್ಲಜನದ ಮಾಸ್ಕ್‌ ಸಮೇತ ಐಸಯುವಿನಿಂದ ಹೊರಬಂದ ಘಟನೆ ನಡೆದಿದೆ. ತನ್ನನ್ನು ಆಸ್ಪತ್ರೆಯ ಐಸಿಯುವಿನಲ್ಲಿ ಬಂಧಿ ಮಾಡಲಾಗಿತ್ತು. ಹಾಗೂ ತನ್ನ ಕುಟುಂಬಕ್ಕೆ ಅನಗತ್ಯ ದುಬಾರಿ ಚಿಕಿತ್ಸೆಗೆಂದು 1 ಲಕ್ಷ ರೂಪಾಯಿ ಪಾವತಿಸಲು ಸೂಚಿಸಲಾಯಿತು ಎಂದು … Continued

ವೀಡಿಯೊ…| ಮದುವೆ ಮೆರವಣಿಗೆ ವೇಳೆ ಕುದುರೆ ಮೇಲೆ ಬರುತ್ತಿದ್ದ ಮದುಮಗ ಹೃದಯಾಘಾತದಿಂದ ಸಾವು

ಭೋಪಾಲ್: ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯಲ್ಲಿ 27 ವರ್ಷದ ಮದುಮಗ ತನ್ನ ಮದುವೆಯ ಮೆರವಣಿಗೆಯಲ್ಲಿ ಕುದುರೆ ಮೇಲೆ ಬರುತ್ತಿರುವಾಗಲೇ ಅಲ್ಲಿಯೇ ಕುಸಿದು ಮೃತಪಟ್ಟಿದ್ದಾನೆ. ಶುಕ್ರವಾರ ರಾತ್ರಿ ಪ್ರದೀಪ ಜಾಟ್ ಎಂಬ ಮದುಮಗ ಜಾಟ್ ಹಾಸ್ಟೆಲಿನಲ್ಲಿ ಆಯೋಜಿಸಿದ್ದ ಮದುವೆಯ ಸ್ಥಳಕ್ಕೆ ಕುದುರೆ ಮೇಲೆ ಮೆರವಣಿಗೆಯಲ್ಲಿ ಬರುತ್ತಿರುವಾಗ ಈ ಘಟನೆ ನಡೆದಿದೆ. ಮದುವೆಯ ಸ್ಥಳಕ್ಕೆ ಕುದುರೆ ಸವಾರಿ ಮಾಡುವ ಮೊದಲು … Continued

ವೀಡಿಯೊ | ಬೇಟೆಯಲ್ಲಿ ಎಡವಟ್ಟು ; ಕಾಡುಹಂದಿ ಸಮೇತ ಬಾವಿಗೆ ಬಿದ್ದ ಬೃಹತ್‌ ಹುಲಿ…! ಬಾವಿಯೊಳಗೆ ಥಂಡಾ ಥಂಡಾ…ಕೂಲ್‌ ಕೂಲ್‌..!

ಸಿಯೋನಿ: ಅಪರೂಪದ ವಿದ್ಯಮಾನವೊಂದರಲ್ಲಿ ಕಾಡುಹಂದಿಯನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬಂದ ಹುಲಿಯೊಂದು ಹಂದಿ ಸಮೇತ ಬಾವಿಗೆ ಬಿದ್ದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಕಾಡು ಹಂದಿಯನ್ನು ಬೇಟೆಯಾಡುವ ಭರಾಟೆಯಲ್ಲಿ ಹುಲಿ ನಿಯಂತ್ರಣ ಕಳೆದುಕೊಂಡು ಹಂದಿ ಜೊತೆಗೇ ಬಾವಿಗೆ ಬಿದ್ದಿದ್ದು, ನಂತರ ಹುಲಿ ಮತ್ತೆ ಹಂದಿ ಒಟ್ಟಿಗೆ … Continued

ವೀಡಿಯೊ…| ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರ ವಾಹನದ ಮುಂದೆ ರಸ್ತೆ ಮಧ್ಯೆಯೇ ಸೂರ್ಯನ ಸ್ನಾನ ಮಾಡುತ್ತಿದ್ದ 5 ಹುಲಿಗಳು…!

