ಬೆಂಗಳೂರಲ್ಲಿ ಭಾರಿ ವಂಚನೆ: 3 ಕೋಟಿ ರೂ. ಮೌಲ್ಯದ ಚಿನ್ನದೊಂದಿಗೆ ಖದೀಮರು ಎಸ್ಕೇಪ್

ಬೆಂಗಳೂರು : ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿನಡೆದ  ಸಿನಿಮೀಯ ಶೈಲಿಯ ಹೈ-ಪ್ರೊಫೈಲ್ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಖದೀಮರು ಪಕ್ಕಾ ಪ್ಲಾನ್ ಮಾಡಿ ಬರೋಬ್ಬರಿ 1.85 ಕೆಜಿ ಚಿನ್ನದ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ನಗರದ ಪ್ರಸಿದ್ಧ ನಾಗರತ್‌ ಪೇಟೆಯ “ಮೆಹ್ತಾ ಜ್ಯುವೆಲ್ಲರಿ” (Mehta Jewellery) ಮಾಲೀಕರು ಈ ಬೃಹತ್ ವಂಚನೆಗೆ ಒಳಗಾದವರು ಎನ್ನಲಾಗಿದೆ. ಉದ್ಯಮಿ ನೀಡಿರುವ … Continued

ಯಾದಗಿರಿ: ಊರಿಗೆ ಹೋಗಲು ವಾಹನ ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಕ…!

ಯಾದಗಿರಿ: ಜಿಲ್ಲೆಯ ಸೈದಾಪುರದಲ್ಲಿ ಅಸಾಮಾನ್ಯ ಘಟನೆ ಬೆಳಕಿಗೆ ಬಂದಿದೆ. ವಜಾಗೊಂಡಿದ್ದ ಕೆಕೆಆರ್‌ಟಿಸಿ ಚಾಲಕನೊಬ್ಬ ಬಸ್‌ ಕಳ್ಳತನ ಮಾಡಿದ ಘಟನೆ ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬಸ್‌ ಅನ್ನು ಕಳ್ಳತನ ಮಾಡಿರುವುದು ಸಿಸಿಟಿವಿ ದೃಶ್ಯಗಳಿಂದ ಬಹಿರಂಗವಾಗಿದೆ. ಕಳೆದ ಮಾರ್ಚ್ 19ರಂದು ಸೈದಾಪುರ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ ಅನ್ನು ಮಹಿಪಾಲ ಎಂಬ ವ್ಯಕ್ತಿ ಕಳವು … Continued

ಕುಮಟಾ : ಪೆಟ್ರೋಲ್ ಬಂಕ್ ಕಳ್ಳತನ ; ಇಬ್ಬರನ್ನು ಬಂಧಿಸಿದ ಪೊಲೀಸರು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಾಸೂರು ಕ್ರಾಸ್ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಕುಮಟಾ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಫೆಬ್ರವರಿ 1ರ ರಾತ್ರಿ ಪೆಟ್ರೋಲ್ ಬಂಕ್ ಕಚೇರಿಯ ಹಿಂಭಾಗದ ಕಿಟಕಿಯ ಸರಳುಗಳನ್ನು ಕತ್ತರಿಸಿ ಒಳನುಗ್ಗಿದ್ದ ಕಳ್ಳರು, ಲಾಕರ್ ಮೀಟಿ ತೆಗೆದು ಅದರಲ್ಲಿದ್ದ 25,000 ರೂ. ನಗದು ಹಣವನ್ನು … Continued

ವಿಧಾನಸೌಧದ ಸಚಿವರ ಕಚೇರಿಯಲ್ಲಿ ಚಿನ್ನಾಭರಣ, ನಗದು ಇದ್ದ ಬ್ಯಾಗ್ ಕಳ್ಳತನ

ಬೆಂಗಳೂರು : ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರ ವಿಧಾನಸೌಧದಲ್ಲಿ ಕಚೇರಿಯಲ್ಲಿ ಕಳ್ಳತನ ನಡೆದಿದೆ ಎಂದು ವರದಿಯಾಗಿದೆ. ಕಚೇರಿಯಲ್ಲಿ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂಪಾಯಿ ನಗದು ಇದ್ದ ಕೈಚೀಲ ಕಳವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಗ್ರೂಪ್ ನೌಕರನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನವೀನ ಎಂಬವರು ಕೆಲಸದ ನಿಮಿತ್ತ … Continued

ಐಷಾರಾಮಿ ಜೀವನಕ್ಕಾಗಿ 60 ಕಡೆ ದರೋಡೆ: ಬಿಎಂಡಬ್ಲ್ಯೂ ಕಾರು ಇರುವ ಮಾಜಿ ಐಟಿ ಉದ್ಯೋಗಿಯ ಬಂಧನ…!

