ಆಸ್ಪತ್ರೆಯಿಂದ ₹4 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ : ಸಿಸಿಟಿವಿಯಲ್ಲಿ ಬಯಲಾಯ್ತು ‘ನಾಲ್ಕು ಕಾಲಿನ ಕಳ್ಳ’ನ ಕರಾಮತ್ತು !

ಮಂದಸೌರ್ : ಸರ್ಕಾರಿ ಆಸ್ಪತ್ರೆಯಿಂದ ಸುಮಾರು ₹4 ಲಕ್ಷ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾದ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ತಾವು ಹುಡುಕುತ್ತಿದ್ದ “ಕಳ್ಳ” ಮನುಷ್ಯನಲ್ಲ, ಬದಲಿಗೆ ಅಲೆಮಾರಿ ನಾಯಿಯೆಂಬುದು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ವೇಳೆ ಪತ್ತೆಯಾಗಿದ್ದು, ಕ್ಷಣಕಾಲ ಪೊಲೀಸರೇ ದಂಗಾಗಿದ್ದಾರೆ. ಈ ವಿಚಿತ್ರ ಘಟನೆ ಮಧ್ಯಪ್ರದೇಶದ ಮಂದಸೌರ್ ಜಿಲ್ಲಾ ಆಸ್ಪತ್ರೆಯಲ್ಲಿ … Continued

‘ಸತ್ತಿದ್ದಾಳೆ’ ಎಂದು ಭಾವಿಸಿ ಅಂತ್ಯಕ್ರಿಯೆ ನೆರವೇರಿಸಿದ 18 ತಿಂಗಳ ನಂತರ ಮಹಿಳೆ ಪ್ರತ್ಯಕ್ಷ…! ಆಕೆ ಕೊಲೆ ಆರೋಪದಲ್ಲಿ ನಾಲ್ವರು ಇನ್ನೂ ಜೈಲಿನಲ್ಲಿ…!!

ಮಂದಸೌರ್ : ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಮೃತಪಟ್ಟಿದ್ದಾರೆಂದು ಭಾವಿಸಿ ಆಕೆಯ ಕುಟುಂಬವು ಅಂತ್ಯಕ್ರಿಯೆಯನ್ನೂ ನೆರವೇರಿಸಿದ 18 ತಿಂಗಳ ನಂತರ ಈಗ ಮಹಿಳೆ ಪ್ರತ್ಯಕ್ಷರಾಗಿದ್ದಾರೆ…! ಲಲಿತಾ ಬಾಯಿ ಎಂದು ಗುರುತಿಸಲಾದ ಈ ಮಹಿಳೆ ಪೊಲೀಸ್ ಠಾಣೆಗೆ ಹಾಜರಾಗಿ ತಾನು ಬದುಕಿರುವುದನ್ನು ದೃಢಪಡಿಸಿದ್ದಾರೆ. ಆದರೆ ಆಕೆಯ ಆಪಾದಿತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳು ಇನ್ನೂ ಜೈಲಿನಲ್ಲಿದ್ದಾರೆ…! … Continued