ಐಸಿಸ್‌ ಗೆ ನಿಷ್ಠೆ ತೋರಿದ ಗುವಾಹತಿ ಐಐಟಿ ವಿದ್ಯಾರ್ಥಿ ಬಂಧನ

ಗುವಾಹತಿ : ಐಎಸ್‌ಐಎಸ್‌ಗೆ ನಿಷ್ಠೆ ವ್ಯಕ್ತಪಡಿಸಿ ಉಗ್ರಗಾಮಿ ಸಂಘಟನೆಗೆ ಸೇರಲು ಹೊರಟಿದ್ದ ಐಐಟಿ-ಗುವಾಹತಿ ವಿದ್ಯಾರ್ಥಿಯನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಯುಎಪಿಎ (UAPA) ಅಡಿಯಲ್ಲಿ ಬಂಧಿಸಲಾಗಿದೆ. ಬಯೋಸೈನ್ಸ್‌ನ 4ನೇ ವರ್ಷದ ವಿದ್ಯಾರ್ಥಿಯಾಗಿರುವ ಆರೋಪಿ ತೌಸೀಫ್ ಅಲಿ ಫಾರೂಕಿಯನ್ನು ಶನಿವಾರ ಬಂಧಿಸಲಾಗಿದೆ. ಫಾರೂಕಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮತ್ತು ಇಮೇಲ್‌ಗಳ ಮೂಲಕ ಭಯೋತ್ಪಾದಕ ಸಂಘಟನೆಗೆ ಸೇರುವ … Continued

ಭಾರತದ ಐಸಿಸ್ ಮುಖ್ಯಸ್ಥ, ಆತನ ಸಹಚರ ಅಸ್ಸಾಂನಲ್ಲಿ ಬಂಧನ

ಗುವಾಹತಿ : ಐಸಿಸ್ ನ ಭಾರತದ ಮುಖ್ಯಸ್ಥ ಹ್ಯಾರಿಸ್ ಫಾರೂಕಿ ಮತ್ತು ಆತನ ಸಹಚರ ಅನುರಾಗ್ ಸಿಂಗ್ ಬಾಂಗ್ಲಾದೇಶದಿಂದ ಬುಧವಾರ ಭಾರತದ ಗಡಿ ದಾಟಿದ ಕೂಡಲೇ ಅಸ್ಸಾಂನ ಧುಬ್ರಿಯಲ್ಲಿ ಬಂಧಿಸಲಾಗಿದೆ. ಇದಕ್ಕೂ ಮುನ್ನ ಇವರಿಬ್ಬರು ಬಾಂಗ್ಲಾದೇಶದಿಂದ ಅಸ್ಸಾಂಗೆ ಬರಲು ಗಡಿ ದಾಟಲಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ಪೊಲೀಸ್ ತಂಡವನ್ನು ನಿಯೋಜಿಸಲಾಗಿತ್ತು. ಈ ಕುರಿತು ಹೇಳಿಕೆ … Continued

ವೀಡಿಯೊ…| ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಆನೆ ಸಫಾರಿ ಮಾಡಿದ ಪ್ರಧಾನಿ ಮೋದಿ

ಕಾಜಿರಂಗ ಉದ್ಯಾನವನ(ಅಸ್ಸಾಂ); ಪ್ರಧಾನಿ ಮೋದಿ ಎರಡು ದಿನಗಳ ಅಸ್ಸಾಂ ಪ್ರವಾಸದಲ್ಲಿದ್ದು, ಈ ಸಂದರ್ಭದಲ್ಲಿ 18,000 ಕೋಟಿ ರೂ.ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳನ್ನು ಅಸ್ಸಾಂ ಮತ್ತು ಕೇಂದ್ರ ಸರ್ಕಾರಗಳು ಕೈಗೊಳ್ಳುತ್ತಿವೆ. ಶನಿವಾರ ಬೆಳ್ಳಂಬೆಳಗ್ಗೆಯೇ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ಮೂಲಕ ತಮ್ಮ ಪ್ರವಾಸ ಆರಂಭಿಸಿದ ಪ್ರಧಾನಿ … Continued

ಮುಸ್ಲಿಂ ವಿವಾಹ ನೋಂದಣಿ ಕಾನೂನು ರದ್ದುಗೊಳಿಸಲು ಅಸ್ಸಾಂ ಸರ್ಕಾರದ ನಿರ್ಧಾರ : ಇದರಿಂದ ಯಾವ ಬದಲಾವಣೆಗಳಾಗುತ್ತವೆ..?