ವಿಶಾಖಪಟ್ಟಣ: ಐಷಾರಾಮಿ ಜೀವನದ ವ್ಯಾಮೋಹಕ್ಕೆ ಬಿದ್ದು ವಿಶಾಖಪಟ್ಟಣ ಸೇರಿದಂತೆ ಆಂಧ್ರಪ್ರದೇಶದಾದ್ಯಂತ ಸರಣಿ ಮನೆಗಳ್ಳತನ ನಡೆಸುತ್ತಿದ್ದ 27 ವರ್ಷದ ಮಾಜಿ ಐಟಿ ಉದ್ಯೋಗಿಯನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸತತವಾಗಿ ಕೇಳಿಬರುತ್ತಿದ್ದ ರಾತ್ರಿ ವೇಳೆಯ ಕಳ್ಳತನದ ದೂರುಗಳ ಬೆನ್ನತ್ತಿದ ಪೊಲೀಸರು, ಸುದೀರ್ಘ ತನಿಖೆಯ ನಂತರ ಅಚ್ಚಿ ಮಹೇಶ ರೆಡ್ಡಿ ಅಲಿಯಾಸ್ ‘ಸನ್ನಿ’ ಎಂಬಾತನನ್ನು ಸೆರೆಹಿಡಿಯುವಲ್ಲಿ … Continued

ಬೀದಿ ಬದಿ ತಿಂಡಿ ಚಪಲಕ್ಕೆ ಬಿದ್ದು ಮನೆಯಲ್ಲಿದ್ದ ₹85 ಲಕ್ಷ ಮೌಲ್ಯದ ಒಡವೆಗಳನ್ನೇ ಕದ್ದು ಅಂಗಡಿಯವನಿಗೆ ನೀಡಿದ ಬಾಲಕ..!

ದೇವರಿಯಾ (ಉತ್ತರ ಪ್ರದೇಶ):  ಅಚ್ಚುಮೆಚ್ಚಿನ ತಿನಿಸು ತಿನ್ನಬೇಕೆಂಬ ಹಂಬಲ ಯಾರಿಗೆ ಇರುವುದಿಲ್ಲ ಹೇಳಿ? ಆದರೆ ಅದೇ ಹಂಬಲ ವ್ಯಸನವಾಗಿ ಬದಲಾದಾಗ ಎಂತಹ ಅನಾಹುತ ಸಂಭವಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಒಂದು ನಿದರ್ಶನವಾಗಿದೆ. ಅತ್ಯಂತ ಪ್ರಸಿದ್ಧ ಬೀದಿ ಬದಿಯ ಆಹಾರವಾದ ಕೇವಲ ಒಂದು ಪ್ಲೇಟ್ ‘ಮೊಮೊಸ್’ ತಿನ್ನುವ ಚಪಲಕ್ಕೆ ಬಿದ್ದ 14 ವರ್ಷದ ಬಾಲಕನೊಬ್ಬ, ಮನೆಯಲ್ಲಿದ್ದ ಸುಮಾರು … Continued

ವಾದ್ಯಗಳ ಅಂಗಡಿಯಿಂದ ಮ್ಯಾಂಡೋಲಿನ್ ಕದ್ದೊಯ್ದ ಕಳ್ಳ ; ನಂತ್ರ ಕ್ಷಮೆಯಾಚನೆ ಪತ್ರ ಬರೆದು ವಾಪಸ್‌ ಇಟ್ಟು ಹೋದ…!

