ವಾಹನ ಚಲಾಯಿಸುತ್ತಿದ್ದಾಗಲೇ ಪ್ರಜ್ಞೆ ತಪ್ಪಿದ ಶಾಲಾ ಬಸ್‌ ಡ್ರೈವರ್‌: ಸಮಯಪ್ರಜ್ಞೆ ತೋರಿ ಹಲವರ ಪ್ರಾಣ ಉಳಿಸಿದ ವಿದ್ಯಾರ್ಥಿಗಳು…!

ಚಲಿಸುತ್ತಿದ್ದ ಶಾಲಾ ಬಸ್‌ನ ಚಾಲಕಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದರೂ, ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಸಮಯಪ್ರಜ್ಞೆ ಮೆರೆದು ಭಾರಿ ಅಪಘಾತವನ್ನು ತಪ್ಪಿಸಿರುವ ರೋಮಾಂಚನಕಾರಿ ಘಟನೆ ಅಮೆರಿಕದ ಮಿಸಿಸ್ಸಿಪ್ಪಿಯಲ್ಲಿ ನಡೆದಿದೆ. ಬುಧವಾರ ಹ್ಯಾನ್‌ಕಾಕ್ ಕೌಂಟಿ ಶಾಲೆಯ ಬಸ್ ಚಾಲಕಿ ಲಿಯಾ ಟೇಲರ್ ಅವರಿಗೆ ಬಸ್ ಚಲಾಯಿಸುತ್ತಿದ್ದಾಗಲೇ ತೀವ್ರವಾದ ಆಸ್ತಮಾ ಅಟ್ಯಾಕ್ (Asthma Attack) ಉಂಟಾಗಿದೆ. ಇದರಿಂದ ಅವರು … Continued

ಬೆಂಗಳೂರು: ಸ್ಕೂಟರ್ ಮೇಲೆ ಶಾಲಾ ಬಸ್ ಹರಿದು ಇಬ್ಬರು ಪುಟಾಣಿಗಳು ಸಾವು

ಬೆಂಗಳೂರು : ಬೈಕ್ ಮೇಲೆ ಖಾಸಗಿ ಬಸ್ ಹರಿದು ಇಬ್ಬರು ಪುಟ್ಟ ಮಕ್ಕಳು ಮೃತಪಟ್ಟ ಘಟನೆ ಬೆಂಗಳೂರಿನ ಥಣಿಸಂದ್ರ ಬಳಿ ಬುಧವಾರ ನಡೆದಿದೆ ಎಂದು ವರದಿಯಾಗಿದೆ. ಮೃತ ಮಕ್ಕಳನ್ನು ವರ್ಷಾ (2 ವರ್ಷ) ಹಾಗೂ ಬಾನು (4 ವರ್ಷ) ಬುಧವಾರ ಬೆಳಿಗ್ಗೆ ಸಿಎಆರ್ ಹೆಡ್ ಕಾನ್ಸ್ಟೇಬಲ್ ನಾಗನಗೌಡ ಮಾಲಿಪಾಟೀಲ ಎಂಬವರು ಮ್ಮ ಸ್ಕೂಟರ್‌ನಲ್ಲಿ ತನ್ನ ಮಗಳಾದ … Continued

ಬೆಂಗಳೂರು : ಕಾಲೇಜು ಬಸ್‌ ಡಿಕ್ಕಿ ಹೊಡೆದು ಶಾಲೆಗೆ ಹೋಗುತ್ತಿದ್ದ ತಾಯಿ -ಮಗ ಸಾವು ; ಚಾಲಕ ಪರಾರಿ

ಬೆಂಗಳೂರು : ವಿವೇಕ ನಗರದ ಬಳಿ ವೇಗವಾಗಿ ಬಂದ ಕಾಲೇಜು ಬಸ್ಸೊಂದು ಡಿಕ್ಕಿ ಹೊಡೆದಿದ್ದರಿಂದ 37 ವರ್ಷದ ಮಹಿಳೆ ಮತ್ತು ಅವರ ಮಗ ಸಾವಿಗೀಡಾದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ. ವಿವೇಕನಗರ ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿದೆ. ಮೃತರನ್ನು ಆಂಧ್ರಪ್ರದೇಶದ ಮೂಲದ, ಆರ್ಮಿ ಪಬ್ಲಿಕ್ ಶಾಲೆಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಸಂಗೀತಾ … Continued

ಜೊಯಿಡಾ: ಶಾಲಾ ಪ್ರವಾಸದ ಬಸ್​ ಪಲ್ಟಿ ; 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶ ಗುಡಿ ಬಳಿ ಶಾಲಾ ಪ್ರವಾಸದ ಬಸ್​ ಪಲ್ಟಿಯಾಗಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ. ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಬಸ್‌ ಪಲ್ಟಿಯಾಗಿದೆ ಎಂದು ಹೇಳಲಾಗಿದೆ. ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ಖಾಸಗಿ ಬಸ್​ನಲ್ಲಿ ಪ್ರವಾಸಕ್ಕೆ ಬಂದಿದ್ದ ಚಿತ್ರದುರ್ಗ … Continued

ಮಾನ್ವಿ | ಶಾಲಾ ವಾಹನ-ಬಸ್‌ ಮಧ್ಯೆ ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸಾವು, 17 ವಿದ್ಯಾರ್ಥಿಗಳಿಗೆ ಗಾಯ

ರಾಯಚೂರು : ಜಿಲ್ಲೆಯ ಮಾನ್ವಿ ತಾಲೂಕಿನ ‌ಕಪಗಲ್ ಗ್ರಾಮದ ಸಮೀಪ ಗುರುವಾರ ಶಾಲಾ ವಾಹನ ಹಾಗೂ ಸಾರಿಗೆ ಸಂಸ್ಥೆಯ ಬಸ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಶಾಲಾ ವಾಹನದಲ್ಲಿದ್ದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಹಾಗೂ  17 ವಿದ್ಯಾರ್ಥಿಗಳು  ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಲೊಯಲ್‌ ಶಾಲೆಯ ವಿದ್ಯಾರ್ಥಿಗಳಾದ ಸಮರ್ಥ ಅಮರೇಶ (7) ಹಾಗೂ ಶ್ರೀಕಾಂತ ಮಾರೇಶ (12) … Continued

ಹುಕ್ಕೇರಿ : ಹಳ್ಳದ ನೀರಿನಲ್ಲಿ ಸಿಲುಕಿದ ಶಾಲಾ ಬಸ್‌ ; ತಪ್ಪಿದ ಅನಾಹುತ

ಬೆಳಗಾವಿ : ಜಿಲ್ಲೆಯ ಹುಕ್ಕೇರಿ ತಾಲೂಕಿನ ಎಲಿಮುನ್ನೊಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಶಾಲಾ ಬಸ್ ನುಗ್ಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಸಂಭವನೀಯ ಅನಾಹುತ ತಪ್ಪಿದ್ದು ಗ್ರಾಮಸ್ಥರು ಮಕ್ಕಳನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಧಾರಾಕಾರ ಮಳೆಯಿಂದಾಗಿ ಗ್ರಾಮದ ಹಳ್ಳದ ರಸ್ತೆಯ ಮೇಲೆ ಅಪಾರ ನೀರು ಹರಿಯುತ್ತಿತ್ತು. ಇದನ್ನು ಗಮನಿಸಿಯೂ … Continued