ಮಧ್ಯಪ್ರದೇಶದ ಸತ್ಪುರ ಹುಲಿ ಸಂರಕ್ಷಿತ ಪ್ರದೇಶದ ಜಂಗಲ್ ಸಫಾರಿಯ ವೇಳೆ ಮಧೈ ಪ್ರದೇಶದಲ್ಲಿ ಹುಲಿ ಗುಂಪು ಒಟ್ಟಿಗೆ ಕಾಣಿಸಿಕೊಂಡ ನಂತರ ಪ್ರವಾಸಿಗರು ಆಶ್ಚರ್ಯಚಕಿತರಾದರು. ಸೋಮವಾರ ಮುಂಜಾನೆ 5:00 ಗಂಟೆಯ ಸುಮಾರಿಗೆ ಹುಲಿಗಳ ಗುಂಪು ಸೂರ್ಯನ ಬೆಳಕನ್ನು ಆನಂದಿಸಲು ರಸ್ತೆಯ ಮಧ್ಯದಲ್ಲಿ ಕುಳಿತುಕೊಂಡಿದ್ದವು. ಈ ಅಪರೂಪದ ದೃಶ್ಯವು ಜಂಗಲ್‌ ಸಫಾರಿ ವೇಳೆ ಕಂಡುಬಂದಿದೆ. ಘಟನೆಯ ವೀಡಿಯೊ ತುಣುಕಿನಲ್ಲಿ … Continued

ಈ ಬಗ್ಗೆ ಎಚ್ಚರ | ಅಂಗಡಿಗಳಲ್ಲಿದ್ದ ಕ್ಯೂಆರ್‌ (QR) ಕೋಡ್‌ ಅನ್ನು ರಾತ್ರೋರಾತ್ರಿ ಬದಲಾಯಿಸಿದ ವಂಚಕರು…! ಗ್ರಾಹಕರು ಪಾವತಿಸಿದ ಹಣ ವಂಚಕರ ಖಾತೆಗೆ..!!

ಭೋಪಾಲ್‌: ಗ್ರಾಹಕರು ಅಂಗಡಿಗಳಲ್ಲಿ ತಮ್ಮ ಕ್ಯೂಆರ್‌ (QR) ಕೋಡ್‌ಗಳನ್ನು ಸ್ಕ್ಯಾನ್ ಮಾಡಿದಾಗ ಮಧ್ಯಪ್ರದೇಶದ ಖಜುರಾಹೊದಲ್ಲಿ ಹಲವಾರು ವ್ಯಾಪಾರದ ಅಂಗಡಿಗಳವರು ಆಘಾತಕ್ಕೊಳಗಾದವು. ಯಾಕೆಂದರೆ ಗ್ರಾಹಕರು ಕ್ಯೂಆರ್‌ ಕೋಡ್‌ ಮೂಲಕ ಪಾವತಿಸಿದ ಹಣ ಅವರ ಖಾತೆಗಳಿಗೆ ತಲುಪಲಿಲ್ಲ…! ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ವಂಚಕರ ಗುಂಪು ರಾತ್ರೋರಾತ್ರಿ ಆನ್‌ಲೈನ್ ಪಾವತಿ ಸ್ಕ್ಯಾನರ್‌ಗಳ ಕ್ಯೂಆರ್‌ (QR) ಕೋಡ್‌ ಬದಲಾಯಿಸುವುದನ್ನು … Continued

ವೀಡಿಯೊ | ಟಿಕೆಟಿಗೆ “ಹಣವಿಲ್ಲ” ; ರೈಲಿನ ಕೆಳಗೆ ಚಕ್ರಗಳ ನಡುವೆ ಅಡಗಿಕೊಂಡು 250 ಕಿಮೀ ಪ್ರಯಾಣಿಸಿದ ವ್ಯಕ್ತಿ…!

ಭೋಪಾಲ: ಮಧ್ಯಪ್ರದೇಶದ ಜಬಲಪುರ ನಿಲ್ದಾಣದಲ್ಲಿ ರೈಲಿನ ರೋಲಿಂಗ್ ಸ್ಟಾಕ್ ಮತ್ತು ಅಂಡರ್‌ ಕ್ಯಾರೇಜ್‌ನ ದಿನನಿತ್ಯದ ತಪಾಸಣೆ ನಡೆಸುತ್ತಿದ್ದ ರೈಲ್ವೆ ಸಿಬ್ಬಂದಿ ಶುಕ್ರವಾರ ಬೋಗಿಯೊಂದರ ಕೆಳಗೆ ಚಕ್ರಗಳ ಮೇಲಿನ ಸಣ್ಣ ಜಾಗದಲ್ಲಿ ವ್ಯಕ್ತಿಯೊಬ್ಬ ಅಡಗಿಕೊಂಡಿರುವುದನ್ನು ಗಮನಿಸಿ ಆಘಾತಕ್ಕೊಳಗಾದರು. ಆ ವ್ಯಕ್ತಿ ಇಟಾರ್ಸಿಯಿಂದ ತಾನು ಇದೇ ಸ್ಥಿತಿಯಲ್ಲಿ 250 ಕಿಮೀ ಪ್ರಯಾಣಿಸಿದ್ದಾಗಿ ಆತ ಹೇಳಿದಾಗ ಅವರಿಗೆ ಅಚ್ಚರಿ ಹಾಗೂ … Continued