ಗುವಾಹತಿ : ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಯತ್ತ ಹೋಗುವ ದೊಡ್ಡ ಹೆಜ್ಜೆಯಲ್ಲಿ ಮುಸ್ಲಿಮರ ವಿವಾಹ ಮತ್ತು ವಿಚ್ಛೇದನವನ್ನು ನಿಯಂತ್ರಿಸುವ ಮುಸ್ಲಿಂ ವೈಯಕ್ತಿಕ ಕಾನೂನನ್ನು ರದ್ದುಗೊಳಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಏಕರೂಪ ನಾಗರಿಕ ಸಂಹಿತೆ(ಯುಸಿಸಿ)ಯು ಎಲ್ಲ ಭಾರತೀಯ ನಾಗರಿಕರಿಗೆ ಅನ್ವಯವಾಗುವ ಸಾಮಾನ್ಯ ಕಾನೂನುಗಳನ್ನು ಉಲ್ಲೇಖಿಸುತ್ತದೆ ಮತ್ತು ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ತೆಗೆದುಕೊಳ್ಳುವುದು ಮುಂತಾದ … Continued

ವೀಡಿಯೊ….| ರಾಹುಲ್ ಗಾಂಧಿ ಯಾತ್ರೆಗೆ ನಗರದೊಳಕ್ಕೆ ಪ್ರವೇಶ ನಿರಾಕರಣೆ : ಗುವಾಹತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು-ಪೊಲೀಸರ ಘರ್ಷಣೆ

ಗುವಾಹತಿ : ರಾಹುಲ್ ಗಾಂಧಿ ಅವರ ಭಾರತ ಜೋಡೋ ನ್ಯಾಯ ಯಾತ್ರೆಗೆ ಅಸ್ಸಾಂ ರಾಜಧಾನಿ ಗುವಾಹತಿ ಪ್ರಮುಖ ಮಾರ್ಗಗಳ ಮೂಲಕ ನಗರ ಪ್ರವೇಶಿಸಲು ಅನುಮತಿ ನಿರಾಕರಿಸಿದ ನಂತರ ಮಂಗಳವಾರ ಗುವಾಹಟಿತಿಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರಿಂದ ಉದ್ವಿಗ್ನತೆ ಉಂಟಾಗಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಸರ್ಕಾರವು ಯಾತ್ರೆಯನ್ನು ನಗರದಿಂದ ದೂರವಿರಿಸಲು ಮತ್ತು … Continued

ರಾಹುಲ್ ಗಾಂಧಿ ‘ಭಾರತ ಜೋಡೋ ನ್ಯಾಯ ಯಾತ್ರೆ’ ವಿರುದ್ಧ ಎಫ್‌ಐಆರ್ ದಾಖಲು

ಗುವಾಹತಿ : ಗುರುವಾರ ಜೋರ್ಹತ್ ಪಟ್ಟಣದಲ್ಲಿ ಅನುಮತಿಸಲಾದ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ತೆರಳಿದ ಆರೋಪದ ಮೇಲೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮತ್ತು ಅದರ ಮುಖ್ಯ ಸಂಘಟಕ ಕೆ.ಬಿ. ಬೈಜು ಅವರ ನೇತೃತ್ವದ ‘ಭಾರತ ಜೋಡೋ ನ್ಯಾಯ ಯಾತ್ರೆ’ ವಿರುದ್ಧ ಅಸ್ಸಾಂ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕಾಂಗ್ರೆಸ್‌ನ ಭಾರತ ಜೋಡೋ ನ್ಯಾಯ ಯಾತ್ರೆ ಗುರುವಾರ … Continued

ಅತ್ಯಾಚಾರ, ಲೂಟಿ, ಡಕಾಯಿತಿ, ಜೈಲಿಗೆ ಹೋಗುವುದರಲ್ಲಿ ಮುಸ್ಲಿಮರು ನಂಬರ್ 1′ : ವಿವಾದಕ್ಕೆ ಕಾರಣವಾದ ಅಸ್ಸಾಂ ರಾಜಕಾರಣಿ ಬದ್ರುದ್ದೀನ್ ಅಜ್ಮಲ್ ಹೇಳಿಕೆ

ದಿಸ್ಪುರ: ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರು ದರೋಡೆ, ಅತ್ಯಾಚಾರ, ಕೊಲೆ, ಈವ್ ಟೀಸಿಂಗ್ ಮತ್ತು ಜೈಲಿಗೆ ಹೋಗುವಂತಹ ಅಪರಾಧಗಳ ವಿಷಯದಲ್ಲಿ ಮುಸ್ಲಿಮರು “ನಂ 1” ಎಂದು ಹೇಳಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಉದ್ಯಮಿ ಹಾಗೂ ರಾಜಕಾರಣಿಯಾಗಿರುವ ಅವರು, ಮುಸ್ಲಿಮರಲ್ಲಿ ಶಿಕ್ಷಣದ ಕೊರತೆಯಿಂದಾಗಿ ಅವರಲ್ಲಿ ಅಪರಾಧಗಳ ಪ್ರಮಾಣ ಹೆಚ್ಚುತ್ತಿದೆ … Continued

