ವಾಹನ ಚಲಾಯಿಸುತ್ತಿದ್ದಾಗಲೇ ಪ್ರಜ್ಞೆ ತಪ್ಪಿದ ಶಾಲಾ ಬಸ್‌ ಡ್ರೈವರ್‌: ಸಮಯಪ್ರಜ್ಞೆ ತೋರಿ ಹಲವರ ಪ್ರಾಣ ಉಳಿಸಿದ ವಿದ್ಯಾರ್ಥಿಗಳು…!

ಚಲಿಸುತ್ತಿದ್ದ ಶಾಲಾ ಬಸ್‌ನ ಚಾಲಕಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದರೂ, ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಸಮಯಪ್ರಜ್ಞೆ ಮೆರೆದು ಭಾರಿ ಅಪಘಾತವನ್ನು ತಪ್ಪಿಸಿರುವ ರೋಮಾಂಚನಕಾರಿ ಘಟನೆ ಅಮೆರಿಕದ ಮಿಸಿಸ್ಸಿಪ್ಪಿಯಲ್ಲಿ ನಡೆದಿದೆ. ಬುಧವಾರ ಹ್ಯಾನ್‌ಕಾಕ್ ಕೌಂಟಿ ಶಾಲೆಯ ಬಸ್ ಚಾಲಕಿ ಲಿಯಾ ಟೇಲರ್ ಅವರಿಗೆ ಬಸ್ ಚಲಾಯಿಸುತ್ತಿದ್ದಾಗಲೇ ತೀವ್ರವಾದ ಆಸ್ತಮಾ ಅಟ್ಯಾಕ್ (Asthma Attack) ಉಂಟಾಗಿದೆ. ಇದರಿಂದ ಅವರು … Continued

ಯಾದಗಿರಿ: ಊರಿಗೆ ಹೋಗಲು ವಾಹನ ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಕ…!

ಯಾದಗಿರಿ: ಜಿಲ್ಲೆಯ ಸೈದಾಪುರದಲ್ಲಿ ಅಸಾಮಾನ್ಯ ಘಟನೆ ಬೆಳಕಿಗೆ ಬಂದಿದೆ. ವಜಾಗೊಂಡಿದ್ದ ಕೆಕೆಆರ್‌ಟಿಸಿ ಚಾಲಕನೊಬ್ಬ ಬಸ್‌ ಕಳ್ಳತನ ಮಾಡಿದ ಘಟನೆ ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬಸ್‌ ಅನ್ನು ಕಳ್ಳತನ ಮಾಡಿರುವುದು ಸಿಸಿಟಿವಿ ದೃಶ್ಯಗಳಿಂದ ಬಹಿರಂಗವಾಗಿದೆ. ಕಳೆದ ಮಾರ್ಚ್ 19ರಂದು ಸೈದಾಪುರ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ ಅನ್ನು ಮಹಿಪಾಲ ಎಂಬ ವ್ಯಕ್ತಿ ಕಳವು … Continued

ಕೇವಲ 400 ಮೀಟರ್‌ ದೂರ ಕರೆದೊಯ್ದಿಕ್ಕೆ ವಿದೇಶಿ ಮಹಿಳೆಯಿಂದ 18,000 ರೂ.ಬಾಡಿಗೆ ವಸೂಲಿ ಮಾಡಿದ ಟ್ಯಾಕ್ಸಿ ಚಾಲಕ…!

ಮುಂಬೈ: ವಿಮಾನ ನಿಲ್ದಾಣದಿಂದ ಕೇವಲ 400 ಮೀಟರ್ ದೂರದಲ್ಲಿರುವ ಹೋಟೆಲ್‌ಗೆ ಕರೆದೊಯ್ಯಲು ಅಮೆರಿಕದ ಪ್ರಜೆಯೊಬ್ಬರಿಂದ ಬರೋಬ್ಬರಿ 18,000 ರೂಪಾಯಿ ($200) ವಸೂಲಿ ಮಾಡಿದ್ದ ಟ್ಯಾಕ್ಸಿ ಚಾಲಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಜನವರಿ 12 ರಂದು ಈ ಘಟನೆ ನಡೆದಿದ್ದು, ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್-2ಕ್ಕೆ ಬಂದಿಳಿದ ಅಮೆರಿಕದ ಮಹಿಳೆಯೊಬ್ಬರು ಹತ್ತಿರದ ‘ಹಿಲ್ಟನ್ ಹೋಟೆಲ್’ಗೆ ಹೋಗಲು ಟ್ಯಾಕ್ಸಿ … Continued

ಬಸ್‌ನಲ್ಲಿ ನಮಾಜ್‌ ಮಾಡಿದ ಚಾಲಕ ಅಮಾನತು ; ಕಾರ್ಮಿಕ ದಿನಾಚರಣೆಯಂದೇ ಸಸ್ಪೆಂಡ್‌

ಹುಬ್ಬಳ್ಳಿ : ಮಾರ್ಗ ಮಧ್ಯೆಯೇ ಬಸ್‌ ನಿಲ್ಲಿಸಿ ನಮಾಜ್‌ ಮಾಡಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಾಲಕನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. (ಮೇ 1), ಕಾರ್ಮಿಕರ ದಿನಾಚರಣೆಯಂದೇ ಚಾಲಕ ಅಮಾನತುಗೊಂಡಿದ್ದಾರೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರೊಬ್ಬರು ಮಾರ್ಗ ಮಧ್ಯದಲ್ಲಿ ಬಸ್ ನಿಲ್ಲಿಸಿ ನಮಾಜ್ ಮಾಡಿದ ಘಟನೆ ಚರ್ಚೆಗೆ ಗ್ರಾಸವಾಗಿತ್ತು. ಹಾನಗಲ್ (Hangal) … Continued