ಆಘಾತಕಾರಿ : ಗುಂಡು ಹಾರಿಸಿ ಪ್ರಾಂಶುಪಾಲರನ್ನು ಕೊಂದ ವಿದ್ಯಾರ್ಥಿ, ನಂತರ ಪ್ರಾಂಶುಪಾಲರ ಬೈಕ್‌ ನಲ್ಲಿ ಪರಾರಿ

ಭೋಪಾಲ್: ಮಧ್ಯಪ್ರದೇಶದ ಛತ್ತರ್‌ಪುರದ ಶಾಲೆಯೊಂದರ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ವರದಿಯಾಗಿದೆ. ಧಮೋರಾ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಸುರೇಂದ್ರ ಕುಮಾರ ಸಕ್ಸೇನಾ (55) ಅವರು ಬಾತ್‌ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಸುಮಾರು ಐದು ವರ್ಷಗಳಿಂದ ಶಾಲೆಯ ಪ್ರಾಂಶುಪಾಲರಾಗಿದ್ದರು. ಮೂಲಗಳ ಪ್ರಕಾರ, ಅವರ ಮೇಲೆ ಗುಂಡು ಹಾರಿಸಿದನೆಂದು ಹೇಳಲಾದ ವಿದ್ಯಾರ್ಥಿಯು ಅವರನ್ನು … Continued

ವೀಡಿಯೊ…| ಸೈಕಲ್ ಮೇಲಿದ್ದ 5 ವರ್ಷದ ಬಾಲಕನ ಮೇಲೆ ಓಡಿದ ಕಾರು ; ಪವಾಡ ಸದೃಶರೀತಿಯಲ್ಲಿ ಪಾರಾದ ಬಾಲಕ…!

ಸೈಕಲ್ ಮೇಲೆ ಕುಳಿತು ಮನೆ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಬಾಲಕನೊಬ್ಬನಿಗೆ ಡಿಕ್ಕಿ ಹೊಡೆದ ಕಾರು ಆತನ ಮೇಲೆ ಹತ್ತಿ ಹೋದರೂ ಆತ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಮಧ್ಯಪ್ರದೇಶದ ಬೇತುಲ್‌ ಎಂಬಲ್ಲಿ ನಡೆದಿದೆ. ಈ ಘಟನೆ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೇತುಲ್ ಜಿಲ್ಲೆಯ ಕೊತ್ವಾಲಿ ಪೊಲೀಸ್ … Continued

ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದಿದ್ದ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಇಬ್ಬರು ವ್ಯಕ್ತಿಗಳು : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಗ್ವಾಲಿಯರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಕೆನಡಾ ಮೂಲದ ಗ್ಯಾಂಗ್‌ಸ್ಟರ್‌ ಅರ್ಷದೀಪ್ ಸಿಂಗ್ ದಲ್ಲಾನ ಇಬ್ಬರು ಸಹಾಯಕರು 45 ವರ್ಷದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಕಳೆದ ತಿಂಗಳು ಪಂಜಾಬಿನ ಫರೀದ್‌ಕೋಟ್‌ನಲ್ಲಿ ಸಿಖ್ ಕಾರ್ಯಕರ್ತ ಗುರುಪ್ರೀತ್ ಸಿಂಗ್ ಹರಿ ನೌ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಗ್ವಾಲಿಯರ್ ಗುಂಡಿನ ದಾಳಿಯಲ್ಲಿ ಮೃತಪಟ್ಟವನನ್ನು ಜಸ್ವಂತ್ ಸಿಂಗ್ … Continued

ನೊಣಗಳ ಸಹಾಯದಿಂದ ಕಗ್ಗಂಟಾಗಿದ್ದ ಕೊಲೆ ರಹಸ್ಯ ಭೇದಿಸಿದ ಪೊಲೀಸರು…!

ಜಬಲ್ಪುರ : ಮಧ್ಯಪ್ರದೇಶದ ಪೊಲೀಸರು 26 ವರ್ಷದ ಯುವಕನ ಕೊಲೆ ಪ್ರಕರಣದಲ್ಲಿ ಶಂಕಿತನ ಅಂಗಿ ಮೇಲಿದ್ದ ನೊಣಗಳು ಈ ಪ್ರಕರಣದ ರಹಸ್ಯ ಭೇದಿಸಲು ಪೊಲೀಸರಿಗೆ ನೆರವಾಗಿವೆ. ಈ ನೊಣಗಳು 19 ವರ್ಷದ ಯುವಕನು ತಾನು ಅಪರಾಧವನ್ನು ಎಸಗಿರುವುದಾಗಿ ಒಪ್ಪಿಕೊಳ್ಳಲು ಕಾರಣವಾಯಿತು. ಆದರೆ ಇದೇ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಪೋಲೀಸರು ಆತನನ್ನು ಈ ಮೊದಲು ಬಿಟ್ಟುಕಳುಹಿಸಿದ್ದರು. ಹಾಗಾದರೆ … Continued