ಧರ್ಮವು ಅನುಮತಿಸಿದರೂ ಸಹ….ಮೊದಲ ಪತ್ನಿ ಜೀವಂತ ಇದ್ದಾಗ ಸರ್ಕಾರಿ ನೌಕರರು 2ನೇ ಮದುವೆ ಆಗುವಂತಿಲ್ಲ : ಅಸ್ಸಾಂ ಸರ್ಕಾರ

ಗುವಾಹತಿ : ಅಸ್ಸಾಂ ಸರ್ಕಾರಿ ನೌಕರರು ತಮ್ಮ ಪತ್ನಿ ಜೀವಂತವಾಗಿದ್ದಾಗ ಸರ್ಕಾರದ ಅನುಮತಿಯಿಲ್ಲದೆ ಎರಡನೇ ಮದುವೆಯಾಗಲು ಅವಕಾಶ ಇಲ್ಲ ಎಂದು ಹೇಳಿದೆ. ಯಾವುದೇ ಧರ್ಮದ ವೈಯಕ್ತಿಕ ಕಾನೂನು ಎರಡನೇ ಮದುವೆಗೆ ಅನುಮತಿಸಿದ್ದರೂ ಸಹ ಎರಡನೇ ಬಾರಿಗೆ ಮದುವೆಯಾಗುವಂತಿಲ್ಲ ಎಂದು ಸರ್ಕಾರ ಹೇಳಿದೆ. ಯಾವುದೇ ಸಮುದಾಯವನ್ನು ಉಲ್ಲೇಖಿಸದೆ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಧರ್ಮವು … Continued

ಭಾರತದ ಅತ್ಯಂತ ಹಿರಿಯ ಸಾಕು ಆನೆ ಬಿಜುಲಿ ಪ್ರಸಾದ 89ನೇ ವಯಸ್ಸಿನಲ್ಲಿ ನಿಧನ

ತೇಜ್ಪುರ: ಅಸ್ಸಾಂನ ಚಹಾ ತೋಟದಲ್ಲಿ ವಾಸಿಸುತ್ತಿದ್ದ ವಿಶ್ವದ ಅತ್ಯಂತ ಹಳೆಯ ಏಷ್ಯಾಟಿಕ್ ಆನೆ ಬಿಜುಲಿ ಪ್ರಸಾದ ಮೃತಪಟ್ಟಿದೆ. ಭವ್ಯವಾದ ಜಂಬೂ ವಯಸ್ಸು 89 ವರ್ಷಗಳು ಎಂದು ಅಂದಾಜಿಸಲಾಗಿದೆ. ವಯೋಸಹಜ ಸಮಸ್ಯೆಗಳಿಂದಾಗಿ ಬಿಜುಲಿ ಪ್ರಸಾದ ಅವರು ದಿ ವಿಲಿಯಮ್ಸನ್ ಮಾಗೊರ್ ಗ್ರೂಪ್‌ನ ಬೆಹಾಲಿ ಟೀ ಎಸ್ಟೇಟ್‌ನಲ್ಲಿ ಮುಂಜಾನೆ 3.30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಸುದ್ದಿ ಸಂಸ್ಥೆ … Continued

ಅಸ್ಸಾಂ: ಭೀಕರ ಪ್ರವಾಹಕ್ಕೆ 3 ಸಾವು, 4 ಲಕ್ಷಕ್ಕೂ ಹೆಚ್ಚು ಜನರಿಗೆ ತೊಂದರೆ

ಗುವಾಹತಿ: ಇತ್ತೀಚಿನ ವರದಿಯ ಪ್ರಕಾರ, ಅಸ್ಸಾಂನಲ್ಲಿ ನಿರಂತರ ಪ್ರವಾಹಕ್ಕೆ ಮೂವರು ಮೃತಪಟ್ಟಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೊಳಗಾಗಿದ್ದಾರೆ. ಪ್ರವಾಹವು ರಾಜ್ಯದಾದ್ಯಂತ ಹಾನಿಯನ್ನುಂಟುಮಾಡಿದೆ, ಅಪಾರ ವಿನಾಶವನ್ನು ಉಂಟುಮಾಡಿದೆ ಮತ್ತು ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಿದೆ. ಮಾನ್ಸೂನ್ ಮಳೆ ಆರ್ಭಟ ಮುಂದುವರಿದಿದ್ದು, ಸಾಕಷ್ಟು ಹಾನಿಯನ್ನುಂಟು ಮಾಡಿದೆ. ತೊಂದರೆಗೊಳಗಾದವರಲ್ಲಿ 1,87,114 ಪುರುಷರು, 1,67,538 ಮಹಿಳೆಯರು ಮತ್ತು 53,119 ಮಕ್ಕಳು ಸೇರಿದ್ದಾರೆ. … Continued