ವೀಡಿಯೊ | ಮಾರ್ಗ ಮಧ್ಯೆ ಪ್ರಯಾಣಿಕರಿದ್ದ ವಾಯವ್ಯ ಸಾರಿಗೆ ಸಂಸ್ಥೆ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ ; ತನಿಖೆಗೆ ಆದೇಶ

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದರ ಚಾಲಕನೊಬ್ಬ ರಸ್ತೆಬದಿಯಲ್ಲಿ ಪ್ರಯಾಣಿಕರಿದ್ದ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದು, ಆತ ಬಸ್‌ ನಿಲ್ಲಿಸಿ ನಮಾಜ್‌ ಮಾಡಿದ ವಿಡಿಯೋ ವೈರಲ್‌ ಆದ ನಂತರ ತನಿಖೆಗೆ ಆದೇಶಿಸಲಾಗಿದೆ. ವೀಡಿಯೊದಲ್ಲಿ, ಬಸ್‌ ಚಾಲಕ ಆಸನದ ಮೇಲೆ ಕುಳಿತು ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು, ಬಸ್ ರಸ್ತೆಯ ಪಕ್ಕದಲ್ಲಿ ನಿಂತಿರುವಾಗ ಸಂಚಾರ ದಟ್ಟಣೆಯಿಂದ ಕೂಡಿರುವುದನ್ನು ಹಾಗೂ ಬಸ್ಸಿನಲ್ಲಿದ್ದ … Continued

ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಮಾಜಿ ಸಿಎಂ ಪುತ್ರಿ ; ವೀಡಿಯೊ ವೈರಲ್‌

ಗುವಾಹತಿ : ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರಿ ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮದ್ಯದ ಅಮಲಿನಲ್ಲಿ ಚಾಲಕ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಅಸ್ಸಾಂನ ಮಾಜಿ ಮುಖ್ಯಮಂತ್ರಿ ಪ್ರಫುಲ್ಲಕುಮಾರ ಮಹಂತ ಅವರ ಪುತ್ರಿ ಪ್ರಜೋಯೀತಾ ಕಶ್ಯಪ್ ಎದುರಿಗೆ ವ್ಯಕ್ತಿಯೊಬ್ಬರು ಮಂಡಿಯೂರಿ ಕುಳಿತಿದ್ದು, ಆತನನ್ನು ಮಹಿಳೆ ಬಯ್ಯುತ್ತಿದ್ದು … Continued

ದುಷ್ಕರ್ಮಿಗಳ ದಾಳಿಗೆ ಹೊಟ್ಟೆಗೆ ಗುಂಡೇಟು ಬಿದ್ದರೂ ಹಲವಾರು ಕಿಲೋ ಮೀಟರ್‌ ಜೀಪ್‌ ಓಡಿಸಿ 15 ಪ್ರಯಾಣಿಕರ ಜೀವ ಕಾಪಾಡಿದ ಚಾಲಕ..!

ಬಿಹಾರದ ಭೋಜಪುರ ಜಿಲ್ಲೆಯ ಜೀಪ್ ಚಾಲಕನೊಬ್ಬ ಅಸಾಧಾರಣ ಶೌರ್ಯ ಮತ್ತು ಸಾಹಸ ಪ್ರದರ್ಶನದಲ್ಲಿ, ಹೊಟ್ಟೆಗೆ ಗುಂಡೇಟು ತಗುಲಿದ ನಂತರವೂ ಹಲವಾರು ಕಿಲೋಮೀಟರ್‌ಗಳಷ್ಟು ಜೀಪ್‌ ಓಡಿಸುವ ಮೂಲಕ 14-15 ಪ್ರಯಾಣಿಕರ ಜೀವಗಳನ್ನು ಉಳಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಗಂಭೀರ ಗಾಯದ ನಡುವೆಯೂ ಅವರ ಅಚಲ ಧೈರ್ಯಕ್ಕೆ ಎಲ್ಲರೂ ಬೆರಗಾಗಿದ್ದಾರೆ. ರಾತ್ರಿಯ ವೇಳೆ ಈ ಭಯಾನಕ ಘಟನೆ … Continued

ಕಾರವಾರ: ಬಸ್‌ ಅಡ್ಡಗಟ್ಟಿ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ವ್ಯಕ್ತಿ

ಕಾರವಾರ: ತನಗೆ ಬಸ್ ಚಾಲಕ ಸೈಡ್ ಬಿಟ್ಟಿಲ್ಲ ಎನ್ನುವ ಕಾರಣಕ್ಕೆ ಬೈಕ್ ಸವಾರನೊಬ್ಬ ಸಾರಿಗೆ ಬಸ್ ಅಡ್ಡಗಟ್ಟಿ ಬಸ್‌ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕನಿಗೆ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮೀಪದ ಶಿರವಾಡದ ಜಾಂಬಾ ಕ್ರಾಸ್ ಬಳಿ ನಡೆದಿದೆ. ಸಾರಿಗೆ ಬಸ್‌ ಕಾರವಾರ ನಗರದಿಂದ ಸಿದ್ದರಕ್ಕೆ ಪ್ರಯಾಣಿಸುತ್ತಿತ್ತು. ಬಸ್ ಶಿರವಾಡಕ್ಕೆ ತಲುಪುತ್ತಿದ್ದಂತೆ … Continued