ನ್ಯೂಜೆರ್ಸಿ : ಅಮೆರಿಕದ ನ್ಯೂಜೆರ್ಸಿಯ ಹಳೆಯ ಸಂಗೀತ ವಾದ್ಯಗಳ ಮಳಿಗೆಯೊಂದರಲ್ಲಿ ನಡೆದ ವಿಚಿತ್ರ ಕಳ್ಳತನವೊಂದು ಭಾರೀ ಸುದ್ದಿಯಲ್ಲಿದೆ. ಮಳಿಗೆಯಿಂದ ಕಳ್ಳತನವಾಗಿದ್ದ ಎರಡು ಅಮೂಲ್ಯ ಮ್ಯಾಂಡೊಲಿನ್ ವಾದ್ಯಗಳನ್ನು ಕಳುವು ಮಾಡಿದ್ದ ಕಳ್ಳನೇ ಮರಳಿ ತಂದುಕೊಟ್ಟಿದ್ದು, ಜೊತೆಗೆ ಕೈಬರಹದಲ್ಲಿ ಕ್ಷಮಾಪಣಾ ಪತ್ರವನ್ನೂ ಬರೆದಿಟ್ಟು ಹೋಗಿದ್ದಾನೆ….! ಈ ತಿಂಗಳ ಆರಂಭದಲ್ಲಿ ನ್ಯೂಜೆರ್ಸಿಯ ‘ಲಾರ್ಕ್ ಸ್ಟ್ರೀಟ್ ಮ್ಯೂಸಿಕ್’ (Lark Street Music) … Continued

ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ ; ದರೋಡೆಕೋರನ ಕಾಲಿಗೆ ಗುಂಡೇಟು

ಗದಗ: ಪೊಲೀಸರ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ದರೋಡೆಕೋರನ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ​​ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಮತ್ತು ಡೋಣಿ ಗ್ರಾಮದಲ್ಲಿ ನಡೆದಿದೆ. ಆರೋಪಿ ಜಯಸಿಂಹ ಮೊಡಕೆರ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಆರೋಪಿ ಜಯಸಿಂಹ ಮೊಡಕೆರನನ್ನು ಕರೆತರುವಾಗ ಈ ಘಟನೆ ನಡೆದಿದೆ. ಎಂದು ಹೇಳಲಾಗಿದ್ದು, … Continued

ಮದುವೆಯಾದ ಮಾರನೇ ದಿನವೇ ಗಂಡನ ಮನೆ ಲೂಟಿ ಹೊಡೆದು ನಗದು-ಚಿನ್ನಾಭರಣಗಳೊಂದಿಗೆ ಪರಾರಿಯಾದ ನವವಿವಾಹಿತೆ…!

ಲಕ್ನೋ : ಉತ್ತರ ಪ್ರದೇಶದ ಗೊಂಡಾದಲ್ಲಿ ನವವಿವಾಹಿತ ಮಹಿಳೆಯೊಬ್ಬಳು ಮದುವೆಯಾಗಿ ಐದು ದಿನಗಳ ನಂತರ ಗಂಡನ ಮನೆಯಿಂದ ನಗದು ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಗೊಂಡಾದ ಬಸೋಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದರೋಡೆ ನಡೆದ ರಾತ್ರಿ ನವವಿವಾಹಿತೆ ತನ್ನ ಅತ್ತೆ ಮಾವನಿಗೆ ಚಹಾ ನೀಡಿದ್ದಾಳೆ. ಮರುದಿನ ಬೆಳಿಗ್ಗೆ, ಮನೆಯಿಂದ 3.15 ಲಕ್ಷ ರೂ. … Continued

ತಂದೆಗೆ ತಕ್ಕ ಪಾಠ ಕಲಿಸಲು ತನ್ನ ಮನೆಯಿಂದ 20 ಲಕ್ಷ ರೂ. ನಗದು, 80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಬಾಲಕ…!

ಕಾನ್ಪುರ: ತಂದೆಗೆ ತಕ್ಕ ಪಾಠ ಕಲಿಸಲು 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಆರು ಜನ ಸ್ನೇಹಿತರ ಜೊತೆ ಸೇರಿ ಕಾನ್ಪುರದ ತನ್ನ ಸ್ವಂತ ಮನೆಯಲ್ಲಿಯೇ 1 ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ನಡೆದಿದೆ…! ತನ್ನ ತಂದೆ ವಿರುದ್ಧ ಸೇಡು ತೀರಿಸಿಕೊಳ್ಳಲು ಬಯಸಿದ್ದಾಗಿ ಬಾಲಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ…!! ಕಾನ್ಪುರದ ಉಪನಗರವಾದ … Continued